ನಾನು ಮೆಚ್ಚಿದ ವಾಟ್ಸಪ್

Sunday, February 18, 2018

ಕರ್ನಾಟಕದ ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಇನ್ನಿಲ್ಲ



ಕರ್ನಾಟಕದ ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ  ಇನ್ನಿಲ್ಲ

ಮಂಡ್ಯ: ರೈತ ಮುಖಂಡ, ಮೇಲುಕೋಟೆ ಕ್ಷೇತ್ರದ ಸರ್ವೋದಯ ಪಕ್ಷದ ಶಾಸಕ ಕೆ.ಎಸ್ ಪುಟ್ಟಣ್ಣಯ್ಯ  ಫೆಬ್ರುವರಿ 18ರ ಭಾನುವಾರ ವಿಧಿವಶರಾದರು.  ಅವರಿಗೆ 69 ವರ್ಷ ವಯಸ್ಸಾಗಿತ್ತು.

ಮಂಡ್ಯ ನಗರದಲ್ಲಿ ಕಬಡ್ಡಿ ಪಂದ್ಯ ವೀಕ್ಷಿಸುತ್ತಿದ್ದ ಪುಟ್ಟಣ್ಣಯ್ಯ ಅವರು ಎದೆ ನೋವಿನಿಂದ ಕುಸಿದು ಬಿದ್ದರು.  ಅವರನ್ನು ತತ್ ಕ್ಷಣವೇ ವಿಮ್ಸ್ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ನಿಧನರಾದರು ಎಂದು ವರದಿಗಳು ತಿಳಿಸಿದವು.

ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಸರ್ವೋದಯ ಪಕ್ಷದ ವತಿಯಿಂದ ಮೇಲುಕೋಟೆ ಕ್ಷೇತ್ರದಲ್ಲಿ 2013ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ  ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಮೂಲಕ ರೈತರ ಏಕೈಕ ಪ್ರತಿನಿಧಿಯಾಗಿ ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಿದ್ದರು.

 
ರಾಜ್ಯ ರೈತರ ಧ್ವನಿಯಾಗಿದ್ದ ಕೆಎಸ್ ಪುಟ್ಟಣ್ಣಯ್ಯ ಅವರು ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. 1994ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರ ಸತರ ಮೂರು ಬಾರಿ ಸೋಲಿನ ಕಹಿ ಉಂಡಿದ್ದರು.

ರಾಜ್ಯ ರೈತ ಸಂಘ ಹಾಗೂ ಚುನಾವಣೆ: 1989 ಚುನಾವಣೆಯಲ್ಲಿ ಬಾಬಾಗೌಡ ಪಾಟೀಲ್ ಅವರು ಕಿತ್ತೂರು ಹಾಗೂ ಧಾರವಾಡ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದರು. ಕಿತ್ತೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಧಾರವಾಡ ಗ್ರಾಮಾಂತರ ಕ್ಷೇತ್ರವನ್ನು ಅಂದಿನ ರಾಜ್ಯ ರೈತ ಸಂಘದ ಅಧ್ಯಕ್ಷ ಪ್ರೊ.ಎಂ.ಡಿ ನಂಜುಂಡಸ್ವಾಮಿ ಅವರು ಪ್ರತಿನಿಧಿಸಿ, ಆಯ್ಕೆಯಾಗಿದ್ದರು.

ಚುನಾವಣೆಯಲ್ಲಿ ಬಾರಿ ಪುಟ್ಟಣ್ಣಯ್ಯ ಅವರು ಹಸಿರು ಶಾಲು ಹೊದ್ದು ರೈತರ ಪ್ರತಿನಿಧಿಯಾಗಿ ಮೇಲುಕೋಟೆಯಲ್ಲಿ ಪ್ರಚಾರಕ್ಕೆ ಆಗಮಿಸಿದಾಗಲೇ ಗೆಲುವಿನ ರುಚಿ ಉಂಡಿದ್ದರು. ಎಲ್ಲೆಡೆ ಮುದ್ದೆ ಬಸ್ಸಾರು ಊಟ, ನೀರು ಮಜ್ಜಿಗೆ ನೀಡಿದ ಜನರು ಮನೆ ಮಗನಂತೆ ತಮ್ಮ ಕ್ಷೇತ್ರ ಅಭ್ಯರ್ಥಿಯನ್ನು ಕಂಡರು. ಇದರ ಜೊತೆಗೆ ಕೆಎಸ್ ಪುಟ್ಟಣ್ಣಯ್ಯ ಅವರಿಗೆ ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷದ ಬೆಂಬಲವೂ ಸಿಕ್ಕಿತ್ತು.

ಮೇಲುಕೋಟೆ ಕಣದಲ್ಲಿ 13 ಜನರಿದ್ದರೂ ಜೆಡಿಎಸ್ ಎರಡು ಬಾರಿ ಶಾಸಕ ಸಿ.ಎಸ್ ಪುಟ್ಟರಾಜು ಅವರ ಪ್ರಬಲ ಪೈಪೋಟಿ ನಡುವೆ ಪುಟ್ಟಣ್ಣಯ್ಯ ಅವರು 80041 ಮತ ಗಳಿಸಿದ್ದರು.  ಪುಟ್ಟರಾಜು 70193 ಮತ ಪಡೆದು ಸೊಲೊಪ್ಪಿಕೊಂಡಿದ್ದರು.

ಕಾವೇರಿ
ನೀರಿಗಾಗಿ ಹೋರಾಟ, ಸಕ್ಕರೆ ಕಾರ್ಖಾನೆ, ಕಬ್ಬಿಗೆ ಬೆಂಬಲ ಬೆಲೆಗಾಗಿ ಹೋರಾಟ ಎಲ್ಲವೂ ರೈತ ಮುಖಂಡ ಪುಟ್ಟಣ್ಣಯ್ಯ ಅವರನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿರಪರಿಚಿತರನ್ನಾಗಿಸಿತ್ತು.  ಇದರ ಜೊತೆಗೆ ಪ್ರಚಾರ ಕಾರ್ಯದಲ್ಲಿ ಎಲ್ಲರಿಗಿಂತ ಮುಂದಿದ್ದರು. ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಪುಟ ಆರಂಭಿಸಿದರು, ಪ್ರತ್ಯೇಕ ಜಾಹೀರಾತು ನೀಡಿದರು. ತಮ್ಮದೇ ಆದ ಅಚ್ಚುಕಟ್ಟಾದ ವೆಬ್ ಸೈಟ್ ಅದೂ ಕನ್ನಡದಲ್ಲಿ ರೂಪಿಸಿ, ಕನ್ನಡ ಟೆಕ್ಕಿಗಳಿಗೂ ಹತ್ತಿರವಾದದ್ದೂ ಅವರ ಗೆಲುವಿಗೆ ಕಾರಣವಾಗಿತ್ತು.

No comments:

Post a Comment