Monday, January 26, 2026

PARYAYA: ಗಣರಾಜ್ಯೋತ್ಸವ ಆಚರಣೆ

 ಗಣರಾಜ್ಯೋತ್ಸವ ಆಚರಣೆ

ಬೆಂಗಳೂರು ರಾಮೃಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಶ್ರೀ ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ೨೦೨೬ ಜನವರಿ ೨೬ರ ಸೋಮವಾರ ೭೭ನೇ ಗಣರಾಜ್ಯೋತ್ಸವವನ್ನು ಸಂಭ್ರಮೋತ್ಸಾಹಗಳೊಂದಿಗೆ ಆಚರಿಸಲಾಯಿತು.

ಕರ್ನಾಟಕ ಸರ್ಕಾರದ ಉನ್ನಡ ಶಿಕ್ಷಣ ಇಲಾಖೆಯ ವಿಶೇಷ ಅಧಿಕಾರಿ ಹಾಗೂ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದ ಕಂಪ್ಯೂಟ್ರರ್‌ ವಿಜ್ಞಾನ ಪ್ರಾಧ್ಯಾಪಕ ಡಾ. ಭಾಗ್ಯವಾನ್‌ ಮುದಿಗೌಡ್ರ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ತ್ರಿವರ್ಣ ಧ್ವಜವನ್ನು ಅರಳಿಸಿದರು.

ಬಡಾವಣೆಯ ನಿವಾಸಿಗಳು ಸಂಭ್ರಮದೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.




ನವದೆಹಲಿಯಲ್ಲಿ ಗಣರಾಜ್ಯೋತ್ಸವ ಸಡಗರದ ದೃಶ್ಯ

PARYAYA: ಗಣರಾಜ್ಯೋತ್ಸವ ಆಚರಣೆ:   ಗಣರಾಜ್ಯೋತ್ಸವ ಆಚರಣೆ ಬೆಂ ಗಳೂರು ರಾಮೃಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಶ್ರೀ ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂ...

Friday, January 23, 2026

PARYAYA: ಪಂಚಲಿಂಗೇಶ್ವರನ ಅವಭೃತ

 ಪಂಚಲಿಂಗೇಶ್ವರನ ಅವಭೃತ

ವಭೃತ (ದೇವನಾಗರಿಯಲ್ಲಿ ʼವಭೃʼಎಂದರೆ ವೈದಿಕ ಯಜ್ಞಗಳು ಅಥವಾ ಪ್ರಮುಖ ಧಾರ್ಮಿಕ ವಿಧಿವಿಧಾನಗಳು ಮುಗಿದ ನಂತರ ಯಜಮಾನನು ಮಾಡುವ ಪವಿತ್ರವಾದ ಮಂಗಳಸ್ನಾನ. ಇದು ಯಜ್ಞದ ಸಮಾಪ್ತಿಯನ್ನು ಸೂಚಿಸುವ ವಿಧಿಯಾಗಿದ್ದುಪಾಪ ಪರಿಹಾರ ಮತ್ತು ಶುದ್ಧೀಕರಣದ ಸಂಕೇತ. 


ಅವಭೃತದ ಮುಖ್ಯಾಂಶಗಳು:

  • ಯಜ್ಞಾಂತ ಸ್ನಾನ: ಪ್ರಧಾನ ಯಾಗ ಅಥವಾ ಯಜ್ಞ ಪೂರ್ಣಗೊಂಡ ನಂತರ ಮಾಡಲಾಗುವ ವಿಶೇಷ ಜಳಕ.
  • ಶುದ್ಧೀಕರಣ: ಯಜ್ಞದ ಸಮಯದಲ್ಲಿ ಉಂಟಾಗಬಹುದಾದ ದೋಷಗಳನ್ನು ಕಳೆದುಯಜಮಾನನನ್ನು ಶುದ್ಧಗೊಳಿಸುವ ಪ್ರಕ್ರಿಯೆ.
  • ಮಂಗಳ ಕಾರ್ಯ: ಇದು ಯಜ್ಞದ ಮುಕ್ತಾಯದ ಸೂಚಕವಾಗಿದ್ದುಯಶಸ್ಸನ್ನು ಸೂಚಿಸುತ್ತದೆ.
  • ನದಿ/ತೀರ್ಥ ಸ್ನಾನ: ಸಾಮಾನ್ಯವಾಗಿ ಹರಿಯುವ ನದಿ ಅಥವಾ ಪವಿತ್ರ ತೀರ್ಥಗಳಲ್ಲಿ ಈ ಸ್ನಾನವನ್ನು ಆಚರಿಸಲಾಗುತ್ತದೆ. 

ಸರಳವಾಗಿ ಹೇಳುವುದಾದರೆಯಜ್ಞದ ಕೊನೆಯಲ್ಲಿ ಆಚರಿಸಲಾಗುವ ಸಮಾರೋಪ ಸ್ನಾನವೇ 'ಅವಭೃತ'. ದೇವಾಲಯದ ವಾರ್ಷಿಕೋತ್ಸವ, ಜಾತ್ರೆ, ಆಯನ ಕೂಡಾ ದೇವರ ಶಕ್ತಿಯನ್ನು ಜಾಗೃತಗೊಳಿಸುವ ಯಜ್ಞ, ಹಾಗಾಗಿಯೇ ಆಯನದ ಕೊನೆಗೆ ಅವಭೃತ ನಡೆಯುತ್ತದೆ.

ವಿಟ್ಲಾಯನದ ಸಡಗರದ ರಥೋತ್ಸವದ ಮರುದಿನ ಕೊಡಂಗಾಯಿ ಹೊಳೆಯಲ್ಲಿ ವಿಟ್ಲದೊಡೆಯ ಪಂಚಲಿಂಗೇಶ್ವರನ ಅವಭೃತ ನಡೆಯುತ್ತದೆ. ಈ ಅವಭೃತಕ್ಕಾಗಿ ದೇವಸ್ಥಾನದಿಂದ ಕೊಡಂಗಾಯಿವರೆಗೆ ಸಾಗುವಾಗ  ದೇವಸ್ಥಾನದ ಕಟ್ಟೆಯಿಂದ ತೊಡಗಿ, ವಿವಿಧ ಕಟ್ಟೆಗಳಲ್ಲಿ ಪಂಚಲಿಂಗೇಶ್ವರನಿಗೆ ಪೂಜೆ ಸಲ್ಲುತ್ತದೆ. ಪ್ರತಿವರ್ಷವೂ ಈ ಕಟ್ಟೆಗಳಿಗೆ ದೇವರು ಬರುವ ಹೊತ್ತಿನಲ್ಲಿ ಆಸುಪಾಸಿನ ಜನರು ಭಕ್ತಿ ಪೂರ್ವಕವಾಗಿ ನೆರೆದು ಭಗವಂತನಿಗೆ ಕೈ ಮುಗಿಯುತ್ತಾರೆ.

ಅವಭೃತಕ್ಕಾಗಿ ಪಂಚಲಿಂಗೇಶ್ವರನು ಸಾಗುವ ದೃಶ್ಯದ ವಿಡಿಯೋ ಹಾಗೂ ಪಂಚಲಿಂಗೇಶ್ವರ ದೇವಸ್ಥಾನ ಹಾಗೂ ಸಮೀಪದ ನೆತ್ರಕೆರೆಯ ಎರಡು ಕಟ್ಟೆಗಳಲ್ಲಿ ನಡೆದ ಪಂಚಲಿಂಗನ ಪೂಜೆಯ ಚಿತ್ರ, ವಿಡಿಯೋಗಳು ಮೇಲಿವೆ. (ಚಿತ್ರ, ವಿಡಿಯೋ ಕೃಪೆ: ಸದಾಶಿವ ಬನ, ವಿಟ್ಲ ಸುದ್ದಿಗಳು ಗ್ರೂಪ್‌, ನೆತ್ರಕೆರೆ ಮಠ ಗ್ರೂಪ್)

ಅವಭೃತದ ಮರುದಿನ ಧ್ವಜಾವರತಣದೊಂದಿಗೆ ವಿಟ್ಲಾಯನದ ಸಡಗರ ಕೊನೆಗೊಳ್ಳುತ್ತದೆ.

PARYAYA: ಪಂಚಲಿಂಗೇಶ್ವರನ ಅವಭೃತ:   ಪಂಚಲಿಂಗೇಶ್ವರನ ಅವಭೃತ ಅ ವಭೃತ (ದೇವನಾಗರಿಯಲ್ಲಿ ʼ ಅವಬೃಥ ʼ ) ಎಂದರೆ ವೈದಿಕ ಯಜ್ಞಗಳು ಅಥವಾ ಪ್ರಮುಖ ಧಾರ್ಮಿಕ ವಿಧಿವಿಧಾನಗಳು ಮುಗಿದ ನಂತರ ಯಜಮಾನನು ಮಾಡುವ ಪವಿತ್ರ...

Thursday, January 22, 2026

PARYAYA: ವಿಟ್ಲ ತೇರಿನ ಸುಂದರ ಕ್ಷಣ!

 ವಿಟ್ಲ ತೇರಿನ ಸುಂದರ ಕ್ಷಣ!

ವಿಟ್ಲಾಯನದ ಮಹತ್ವದ ದಿನ ವಿಟ್ಲ ತೇರು ಮತ್ತು ಬೆಡಿಯ ದಿನ. ೨೦೨೬ರ ಜನವರಿ ೨೧ರಂದು ಈ ಸಂಭ್ರಮದ ಹೊತ್ತು.

ವಿಟ್ಲ ತೇರಿನ ಸುಂದರ ಕ್ಷಣದ ವಿಡಿಯೋ ಇಲ್ಲಿದೆ 👇👇.


ಇದನ್ನೂ ನೋಡಿ:

ವಿಟ್ಲ ಶ್ರೀ ಪಂಚಲಿಂಗೇಶ್ವರ ಜಾತ್ರೋತ್ಸವ ಆರಂಭ

PARYAYA: ವಿಟ್ಲ ತೇರಿನ ಸುಂದರ ಕ್ಷಣ!:  ವಿಟ್ಲ ತೇರಿನ ಸುಂದರ ಕ್ಷಣ! ವಿ ಟ್ಲಾಯನದ ಮಹತ್ವದ ದಿನ ವಿಟ್ಲ ತೇರು ಮತ್ತು ಬೆಡಿಯ ದಿನ. ೨೦೨೬ರ ಜನವರಿ ೨೧ರಂದು ಈ ಸಂಭ್ರಮದ ಹೊತ್ತು. ವಿಟ್ಲ ತೇರಿನ ಸುಂದರ ಕ್ಷಣದ ವಿಡಿ...

Wednesday, January 21, 2026

PARYAYA: ಹಿರಿಯ ಪತ್ರಕರ್ತರಿಗೆ ವೈದ್ಯಕೀಯ ಚಿಕಿತ್ಸೆಗೆ ಶೇ.75ರಷ್ಟು ...

ಹಿರಿಯ ಪತ್ರಕರ್ತರಿಗೆ ವೈದ್ಯಕೀಯ ಚಿಕಿತ್ಸೆಗೆ ಶೇ.75ರಷ್ಟು ರಿಯಾಯ್ತಿ

ಬೆಂಗಳೂರು: ಹಿರಿಯ ಪತ್ರಕರ್ತರಿಗೆ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆಗೆ ಶೇಕಡಾ 75ರಷ್ಟು ರಿಯಾಯಿತಿ ನೀಡಲಾಗುವುದು, ಉಳಿದ ಅಲ್ಪ ವೆಚ್ಚವನ್ನು ಹಿರಿಯ ಪತ್ರಕರ್ತರು ಪಾವತಿಸಿದರೆ ಸಾಕು ಎಂದು ರಾಜ್ಯ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಆರ್.‌ ಪಾಟೀಲ್‌ ಪ್ರಕಟಿಸಿದರು.

ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಆಸ್ಪತ್ರೆಯ ಸಭಾಂಗಣದಲ್ಲಿ 2026 ಜನವರಿ 21ರ ಬುಧವಾರ ಹಿರಿಯ ಪತ್ರಕರ್ತರ ವೇದಿಕೆಯ ಸದಸ್ಯರಿಗೆ ʼಗುರುತಿನ ಚೀಟಿʼ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸಚಿವರು ʼಸಮಾಜವನ್ನು ತಿದ್ದಿ ತೀಡಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರಿಗೆ ವಿಶೇಷ ಸೌಲಭ್ಯ ಒದಗಿಸಬೇಕಾದ್ದು ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದರು.

ವೈದ್ಯಕೀಯ ಶಿಕ್ಷಣ ಇಲಾಖೆಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಹಿರಿಯ ಪತ್ರಕರ್ತರ ವೇದಿಕೆ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು.

ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಿ ಮುಂದಿನ ದಿನಗಳಲ್ಲಿ ಇನ್ನುಳಿದ ಶೇ. 25ರಷ್ಟು ಹಣದ ರಿಯಾಯ್ತಿ ನೀಡುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟ ಪಡಿಸಿದರು.

ಪತ್ರಕರ್ತರು ನಮ್ಮ ಸರ್ಕಾರದ ಜವಾಬ್ದಾರಿನಿವೃತ್ತರಾದ ಹಿರಿಯರಿಗೆ ಗೌರವಯುತ ಜೀವನ ನಡೆಸಲು ಅನುವು ಮಾಡಿಕೊಡಲು ನಾವು ಬದ್ಧರಾಗಿದ್ದೇವೆಸಮಾಜಕ್ಕೆ ಕೊಡುಗೆ ನೀಡಿ ವೃತ್ತಿಯಿಂದ ನಿವೃತ್ತರಾಗಿರುವ ಹಿರಿಯ ಪತ್ರಕರ್ತರಿಗೆ ಪಿಂಚಣಿ ಸೌಲಭ್ಯ ಒದಗಿಸಲಾಗುತ್ತಿದ್ದುಇದರ ನಿಯಮಗಳುಪ್ರಕ್ರಿಯೆಗಳನ್ನು ಸರಳೀಕೃತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಪಾಟೀಲ್‌ ತಿಳಿಸಿದರು.

ಹಿರಿಯ ಪತ್ರಕರ್ತರಿಗೂ ಯಶಸ್ವಿನಿ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ಅವಕಾಶ ಕಲ್ಪಿಸಲು ಕ್ರಮ ವಹಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದೂ ಅವರು ನುಡಿದರು.

ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರುಜಯದೇವ ಸಂಸ್ಥೆಯ ನಿರ್ದೇಶಕ ಡಾ. ಬಿ. ದಿನೇಶ್‌ಹಿರಿಯ ಪತ್ರಕರ್ತರ ವೇದಿಕೆ ಅಧ್ಯಕ್ಷ ಆರ್‌.ಪಿ. ಸಾಂಬ ಸದಾಶಿವರೆಡ್ಡಿಹಿರಿಯ ಅಧಿಕಾರಿಗಳುಎಂ.ಎ. ಪೊನ್ನಪ್ಪವೆಂಕಟೇಶ್‌ ಪ್ರಸಾದ್‌, ಜಯದೇವ ಆಸ್ಪತ್ರೆಯ ಸಿಬ್ಬಂದಿ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.

PARYAYA: ಹಿರಿಯ ಪತ್ರಕರ್ತರಿಗೆ ವೈದ್ಯಕೀಯ ಚಿಕಿತ್ಸೆಗೆ ಶೇ.75ರಷ್ಟು ...: ಹಿರಿಯ ಪತ್ರಕರ್ತರಿಗೆ ವೈದ್ಯಕೀಯ ಚಿಕಿತ್ಸೆಗೆ ಶೇ.75ರಷ್ಟು ರಿಯಾಯ್ತಿ ಬೆಂ ಗಳೂರು: ಹಿರಿಯ ಪತ್ರಕರ್ತರಿಗೆ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಎಲ...

Sunday, January 18, 2026

PARYAYA: ವಂಚಕರಿಗೇ ಚಳ್ಳೆಹಣ್ಣು ತಿನ್ನಿಸಿದ ಕಾನ್ಪುರದ 'ರಿಯಲ್ ಹೀರೋ'!

 ವಂಚಕರಿಗೇ ಚಳ್ಳೆಹಣ್ಣು ತಿನ್ನಿಸಿದ ಕಾನ್ಪುರದ 'ರಿಯಲ್ ಹೀರೋ'!

ವಂಚಿಸುವ ವಂಚಕರನ್ನೇ ವಂಚಿಸಿದ ಈ ರೋಚಕ ಕಥೆ ಹುಟ್ಟಿದ್ದು ಉತ್ತರ ಪ್ರದೇಶದ ಕಾನ್ಪುರದಲ್ಲಿ. ಇತ್ತೀಚೆಗೆ ಹೆಚ್ಚಾಗುತ್ತಿರುವ 'ಡಿಜಿಟಲ್ ಅರೆಸ್ಟ್' ನಂತಹ ಸೈಬರ್ ಅಪರಾಧಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಉತ್ತರ ಪ್ರದೇಶ ಪೊಲೀಸರು ೫ ನಿಮಿಷ ೨೬ ಸೆಕೆಂಡುಗಳ ಕಿರುಚಿತ್ರವನ್ನು ನಿರ್ಮಿಸಿದ್ದಾರೆ.

ಚಿತ್ರದ ವಿಶೇಷತೆಗಳು:

  • ಈ ಚಿತ್ರದಲ್ಲಿ ಖ್ಯಾತ ನಟ ನಾನಾ ಪಾಟೇಕರ್ ಒಬ್ಬ ನಿವೃತ್ತ ರೈಲ್ವೆ ಗಾರ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
  • ಮುಂಬೈ ಪೊಲೀಸ್ ಇನ್ಸ್‌ಪೆಕ್ಟರ್ ಸೋಗಿನಲ್ಲಿ ಬರುವ ಸೈಬರ್ ವಂಚಕನೊಬ್ಬನಾನಾ ಪಾಟೇಕರ್ ಅವರಿಗೆ ಕರೆ ಮಾಡಿ FIR ದಾಖಲಿಸುವ ಬೆದರಿಕೆ ಹಾಕಿ ೧೫ ಲಕ್ಷ ರೂಪಾಯಿ ಬೇಡಿಕೆಯಿಡುತ್ತಾನೆ.
  • ಆದರೆ ನಾನಾ ಪಾಟೇಕರ್ಬಹಳ ಮುಗ್ದನಂತೆ ನಟಿಸುತ್ತಾ ಆ ವಂಚಕನಿಗೇ ದೊಡ್ಡ ಪಂಗನಾಮ ಹಾಕುತ್ತಾರೆ!

ಇದು ಕೇವಲ ಸಿನಿಮಾ ಕಥೆಯಲ್ಲನೈಜ ಘಟನೆ! 😲 ಸಿನಿಮಾದಲ್ಲಿ ನಾನಾ ಪಾಟೇಕರ್ ನಿರ್ವಹಿಸಿದ ಪಾತ್ರದ ಹಿಂದಿರುವುದು ಕಾನ್ಪುರದ ವಿಶ್ವ ಬ್ಯಾಂಕ್ ಬರ್ರಾ ನಿವಾಸಿ ಭೂಪೇಂದ್ರ ಸಿಂಗ್ ಎಂಬುವವರ ಸಾಹಸಗಾಥೆ. ಇದನ್ನು ನೋಡಲು ಕೆಳಗೆ ಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿ: Video link: https://youtu.be/w5zx4r2scyA

ನಡೆದಿದ್ದೇನು? ಭೂಪೇಂದ್ರ ಅವರಿಗೂ ಒಮ್ಮೆ ಸೈಬರ್ ವಂಚಕನಿಂದ ಬೆದರಿಕೆ ಕರೆ ಬಂದಿತ್ತು. ಅದು ವಂಚಕನ ಕರೆ ಎಂದು ತಕ್ಷಣವೇ ಅರಿತ ಭೂಪೇಂದ್ರಕಿಂಚಿತ್ತೂ ಎದರದೆ ಅಪ್ಪಟ ನಾನಾ ಪಾಟೇಕರ್ ಶೈಲಿಯಲ್ಲಿ ಮಾತನಾಡತೊಡಗಿದರು. ತಾನೊಬ್ಬ ೧೬ ವರ್ಷದ ಹುಡುಗನೆಂದು ನಂಬಿಸಿಅದೇ ವಂಚಕನಿಂದ ತಮ್ಮ ಖಾತೆಗೆ ೧೦,೦೦೦ ರೂಪಾಯಿ ಜಮಾ ಮಾಡಿಸಿಕೊಂಡರು! ಹಣ ಕಳೆದುಕೊಂಡ ವಂಚಕಅದನ್ನು ಮರಳಿ ಪಡೆಯಲು ಹಲವು ದಿನಗಳ ಕಾಲ ಭೂಪೇಂದ್ರ ಅವರಿಗೆ ಕಾಡಿಬೇಡಿ ಕರೆ ಮಾಡುತ್ತಲೇ ಇದ್ದನಂತೆ.

ಭೂಪೇಂದ್ರ ಅವರ ಈ ಸಮಯಪ್ರಜ್ಞೆ ಮತ್ತು ಚಾಣಾಕ್ಷತನವನ್ನು ಮೆಚ್ಚಿಅಂದಿನ DGP ಪ್ರಶಾಂತ್ ಕುಮಾರ್ ಅವರು ಕಾನ್ಪುರದಲ್ಲಿ ನಡೆದ ಸಮಾರಂಭವೊಂದರಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಗಮನಿಸಿ: ಸೈಬರ್ ವಂಚಕರ ಬಗ್ಗೆ ಎಚ್ಚರವಿರಲಿ. ನಾನಾ ಪಾಟೇಕರ್‌ ನಟಿಸಿದ ಈ ಅದ್ಭುತ ಕಿರುಚಿತ್ರ ಕೆಳಗಿದೆ. ನೀವೂ ಒಮ್ಮೆ ತಪ್ಪದೇ ವೀಕ್ಷಿಸಿ!

PARYAYA: ವಂಚಕರಿಗೇ ಚಳ್ಳೆಹಣ್ಣು ತಿನ್ನಿಸಿದ ಕಾನ್ಪುರದ 'ರಿಯಲ್ ಹೀರೋ'!:   ವಂಚಕರಿಗೇ ಚಳ್ಳೆಹಣ್ಣು ತಿನ್ನಿಸಿದ ಕಾನ್ಪುರದ ' ರಿಯಲ್ ಹೀರೋ '! ವಂ ಚಿಸುವ ವಂಚಕರನ್ನೇ ವಂಚಿಸಿದ ಈ ರೋಚಕ ಕಥೆ ಹುಟ್ಟಿದ್ದು ಉತ್ತರ ಪ್ರದೇಶದ ಕಾನ್ಪುರ ದಲ್...

Saturday, January 17, 2026

PARYAYA: ಜಕ್ಕೂರಿನಲ್ಲಿ ಸುಗ್ಗಿ ಹುಗ್ಗಿ: ಮಿಂಚಿದ ಯಕ್ಷಗಾನ

 ಜಕ್ಕೂರಿನಲ್ಲಿ ಸುಗ್ಗಿ ಹುಗ್ಗಿ: ಮಿಂಚಿದ ಯಕ್ಷಗಾನ

ಬೆಂಗಳೂರಿನ ಜಕ್ಕೂರು ಮೈದಾನದಲ್ಲಿ ಕಂದಾಯ ಸಚಿವ ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಶ್ರೀ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ೨೦೨೬ ಜನವರಿ ೧೭ ಮತ್ತು ೧೮ರಂದು ಎರಡು ದಿನ ಸುಗ್ಗಿ ಹುಗ್ಗಿ ಸಂಕ್ರಾಂತಿ ಸಂಭ್ರಮ.

ವಿವಿಧ ಬಗೆಯ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ ನಾಟಕ, ಸ್ಪರ್ಧೆಗಳು, ಬಾಯಲ್ಲಿ ನೀರೂರಿಸುವ ಬಗೆ ಬಗೆಯ ತಿಂಡಿ ತಿನಸುಗಳು, ಉಡುಪುಗಳ ಮೇಳ.

೨೦೨೬ರ  ಜನವರಿ ೧೭ರಂದು ವಿವಿಧ ಬಗೆ ನೃತ್ಯ ಸ್ಪರ್ಧೆಗಳಲ್ಲಿ ನಾಗವಾರ ಆಸುಪಾಸಿನ ಮಕ್ಕಳ ತಂಡ- ʼಭೈರವʼ ನೃತ್ಯ ತಂಡವು ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನದ ತುಣುಕೊಂದನ್ನು ಪ್ರದರ್ಶಿಸಿತು. ಯಕ್ಷ ಕಲಾ ಕೌಸ್ತುಭದ ಯಕ್ಷಗಾನ ಗುರು ಉಮೇಶ್‌ ರಾಜ್‌ ಅವರಿಗೆ ಮಾರ್ಗದರ್ಶನ ಮಾಡಿದರು.

ಯಕ್ಷಗಾನದ ವಿಡಿಯೋ ಇಲ್ಲಿದೆ. ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ ವಿಡಿಯೋ ಲಿಂಕ್‌ ಕ್ಲಿಕ್‌ ಮಾಡಿ: https://youtu.be/yDx_oeGV4aM







PARYAYA: ಜಕ್ಕೂರಿನಲ್ಲಿ ಸುಗ್ಗಿ ಹುಗ್ಗಿ: ಮಿಂಚಿದ ಯಕ್ಷಗಾನ:   ಜಕ್ಕೂರಿನಲ್ಲಿ ಸುಗ್ಗಿ ಹುಗ್ಗಿ: ಮಿಂಚಿದ ಯಕ್ಷಗಾನ ಬೆಂ ಗಳೂರಿನ ಜಕ್ಕೂರು ಮೈದಾನದಲ್ಲಿ ಕಂದಾಯ ಸಚಿವ ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಶ್ರೀ ಕೃಷ್ಣ ಬೈರೇಗೌಡ ಅವರ...

Friday, January 16, 2026

PARYAYA: ಶ್ರೀ ಆದಿತ್ಯ ಹೃದಯಸ್ತೋತ್ರಮ್‌ ಮಹತ್ವ

 ಶ್ರೀ ಆದಿತ್ಯ ಹೃದಯಸ್ತೋತ್ರಮ್‌ ಮಹತ್ವ

ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಪುಣ್ಯಕಾಲ. ದಕ್ಷಿಣಾಯನ ಮುಗಿದು ಉತ್ತರಾಯಣ ಆರಂಭವಾಗುವ ಶುಭಕಾಲ, ಭೀಷ್ಮಾಚಾರ್ಯರು ಯುದ್ಧದಲ್ಲಿ ತೀವ್ರ ಗಾಯಗೊಂಡಿದ್ದರೂ ದೇಹ ತ್ಯಜಿಸಲು ಆಯ್ದುಕೊಂಡ ಮಹಾಪರ್ವ ಕಾಲ, ಸ್ವರ್ಗದ ಬಾಗಿಲು ತೆರೆಯುವ ಕಾಲ- ಇವೆಲ್ಲವೂ ಸೂರ್ಯನ ಪಥ ಪರಿವರ್ತನೆಯ ದಿನದ ಮಹತ್ವವನ್ನು ಸಾರುತ್ತವೆ.

ಮಕರ ಸಂಕ್ರಾಂತಿಯೊಂದಿಗೆ ಆರಂಭವಾಗುವ ಉತ್ತರಾಯಣದ ಪುಣ್ಯ ಕಾಲದಲ್ಲಿ ಸೂರ್ಯನ ಮಹತ್ವವನ್ನು ಸಾರುವ, ಅತ್ಯಂತ ರಹಸ್ಯಮಯವಾದ ಆದಿತ್ಯ ಹೃದಯಸ್ತೋತ್ರದ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

ಈ ಸ್ತೋತ್ರವನ್ನು ಒಮ್ಮೆ ಸಂಪೂರ್ಣವಾಗಿ ಓದಿ. ಅದರ ಫಲ ಲಭಿಸಬೇಕು ಎಂದಿದ್ದರೆ, ಸ್ನಾನ ಮುಗಿಸಿಕೊಂಡು ಸೂರ್ಯೋದಯದ ಹೊತ್ತಿನಲ್ಲಿ ತಿಗುಣಿತ ಬಾರಿ ಅಂದರೆ ಮೂರು ಬಾರಿ ಅತ್ಯಂತ ಶ್ರದ್ಧಾಭಕ್ತಿಯೊಂದಿಗೆ ಓದಿಕೊಳ್ಳಿ.

ಅದಕ್ಕೂ ಮುನ್ನ ಇಲ್ಲಿರುವ ವಿಡಿಯೋ ನೋಡಿ ಆದಿತ್ಯ ಹೃದಯ ಸ್ತೋತ್ರದ ಮಹತ್ವವೇನು ಎಂಬದನ್ನು ಅರ್ಥ ಮಾಡಿಕೊಳ್ಳಿ. ಈ ಯೂಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡುವ ಮೂಲಕವೂ ವಿಡಿಯೋ ನೋಡಬಹುದು: https://youtu.be/7knlIqjxeOo

ಶ್ರೀ ಆದಿತ್ಯ ಹೃದಯಸ್ತೋತ್ರಮ್‌: ಸೂರ್ಯಾರಾಧನೆಯ ಸಾರ ಮತ್ತು ಮಹಿಮೆ

ತತೋ ಯುದ್ಧಪರಿಶ್ರಾನ್ತಂ ಸಮರೇ ಚಿನ್ತಯಾ ಸ್ಥಿತಮ್ |
ರಾವಣಂ ಚಾಗ್ರಗೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ ||

ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ |
ಉಪಗಮ್ಯಾಬ್ರವೀದ್ ರಾಮಮಗಸ್ತ್ಯೋ ಭಗವಾಂಸ್ತದಾ ||

ರಾಮ ರಾಮ ಮಹಾಬಾಹೋ ಶ್ರುಣು ಗುಹ್ಯಂ ಸನಾತನಮ್ |
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸೇ ||

ಆದಿತ್ಯಹೃದಯಂ ಪುಣ್ಯಂ ಸರ್ವಶತ್ರುವಿನಾಶನಮ್ |
ಜಯಾವಹಂ ಜಪೇನ್ನಿತ್ಯಮಕ್ಷಯಂ ಪರಮಂ ಶಿವಮ್ ||

 ಸರ್ವಮಂಗಲಮಾಂಗಲ್ಯಂ ಸರ್ವಪಾಪಪ್ರಣಾಶನಮ್ |
ಚಿನ್ತಾಶೋಕಪ್ರಶಮನಮಾಯುರ್ವಧನಮುತ್ತಮಮ್ ||

ರಶ್ಮಿಮನ್ತಂ ಸಮುದ್ಯನ್ತಂ ದೇವಾಸುರನಮಸ್ಕೃತಮ್ |
ಪೂಜಯಸ್ವ ವಿವಸ್ವನ್ತಂ ಭಾಸ್ಕರಂ ಭುವನೇಶ್ವರಮ್ ||

 ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ |
ಏಷ ದೇವಾಸುರಗಣಾನ್‍ಲ್ಲೋಕಾನ್ ಪಾತಿ ಗಭಸ್ತಿಭಿಃ ||

ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕನ್ದಃ ಪ್ರಜಾಪತಿಃ |
ಮಹೇನ್ದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂ ಪತಿಃ ||

ಪಿತರೋ ವಸವಃ ಸಾಧ್ಯಾ ಅಶ್ವಿನೌ ಮರುತೋ ಮನುಃ |
ವಾಯುರ್ವಹ್ನಿಃ ಪ್ರಜಾಃ ಪ್ರಾಣಾ ಋತುಕರ್ತಾ ಪ್ರಭಕರಃ ||

ಆದಿತ್ಯಃ ಸವಿತಾ ಸೂರ್ಯ ಖಗಃ ಪೂಷಾ ಗಭಸ್ತಿಮಾನ್ |
ಸುವರ್ಣಸದೃಶೋ ಭಾನುರ್ಹಿರಣ್ಯರೇತಾ ದಿವಾಕರಃ ||

 ಹರಿದ್ವಶಃ ಸಹಸ್ರಾರ್ಚಿಃ ಸಪ್ತಸಪ್ತಿರ್ಮರೀಚಿಮಾನ್ |
ತಿಮಿರೋನ್ಮಥನಃ ಶಂಭುಸ್ತ್ವಷ್ಟಾ ಮಾರ್ತಣ್ಡಕೋಽಂಶುಮಾನ್ ||

ಹಿರಣ್ಯಗರ್ಭಃ ಶಿಶಿರಸ್ತಪನೋಽಹಸ್ಕರೋ ರವಿಃ |
ಅಗ್ನಿಗರ್ಭೋಽದಿತೇಃ ಪುತ್ರಃ ಶಂಖಃ ಶಿಶಿರನಾಶನಃ || 

ವ್ಯೋಮನಾಥಸ್ತಮೋಭೇದೀ ಋಗ್ಯಜುಃಸಾಮಪಾರಗಃ |
ಘನವೃಷ್ಟಿರಪಾಂ ಮಿತ್ರೋ ವಿನ್ಧ್ಯವೀಥೀಪ್ಲವಂಗಮಃ ||

ಆತಪೀ ಮಣ್ಡಲೀ ಮೃತ್ಯೂಃ ಪಿಙ್ಗಲಃ ಸ್ಸರ್ವತಾಪನಃ |
ಕವಿರ್ವಿಶ್ಜೋ ಮಹಾತೇಜಾ ರಕ್ತಃ ಸರ್ವಭವೋದ್ಧವಃ || 

ನಕ್ಷತ್ರಗ್ರಹತಾರಾಣಾಮಧಿಪೋ ವಿಶ್ವಭಾವನಃ |
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್ ನಮೋಽಸ್ತು ತೇ ||

ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ |
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ || 

ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ |
ನಮೋ ನಮಃ ಸ್ಸಹಸ್ರಾಂಶೋ ಆದಿತ್ಯಾಯ ನಮೋ ನಮಃ ||

ನಮ ಉಗ್ರಾಯ ವೀರಾಯ ಸಾರಙ್ಗಾಯ ನಮೋ ನಮಃ |
ನಮಃ ಪದ್ಮಪ್ರಬೋಧಾಯ ಪ್ರಚಂಡಾಯ ನಮೋಽಸ್ತು ತೇ || 

ಬ್ರಹ್ಮೀಶಾನಾಚ್ಯುತೇಶಾಯ ಸೂರಾಯದಿತ್ಯವರ್ಚಸೇ |
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ ||

ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಮಿತಾತ್ಮನೇ |
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ || 

ತಪ್ತಚಾಮೀಕರಾಭಾಯ ಹರಯೇ ವಿಶ್ವಕರ್ಮಣೇ |
ನಮಸ್ತಮೋಽಭಿನಿಘ್ನಾಯ ರುಚಯೇ ಲೋಕಸಾಕ್ಷಿಣೇ ||

ನಾಶಯತ್ಯೇಷ ವೈ ಭೂತಂ ತಮೇವ ಸೃಜತಿ ಪ್ರಭುಃ |
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ || 

ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |
ಏಷ ಚೈವಾಗ್ನಿಹೋತ್ರಂ ಚ ಫಲಂ ಚೈವಾಗ್ನಿಹೋತ್ರಿಣಾಮ್ ||

ದೇವಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ |
ಯಾನಿ ಕೃತ್ಯಾನಿ ಲೋಕೇಷು ಸರ್ವೇಷು ಪರಮಪ್ರಭುಃ || 

ಏನಮಾಪತ್ಸು ಕೃಚ್ಛ್ರೇಷು ಕಾನ್ತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಶ್ಚಿನ್ನಾವಸೀದತಿ ರಾಘವ ||

ಪೂಜಯಸ್ವೈನಮೇಕಾಗ್ರೋ ದೇವದೇವಂ ಜಗತ್ಪತಿಮ್ |
ಏತತ್ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಠತಿ || 

ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ಹನಿಷ್ಯಸಿ |
ಏವಮುಕ್ತ್ವಾ ತತೋಽಗಸ್ತ್ಯೋ ಜಗಾಮ ಸ ಯಥಾಗತಮ್ ||

ಏತಚ್ಛ್ರುತ್ವಾ ಮಹಾತೇಜಾ ನಷ್ಟಶೋಕೋಽಭವತ್ ತದಾ |
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್ || 

ಆದಿತ್ಯಂ ಪ್ರೇಕ್ಷ್ಯ ಜಪ್ತ್ವೇದಂ ಪರಂ ಹರ್ಷಮವಾಪ್ತವಾನ್ |
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ ||

ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಜಯಾರ್ಥಂ ಸಮುಪಾಗಮತ್ |
ಸರ್ವಯತ್ನೇನ ಮಹತಾ ವೃತಸ್ತಸ್ಯ ಮಧೇಽಭವತ್ ||

ಅಥ ರವಿರವದನ್ನಿರೀಕ್ಷ್ಯ ರಾಮಮ್ ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ |
ನಿಶಿಚರಪತಿಸಂಕ್ಷಯಂ ವಿದಿತ್ವಾ ಸುರಗಣಮಧ್ಯಗತೋ ವಚಸ್ತ್ವರೇತಿ ||

ಶ್ರೀ ಆದಿತ್ಯ ಹೃದಯ ಸ್ತೋತ್ರವು ವಾಲ್ಮೀಕಿ ರಾಮಾಯಣದ ಯುದ್ಧಕಾಂಡದಲ್ಲಿ ಬರುವ ಅತ್ಯಂತ ಶಕ್ತಿಶಾಲಿ ಸ್ತೋತ್ರ. ಯುದ್ಧದ ಸಮಯದಲ್ಲಿ ಶ್ರೀರಾಮನು ದಣಿದಾಗ ಮತ್ತು ಚಿಂತಿತನಾಗಿದ್ದಾಗಅಗಸ್ತ್ಯ ಮಹರ್ಷಿಗಳು ಜಯವನ್ನು ಲಭಿಸುವಂತೆ ಮಾಡಲು ಈ ಸೂರ್ಯ ಸ್ತೋತ್ರವನ್ನು ಉಪದೇಶಿಸುತ್ತಾರೆ.

ಸ್ತೋತ್ರದ ಸಾರಾಂಶ (ಅರ್ಥ)

  1. ಹಿನ್ನೆಲೆ: ರಾವಣನೊಂದಿಗೆ ಸುದೀರ್ಘವಾಗಿ ಯುದ್ಧ ಮಾಡಿ ದಣಿದಿದ್ದ ರಾಮನು ರಣರಂಗದಲ್ಲಿ ಚಿಂತಿತನಾಗಿ ನಿಂತಿದ್ದನು. ಆಗ ದೇವತೆಗಳೊಂದಿಗೆ ಯುದ್ಧ ನೋಡಲು ಬಂದಿದ್ದ ಅಗಸ್ತ್ಯ ಮುನಿಗಳು ರಾಮನ ಬಳಿ ಬಂದು, "ರಾಮಯುದ್ಧದಲ್ಲಿ ಶತ್ರುಗಳನ್ನು ಗೆಲ್ಲಲು ಅತ್ಯಂತ ರಹಸ್ಯವೂಸನಾತನವೂ ಆದ ಈ 'ಆದಿತ್ಯ ಹೃದಯ'ವನ್ನು ಕೇಳು" ಎಂದು ಉಪದೇಶಿಸುತ್ತಾರೆ.
  2. ಫಲಶ್ರುತಿ: ಈ ಸ್ತೋತ್ರವು ಪುಣ್ಯಪ್ರದವಾದುದುಶತ್ರುನಾಶಕವಾದುದುಜಯವನ್ನು ತಂದುಕೊಡುವಂಥದ್ದು ಮತ್ತು ಸಕಲ ಪಾಪಗಳನ್ನು ಹರಿಸುವಂಥದ್ದಾಗಿದೆ. ಇದನ್ನು ಜಪಿಸುವುದರಿಂದ ಆಯಸ್ಸು ಹೆಚ್ಚುತ್ತದೆ ಮತ್ತು ಚಿಂತೆ-ಶೋಕಗಳು ದೂರವಾಗುತ್ತವೆ.
  3. ಸೂರ್ಯನ ವೈಭವ: ಸೂರ್ಯನು ಕೇವಲ ಗ್ರಹವಲ್ಲಅವನು ಬ್ರಹ್ಮವಿಷ್ಣುಶಿವಸ್ಕಂದಪ್ರಜಾಪತಿಇಂದ್ರಯಮ ಮತ್ತು ಕುಬೇರನ ಸ್ವರೂಪವೇ ಆಗಿದ್ದಾನೆ. ಈ ಜಗತ್ತಿನ ಸಕಲ ಜೀವಿಗಳ ಪ್ರಾಣಶಕ್ತಿ ಅವನೇ.
  4. ಸೂರ್ಯನ ನಾಮಾವಳಿ: ಸ್ತೋತ್ರದಲ್ಲಿ ಸೂರ್ಯನನ್ನು ಆದಿತ್ಯಸವಿತಾಭಾಸ್ಕರಮಾರ್ತಾಂಡಹಿರಣ್ಯಗರ್ಭರವಿ ಮತ್ತು ದಿವಾಕರ ಎಂದು ನಾನಾ ಹೆಸರುಗಳಿಂದ ಸ್ತುತಿಸಲಾಗಿದೆ. ಅವನು ಕತ್ತಲೆಯನ್ನು ಓಡಿಸುವವನು (ತಮೋಘ್ನ)ಶತ್ರುಗಳನ್ನು ಸಂಹರಿಸುವವನು (ಶತ್ರುಘ್ನ) ಮತ್ತು ಲೋಕಕ್ಕೆ ಸಾಕ್ಷಿಯಾದವನು.
  5. ಸೂರ್ಯನ ಶಕ್ತಿ: ನಾವೆಲ್ಲರೂ ಮಲಗಿದ್ದಾಗಲೂ ಜಗತ್ತಿನ ಚೈತನ್ಯವಾಗಿ ಸೂರ್ಯನು ಜಾಗೃತವಾಗಿರುತ್ತಾನೆ. ಆಪತ್ತುಗಳಲ್ಲಿಕಾಡುಗಳಲ್ಲಿ ಅಥವಾ ಭಯದ ಸನ್ನಿವೇಶಗಳಲ್ಲಿ ಈ ಸ್ತೋತ್ರವನ್ನು ಪಠಿಸುವವರು ಎಂದಿಗೂ ಸೋಲುವುದಿಲ್ಲ.
  6. ಉಪಸಂಹಾರ: ಅಗಸ್ತ್ಯರು ಹೇಳಿದಂತೆ ರಾಮನು ಮೂರು ಬಾರಿ ಆಚಮನ ಮಾಡಿ ಶುಚಿಯಾಗಿಸೂರ್ಯನನ್ನು ನೋಡಿ ಈ ಸ್ತೋತ್ರವನ್ನು ಮೂರು ಬಾರಿ ಜಪಿಸಿದನು. ತಕ್ಷಣವೇ ರಾಮನಿಗೆ ಅಪಾರ ಶಕ್ತಿ ಮತ್ತು ಸಂತೋಷ ಲಭಿಸಿತು. ಇದನ್ನು ಕಂಡು ಸೂರ್ಯದೇವನು ಸಂತೋಷದಿಂದ "ರಾಮಬೇಗ ರಾವಣನನ್ನು ಸಂಹರಿಸು" ಎಂದು ಹರಸಿದನು.

ಈ ಸ್ತೋತ್ರದ ವಿಶೇಷತೆಗಳು

  • ಆತ್ಮವಿಶ್ವಾಸದ ಸಂಕೇತ: ರಾಮನಂತಹ ದೇವಮಾನವನಿಗೇ ದಣಿವು ಮತ್ತು ಅನಿಶ್ಚಿತತೆ ಕಾಡಿದಾಗ ಈ ಸ್ತೋತ್ರವು ಅವನಲ್ಲಿ ಆತ್ಮಬಲವನ್ನು ತುಂಬಿತು. ಇದು ಮನುಷ್ಯನ ಮನೋಬಲವನ್ನು ಹೆಚ್ಚಿಸುವ ಮಹಾನ್ ಮಂತ್ರ.
  • ವೈಜ್ಞಾನಿಕ ದೃಷ್ಟಿಕೋನ: ಸೂರ್ಯನು ಇಡೀ ಸೌರಮಂಡಲದ ಶಕ್ತಿಯ ಕೇಂದ್ರ. ವಿಜ್ಞಾನದ ಪ್ರಕಾರ ಸೂರ್ಯನಿಲ್ಲದೆ ಭೂಮಿಯ ಮೇಲೆ ಜೀವನ ಅಸಾಧ್ಯ. ಈ ಸ್ತೋತ್ರವು ಆ 'ಜೀವಶಕ್ತಿ'ಯನ್ನು ಆರಾಧಿಸುತ್ತದೆ.
  • ಶೀಘ್ರ ಫಲದಾಯಕ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರಜಾತಕದಲ್ಲಿ ಸೂರ್ಯನು ದುರ್ಬಲನಾಗಿದ್ದಾಗ ಅಥವಾ ಅತಿಯಾದ ಮಾನಸಿಕ ಒತ್ತಡವಿದ್ದಾಗ ಇದನ್ನು ಪಠಿಸುವುದು ಶ್ರೇಷ್ಠ. ಇದು ಕಣ್ಣಿನ ದೃಷ್ಟಿ ಮತ್ತು ಆರೋಗ್ಯಕ್ಕೆ ಒಳ್ಳೆಯದು ಎಂದು ನಂಬಲಾಗಿದೆ.
  • ಜಯದ ಮಂತ್ರ: ಯಾವುದೇ ಕೆಲಸದಲ್ಲಿ ಯಶಸ್ಸು ಸಿಗುತ್ತಿಲ್ಲ ಎಂದಾಗ ಅಥವಾ ಶತ್ರುಬಾಧೆ ಹೆಚ್ಚಾದಾಗ ಆದಿತ್ಯ ಹೃದಯದ ಪಠಣೆ ರಾಮಬಾಣದಂತೆ ಕೆಲಸ ಮಾಡುತ್ತದೆ ಎಂಬುದು ಭಕ್ತರ ನಂಬಿಕೆ.

ಸಲಹೆ: ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ಸ್ನಾನಾದಿ ಕರ್ಮಗಳ ನಂತರ ಈ ಸ್ತೋತ್ರವನ್ನು ಪಠಿಸುವುದು ಅತ್ಯಂತ ಶುಭಪ್ರದ.

PARYAYA: ಶ್ರೀ ಆದಿತ್ಯ ಹೃದಯಸ್ತೋತ್ರಮ್‌ ಮಹತ್ವ:   ಶ್ರೀ ಆದಿತ್ಯ ಹೃದಯಸ್ತೋತ್ರಮ್‌ ಮಹತ್ವ ಸೂ ರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಪುಣ್ಯಕಾಲ. ದಕ್ಷಿಣಾಯನ ಮುಗಿದು ಉತ್ತರಾಯಣ ಆರಂಭವಾಗುವ ಶುಭಕಾಲ, ಭೀಷ್ಮಾಚಾರ್ಯರು ಯುದ...