Showing posts with label ವಂದೇ ಮಾತರಂ. Show all posts
Showing posts with label ವಂದೇ ಮಾತರಂ. Show all posts

Friday, November 7, 2025

PARYAYA: ರಾಷ್ಟ್ರಗೀತೆ "ವಂದೇ ಮಾತರಂ"ಗೆ ೧೫೦ರ ಸಂಭ್ರಮ

 ರಾಷ್ಟ್ರಗೀತೆ "ವಂದೇ ಮಾತರಂ"ಗೆ ೧೫೦ರ ಸಂಭ್ರಮ

ಸ್ಮರಣಾರ್ಥ ಉತ್ಸವ ಕ್ಕೆ ಪ್ರಧಾನಿ ಚಾಲನೆ

ಭಾರತದ ರಾಷ್ಟ್ರಗೀತೆ ʼವಂದೇ ಮಾತರಂʼನ ೧೫೦ನೇ ವರ್ಷಾಚರಣೆ ಸ್ಮರಣಾರ್ಥ ಉತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ೨೦೨೫ ನವೆಂಬರ್‌ ೭ರ ಶುಕ್ರವಾರ ಚಾಲನೆ ನೀಡಿದರು.

ಸಂಸ್ಕೃತಿ ಸಚಿವಾಲಯವು ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪ್ರಧಾನಿ ಈ ಶುಭ ಸಮಾರಂಭವನ್ನು ಉದ್ಘಾಟಿಸಿದರು.

ಈ ಕಾರ್ಯಕ್ರಮವು ನವೆಂಬರ್ ೭, ೨೦೨೫ ರಿಂದ ನವೆಂಬರ್ ೭, ೨೦೨೬ ರವರೆಗೆ ಒಂದು ವರ್ಷದ ರಾಷ್ಟ್ರವ್ಯಾಪಿ ಸ್ಮರಣೋತ್ಸವಕ್ಕೆ ಔಪಚಾರಿಕವಾಗಿ ನಾಂದಿ ಹಾಡಿತು. ಭಾರತದ ಸ್ವಾತಂತ್ರ್ಯ ಚಳುವಳಿಗೆ ಸ್ಫೂರ್ತಿ ನೀಡಿದ ಮತ್ತು ರಾಷ್ಟ್ರೀಯ ಹೆಮ್ಮೆ ಹಾಗೂ ಏಕತೆಯನ್ನು ಇಂದಿಗೂ ಜಾಗೃತಗೊಳಿಸುತ್ತಿರುವ ಈ ಕಾಲಾತೀತ ಸಂಯೋಜನೆಗೆ ೧೫೦ ವರ್ಷಗಳು ತುಂಬಿದ ಸಂಭ್ರಮ ಇದು.

🌟 ವಂದೇ ಮಾತರಂ ಇತಿಹಾಸ ಮತ್ತು ಮಹತ್ವ 🌟

೨೦೨೫ ವಂದೇ ಮಾತರಂ ಗೀತೆಗೆ ೧೫೦ ವರ್ಷ ತುಂಬಿದ ವರ್ಷ. ಬಂಕಿಮಚಂದ್ರ ಚಟರ್ಜಿ ಅವರು ರಚಿಸಿದ ನಮ್ಮ "ವಂದೇ ಮಾತರಂ" ರಾಷ್ಟ್ರಗೀತೆಯನ್ನು ೧೮೭೫ ರ ನವೆಂಬರ್ ೭ ರ ಅಕ್ಷಯ ನವಮಿಯ ಶುಭ ಸಂದರ್ಭದಲ್ಲಿ ಬರೆಯಲಾಯಿತು ಎಂದು ನಂಬಲಾಗಿದೆ.

ವಂದೇ ಮಾತರಂ ಮೊದಲು ಬಂಕಿಮಚಂದ್ರ ಅವರ ಕಾದಂಬರಿ ಆನಂದಮಠದ ಭಾಗವಾಗಿ 'ಬಂಗದರ್ಶನ್' ಎಂಬ ಸಾಹಿತ್ಯ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಕಾಣಿಸಿಕೊಂಡಿತು ಮತ್ತು ನಂತರ ೧೮೮೨ ರಲ್ಲಿ ಸ್ವತಂತ್ರ ಪುಸ್ತಕವಾಗಿ ಪ್ರಕಟವಾಯಿತು.

ಆ ಅವಧಿಯಲ್ಲಿ ಭಾರತವು ಪ್ರಮುಖ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಬದಲಾವಣೆಗಳಿಗೆ ಒಳಗಾಗುತ್ತಿತ್ತು ಮತ್ತು ರಾಷ್ಟ್ರೀಯ ಅಸ್ಮಿತೆ ಹಾಗೂ ವಸಾಹತುಶಾಹಿ ಆಡಳಿತಕ್ಕೆ ಪ್ರತಿರೋಧದ ಪ್ರಜ್ಞೆ ಬೆಳೆಯುತ್ತಿತ್ತು. ತಾಯಿಭಾರತಿಯನ್ನು ಶಕ್ತಿ, ಸಮೃದ್ಧಿ ಮತ್ತು ದೈವತ್ವದ ಮೂರ್ತರೂಪವಾಗಿ ಆವಾಹಿಸುವ ಈ ಹಾಡು, ಭಾರತದ ಜಾಗೃತಗೊಂಡ ಏಕತೆ ಮತ್ತು ಆತ್ಮಗೌರವದ ಮನೋಭಾವಕ್ಕೆ ಕಾವ್ಯಾತ್ಮಕ ಅಭಿವ್ಯಕ್ತಿ ನೀಡಿತು. ಶೀಘ್ರದಲ್ಲೇ, ಇದು ರಾಷ್ಟ್ರಭಕ್ತಿಯ ಶಾಶ್ವತ ಸಂಕೇತವಾಯಿತು.

ಜನವರಿ ೨೪, ೧೯೫೦ ರಂದು, ಸಂವಿಧಾನ ಸಭೆಯ ಅಧ್ಯಕ್ಷರಾದ ಡಾ. ರಾಜೇಂದ್ರ ಪ್ರಸಾದ್ ಅವರು, "ವಂದೇ ಮಾತರಂ" ಸ್ವಾತಂತ್ರ್ಯ ಹೋರಾಟದಲ್ಲಿ ಐತಿಹಾಸಿಕ ಪಾತ್ರವನ್ನು ವಹಿಸಿದ್ದರಿಂದ, ಅದಕ್ಕೆ ರಾಷ್ಟ್ರಗೀತೆ "ಜನ ಗಣ ಮನ" ದೊಂದಿಗೆ ಸಮಾನ ಗೌರವ ನೀಡಲಾಗುವುದು ಎಂದು ಘೋಷಿಸಿದರು.

🎤 ಸಮಾರಂಭದ ವಿಶೇಷತೆ: ಸಾಮೂಹಿಕ ಗಾಯನ 🎤

ಪ್ರಧಾನಮಂತ್ರಿಗಳ ಸಮ್ಮುಖದಲ್ಲಿ ನಡೆದ ಮುಖ್ಯ ಕಾರ್ಯಕ್ರಮದಲ್ಲಿ "ವಂದೇ ಮಾತರಂ"ನ ಸಂಪೂರ್ಣ ಆವೃತ್ತಿಯ ಸಾಮೂಹಿಕ ಗಾಯನ ನಡೆಯಿತು. ದೇಶಾದ್ಯಂತ ಇತರೆಡೆಗಳಲ್ಲೂ ವಂದೇ ಮಾತರಂನ ಸಂಪೂರ್ಣ ಆವೃತ್ತಿಯ ಸಾಮೂಹಿಕ ಗಾಯನ ನಡೆಯಿತು.

ಈ ಅಭಿಯಾನದಲ್ಲಿ ಸಾರ್ವಜನಿಕರು, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಪೊಲೀಸ್ ಸಿಬ್ಬಂದಿ, ವೈದ್ಯರು, ಶಿಕ್ಷಕರು, ಚಾಲಕರು, ಅಂಗಡಿಯವರು ಮತ್ತು ಸಮಾಜದ ಎಲ್ಲ ವರ್ಗಗಳ ಸಂಬಂಧಿತ ಪಾಲುದಾರರು ಭಾಗವಹಿಸಿದರು.

🏛️ ಕೇಂದ್ರ ಸಚಿವ ಸಂಪುಟದ ಅನುಮೋದನೆ 🏛️

ಈ ಐತಿಹಾಸಿಕ ಮತ್ತು ರಾಷ್ಟ್ರೀಯ ಮಹತ್ವವನ್ನು ಗುರುತಿಸಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಅಕ್ಟೋಬರ್ ೧, ೨೦೨೫ ರಂದು ರಾಷ್ಟ್ರಗೀತೆ ವಂದೇ ಮಾತರಂನ ೧೫೦ ವರ್ಷಗಳ ಆಚರಣೆಗಳಿಗೆ ಅನುಮೋದನೆ ನೀಡಿತ್ತು. ನಂತರ, ಅಕ್ಟೋಬರ್ ೨೪, ೨೦೨೫ ರಂದು ರಾಷ್ಟ್ರೀಯ ಅನುಷ್ಠಾನ ಸಮಿತಿಯು ನವೆಂಬರ್ ೭, ೨೦೨೫ ರಿಂದ ನವೆಂಬರ್ ೭, ೨೦೨೬ ರವರೆಗೆ ಒಂದು ವರ್ಷದ ಸ್ಮರಣೋತ್ಸವಕ್ಕೆ ಅನುಮೋದನೆ ನೀಡಿದೆ.

'ವಂದೇ ಮಾತರಂ'ಗೆ ಗೌರವ ನೀಡಿದ ಪರ್ಯಾಯದ ಪರಿ ಇಲ್ಲಿದೆ: ಚಿತ್ರಗಳನ್ನು ಕ್ಲಿಕ್‌  ಮಾಡಿ ನೋಡಿ:



PARYAYA: ರಾಷ್ಟ್ರಗೀತೆ "ವಂದೇ ಮಾತರಂ"ಗೆ ೧೫೦ರ ಸಂಭ್ರಮ:   ರಾಷ್ಟ್ರಗೀತೆ "ವಂದೇ ಮಾತರಂ" ಗೆ ೧೫೦ ರ ಸಂಭ್ರಮ ಸ್ಮರಣಾರ್ಥ ಉತ್ಸವ ಕ್ಕೆ ಪ್ರಧಾ ನಿ ಚಾಲನೆ ಭಾ ರತದ ರಾಷ್ಟ್ರಗೀತೆ ʼ ವಂದೇ ಮಾತರಂ ʼ ನ ೧೫೦ನೇ ವರ್ಷಾಚ...

Tuesday, August 16, 2022

PARYAYA: ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ ಆ ʼವಿಡಿಯೋʼ ಯಾವುದು?

 ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ ಆ ʼವಿಡಿಯೋʼ ಯಾವುದು?

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಆ ʼವೈರಲ್‌ʼ ವಿಡಿಯೋವನ್ನು ಮೆಚ್ಚಿಕೊಂಡು ರಿಟ್ವೀಟ್‌ ಮಾಡಿದ್ದಾರೆ. ಅದನ್ನು ಮೊದಲಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಅದನ್ನು ರಿಟ್ವೀಟ್‌ ಮಾಡಿರುವ ಪ್ರಧಾನಿ “ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆಗೈದ ಕರ್ನಾಟಕದ ಅಪ್ರತಿಮ ಸಾಧಕರ ಅತ್ಯುತ್ತಮ ಪ್ರಯತ್ನʼ ಎಂಬುದಾಗಿ ಕನ್ನಡದಲ್ಲಿಯೇ ಶೀರ್ಷಿಕೆ ನೀಡಿ ಹೊಗಳಿದ್ದಾರೆ.

ಈ ವಿಡಿಯೋವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಲುವಾಗಿ ರಾಜ್ಯಸಭಾ ಸದಸ್ಯ, ಕನ್ನಡ ಚಿತ್ರನಟ ಜಗ್ಗೇಶ್‌ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಸಂತೋಷ್‌ ಆನಂದರಾಮ್‌ ಅವರು ನಿರ್ದೇಶಿಸಿದ್ದಾರೆ.  ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್‌ ವೈರಲ್‌ ಆಗಿತ್ತು. ಈವರೆಗೆ ಈ ವಿಡಿಯೋ ನೋಡಿದವರ ಸಂಖ್ಯೆ 10 ಲಕ್ಷವನ್ನೂ ಮೀರಿದೆ.

ಈ ವಿಡಿಯೋ ಹಾಡಿಗೆ ಪ್ರವೀಣ್ ಡಿ. ರಾವ್ ಸಂಗೀತ ನೀಡಿದ್ದು, ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. ಶ್ರೀಶ ಕುದವಳ್ಳಿ ಛಾಯಾಗ್ರಹಣ ಮಾಡಿದ್ದಾರೆ. ನಟರಾದ ಸುದೀಪ್‌, ಶಿವರಾಜಕುಮಾರ್, ರವಿಚಂದ್ರನ್, ಜಗ್ಗೇಶ್, ರಮೇಶ್ ಅರವಿಂದ್, ಅನಂತನಾಗ್, ಅರ್ಜುನ್ ಸರ್ಜಾ, ಗಣೇಶ್, ಶ್ರೀಮುರಳಿ, ಧನಂಜಯ, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಸಾಹಿತಿ ಎಸ್.ಎಲ್. ಭೈರಪ್ಪ, ಸಾಲುಮರದ ತಿಮ್ಮಕ್ಕ, ಜೋಗತಿ ಮಂಜಮ್ಮ ಹಾಗೂ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್ ಈ ಹಾಡಿಗೆ ಜೊತೆಯಾಗಿದ್ದಾರೆ.

‘ನನಗೆ ಚಿಕ್ಕವನಾಗಿದ್ದಾಗಿನಿಂದಲೇ ‘ಮಿಲೇ ಸುರ್ ಮೇರಾ ತುಮಾರ’ ಹಾಡು ಬಲು ಇಷ್ಟ. ಇಂತಹದೊಂದು ಹಾಡನ್ನು ನಮ್ಮ ಕನ್ನಡ ಕಲಾವಿದರ ಸಮಾಗಮದಲ್ಲಿ ಮಾಡಬೇಕು ಎಂಬ ಆಸೆಯಿತ್ತು. ಗೆಳೆಯ ಶ್ರೀನಿಧಿ ಅವರು ಕೆಲವು ದಿನಗಳ ಹಿಂದೆ ಈ ಹಾಡಿನ ಬಗ್ಗೆ ಪ್ರಸ್ತಾಪಿಸಿದರು. ನಾನು ನಿರ್ಮಾಣಕ್ಕೆ ಮುಂದಾದೆ. ಕೇವಲ ಹದಿಮೂರು ದಿನಗಳಲ್ಲಿ ಈ ಹಾಡು ನಿರ್ಮಾಣವಾಯಿತು” ಎಂದು ನಿರ್ಮಾಪಕ ಜಗ್ಗೇಶ್‌ ಪ್ರತಿಕ್ರಿಯಿಸಿದ್ದಾರೆ.

ಹಾಗಿದ್ದಾರೆ ಪ್ರಧಾನಿ ಮೋದಿ ಅವರು ಮೆಚ್ಚಿದ ಈ ವಿಡಿಯೋ ಯಾವುದು? ಕೆಳಗೆ ಕ್ಲಿಕ್‌ ಮಾಡಿ ನೋಡಿ.



PARYAYA: ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ ಆ ʼವಿಡಿಯೋʼ ಯಾವುದು?:   ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ ಆ ʼ ವಿಡಿಯೋ ʼ ಯಾವುದು? ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಆ ʼ ವೈರಲ್‌ ʼ ವಿಡಿಯೋವನ್ನು ಮೆಚ್ಚಿಕೊಂಡು ರಿಟ್ವೀಟ್‌ ಮಾಡಿ...

Sunday, September 12, 2021

PARYAYA: ಪಶ್ಚಿಮ ಘಟ್ಟ: ಹೀಗೊಂದು ದೃಶ್ಯ ಕಾವ್ಯ…

ಪಶ್ಚಿಮ ಘಟ್ಟ: ಹೀಗೊಂದು  ದೃಶ್ಯ ಕಾವ್ಯ…


ಪಶ್ಚಿಮ ಘಟ್ಟ- ದಕ್ಷಿಣ ಭಾರತದ ಕಾಶ್ಮೀರವೆಂದರೆ ತಪ್ಪಲ್ಲ. ಪಶ್ಚಿಮ ಘಟ್ಟದ ಕಾನನಗಳ ಮಧ್ಯೆ ಚಾರಣ, ಪಯಣ ಒಂದು ಅಪೂರ್ವ ಅನುಭವ.

ಬೆಟ್ಟ, ಗುಡ್ಡ, ಕಣಿವೆ, ನೀರಿನ ಝರಿಗಳು,ಕಣಿವೆ- ಪ್ರಪಾತಗಳು, ಸೇತುವೆಗಳು, ಸುರಂಗಗಳು, ಅಪರೂಪದ ಸಸ್ಯರಾಶಿ, ಹಾವು ಪವಡಿಸಿದಂತೆ  ಕಾಣುವ ಮಾರ್ಗ, ಇವೆಲ್ಲಕ್ಕೆ ಕಿರೀಟವಿಟ್ಟಂತೆ ತೇಲುವ ಮೋಡ, ಹಿಮ, ತೀಡುವ ತಂಗಾಳಿ…

ಪಶ್ಚಿಮ ಘಟ್ಟದ ಆಹ್ಲಾದಕರ ಅನುಭವವನ್ನು  ಅಲ್ಲಿ ಪಯಣಿಸಿದವರೇ ಬಲ್ಲರು. ದಶಕಗಳಿಂದಲೇ ಇಲ್ಲಿ ಓಡುತ್ತಿರುವ ರೈಲುಗಳಲ್ಲಿ ಪಶ್ಚಿಮ ಘಟ್ಟದ ಈ ಸೊಬಗು ವೀಕ್ಷಿಸಲೆಂದೇ ಹಗಲು ರೈಲಿನಲ್ಲಿ ಪಯಣಿಸುವವರ ಸಂಖ್ಯೆ ಕಡಿಮೆಯೇನೂ ಇಲ್ಲ. ಮೊಬೈಲ್ ಯುಗ ಆರಂಭವಾದ ಬಳಿಕವಂತೂ ಸಕಲೇಶಪುರ ಕಳೆಯಿತು ಎಂದರೆ ಸುಬ್ರಹ್ಮಣ್ಯ ರಸ್ತೆಯವರೆಗೂ ಮೊಬೈಲ್ ಕ್ಲಿಕ್ಕಿಸಿಕೊಂಡು ಫೊಟೋಗ್ರಾಫರ್ ಆಗಿದ್ದೇವೆಂದು ಹೆಮ್ಮೆಯಿಂದ ಬೀಗುವವರಿಗೆ ಲೆಕ್ಕವಿಲ್ಲ.

ಪಶ್ಚಿಮ ಘಟ್ಟದ ಸೊಬಗನ್ನು ಜನರಿಗೆ ಪರಿಚಯಿಸಲೆಂದೇ ರೈಲ್ವೇ ಇಲಾಖೆಯು ಈ ಮಾರ್ಗದಲ್ಲಿ ಈಗ ವಿಸ್ಟಾಡೋಮ್ ರೈಲು ಪಯಣವನ್ನೂ ಹಗಲಿನಲ್ಲಿ ಆರಂಭಿಸಿದೆ. ಸಂಪೂರ್ಣ ಗಾಜುಮಯವಾದ ಈ ರೈಲಿನಲ್ಲಿ ನಿಮಗೆ ಪಶ್ಚಿಮಘಟ್ಟದಲ್ಲಿ ಕುಳಿತುಕೊಂಡೇ ಹಾರುತ್ತಿರುವ ಅನುಭವ ಆಗಬಲ್ಲುದು.

ಛಾಯಾಚಿತ್ರಕಾರರಿಗಂತೂ ಪಶ್ಚಿಮ ಘಟ್ಟದ ರೈಲು ಪಯಣ ಒಂದು ಹಬ್ಬ. ತಮ್ಮ ಕ್ಯಾಮರಾ ಹೆಗಲಿಗೇರಿಸಿಕೊಂಡು ಭೂಮಾತೆಯ ಸೌಂದರ್ಯವನ್ನು ಸೆರೆ ಹಿಡಿಯಲು ಅವರಿಗೆ ಅಮಿತೋತ್ಸಾಹ.

ಪಕ್ಷಿ, ಪ್ರಾಣಿ, ಪ್ರಕೃತಿ, ಕೋಟೆ – ಹೀಗೆ ವೈವಿಧ್ಯಮಯ ಛಾಯಾಚಿತ್ರಗಳನ್ನು ತೆಗೆಯುವುದರಲ್ಲಿ ಸಿದ್ಧ ಹಸ್ತರಾದ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣರಿಗೂ ಪಶ್ಚಿಮ ಘಟ್ಟದ ಸೊಬಗು ಸೆರೆ ಹಿಡಿಯುವುದೆಂದರೆ ಅಪಾರ ಆಸಕ್ತಿ. ವಿಸ್ಟಾಡೋಮ್ ಪಯಣ ಆರಂಭಕ್ಕೆ ಸ್ವಲ್ಪ ಮುನ್ನವೇ ಅವರು ಸೆರೆ ಹಿಡಿದ ಪಶ್ಚಿಮ ಘಟ್ಟದ ಛಾಯಾಚಿತ್ರಗಳು ಅಪ್ಯಾಯಮಾನವಾಗಿವೆ.

ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಇಡೀ ದೇಶದ ಜನರನ್ನು ಬಡಿದೆಬ್ಬಿಸಿದ್ದ ವಂದೇ ಮಾತರಂ ಗೀತೆಯಲ್ಲಿ ಬಂಕಿಮ್ ಚಂದ್ರ ಚಟರ್ಜಿಯವರು ವರ್ಣಿಸಿದ್ದ ಭೂಮಾತೆಯ ಸೊಬಗು ಈ ಪಶ್ಚಿಮ ಘಟ್ಟದಲ್ಲಿ ಪಯಣಿಸುವಾಗ ಕಣ್ಣಿಗೆ ರಾಚುತ್ತದೆ.

ಈ ವಂದೇ ಮಾತರಂ ಗೀತೆಯನ್ನು ಭಾಗವತರಾದ ಪಟ್ಲಸತೀಶ ಶೆಟ್ಟಿ, ಸತ್ಯನಾರಾಯಣ ಪುಣ್ಚಿತ್ತಾಯ ಮತ್ತು ಕಾವ್ಯಶ್ರೀ  ಅಜೇರು ಅವರು ಯಕ್ಷಗಾನದ ಶೈಲಿಯಲ್ಲಿ ಹಾಡಿದ್ದು ಇತ್ತೀಚೆಗೆ ವಾಟ್ಸಪ್ ಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.

ವಿಶ್ವನಾಥ ಸುವರ್ಣರ ಪಶ್ಚಿಮ ಘಟ್ಟದ ಛಾಯಾಚಿತ್ರಗಳನ್ನು ನೋಡುತ್ತಿದ್ದಂತೆಯೇ  ಮನಸ್ಸಿನಲ್ಲಿ ಭಾರತ ಮಾತೆಯ ಸೊಬಗನ್ನು ಬಣ್ಣಿಸುವ ‘ವಂದೇ ಮಾತರಂ’ ಮನದೊಳಗೆ ಮೂಡಿಬಂದದ್ದರ ಪರಿಣಾಮವೇ  ಈ ‘ವಂದೇ ಮಾತರಂ ದೃಶ್ಯ ಕಾವ್ಯದ ಚಿತ್ರಣ ನೀಡುವ ವಿಡಿಯೋ ಸೃಷ್ಟಿಗೆ  ಪ್ರೇರಣೆಯಾಯಿತು.

ಈ ದೃಶ್ಯ ಕಾವ್ಯದ  ಎರಡು ಆವೃತ್ತಿಗಳು ಇಲ್ಲಿವೆ: ಕೇಳಿ ಆನಂದಿಸಿ. ಈ ವಿಡಿಯೋಗಳು ‘ಪರ್ಯಾಯ-5’ ಯು ಟ್ಯೂಬ್ ಚಾನೆಲ್ ನಲ್ಲಿಯೂ ಲಭ್ಯವಿವೆ.

ವಿಡಿಯೋಗಳನ್ನು ವೀಕ್ಷಿಸಲು ಕೆಳಗಿನ ಚಿತ್ರಗಳನ್ನು ಕ್ಲಿಕ್ ಮಾಡಿ.




-ನೆತ್ರಕೆರೆ ಉದಯಶಂಕರ.


PARYAYA: ಪಶ್ಚಿಮ ಘಟ್ಟ: ಹೀಗೊಂದು ದೃಶ್ಯ ಕಾವ್ಯ…:   ಪಶ್ಚಿಮ ಘಟ್ಟ: ಹೀಗೊಂದು   ದೃಶ್ಯ ಕಾವ್ಯ… ಪಶ್ಚಿಮ ಘಟ್ಟ- ದಕ್ಷಿಣ ಭಾರತದ ಕಾಶ್ಮೀರವೆಂದರೆ ತಪ್ಪಲ್ಲ. ಪಶ್ಚಿಮ ಘಟ್ಟದ ಕಾನನಗಳ ಮಧ್ಯೆ ಚಾರಣ, ಪಯಣ ಒಂದು ಅಪೂರ್ವ ಅನುಭವ...