Sunday, November 21, 2021

PARYAYA: ಪ್ರಜಾಪ್ರಭುತ್ವದ ತಾಯಿ ಭಾರತ

ಪ್ರಜಾಪ್ರಭುತ್ವದ ತಾಯಿ ಭಾರತ


ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ 76ನೇ ಸಮ್ಮೇಳನದಲ್ಲಿ ಮಾತನಾಡುತ್ತಾ ‘ಪ್ರಜಾಪ್ರಭುತ್ವದ ತಾಯಿ’ ಎನಿಸಿರುವ ಭಾರತದ ಪ್ರತಿನಿಧಿಯಾಗಿ ವಿಶ್ವಸಂಸ್ಥೆಯನ್ನು ಪ್ರತಿನಿಧಿಸುತ್ತಿರುವುದಕ್ಕಾಗಿ ತಮಗೆ ಹೆಮ್ಮೆಯಾಗುತ್ತದೆ. ಭಾರತದ ಪ್ರಜಾಪ್ರಭುತ್ವಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ ಎಂಬುದಾಗಿ ಹೇಳಿದರು.

ವಿಶ್ವದ ಪ್ರಜಾಪ್ರಭುತ್ವಕ್ಕೆ ಗ್ರೀಕ್ ದೇಶವೇ ಮೂಲ ಎಂಬುದಾಗಿ ನಂಬಿದ್ದ ಹಲವರಿಗೆ ಇದು ಇರುಸು ಮುರುಸು ಉಂಟು ಮಾಡಿದ್ದು ಸುಳ್ಳಲ್ಲ. ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದವು.

ಈ ಸಂದರ್ಭದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯ ಕೇಂದ್ರದ ಸಹವರ್ತಿ ಕಾನ್‌ಸ್ಟಾಂಟಿನೋ ಕ್ಸೇವಿಯರ್  ಮಾಡಿದ ಒಂದು ಟ್ವೀಟ್ ಎಲ್ಲರ ಗಮನ ಸೆಳೆಯಿತು.

 "ಸ್ಥಳೀಯ ಭಾರತೀಯ ಪ್ರಜಾಪ್ರಭುತ್ವ" ಎಂಬ ಪರಿಕಲ್ಪನೆಯನ್ನು ಭಾರತದ ದಿಗಂಗತ ಪ್ರಧಾನಿಗಳಾಗಿದ್ದ ಮೊರಾರ್ಜಿ ದೇಸಾಯಿ ಮತ್ತು  ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಹಲವರು ಪ್ರಸ್ತಾಪಿಸಿದ್ದರು ಎಂದು ಅವರು ಟ್ವೀಟ್ ಮಾಡಿದರು.

ಅನೇಕ ವರ್ಷಗಳಿಂದ ವ್ಯಾಪಕವಾಗಿ ಪ್ರಚಾರದಲ್ಲಿರುವ  ಸಂದರ್ಶನ ಒಂದರ ಕಡೆಗೆ ಕ್ಸೇವಿಯರ್ ಗಮನ ಸೆಳೆದಿದ್ದರು.   “ಭಾರತದಲ್ಲಿ ಪ್ರಜಾಪ್ರಭುತ್ವವು ಇತರ ದೇಶಗಳಿಗಿಂತ ಹೆಚ್ಚು ಸಹಜವಾಗಿದೆ ಎಂಬುದನ್ನು ಜನರು ಮರೆಯುತ್ತಾರೆ. ಏಕೆಂದರೆ ಪ್ರಪಂಚದಲ್ಲಿ ಬೇರೆ ಯಾವುದೇ ದೇಶವು ಕನಸು ಕಾಣುವ ಮೊದಲೇ ಭಾರತದಲ್ಲಿ ಪ್ರಜಾಪ್ರಭುತ್ವವಿತ್ತು. ಇದು ವೇದಗಳಲ್ಲಿ ಇದೆ, ಅದನ್ನು ಸಂಪೂರ್ಣವಾಗಿ ಮತ್ತು ದೃಢವಾಗಿ ವಿವರಿಸಲಾಗಿದೆ " ಎಂದು ಮೊರಾರ್ಜಿ ದೇಸಾಯಿ ಹೇಳಿದ್ದರು.

ಬ್ರಿಟನ್‌ನಲ್ಲಿ ಅನೇಕರು ಭಾರತಕ್ಕೆ ತಾವು ನೀಡಿರುವ ಕೊಡುಗೆ  ಪ್ರಜಾಪ್ರಭುತ್ವ ಎಂದು ಭಾವಿಸಿದ್ದಾರಲ್ಲ ಎಂದು ಸಂದರ್ಶಕರು ಕಾಲೆಳೆದಾಗ ಮೊರಾರ್ಜಿ ಹೀಗೆ ಉತ್ತರಿಸಿದ್ದರು:  “ಅದು ಅವರಿಗೆ  ಇಷ್ಟವಾದರೆ, ಅದರ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ಆದರೆ ನಾವು 2,500 ವರ್ಷಗಳ ಹಿಂದೆ ಗಣರಾಜ್ಯಗಳನ್ನು ಹೊಂದಿದ್ದೆವು - 2,500 ವರ್ಷಗಳ ಹಿಂದೆ, ಗ್ರೀಸ್ ತನ್ನದೇ ರೀತಿಯ ಪ್ರಜಾಪ್ರಭುತ್ವವನ್ನು ಹೊಂದಿರುವುದಕ್ಕಿಂತ  ಮುಂಚೆಯೇ”.

ನಂತರ, 2003 ರಲ್ಲಿ,ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಭಾರತದ ಸಂಸತ್ತಿನ ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಅಂತಾರಾಷ್ಟ್ರೀಯ ಸಂಸತ್ತಿನ ಸಮ್ಮೇಳನದಲ್ಲಿ, "ಭಾರತದ ಪ್ರಜಾಪ್ರಭುತ್ವವು ಆಳವಾದ ಬೇರುಗಳನ್ನು ಹೊಂದಿದೆ ಮತ್ತು ನಮ್ಮ ಪ್ರಾಚೀನ ಸಂಸ್ಕೃತಿಯು ವಿಭಿನ್ನ ಮತ್ತು ಭಿನ್ನಾಭಿಪ್ರಾಯಗಳಿಗೆ ಗೌರವವನ್ನು ಕಲಿಸುತ್ತದೆ” ಎಂದು ಹೇಳಿದ್ದನ್ನೂ ಕ್ಸೇವಿಯರ್ ತಮ್ಮ ಟ್ವೀಟಿನಲ್ಲಿ ಪ್ರಸ್ತಾಪಿಸಿದರು.

1990 ರಲ್ಲಿ  ಆಗಿನ ವಿದೇಶಾಂಗ ವ್ಯವಹಾರಗಳ ಸಚಿವ ಪಿ.ವಿ. ನರಸಿಂಹ ರಾವ್ ( ರಾಜೀವ ಗಾಂಧಿಯವರ ಬಳಿಕ  ಪಿವಿ ನರಸಿಂಹ ರಾವ್ ಅವರೂ ಭಾರತದ ಪ್ರಧಾನಿಯಾದರು)  ನೇಪಾಳಕ್ಕೆ ಭೇಟಿ ನೀಡಿದಾಗ, "ಬುದ್ಧನ ಹುಟ್ಟು ಮತ್ತು ಬೋಧನೆಗಳ ಕಾಲದಲ್ಲಿ ಪ್ರಪಂಚದ ಈ ಭಾಗದಲ್ಲಿ ಅಸ್ತಿತ್ವದಲ್ಲಿದ್ದ ಪ್ರಜಾಪ್ರಭುತ್ವ ಗಣರಾಜ್ಯಗಳ ಬಗ್ಗೆ ಮಾತನಾಡಿದ್ದರು” ಎಂದೂ ಕ್ಸೇವಿಯರ್ ಪ್ರಸ್ತಾಪ ಮಾಡಿದ್ದಾರೆ.

ಲಿಚ್ಚಾವಿಗಳ ರಾಜಧಾನಿಯಾದ ವೈಶಾಲಿ ಪ್ರಜಾಪ್ರಭುತ್ವ ಗಣರಾಜ್ಯವಾಗಿದ್ದುಚುನಾಯಿತ ಅಧ್ಯಕ್ಷರೊಂದಿಗಿನ ಗಣ್ಯರ ಸಭೆಯಿಂದ ನಿಯಂತ್ರಿಸಲ್ಪಡುತ್ತಿತ್ತು ಎಂದು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಕೂಡಾ ಹೇಳಿದ್ದರು.

ಭಾರತೀಯ ಸಂಸ್ಕೃತಿಯ ಅಡಿಪಾಯವೇ ಆಗಿರುವ ವೇದಗಳಲ್ಲಿರಾಮಾಯಣದಲ್ಲಿಮಹಾಭಾರತದಲ್ಲಿ ಪ್ರಜಾಪ್ರಭುತ್ವದ ಉಲ್ಲೇಖವಿದೆ.

ಹಾಗಾದರೆ ಭಾರತ ಪ್ರಜಾಪ್ರಭುತ್ವದ ಮೂಲ ಬೇರು ಯಾವುದು?  ಗ್ರಾಮ ಪಂಚಾಯತಿಗಳು ಇಲ್ಲವೇ ಗ್ರಾಮ ಸಭೆಗಳುವೇದರಾಮಾಯಣಮಹಾಭಾರತಗಳಲ್ಲಿ ಇದರ ಪ್ರಸ್ತಾಪವಿದೆ.

ಸಹಸ್ರಾರು ವರ್ಷಗಳ ಹಿಂದಿನ ಶಿಲಾ ಶಾಸನಗಳಲ್ಲೂ  ಬಗ್ಗೆ ಉಲ್ಲೇಖಗಳಿವೆತಮಿಳುನಾಡಿನ  ಉತಿರಾಮೆರೂರು ಎಂಬ ಗ್ರಾಮದ ದೇವಸ್ಥಾನದಲ್ಲಿನ ಶಿಲಾಶಾಸನವೊಂದರಲ್ಲಿ ಗ್ರಾಮ ಸಭೆಯ ಕಾರ್ಯ ನಿರ್ವಹಣೆಯ ಬಗೆಗೆ ಬರಹಗಳಿವೆ.

ಗ್ರಾಮಸಭೆಯ ಸದಸ್ಯರ ಆಯ್ಕೆಅವರ ಕಾರ್ಯ ನಿರ್ವಹಣೆಕರ್ತವ್ಯಗಳ ಬಗ್ಗೆಅವರನ್ನು ಅನರ್ಹಗೊಳಿಸುವ ಬಗ್ಗೆ ವಿವರಗಳಿವೆ.

 ಬಗೆಗಿನ ವಿಡಿಯೋವನ್ನು ನೋಡಲು ಮೇಲಿನ/ ಕೆಳಗಿನ ಚಿತ್ರಗಳನ್ನು ಕ್ಲಿಕ್ ಮಾಡಿ.


ಹೌದುನಿಜವಾಗಿಯೂ ನಮ್ಮ ಪ್ರಜಾಪ್ರಭುತ್ವದ ಇತಿಹಾಸಅದರ ಅಡಿಪಾಯವಾದ ಪಂಚಾಯತಿ ವ್ಯವಸ್ಥೆ ಬಗ್ಗೆ ನಾವಿಂದು ಹೆಮ್ಮೆ ಪಡಬೇಕಾಗಿದೆ.

-ನೆತ್ರಕೆರೆ ಉದಯಶಂಕರ


PARYAYA: ಪ್ರಜಾಪ್ರಭುತ್ವದ ತಾಯಿ ಭಾರತ:   ಪ್ರಜಾಪ್ರಭುತ್ವದ ತಾಯಿ ಭಾರತ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ 76ನೇ ಸಮ್ಮೇಳನದಲ್ಲಿ ಮಾತನಾಡುತ್ತಾ ‘ಪ್ರಜಾಪ್ರಭುತ್ವದ ತಾಯಿ’ ಎನಿಸಿರುವ ಭ...

Saturday, November 20, 2021

PARYAYA: ಬದ್ಧ ವೈರಿಗಳ ಅಪರೂಪದ ಮೈತ್ರಿ.!

ಬದ್ಧ ವೈರಿಗಳ ಅಪರೂಪದ ಮೈತ್ರಿ.!

ಬದ್ಧ ವೈರಿಗಳ ಅಪರೂಪದ ಮೈತ್ರಿ.!

ಇದು ಸುವರ್ಣ ನೋಟ

ಕೇರೆ ಹಾವು ಮತ್ತು ಗೂಬೆ ಪರಸ್ಪರ ವೈರಿಗಳು.ಹಾವು – ಮುಂಗುಸಿಗಳ ಹಾಗೆಯೇ. ಕೇರೆ ಹಾವು ಆಸುಪಾಸಿನಲ್ಲಿ ಸುಳಿದಾಡುತ್ತಿದ್ದರೆ ಸಾಕು ಗೂಬೆ ಅದರ ಮೇಲೆರಗಿ ಕುಕ್ಕದೇ ಬಿಡಲು ಸಾಧ್ಯವೇ ಇಲ್ಲ..

ಆದರೆಇತ್ತೀಚೆಗೆ ಒಂದು ದಿನ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ  ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಸುತ್ತಾಡುತ್ತಿದ್ದಾಗ ಕಂಡು ಬಂದದ್ದು ಒಂದು ಅಪರೂಪದ ದೃಶ್ಯ.  ಗೂಬೆಯೊಂದು ಮರದ ರೆಂಬೆಯೊಂದರಲ್ಲಿ ಕುಳಿತಿದೆಅದರ ಸಮೀಪದಲ್ಲೇ ಒಂದು ಕೇರೆ ಹಾವು ಅತ್ತಿತ್ತ ಸುಳಿದಾಡುತ್ತಿದೆ.

ಓಹ್ ಇನ್ನೇನು ಕ್ಷಣಾರ್ಧದಲ್ಲಿ ಗೂಬೆ ಹಾವಿನ ಮೇಲೆರಗುತ್ತದೆಒಂದು ಪುಟ್ಟ ಕದನ ಏರ್ಪಡುತ್ತದೆ ಅಂದು ಕೊಂಡ ಸುವರ್ಣರು ಹೆಗಲ ಮೇಲಿನಿಂದ ಕ್ಯಾಮರಾ ಕೆಳಗಿಳಿಸಿದರು. ಅವರ  ಕ್ಯಾಮರಾ ಮುಂದಿನ ಸಮರ ದೃಶ್ಯದ ದಾಖಲೀಕರಣಕ್ಕೆ ಸಜ್ಜಾಯಿತು..

ಒಂದುಎರಡುಮೂರು . … ನಿಮಿಷಗಳು ಕಳೆದವುಊಹೂಂ ಕದನದ ಯಾವ ಲಕ್ಷಣವೂ ಇಲ್ಲಹಾವು ಹಿಂದೆ ಮುಂದೆ ಸುತ್ತಾಡಿದರೂಗೂಬೆಯದ್ದು ಗಂಭೀರ ಮೌನ!  ಅರೇಇದೇನಿದು

ಲಡಾಖ್ನಲ್ಲಿ ಭಾರತ-ಚೀನಾಗಳ ಸೇನಾ ಚಲನ ವಲನದಂತೆ ಆಯಿತಲ್ಲಬರೇ ಚಲನವಲನ ಮಾತ್ರಗಂಭೀರ ಮೌನ.ಸುತ್ತಾಡುವ ಕೇರೆ ಹಾವು ಗೂಬೆಯ ಕಣ್ಣಿನ ಸಮೀಪಕ್ಕೆ ಬಂದು ದಿಟ್ಟಿಸಿ ನೋಡಿದರೂ ಗೂಬೆಯಿಂದ ಸದ್ದಿಲ್ಲ, ಗದ್ದಲವಿಲ್ಲ. ಹಿಂದಕ್ಕೆ ಮುಂದಕ್ಕೆ ಸುತ್ತಿದರೂ ಮಿಸುಕಾಡದ ಗೂಬೆ.

ಅತ್ತಿತ್ತ ಸುಳಿದ ಹಾವು ಕಡೆಗೆ ಚೀನಾದ ಸೈನಿಕರ ಹಾಗೆ ಹಿಂದಕ್ಕೆ ಸರಿದು ಆಚೆ ಹೊರಟೇ ಹೋಯಿತುಗೂಬೆಯೋ ಭಾರತದ ಸೇನೆಯ ಹಾಗೆ ಘನ ಗಾಂಭೀರ್ಯದಿಂದ ಕುಳಿತಲ್ಲೇ ಕುಳಿತುಕೊಂಡಿತ್ತು…

ಸುವರ್ಣರ ಕ್ಯಾಮರಾ ಹೆಗಲಿನಿಂದ ಕೆಳಗೆ ಇಳಿಯಿತುಯುದ್ಧ ನಡೆಯಲಿಲ್ಲಎಲ್ಲವೂ ಶಾಂತಿಯೊಂದಿಗೆ ಮುಕ್ತಾಯವಾಯಿತು.

ಅದು ಸರಿ.  ಆದರೆ ಗೂಬೆ ತನ್ನ ಬದ್ಧ ವೈರಿ ಕೇರೆ ಹಾವಿನ ಮೇಲೆ ಏಕೆ ಎರಗಲಿಲ್ಲ ? ಈ  ಪ್ರಶ್ನೆ ಸುವರ್ಣರ ತಲೆಯೊಳಗೆ ಗುಂಯ್ ಗುಡುತ್ತಿತ್ತು.

ಅಷ್ಟರಲ್ಲಿ ನೆತ್ತಿಯ  ಮೇಲೆ ತಂಪಾದಂತಾಯಿತುನೋಡಿದರೆಬೀಸಿದ ಗಾಳಿಗೆ ಮರದ ಎಲೆಗಳಿಂದ ನೀರ ಹನಿಗಳು ಸುವರ್ಣರ ಮಂಡೆಯ ಮೇಲೆ ಬಿದ್ದಿದ್ದವುಹೌದು, ಹಿಂದಿನ ದಿನವಷ್ಟೇ

ಬೆಂಗಳೂರಿನಲ್ಲಿ ಭಾರೀ  ಮಳೆ ಸುರಿದಿತ್ತು.

ಸುವರ್ಣರ ಪ್ರಶ್ನೆಗೆ ಉತ್ತರ ಸಿಕ್ಕಿತು… ಹೌದುಗೂಬೆ ಮಳೆಯಿಂದ ಒದ್ದೆ ಮುದ್ದೆಯಾಗಿ ಕುಳಿತಿದೆ.ಬಹುಶಃ  ರಾತ್ರಿಯಿಂದಲೇ  ಹಾಗೆಯೇ ಕುಳಿತಿರಬಹುದು. ಹಾಗೇ ಸೂರ್ಯ ಮೇಲೆದ್ದು ಕಾಯಕ ಆರಂಭಿಸಿದ್ದಾನೆ.ಲೋಕಕ್ಕೆ  ಬೆಳಗಾಗುತ್ತಿದ್ದಂತೆಯೇ ಗೂಬೆಗೆ ಕತ್ತಲು ಆವರಿಸಿದೆಏಕೆಂದರೆ ಹಗಲು ಅದಕ್ಕೆ ಕಣ್ಣು ಕಾಣುವುದಿಲ್ಲಸುತ್ತ ಬಂದು ಸುತ್ತಾಡಿದ ಕೇರೆ ಹಾವು ಅದರ ಕಣ್ಣಿಗೆ ಬಿದ್ದೇ ಇಲ್ಲಇನ್ನು ಸಮರ ನಡೆಯುವುದು ಎಲ್ಲಿಗೆಕೇರೆ ಸುತ್ತಾಡಿ  ‘ಈ ಮೂಕ ಮುನಿಯ ಸಹವಾಸ’ ತನಗೇಕೆ  ಎಂದು ತನ್ನಷ್ಟಕ್ಕೇ ಹೊರಟು ಹೋಗಿದೆ ಅಷ್ಟೆ.

ವಿಶ್ವನಾಥ ಸುವರ್ಣ ಕ್ಯಾಮರಾ ಸೆರೆ ಹಿಡಿದ  ಘಟನೆಯ ದೃಶ್ಯಗಳು ಇಲ್ಲಿವೆ

ಸಮೀಪ ದೃಶ್ಯದ ಅನುಭವಕ್ಕಾಗಿ ಫೊಟೋಗಳನ್ನು ಕ್ಲಿಕ್ ಮಾಡಿರಿ.

ಕಥೆಯನ್ನು ಆಲಿಸಲು ಕೆಳಗೆ ಕ್ಲಿಕ್  ಮಾಡಿರಿ:

-ಉದಯನೆ


PARYAYA: ಬದ್ಧ ವೈರಿಗಳ ಅಪರೂಪದ ಮೈತ್ರಿ.!: ಬದ್ಧ ವೈರಿಗಳ ಅಪರೂಪದ ಮೈತ್ರಿ. ! ಇದು ಸುವರ್ಣ ನೋಟ ಕೇರೆ ಹಾವು ಮತ್ತು ಗೂಬೆ ಪರಸ್ಪರ ವೈರಿಗಳು . ಹಾವು – ಮುಂಗುಸಿಗಳ ಹಾಗೆಯೇ. ಕೇರೆ ಹಾವು ಆಸುಪಾಸಿನ...

Sunday, November 7, 2021

PARYAYA: ವಿಶ್ವ ಸಂಸ್ಥೆಯಲ್ಲಿ ಡೈನೋಸಾರ್..!

ವಿಶ್ವ ಸಂಸ್ಥೆಯಲ್ಲಿ ಡೈನೋಸಾರ್..!

ವಿಶ್ವಸಂಸ್ಥೆಯಲ್ಲಿ ಇತ್ತೀಚೆಗೆ ಜಾಗತಿಕ ಹವಾಮಾನ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಯಿತು. ವಿಶ್ವವನ್ನು ದುರಂತದೆಡೆಗೆ ತಳ್ಳುತ್ತಿರುವ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ತಗ್ಗಿಸಬೇಕಾದ ಅಗತ್ಯದ ಬಗ್ಗೆ ವಿವಿಧ ಅಭಿಪ್ರಾಯಗಳು ವ್ಯಕ್ತವಾದವು.

ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿಯ ಮಂದಿ ಮತ್ತೆ ಸೂರ್ಯನತ್ತ ಹೋಗಬೇಕಾದ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದರು. ‘ಒಬ್ಬ ಸೂರ್ಯ, ಒಂದು ಜಗತ್ತು, ಒಂದು ಜಾಲಇಂದಿನ ಅಗತ್ಯ ಎಂದು ಅವರು ಒತ್ತಿ ಹೇಳಿದರು.

ಇದೇ ಸಂದರ್ಭದಲ್ಲಿ ವಿಶ್ವಸಂಸ್ಥೆಯು ಒಂದು ವಿಡಿಯೋವನ್ನು ಪ್ರಸಾರ ಮಾಡಿತು. ವಿಡಿಯೋ ಸಂದೇಶ ಏನು ಎಂಬದನ್ನು ಕನ್ನಡದಲ್ಲಿ ನೋಡಿ.

ವಿಡಿಯೋ ನೋಡಲು ಮೇಲಿನ ಚಿತ್ರ/ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ

PARYAYA: ವಿಶ್ವ ಸಂಸ್ಥೆಯಲ್ಲಿ ಡೈನೋಸಾರ್..!:   ವಿಶ್ವ ಸಂಸ್ಥೆಯಲ್ಲಿ ಡೈನೋಸಾರ್ ..! ವಿಶ್ವಸಂಸ್ಥೆಯಲ್ಲಿ ಇತ್ತೀಚೆಗೆ ಜಾಗತಿಕ ಹವಾಮಾನ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಯಿತು . ವಿಶ್ವವನ್ನು ದುರಂತದೆಡೆಗೆ ...

Friday, October 15, 2021

PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಆಯುಧ ಪೂಜಾ

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಆಯುಧ ಪೂಜಾ


ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ 15-10-2021ರ ಶುಕ್ರವಾರ ನವರಾತ್ರಿ ಪೂಜಾ ಅಂಗವಾಗಿ ಬಾಲಾಜಿ ಕೃಪಾ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಆಯುಧ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.

ಬಡಾವಣೆಯ ಕೊಳವೆ ಬಾವಿಗಳಿಗೂ ಈ ಸಂದರ್ಭದಲ್ಲಿ ಪೂಜೆ ಸಲ್ಲಿಸಲಾಯಿತು.

ವಿಡಿಯೋ ನೋಡಲು ಮೇಲಿನ / ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ


PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಆಯುಧ ಪೂಜಾ:   ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಆಯುಧ ಪೂಜಾ ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ 15-10-2021ರ ಶುಕ್ರವಾರ ನವರಾತ್ರಿ ಪೂಜಾ ಅಂಗ...

Sunday, September 12, 2021

PARYAYA: ಪಶ್ಚಿಮ ಘಟ್ಟ: ಹೀಗೊಂದು ದೃಶ್ಯ ಕಾವ್ಯ…

ಪಶ್ಚಿಮ ಘಟ್ಟ: ಹೀಗೊಂದು  ದೃಶ್ಯ ಕಾವ್ಯ…


ಪಶ್ಚಿಮ ಘಟ್ಟ- ದಕ್ಷಿಣ ಭಾರತದ ಕಾಶ್ಮೀರವೆಂದರೆ ತಪ್ಪಲ್ಲ. ಪಶ್ಚಿಮ ಘಟ್ಟದ ಕಾನನಗಳ ಮಧ್ಯೆ ಚಾರಣ, ಪಯಣ ಒಂದು ಅಪೂರ್ವ ಅನುಭವ.

ಬೆಟ್ಟಗುಡ್ಡಕಣಿವೆನೀರಿನ ಝರಿಗಳು,ಕಣಿವೆ- ಪ್ರಪಾತಗಳು, ಸೇತುವೆಗಳು, ಸುರಂಗಗಳು, ಅಪರೂಪದ ಸಸ್ಯರಾಶಿ, ಹಾವು ಪವಡಿಸಿದಂತೆ  ಕಾಣುವ ಮಾರ್ಗ, ಇವೆಲ್ಲಕ್ಕೆ ಕಿರೀಟವಿಟ್ಟಂತೆ ತೇಲುವ ಮೋಡ, ಹಿಮ, ತೀಡುವ ತಂಗಾಳಿ…

ಪಶ್ಚಿಮ ಘಟ್ಟದ ಆಹ್ಲಾದಕರ ಅನುಭವವನ್ನು  ಅಲ್ಲಿ ಪಯಣಿಸಿದವರೇ ಬಲ್ಲರು. ದಶಕಗಳಿಂದಲೇ ಇಲ್ಲಿ ಓಡುತ್ತಿರುವ ರೈಲುಗಳಲ್ಲಿ ಪಶ್ಚಿಮ ಘಟ್ಟದ ಈ ಸೊಬಗು ವೀಕ್ಷಿಸಲೆಂದೇ ಹಗಲು ರೈಲಿನಲ್ಲಿ ಪಯಣಿಸುವವರ ಸಂಖ್ಯೆ ಕಡಿಮೆಯೇನೂ ಇಲ್ಲ. ಮೊಬೈಲ್ ಯುಗ ಆರಂಭವಾದ ಬಳಿಕವಂತೂ ಸಕಲೇಶಪುರ ಕಳೆಯಿತು ಎಂದರೆ ಸುಬ್ರಹ್ಮಣ್ಯ ರಸ್ತೆಯವರೆಗೂ ಮೊಬೈಲ್ ಕ್ಲಿಕ್ಕಿಸಿಕೊಂಡು ಫೊಟೋಗ್ರಾಫರ್ ಆಗಿದ್ದೇವೆಂದು ಹೆಮ್ಮೆಯಿಂದ ಬೀಗುವವರಿಗೆ ಲೆಕ್ಕವಿಲ್ಲ.

ಪಶ್ಚಿಮ ಘಟ್ಟದ ಸೊಬಗನ್ನು ಜನರಿಗೆ ಪರಿಚಯಿಸಲೆಂದೇ ರೈಲ್ವೇ ಇಲಾಖೆಯು ಈ ಮಾರ್ಗದಲ್ಲಿ ಈಗ ವಿಸ್ಟಾಡೋಮ್ ರೈಲು ಪಯಣವನ್ನೂ ಹಗಲಿನಲ್ಲಿ ಆರಂಭಿಸಿದೆ. ಸಂಪೂರ್ಣ ಗಾಜುಮಯವಾದ ಈ ರೈಲಿನಲ್ಲಿ ನಿಮಗೆ ಪಶ್ಚಿಮಘಟ್ಟದಲ್ಲಿ ಕುಳಿತುಕೊಂಡೇ ಹಾರುತ್ತಿರುವ ಅನುಭವ ಆಗಬಲ್ಲುದು.

ಛಾಯಾಚಿತ್ರಕಾರರಿಗಂತೂ ಪಶ್ಚಿಮ ಘಟ್ಟದ ರೈಲು ಪಯಣ ಒಂದು ಹಬ್ಬ. ತಮ್ಮ ಕ್ಯಾಮರಾ ಹೆಗಲಿಗೇರಿಸಿಕೊಂಡು ಭೂಮಾತೆಯ ಸೌಂದರ್ಯವನ್ನು ಸೆರೆ ಹಿಡಿಯಲು ಅವರಿಗೆ ಅಮಿತೋತ್ಸಾಹ.

ಪಕ್ಷಿ, ಪ್ರಾಣಿ, ಪ್ರಕೃತಿ, ಕೋಟೆ – ಹೀಗೆ ವೈವಿಧ್ಯಮಯ ಛಾಯಾಚಿತ್ರಗಳನ್ನು ತೆಗೆಯುವುದರಲ್ಲಿ ಸಿದ್ಧ ಹಸ್ತರಾದ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣರಿಗೂ ಪಶ್ಚಿಮ ಘಟ್ಟದ ಸೊಬಗು ಸೆರೆ ಹಿಡಿಯುವುದೆಂದರೆ ಅಪಾರ ಆಸಕ್ತಿ. ವಿಸ್ಟಾಡೋಮ್ ಪಯಣ ಆರಂಭಕ್ಕೆ ಸ್ವಲ್ಪ ಮುನ್ನವೇ ಅವರು ಸೆರೆ ಹಿಡಿದ ಪಶ್ಚಿಮ ಘಟ್ಟದ ಛಾಯಾಚಿತ್ರಗಳು ಅಪ್ಯಾಯಮಾನವಾಗಿವೆ.

ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಇಡೀ ದೇಶದ ಜನರನ್ನು ಬಡಿದೆಬ್ಬಿಸಿದ್ದ ವಂದೇ ಮಾತರಂ ಗೀತೆಯಲ್ಲಿ ಬಂಕಿಮ್ ಚಂದ್ರ ಚಟರ್ಜಿಯವರು ವರ್ಣಿಸಿದ್ದ ಭೂಮಾತೆಯ ಸೊಬಗು ಈ ಪಶ್ಚಿಮ ಘಟ್ಟದಲ್ಲಿ ಪಯಣಿಸುವಾಗ ಕಣ್ಣಿಗೆ ರಾಚುತ್ತದೆ.

ಈ ವಂದೇ ಮಾತರಂ ಗೀತೆಯನ್ನು ಭಾಗವತರಾದ ಪಟ್ಲಸತೀಶ ಶೆಟ್ಟಿಸತ್ಯನಾರಾಯಣ ಪುಣ್ಚಿತ್ತಾಯ ಮತ್ತು ಕಾವ್ಯಶ್ರೀ  ಅಜೇರು ಅವರು ಯಕ್ಷಗಾನದ ಶೈಲಿಯಲ್ಲಿ ಹಾಡಿದ್ದು ಇತ್ತೀಚೆಗೆ ವಾಟ್ಸಪ್ ಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.

ವಿಶ್ವನಾಥ ಸುವರ್ಣರ ಪಶ್ಚಿಮ ಘಟ್ಟದ ಛಾಯಾಚಿತ್ರಗಳನ್ನು ನೋಡುತ್ತಿದ್ದಂತೆಯೇ  ಮನಸ್ಸಿನಲ್ಲಿ ಭಾರತ ಮಾತೆಯ ಸೊಬಗನ್ನು ಬಣ್ಣಿಸುವ ‘ವಂದೇ ಮಾತರಂ’ ಮನದೊಳಗೆ ಮೂಡಿಬಂದದ್ದರ ಪರಿಣಾಮವೇ  ಈ ‘ವಂದೇ ಮಾತರಂ ದೃಶ್ಯ ಕಾವ್ಯದ ಚಿತ್ರಣ ನೀಡುವ ವಿಡಿಯೋ ಸೃಷ್ಟಿಗೆ  ಪ್ರೇರಣೆಯಾಯಿತು.

ಈ ದೃಶ್ಯ ಕಾವ್ಯದ  ಎರಡು ಆವೃತ್ತಿಗಳು ಇಲ್ಲಿವೆ: ಕೇಳಿ ಆನಂದಿಸಿ. ಈ ವಿಡಿಯೋಗಳು ‘ಪರ್ಯಾಯ-5’ ಯು ಟ್ಯೂಬ್ ಚಾನೆಲ್ ನಲ್ಲಿಯೂ ಲಭ್ಯವಿವೆ.

ವಿಡಿಯೋಗಳನ್ನು ವೀಕ್ಷಿಸಲು ಕೆಳಗಿನ ಚಿತ್ರಗಳನ್ನು ಕ್ಲಿಕ್ ಮಾಡಿ.




-ನೆತ್ರಕೆರೆ ಉದಯಶಂಕರ.


PARYAYA: ಪಶ್ಚಿಮ ಘಟ್ಟ: ಹೀಗೊಂದು ದೃಶ್ಯ ಕಾವ್ಯ…:   ಪಶ್ಚಿಮ ಘಟ್ಟ: ಹೀಗೊಂದು   ದೃಶ್ಯ ಕಾವ್ಯ… ಪಶ್ಚಿಮ ಘಟ್ಟ- ದಕ್ಷಿಣ ಭಾರತದ ಕಾಶ್ಮೀರವೆಂದರೆ ತಪ್ಪಲ್ಲ. ಪಶ್ಚಿಮ ಘಟ್ಟದ ಕಾನನಗಳ ಮಧ್ಯೆ ಚಾರಣ, ಪಯಣ ಒಂದು ಅಪೂರ್ವ ಅನುಭವ...

Sunday, September 5, 2021

PARYAYA: ನ್ಯಾಯಾಲಯಕ್ಕೆ ಸಾಧ್ಯವಾಗದ್ದು, ಪಂಚಾಯತಿಗೆ ಸಾಧ್ಯವಾಯಿತು..!

ನ್ಯಾಯಾಲಯಕ್ಕೆ ಸಾಧ್ಯವಾಗದ್ದು, ಪಂಚಾಯತಿಗೆ ಸಾಧ್ಯವಾಯಿತು..!

 ಈ ಗ್ರಾಮ ಪಂಚಾಯತಿಯಲ್ಲಿ ‘ಸರ್’  ‘ಮ್ಯಾಡಮ್’ ಪದ ಬಳಸುವಂತಿಲ್ಲ..

ನ್ಯಾಯಾಲಯಕ್ಕೆ ಸಾಧ್ಯವಾಗದ್ದು, ಪಂಚಾಯತಿಗೆ ಸಾಧ್ಯವಾಯಿತು..!

ಆರು ತಿಂಗಳ ಹಿಂದೆ ಸುಪ್ರೀಂಕೋರ್ಟಿನಲ್ಲಿ  ಭಾರತದ ಮುಖ್ಯ ನ್ಯಾಯಮೂರ್ತಿ  ಎಸ್ ಎ ಬೋಬಡೆ ಅವರು ಯುವ ವಕೀಲರೊಬ್ಬರು ತಮ್ಮನ್ನು ‘ಯುವರ್ ಆನರ್’ ಎಂಬುದಾಗಿ ಸಂಬೋಧಿಸಿದಾಗ ಸಿಟ್ಟಿಗೆದ್ದಿದ್ದರು.

‘ನಿಮ್ಮ ಮನಸ್ಸಿನಲ್ಲಿ ಏನಿದೆ? ನೀವು ಅಮೆರಿಕದ ಸುಪ್ರೀಂಕೋರ್ಟಿನಲ್ಲಿ ಇದ್ದೇನೆ ಅಂದುಕೊಂಡಿದ್ದೀರೋ ಅಥವಾ ಅಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಇದ್ದೇನೆ ಅಂದುಕೊಂಡಿದ್ದೀರೋ?’

ತತ್ ಕ್ಷಣವೇ ಕಾನೂನು ವಿದ್ಯಾರ್ಥಿಯಾಗಿದ್ದ ಯುವ ವಕೀಲರು  ನಾಲಿಗೆ ಕಚ್ಚಿಕೊಂಡರು. ‘ತಪ್ಪಾಯಿತು, ಕ್ಷಮಿಸಿ’ ಎಂದು ಕೇಳಿಕೊಂಡು ಯುವ ವಕೀಲರು ‘ಇನ್ನು ಮುಂದೆ  ‘ಮೈ ಲಾರ್ಡ್ಸ್ ಪದ ಬಳಸುತ್ತೇನೆ’ ಎಂದು ಉತ್ತರಿಸಿದರು.

‘ಏನಾದರೂ ಸರಿ. ನೀವು ಯಾವ ಪದ ಬಳಸುತ್ತೀರಿ ಎಂದೇ ನಾವು ಗಮನಿಸುತ್ತಿರುವುದಿಲ್ಲ, ಆದರೆ ತಪ್ಪು ಪದಗಳನ್ನು ಬಳಸಬೇಡಿ’ ಎಂದರು ಸಿಜೆಐ.

ಹಿಂದೆ, 2020ರ ಆಗಸ್ಟ್ ತಿಂಗಳಲ್ಲಿ ಕೂಡಾ ಇದೇ ರೀತಿ ನ್ಯಾಯಮೂರ್ತಿಗಳನ್ನು ಉದ್ದೇಶಿಸಿ ‘ಯುವರ್ ಆನರ್’ ಪದ ಬಳಸಿದಾಗ  ಸಿಜೆಐ ಬೋಬ್ಡೆ ಸಿಡಿಮಿಡಿಗೊಂಡಿದ್ದರು. ಆಗ ಕೂಡಾ  ‘ನೀವೇನು ಅಮೆರಿಕದ ಸುಪ್ರೀಂಕೋರ್ಟಿನ ಮುಂದೆ ಇದ್ದೀರೋ?’ ಎಂಬುದಾಗಿ ಅವರು ವಕೀಲರನ್ನು ಗದರಿದ್ದರು.

ಉನ್ನತ  ನ್ಯಾಯಾಲಯಗಳಲ್ಲಿ ಸಾಮಾನ್ಯವಾಗಿ ಬಳಸುವ  ‘ಮೈ ಲಾರ್ಡ್’, ‘ಯುವರ್ ಲಾರ್ಡ್ ಶಿಪ್’ ಮುಂತಾದ ಶಿಷ್ಟಾಚಾರದ ಪದಗಳು ನಮ್ಮ ದೇಶಕ್ಕೆ ಬ್ರಿಟಿಷ್ ಆಡಳಿತದ ಬಳುವಳಿಗಳು. ಈ ಪದಗಳ ಬಳಕೆಯನ್ನು ನಿಲ್ಲಿಸಬೇಕು ಎಂದು ಹಲವಾರು ವರ್ಷಗಳಿಂದಲೇ ಪ್ರಯತ್ನಗಳು ನಡೆಯುತ್ತಲೇ ಬಂದಿವೆ.

ಭಾರತದ ವಕೀಲರ ಸಂಘವಾದ ಬಾರ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ  ಇಂತಹ ಪದಗಳ ಬಳಕೆ ಬಗ್ಗೆ ನಿಯಮಗಳನ್ನು ರೂಪಿಸಲು 1961ರ ವಕೀಲರ ಕಾಯ್ದೆಯ ಸೆಕ್ಷನ್ 49 (1)(ಸಿ) ಅಧಿಕಾರ ನೀಡಿದೆ.  2006ರಲ್ಲೇ  ಬಾರ್ ಕೌನ್ಸಿಲ್ ಆಫ್ ಇಂಡಿಯಾ , ‘ಮೈಲಾರ್ಡ್’ ‘ಯುವರ್ ಲಾರ್ಡ್ ಶಿಪ್’ ನಂತಹ ಪದಗಳನ್ನು  ಬಳಸಲು ಉತ್ತೇಜನ ನೀಡಬಾರದು ಎಂದು ನಿರ್ಣಯ ಕೈಗೊಂಡಿತ್ತು.

2014ರಲ್ಲಿ ಶಿವಸಾಗರ್ ತಿವಾರಿ ಎಂಬ ವಕೀಲರೊಬ್ಬರು, ಇಂತಹ ಪದಗಳು ದೇಶದ ಘನತೆಗೆ ಧಕ್ಕೆ ತರುತ್ತವೆ ಮತ್ತು ಇವು ಗುಲಾಮಿತನದ ಸಂಕೇತವಾದ್ದರಿಂದ ಅವುಗಳ ಬಳಕೆಯನ್ನು  ನಿಷೇಧಿಸಬೇಕು’ ಎಂದು ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ ಆದರೆ ನ್ಯಾಯಮೂರ್ತಿಗಳಾದ ಎಚ್.ಎಲ್. ದತ್ತು ಮತ್ತು ಬೋಬ್ಡೆ ಅವರ ಪೀಠವು ‘ಈ ಪದಗಳ ಬಳಕೆ ಎಂದಿಗೂ ಕಡ್ಡಾಯವಾಗಿಲ್ಲ’ ಎಂಬುದಾಗಿ ಹೇಳಿ ಅರ್ಜಿಯನ್ನು ತಿರಸ್ಕರಿಸಿತ್ತು.

‘ನ್ಯಾಯಾಲಯವನ್ನು ಗೌರವಯುತವಾಗಿ ಸಂಬೋಧಿಸಿ ಅಷ್ಟೆ. ನೀವು ‘ಸರ್’ ಎಂದರೂ ಒಪ್ಪುತ್ತೇವೆ, ‘ಯುವರ್ ಆನರ್’ ಎಂದರೂ  ಒಪ್ಪುತ್ತೇವೆ, ‘ಲಾರ್ಡ್ ಶಿಪ್’ ಎಂದು ಕರೆದರೂ ಒಪ್ಪುತ್ತೇವೆ.’ ಎಂದು ಪೀಠ ಹೇಳಿತ್ತು.

ಆದರೆ, 2019ರಲ್ಲಿ ರಾಜಸ್ಥಾನ ಹೈಕೋರ್ಟ್ ‘ಮೈಲಾರ್ಡ್’  ‘ಯುವರ್ ಲಾರ್ಡ್ ಶಿಪ್’ ಪದಗಳ ಬಳಕೆಯನ್ನು ನಿಷೇಧಿಸಿತ್ತು. ಸಂವಿಧಾನವು ಸಮಾನತೆಯನ್ನು ಪ್ರತಿಪಾದಿಸಿರುವಾಗ  ಇಂತಹ ಪದಗಳ ಬಳಕೆ ಸರಿಯಲ್ಲ ಎಂದು ರಾಜಸ್ಥಾನ ಹೈಕೋರ್ಟ್ ಸಾರಿತ್ತು.

ಆದರೂ ನ್ಯಾಯಾಲಯಗಳಲ್ಲಿ ಇಂತಹ ಪದಗಳ ಬಳಕೆ ನಿರಂತರವಾಗಿ ನಡೆಯುತ್ತಲೇ ಇದೆ.

ಬ್ರಿಟಿಷ್ ವಸಾಹತಿನ ಬಳುವಳಿ ಪದಗಳನ್ನು ನಿಷೇಧಿಸುವ ಬಗ್ಗೆ ನ್ಯಾಯಾಲಯಗಳೇ ಹೀಗೆ ದ್ವಂದ್ವದಲ್ಲಿ ಇರುವ ಹೊತ್ತಿನಲ್ಲಿ  ಕೇರಳದ ಪುಟ್ಟ ಗ್ರಾಮ ಪಂಚಾಯತಿಯೊಂದು ‘ಸರ್ ಮತ್ತು  ಮ್ಯಾಡಮ್’ ನಂತಹ ಬ್ರಿಟಿಷ್ ವಸಾಹತುಶಾಹಿಯ ಪದಗಳ ಬಳಕೆಯನ್ನು ನಿಷೇಧಿಸುವ ಮೂಲಕ  ಇಂತಹ ಪದಗಳ ಬಳಕೆಯನ್ನು ನಿಷೇಧಿಸಿದ ದೇಶದ ಮೊತ್ತ ಮೊದಲ ಗ್ರಾಮ ಪಂಚಾಯತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಾಥುರ್ ಗ್ರಾಮ ಪಂಚಾಯತಿಯು 2021ರ ಆಗಸ್ಟ್ 31ರ ಮಂಗಳವಾರ  ‘ಸರ್ ಮತ್ತು ಮ್ಯಾಡಮ್’  ಪದಗಳ ಬಳಕೆಯನ್ನು ನಿಷೇಧಿಸುವ  ಚಾರಿತ್ರಿಕ ನಿರ್ಣಯವನ್ನು ಕೈಗೊಂಡು ಇತಿಹಾಸ  ಬರೆದಿದೆ.

16 ಸದಸ್ಯರ ಕಾಂಗ್ರೆಸ್ ಆಡಳಿತದ ಗ್ರಾಮ ಪಂಚಾಯಿತಿಯು ಈ ವಾರದ ಆರಂಭದಲ್ಲಿ ಅಂಗೀಕರಿಸಿದ ಸರ್ವಾನುಮತದ ನಿರ್ಣಯಕ್ಕೆ ಏಳು ಸಿಪಿಐ (ಎಂ) ನಾಮನಿರ್ದೇಶಿತರು ಮತ್ತು ಒಬ್ಬ ಬಿಜೆಪಿ ಸದಸ್ಯರ ಬೆಂಬಲ ಲಭಿಸಿದೆ. ಈ ವಿಚಾರದಲ್ಲಿ ಪಕ್ಷಗಳು ಯಾವುದೇ ರಾಜಕೀಯವನ್ನೂ ಎಳೆದುತರಲಿಲ್ಲ ಎಂಬುದೇ ವಿಶೇಷ.

ಸಾಮಾನ್ಯ ಜನರು, ಜನಪ್ರತಿನಿಧಿಗಳು ಮತ್ತು ನಾಗರಿಕ ಸಂಸ್ಥೆಯ ಅಧಿಕಾರಿಗಳ ನಡುವಣ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ  ಇಂತಹ ಕ್ರಮ ಕೈಗೊಂಡಿರುವ ಮಾಥುರ್ ಗ್ರಾಮ ಪಂಚಾಯತಿ ಇದನ್ನು ಪಂಚಾಯತಿಯ ಪ್ರಕಟಣಾ ಫಲಕದಲ್ಲಿ ಅಂಟಿಸುವ ಮೂಲಕ ಜಾರಿಗೂ ತಂದಿದೆ.

ಜನರು, ಪಂಚಾಯತಿನ ಯಾವುದೇ ಅಧಿಕಾರಿಯನ್ನು ಉದ್ದೇಶಿಸಿ ‘ಸರ್’ ಅಥವಾ ‘ಮ್ಯಾಡಮ್’ ಎಂಬುದಾಗಿ ಸಂಬೋಧಿಸಬೇಕಾಗಿಲ್ಲ.  ಅಧಿಕಾರಿಯ ಹುದ್ದೆ ಅಥವಾ ಹೆಸರಿನಿಂದಲೇ ಸಂಬೋಧಿಸಬಹುದುಅಧಿಕಾರಿಗಳು ವಯಸ್ಸಾದವರೋ  ಹಿರಿಯರೋ ಆಗಿದ್ದರೆ ಮಲಯಾಳಂನಲ್ಲಿ ‘ಚೇತಾ’/ ‘ಚೇತನ್’ (ಅಣ್ಣ) ಅಥವಾ ‘ಚೇಚಿ’ (ಅಕ್ಕ) ಇಂತಹ ಸ್ನೇಹಪರ ಪದಗಳನ್ನು ಬಳಸಬಹುದು.

‘ಸರ್’ ಅಥವಾ ‘ಮ್ಯಾಡಮ್’ ಪದ ಬಳಸದ್ದಕ್ಕಾಗಿ ಸೇವೆ ನೀಡಲು ಯಾರಾದರೂ ನಿರಾಕರಿಸಿದರೆ ಜನರು ಪಂಚಾಯತ್ ಅಧ್ಯಕ್ಷರು ಅಥವಾ ಕಾರ್ಯದರ್ಶಿಗೆ ದೂರು ನೀಡಬಹುದು.

ಪಂಚಾಯತಿ ನಿರ್ಣಯದ ಪರಿಣಾಮವಾಗಿ ಈಗ ಅಲ್ಲಿನ  ಅಧಿಕಾರಿಗಳು ತಮ್ಮ ಮೇಜಿನ ಮೇಲೆ ತಮ್ಮ ಹೆಸರುಹುದ್ದೆಗಳ ಫಲಕಗಳನ್ನೂ ಇಡುತ್ತಿದ್ದಾರೆ.

'ಸರ್' ಮತ್ತು 'ಮೇಡಂ' ಗೆ ಪರ್ಯಾಯ ಪದಗಳನ್ನು ನೀಡುವಂತೆ ಪಂಚಾಯತಿಯು ಅಧಿಕೃತ ಭಾಷಾ ಇಲಾಖೆಯನ್ನು  ಕೂಡಾ  ಕೋರಿದೆ.

ಪ್ರಜಾಪ್ರಭುತ್ವದಲ್ಲಿ ನಾಗರಿಕರೇ ಪ್ರಭುಗಳು. ನಾವೆಲ್ಲರೂ ಅವರಿಗೆ ಸೇವೆ ಒದಗಿಸುವ ಸೇವಕರು. ನಮ್ಮ ಸೇವೆ ಪಡೆಯಲು ಜನರು ನಮ್ಮನ್ನು ಅಂಗಲಾಚುವಂತೆ ಆಗಬಾರದು. ಇದಕ್ಕಾಗಿ, ಪಂಚಾಯತ್ ಪ್ರಸ್ತುತ 'ಅಪೇಕ್ಷಾ ನಮೂನೆ' (ಅರ್ಜಿ ನಮೂನೆ) ಯನ್ನು 'ಅವಕಾಶ ಪತ್ರಿಕೆ' (ಹಕ್ಕು ಪ್ರಮಾಣಪತ್ರ) ಆಗಿ ಬದಲಾಯಿಸಲೂ ಪಂಚಾಯತಿಯು ತೀರ್ಮಾನಿಸಿದೆ ಎಂದೂ ಪಂಚಾಯತಿಯ ಉಪಾಧ್ಯಕ್ಷರು ತಿಳಿಸಿದ್ದಾರೆ.

ಎಂತಹ ಅನುಕರಣೀಯ ಗ್ರಾಮ ಪಂಚಾಯತಿ ಇದು ಅಲ್ಲವೇ?

ವಿಡಿಯೋ ನೋಡಲು ಕೆಳಗೆ ಕ್ಲಿಕ್ ಮಾಡಿರಿ:


 -ನೆತ್ರಕೆರೆ ಉದಯಶಂಕರ



PARYAYA: ನ್ಯಾಯಾಲಯಕ್ಕೆ ಸಾಧ್ಯವಾಗದ್ದು, ಪಂಚಾಯತಿಗೆ ಸಾಧ್ಯವಾಯಿತು..!:   ಈ ಗ್ರಾಮ ಪಂಚಾಯತಿಯಲ್ಲಿ ‘ಸರ್’   ‘ಮ್ಯಾಡಮ್’ ಪದ ಬಳಸುವಂತಿಲ್ಲ.. ನ್ಯಾಯಾಲಯಕ್ಕೆ ಸಾಧ್ಯವಾಗದ್ದು, ಪಂಚಾಯತಿಗೆ ಸಾಧ್ಯವಾಯಿತು..! ಆರು ತಿಂಗಳ ಹಿಂದೆ ಸುಪ್ರೀಂಕೋರ್ಟ...