ಕಿಂಕಿಣಿ ನೃತ್ಯೋತ್ಸವ:
ನಿರುಪಮಾ ರಾಜೇಂದ್ರ ‘ಯುಗಳ್’
ಕಥಕ್ ಧಾರೆಯಾಗಿ
ಹರಿಯಲಿದೆ ‘ಅಭಂಗ್’ ಎಂಬ ಕಾವ್ಯಧಾರೆ
ಬೆಂಗಳೂರು: ಶಿವಶರಣರ ವಚನಗಳು; ಹರಿದಾಸರ ಪದಗಳು; ಹಿಂದಿ ಸಂತರ ದೋಹಾಗಳು
ಹಾಗೆಯೇ ಮಹಾರಾಷ್ಟ್ರ ಸಂತರು ‘ಅಭಂಗ್’ಗಳ ರೂಪದಲ್ಲಿ ಭಕ್ತಿಯ ಭಾವಧಾರೆಯನ್ನು ಹರಿಸಿದ್ದಾರೆ...
ವಿಶೇಷವೆಂದರೆ, ಅಂತಾರಾಷ್ಟ್ರೀಯ ಖ್ಯಾತಿಯ ಕಥಕ್ ಜೋಡಿ ನಿರುಪಮಾ ರಾಜೇಂದ್ರ ಅವರು ಈ ‘ಅಭಂಗ್’ ಎಂಬ ಭಕ್ತಿಯ ಕಾವ್ಯಧಾರೆಯನ್ನು ನೃತ್ಯಧಾರೆಯಾಗಿ ಹರಿಸಲಿದ್ದಾರೆ.
ಜನವರಿ ೨೭ರ
ಶುಕ್ರವಾರ ಬೆಂಗಳೂರಿನಲ್ಲಿ ನಡೆಯಲಿರುವ ೩೩ನೇ ಕಿಂಕಿಣಿ ನೃತ್ಯೋತ್ಸವದಲ್ಲಿ ನಿರುಪಮಾ ರಾಜೇಂದ್ರರ
ವಿಶೇಷ ‘ಯುಗಳ’ ಭಕ್ತಿಯ ನೃತ್ಯಧಾರೆಯಾಗಿ ಹರಿಯಲಿದೆ. ಮಹಾರಾಷ್ಟ್ರ
ಸಂತರು, ಭಕ್ತಿಯ ಪರಾಕಾಷ್ಟೆಯಲ್ಲಿ ಸೃಷ್ಟಿಸಿದ ಅಭಂಗ್‌ಗಳನ್ನು ನಿರುಪಮಾ ರಾಜೇಂದ್ರ ನೃತ್ಯರೂಪಕ್ಕಿಳಿಸಲಿದ್ದಾರೆ.
ನಿರುಪಮಾ ರಾಜೇಂದ್ರ
ಪ್ರಸ್ತುತಪಡಿಸುವ ‘ತಾಲ್’ ಶುದ್ಧ ನೃತ್ಯದಲ್ಲಿ ಭಾರತದ ಸಂಸ್ಕೃತಿ, ಶ್ರದ್ದೆ
ಮತ್ತು ಮೌಲ್ಯಗಳು ಅನಾವರಣಗೊಳ್ಳಲಿವೆ.
ರಾಮ ಮತ್ತು
ಸೀತೆ ಲಂಕೆಯಿಂದ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಮರಳುತ್ತಿರುತ್ತಾರೆ. ಇಂಥ ಸನ್ನಿವೇಶದಲ್ಲಿ ಅವರು
ರಾಮಾಯಣದ ಒಂದೊಂದೇ ಘಟನಾವಳಿಯನ್ನು ನೆನಪಿಸಿಕೊಳ್ಳುತ್ತಾ ಸಾಗುವ ಸನ್ನಿವೇಶಗಳನ್ನು ನೃತ್ಯರೂಪದಲ್ಲಿ
ನಿರುಪಮಾ ರಾಜೇಂದ್ರ ರಂಗದ ಮೇಲೆ ತೆರೆದಿಡಲಿದ್ದಾರೆ.
ನಿರುಪಮಾ ರಾಜೇಂದ್ರ ಅವರ ಕಥಕ್ ಯುಗಳ ಬಂದಿಯ ಮತ್ತೊಂದು
ವಿಶೇಷವೆಂದರೆ; ಖ್ಯಾತ ಗಾಯಕ ಫಯಾಜ್‌ಖಾನ್ ಅವರ ಕಂಠ ಮಾಧುರ್ಯದಲ್ಲಿ ಮೂಡಿಬರಲಿರುವ ತಿಲ್ಲಾನ ಮಾದರಿಯ
ತರಾನಾ ನೃತ್ಯ.
ನಿರುಪಮಾ ರಾಜೇಂದ್ರ
ಅವರ ಕಥಕ್‌ಗೆ ಪ್ರವೀಣ್ ಡಿ ರಾವ್ ಸಂಗೀತ ಸಾಥ್ ನೀಡಲಿದ್ದು, ತಬಲಾ- ತ್ರಿಲೋಚನ್ ಕಂಪ್ಲಿ, ಗುರುಮೂರ್ತಿ
ವೈದ್ಯ; ಸಿತಾರ್- ಶ್ರುತಿ ಕಾಮತ್; ಸಾರಂಗಿ- ಸರ್ಫ್‌ರೋಜ್ ಖಾನ್; ಕೊಳಲು- ಶಿವಲಿಂಗ.
ಸ್ಥಳ: ಜೆಎಸ್ ಎಸ್ ಅಡಿಟೋರಿಯಂ, ಜಯನಗರ,
ದಿನಾಂಕ: 27 ಜನವರಿ 2017, ಸಂಜೆ 7.30