Wednesday, November 26, 2025

PARYAYA: ರಾಜ್ಯೋತ್ಸವ ಕಳೆಗಟ್ಟಿಸಿದ ಚಿಣ್ಣರ ʼಅಭಿಮನ್ಯು ಕಾಳಗʼ

 ರಾಜ್ಯೋತ್ಸವ ಕಳೆಗಟ್ಟಿಸಿದ ಚಿಣ್ಣರ ʼಅಭಿಮನ್ಯು ಕಾಳಗʼ

ಬೆಂಗಳೂರಿನಲ್ಲಿ ರಾಜ್ಯೋತ್ಸವ ಅಂದರೆ ನೆನಪಾಗುವುದು  ಭಾಷಣ, ನಾಟಕ,ಸಂಗೀತ, ನೃತ್ಯ.

ಆದರೆ, ರಾಮಕೃಷ್ಣ ಹೆಗಡೆ ನಗರ, ಜಕ್ಕೂರಿಗೆ ಸಮೀಪದ ಅಮೃತಹಳ್ಳಿಯ ತಲಕಾವೇರಿ ಬಡಾವಣೆಯಲ್ಲಿ ಈ ಬಾರಿಯ ರಾಜ್ಯೋತ್ಸವ ವಿಶೇಷವಾಗಿತ್ತು. ಈ ಬಡಾವಣೆಯ ಪುಟ್ಟ ಮಕ್ಕಳು ಬಣ್ಣ ಬಣ್ಣದ ವೇಷ ತೊಟ್ಟು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಪೌರಾಣಿಕ ಪ್ರಸಂಗದ ಪಾತ್ರಧಾರಿಗಳಾಗಿ ಯಕ್ಷ ರಂಗಭೂಮಿಯಲ್ಲಿ ಮಿಂಚಿದರು.

ಕೇವಲ ೧೦ರಿಂದ ೧೫ದಿನಗಳ ಅವಧಿಯ ತರಬೇತಿಯಲ್ಲಿ ಯಕ್ಷಗಾನದ ಭಾಗವತಿಕೆಗೆ ಹೆಜ್ಜೆ ಹಾಕಿ ಅದ್ಭುತ ಪ್ರದರ್ಶನ ನೀಡಿದರು. ʼಅಭಿಮನ್ಯು ಕಾಳಗʼವನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದರು.

ʼಯಕ್ಷ ಕಲಾ ಕೌಸ್ತುಭʼದ ಯಕ್ಷಗುರು ಉಮೇಶ ರಾಜ್‌ ಮಂದಾರ್ತಿ ಅವರ ನಿರ್ದೇಶನ ಮತ್ತು ಅವರ ತಂಡದ ಸದಸ್ಯರ ಸಹಕಾರದೊಂದಿಗೆ ತಲಕಾವೇರಿ ಬಡಾವಣೆಯ ʼಅಭಿಮನ್ಯು ಕಾಳಗʼ ಯಕ್ಷಗಾನ ಎಲ್ಲರ ಮನ ಸೆಳೆಯಿತು.

ಉಮೇಶ ರಾಜ್‌ ಮಂದಾರ್ತಿ ಅವರು ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿ ಭಾನುವಾರ ಮಕ್ಕಳಿಗೆ ಯಕ್ಷಗಾನ ಹೇಳಿಕೊಡುತ್ತಿದ್ದಾರೆ.

ʼಅಭಿಮನ್ಯು ಕಾಳಗʼ ಪ್ರದರ್ಶನಕ್ಕೆ ನಾಲ್ಕೈದು ತಾಸು ಮುಂಚಿತವಾಗಿಯೇ ರಂಗಭೂಮಿಯ ಸಮೀಪದ ʼಚೌಕಿʼಯಲ್ಲಿ ಮಕ್ಕಳು ವೇಷಭೂಷಣ ತೊಟ್ಟುಕೊಳ್ಳುತ್ತಿದ್ದ ಸಡಗರದ ಚಿತ್ರಗಳು, ಚೌಕಿ ಪೂಜೆಯ ವಿಡಿಯೋ ಸೇರಿದಂತೆ ʼಅಭಿಮನ್ಯು ಕಾಳಗʼದ ಎರಡು ಭಾಗಗಳು ಇಲ್ಲಿವೆ.

ಕೆಳಗಿನ ಚಿತ್ರಗಳನ್ನು ಕ್ಲಿಕ್‌ ಮಾಡುವ ಮೂಲಕ ಯಕ್ಷಗಾನ ಪ್ರಸಂಗವನ್ನು ಪೂರ್ತಿಯಾಗಿ ಇಲ್ಲಿ 👇 ವೀಕ್ಷಿಸಬಹುದು.

ಭಾಗ ೧ ಯು ಟ್ಯೂಬ್‌ ಲಿಂಕ್:‌ https://youtu.be/1LFnZpXOnlQ

ಭಾಗ ೨ ಯು ಟ್ಯೂಬ್‌ ಲಿಂಕ್‌: https://youtu.be/yl-0kIOX3HQ


ಅಥವಾ PARYAYA.COMನ  ಯಕ್ಷಗಾನ ತಾಳಮದ್ದಳೆ ಪುಟ ಕ್ಲಿಕ್‌ ಮಾಡಿರಿ.
ಇನ್ನೊಂದು ವಿಡಿಯೋ ನೋಡಲು ಈ ಲಿಂಕ್‌ ಕ್ಲಿಕ್‌ ಮಾಡಿರಿ.
PARYAYA: ರಾಜ್ಯೋತ್ಸವ ಕಳೆಗಟ್ಟಿಸಿದ ಚಿಣ್ಣರ ʼಅಭಿಮನ್ಯು ಕಾಳಗʼ:   ರಾಜ್ಯೋತ್ಸವ ಕಳೆಗಟ್ಟಿಸಿದ ಚಿಣ್ಣರ ʼ ಅಭಿಮನ್ಯು ಕಾಳಗ ʼ ಬೆಂ ಗಳೂರಿನಲ್ಲಿ ರಾಜ್ಯೋತ್ಸವ ಅಂದರೆ ನೆನಪಾಗುವುದು   ಭಾಷಣ, ನಾಟಕ,ಸಂಗೀತ, ನೃತ್ಯ. ಆದರೆ, ರಾಮಕೃಷ್ಣ ಹೆ...

No comments:

Post a Comment