ನಾನು ಮೆಚ್ಚಿದ ವಾಟ್ಸಪ್

Tuesday, October 29, 2024

PARYAYA: ರಾಮ ರಘುವರ ರಾಮಸೀತಾ…!

ರಾಮ ರಘುವರ ರಾಮಸೀತಾ…!

ಬೆಂಗಳೂರು: ಬೆಂಗಳೂರು ಉತ್ತರ ಹವ್ಯಕ ಮಂಡಲದ ಮಂಡಲೋತ್ಸವ ೨೦೨೪ ಅಕ್ಟೋಬರ್‌ ೨೭ರ ಭಾನುವಾರ ಬೆಂಗಳೂರು ಮಲ್ಲೇಶ್ವರದ ಹವ್ಯಕ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ʼರಾಮ ರಘುವರ ರಾಮಸೀತಾʼ ಹಾಡು ಮತ್ತು ನೃತ್ಯ ಕಾರ್ಯಕ್ರಮದಲ್ಲಿ ಇಡೀ ಸಭೆಯೇ ಪಾಲ್ಗೊಂಡ ದೃಶ್ಯ ಇಲ್ಲಿದೆ. 

ಮಲ್ಲೇಶ್ವರದ ಅಖಿಲ ಹವ್ಯಕ ಮಹಾಸಭಾದಲ್ಲಿ ನಡೆದ ಮಂಡಲೋತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮಸಾಂಸ್ಕೃತಿಕ ಕಾರ್ಯಕ್ರಮ, 'ಗುರುಸೇವಾತಿಲಕಪ್ರಶ‌ಸ್ತಿ ಪ್ರಧಾನಊಟೋಪಚಾರಕ್ರೀಡೋತ್ಸವದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಸಭಾ ಕಾರ್ಯಕ್ರಮ ಒಳಗೊಂಡಿದ್ದವು. ಪುಟಾಣಿಗಳು,ಯುವಕ ಯುವತಿಯರು ವಲಯಗಳ, ಮಂಡಲದ ಪದಾಧಿಕಾರಿಗಳು,ಮಹಾಮಂಡಲದ ಪದಾಧಿಕಾರಿಗಳು, ಮಠದ ಶಿಷ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ: 

ಕೆಳಗಿನವುಗಳನ್ನೂ ಓದಿ:

ಪುಣ್ಯಕೋಟಿಯ ಕಥೆಯಿದು..!

ಅಬ್ಬೆ ಮಾಡುಗು ರುಚಿ ರುಚಿ ದೋಸೆ..!

'ಗೋವು ಉಳಿದರೆ ನಾವು ಉಳಿದೇವು'

'ಅಕ್ಕಅಂಗಳದಲ್ಲಿ 'ಯಕ್ಷವೈಭವ...! Yaksha Vaibhava in Akka Conference...!

Deepa Gopura ಧಾರವಾಡ ಪ್ರಪ್ರಥಮ 'ಗೋ ಅಭಯ ಜಿಲ್ಲೆ'

ಹರಿಕಥೆಯಲ್ಲ ಇದು 'ರಾಮಕಥಾ' Unique Rama Katha...

ಸಮುದ್ರ ಮಥನ-ಏಳುಏಳೆನ್ನುವ ಶ್ರೀರಾಮ

ಸಮುದ್ರ ಮಥನ 22: ಪೌರನ ಪಾತ್ರವೂದೇಶದ ಉನ್ನತಿಯೂ

ಸಮುದ್ರ ಮಥನ 12: ರಾಮನ ಗುಣಗಳ ಗಣಿ

ಸಮುದ್ರ ಮಥನ 27: ಪ್ರೇಮವೆಂಬ ದೈವೀ ಭಾವದ ಸಂಗದಲ್ಲಿ

ಸಮುದ್ರ ಮಥನ 23: ಹೊಸವರ್ಷದ ಆಶಯಶುಭಾಶಯ

ಸಮುದ್ರ ಮಥನ 21: ದೇವಸ್ಥಾನದಲ್ಲಿ ಗೋಶಾಲೆಯ ಮಹತ್ವ

ಸಮುದ್ರ ಮಥನ 2 : ನಮ್ಮ ಆಹಾರವೆಷ್ಟು ಹಿತ ?

ಸಮುದ್ರ ಮಥನ 32: ಮೋಕ್ಷ

ಸಮುದ್ರ ಮಥನ 29: ಹಿರಿತನಕ್ಕೊಂದು ನಮಸ್ಕಾರ

ಸಮುದ್ರ ಮಥನ 28: ತಲ್ಲೀನರಾಗುವ ಮೊದಲು

PARYAYA: ರಾಮ ರಘುವರ ರಾಮಸೀತಾ…!: ರಾಮ ರಘುವರ ರಾಮಸೀತಾ…! ಬೆಂ ಗಳೂರು: ಬೆಂಗಳೂರು ಉತ್ತರ ಹವ್ಯಕ ಮಂಡಲದ ಮಂಡಲೋತ್ಸವ ೨೦೨೪ ಅಕ್ಟೋಬರ್‌ ೨೭ರ ಭಾನುವಾರ ಬೆಂಗಳೂರು ಮಲ್ಲೇಶ್ವರದ ಹವ್ಯಕ ಭವನದಲ್ಲಿ ನಡೆಯಿತು. ...

Monday, October 28, 2024

PARYAYA: ಪುಣ್ಯಕೋಟಿಯ ಕಥೆಯಿದು..!

 ಪುಣ್ಯಕೋಟಿಯ ಕಥೆಯಿದು..!

ಬೆಂಗಳೂರು: ಬೆಂಗಳೂರಿನ ಹವ್ಯಕ ಭವನದಲ್ಲಿ ೨೦೨೪ ಅಕ್ಟೋಬರ್‌ ೨೭ರ ಭಾನುವಾರ ನಡೆದ ಉತ್ತರ ಹವ್ಯಕ ಮಂಡಲದ ಮಂಡಲೋತ್ಸವದಲ್ಲಿ ಪುಟಾಣಿ ಮಕ್ಕಳು ಪುಣ್ಯಕೋಟಿ ಕಥೆಯನ್ನು ನೃತ್ಯ ರೂಪಕವಾಗಿ ಪ್ರದರ್ಶಿಸಿದರು.

ನೃತ್ಯ ರೂಪಕದ ವಿಡಿಯೋ ಇಲ್ಲಿದೆ. ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:

ಕೆಳಗಿನವುಗಳನ್ನೂ ಓದಿ:

ಬೆಂಗಳೂರು ಉತ್ತರ ಹವ್ಯಕ ಮಂಡಲೋತ್ಸವ

ಅಬ್ಬೆ ಮಾಡುಗು ರುಚಿ ರುಚಿ ದೋಸೆ..!

'ಗೋವು ಉಳಿದರೆ ನಾವು ಉಳಿದೇವು'

'ಅಕ್ಕಅಂಗಳದಲ್ಲಿ 'ಯಕ್ಷವೈಭವ...! Yaksha Vaibhava in Akka Conference...!

Deepa Gopura ಧಾರವಾಡ ಪ್ರಪ್ರಥಮ 'ಗೋ ಅಭಯ ಜಿಲ್ಲೆ'

ಹರಿಕಥೆಯಲ್ಲ ಇದು 'ರಾಮಕಥಾ' Unique Rama Katha...

ಸಮುದ್ರ ಮಥನ-ಏಳುಏಳೆನ್ನುವ ಶ್ರೀರಾಮ

ಸಮುದ್ರ ಮಥನ 22: ಪೌರನ ಪಾತ್ರವೂದೇಶದ ಉನ್ನತಿಯೂ

ಸಮುದ್ರ ಮಥನ 12: ರಾಮನ ಗುಣಗಳ ಗಣಿ

ಸಮುದ್ರ ಮಥನ 27: ಪ್ರೇಮವೆಂಬ ದೈವೀ ಭಾವದ ಸಂಗದಲ್ಲಿ

ಸಮುದ್ರ ಮಥನ 23: ಹೊಸವರ್ಷದ ಆಶಯಶುಭಾಶಯ

ಸಮುದ್ರ ಮಥನ 21: ದೇವಸ್ಥಾನದಲ್ಲಿ ಗೋಶಾಲೆಯ ಮಹತ್ವ

ಸಮುದ್ರ ಮಥನ 2 : ನಮ್ಮ ಆಹಾರವೆಷ್ಟು ಹಿತ ?

ಸಮುದ್ರ ಮಥನ 32: ಮೋಕ್ಷ

ಸಮುದ್ರ ಮಥನ 29: ಹಿರಿತನಕ್ಕೊಂದು ನಮಸ್ಕಾರ

ಸಮುದ್ರ ಮಥನ 28: ತಲ್ಲೀನರಾಗುವ ಮೊದಲು

PARYAYA: ಪುಣ್ಯಕೋಟಿಯ ಕಥೆಯಿದು..!:   ಪುಣ್ಯಕೋಟಿಯ ಕಥೆಯಿದು..! ಬೆಂ ಗಳೂರು: ಬೆಂಗಳೂರಿನ ಹವ್ಯಕ ಭವನದಲ್ಲಿ ೨೦೨೪ ಅಕ್ಟೋಬರ್‌ ೨೭ರ ಭಾನುವಾರ ನಡೆದ ಉತ್ತರ ಹವ್ಯಕ ಮಂಡಲದ ಮಂಡಲೋತ್ಸವದಲ್ಲಿ ಪುಟಾಣಿ ಮಕ್ಕಳು...

PARYAYA: ಹೈದರಾಬಾದ್:‌ ಪಟಾಕಿ ಅಂಗಡಿಯಲ್ಲಿ ಅಗ್ನಿ ಅನಾಹುತ

 ಹೈದರಾಬಾದ್:‌ ಪಟಾಕಿ ಅಂಗಡಿಯಲ್ಲಿ ಅಗ್ನಿ ಅನಾಹುತ

ಹೈದರಾಬಾದ್: ಹನುಮಾನ್ ತೆಕ್ಡಿಯ ಪ್ರಗತಿ ಮಹಾ ವಿದ್ಯಾಲಯದಲ್ಲಿ ೨೦೨೪ ಅಕ್ಟೋಬರ್‌ ೨೭ರ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಪರವಾನಗಿ ಇಲ್ಲದ ಪಟಾಕಿ ಅಂಗಡಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತು.

ಪಕ್ಕದ ಟಿಫಿನ್ ಸೆಂಟರ್‌ಗೆ ಬೆಂಕಿ ವ್ಯಾಪಿಸಿ, ಅದು ಸುಟ್ಟು ಕರಕಲಾಯಿತು. ಬೆಂಕಿಯ ಬಗ್ಗೆ ಮಾಹಿತಿ ಪಡೆದ ಅಬಿಡ್ಸ್ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದರು. ನಾಲ್ಕು ಅಗ್ನಿಶಾಮಕ ಎಂಜಿನ್‌ಗಳು ಕಾರ್ಯಾಚರಣೆಗೆ ಇಳಿದು, ಅಂತಿಮವಾಗಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದವು.

ಬೆಂಕಿ ಅನಾಹುತ ಸಂಭವಿಸುತ್ತಿದ್ದಂತೆ ಪಟಾಕಿ ಅಂಗಡಿಯಿಂದ ಜನ ಹೊರಕ್ಕೋಡಿ ಬರುತ್ತಿದ್ದ ದೃಶ್ಯ ಹಾಗೂ ಪಟಾಕಿಗಳು ಪಟಪಟನೆ ಸಿಡಿಯುತ್ತಿದ್ದ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್‌ ಆಗಿದೆ.

ಕಟ್ಟಡ ನಿವಾಸಿಗಳುಪ್ರಯಾಣಿಕರು ಮತ್ತು ಇತರ ಅಂಗಡಿ ಮಾಲೀಕರು ದುರಂತದಿಂದ ಭಯಭೀತರಾಗಿದ್ದರು. 23 ಕ್ಕೂ ಅಗ್ನಿ ಶಾಮಕ ವಾಹನಗಳು ಕಟ್ಟಡವನ್ನು ತೆರವು ಮಾಡಿಸಿ, 12 ಜನರನ್ನು ರಕ್ಷಿಸಿದರು. ಕೈಗಳಿಗೆ ಸುಟ್ಟಗಾಯಗಳಾಗಿರುವ ಇಬ್ಬರು ಮಹಿಳೆಯರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

PARYAYA: ಹೈದರಾಬಾದ್:‌ ಪಟಾಕಿ ಅಂಗಡಿಯಲ್ಲಿ ಅಗ್ನಿ ಅನಾಹುತ:   ಹೈದರಾಬಾದ್:‌ ಪಟಾಕಿ ಅಂಗಡಿಯಲ್ಲಿ ಅಗ್ನಿ ಅನಾಹುತ ಹೈ ದರಾಬಾದ್: ಹನುಮಾನ್ ತೆಕ್ಡಿಯ ಪ್ರಗತಿ ಮಹಾ ವಿದ್ಯಾಲಯದಲ್ಲಿ ೨೦೨೪ ಅಕ್ಟೋಬರ್‌ ೨೭ರ ಭಾನುವಾರ ರಾತ್ರಿ 9 ಗಂಟೆ...

Sunday, October 27, 2024

PARYAYA: ಬೆಂಗಳೂರು ಉತ್ತರ ಹವ್ಯಕ ಮಂಡಲೋತ್ಸವ

 ಬೆಂಗಳೂರು ಉತ್ತರ ಹವ್ಯಕ ಮಂಡಲೋತ್ಸವ

ಬೆಂಗಳೂರು: ಬೆಂಗಳೂರು ಉತ್ತರ ಹವ್ಯಕ ಮಂಡಲದ ಮಂಡಲೋತ್ಸವ ೨೦೨೪ ಅಕ್ಟೋಬರ್‌ ೨೭ರ ಭಾನುವಾರ ಬೆಂಗಳೂರು ಮಲ್ಲೇಶ್ವರದ ಹವ್ಯಕ ಭವನದಲ್ಲಿ ನಡೆಯಿತು.

ಈ ಸಂದರ್ಭದ ಸಾಂಸ್ಕೃತಿಕ ಕಾರ್ಯಕ್ರಮದ ಒಂದು ದೃಶ್ಯ.

ಚಿತ್ರದ ಸಮೀಪ ನೋಟಕ್ಕೆ ಮೇಲಿನ ಚಿತ್ರ ಕ್ಲಿಕ್‌ ಮಾಡಿ. ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ. 


ಕೆಳಗಿನವುಗಳನ್ನೂ ಓದಿ:

ಅಬ್ಬೆ ಮಾಡುಗು ರುಚಿ ರುಚಿ ದೋಸೆ..!

'ಗೋವು ಉಳಿದರೆ ನಾವು ಉಳಿದೇವು'

'ಅಕ್ಕ' ಅಂಗಳದಲ್ಲಿ 'ಯಕ್ಷ' ವೈಭವ...! Yaksha Vaibhava in Akka Conference...!

Deepa Gopura ಧಾರವಾಡ ಪ್ರಪ್ರಥಮ 'ಗೋ ಅಭಯ ಜಿಲ್ಲೆ'

ಹರಿಕಥೆಯಲ್ಲ ಇದು 'ರಾಮಕಥಾ' Unique Rama Katha...

ಸಮುದ್ರ ಮಥನ-1 ಏಳು, ಏಳೆನ್ನುವ ಶ್ರೀರಾಮ

ಸಮುದ್ರ ಮಥನ 22: ಪೌರನ ಪಾತ್ರವೂ, ದೇಶದ ಉನ್ನತಿಯೂ

ಸಮುದ್ರ ಮಥನ 12: ರಾಮನ ಗುಣಗಳ ಗಣಿ

ಸಮುದ್ರ ಮಥನ 27: ಪ್ರೇಮವೆಂಬ ದೈವೀ ಭಾವದ ಸಂಗದಲ್ಲಿ

ಸಮುದ್ರ ಮಥನ 23: ಹೊಸವರ್ಷದ ಆಶಯ, ಶುಭಾಶಯ

ಸಮುದ್ರ ಮಥನ 21: ದೇವಸ್ಥಾನದಲ್ಲಿ ಗೋಶಾಲೆಯ ಮಹತ್ವ

ಸಮುದ್ರ ಮಥನ 2 : ನಮ್ಮ ಆಹಾರವೆಷ್ಟು ಹಿತ ?

ಸಮುದ್ರ ಮಥನ 32: ಮೋಕ್ಷ

ಸಮುದ್ರ ಮಥನ 29: ಹಿರಿತನಕ್ಕೊಂದು ನಮಸ್ಕಾರ

ಸಮುದ್ರ ಮಥನ 28: ತಲ್ಲೀನರಾಗುವ ಮೊದಲು

PARYAYA: ಬೆಂಗಳೂರು ಉತ್ತರ ಹವ್ಯಕ ಮಂಡಲೋತ್ಸವ:   ಬೆಂಗಳೂರು ಉತ್ತರ ಹವ್ಯಕ ಮಂಡಲೋತ್ಸವ ಬೆಂ ಗಳೂರು: ಬೆಂಗಳೂರು ಉತ್ತರ ಹವ್ಯಕ ಮಂಡಲದ ಮಂಡಲೋತ್ಸವ ೨೦೨೪ ಅಕ್ಟೋಬರ್‌ ೨೭ರ ಭಾನುವಾರ ಬೆಂಗಳೂರು ಮಲ್ಲೇಶ್ವರದ ಹವ್ಯಕ ಭವನದಲ...

Wednesday, October 23, 2024

PARYAYA: ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ

 ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ..

ಇದು ಸುವರ್ಣ ನೋಟ!

ವಿಡಿಯೋ ನೋಡಲು ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ.

ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ಸೆರೆ ಹಿಡಿದಿರುವ ಚಿತ್ರಗಳ ಸಮೀಪ ನೋಟಕ್ಕೆ ಕೆಳಗಿನ ಚಿತ್ರಗಳನ್ನು ಕ್ಲಿಕ್‌ ಮಾಡಿರಿ:








ಇವುಗಳನ್ನೂ ಓದಿರಿ:

ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!

ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ

PARYAYA: ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ:  ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಇದು ಸುವರ್ಣ ನೋಟ! ವಿಡಿಯೋ ನೋಡಲು ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ. ಇವುಗಳನ್ನೂ ಓದಿರಿ: ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ...

Tuesday, October 22, 2024

PARYAYA: ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡ ಕುಸಿದು 3 ಸಾವು

 ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡ ಕುಸಿದು 3 ಸಾವು

ಬೆಂಗಳೂರುಬೆಂಗಳೂರಿನ ಪೂರ್ವ ಭಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡವೊಂದು 2024 ಅಕ್ಟೋಬರ್‌ 22 ಮಂಗಳವಾರ ಕುಸಿದು ಮೂವರು ಸಾವನ್ನಪ್ಪಿದ್ದುಇನ್ನೂ ಹಲವರು ಕುಸಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ಹೆಣ್ಣೂರು ಸಮೀಪದ ಹೊರಮಾವು ಅಗರದ ಅಂಜನಾದ್ರಿ ಲೇಔಟ್‌ನಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿದಿದೆಕಟ್ಟಡದಲ್ಲಿ ಒಟ್ಟು 15 ರಿಂದ 17 ಮಂದಿ ಇದ್ದರೆನ್ನಲಾಗಿದೆ.

ಮೃತರಲ್ಲಿ ಒಬ್ಬನನ್ನು ಬಿಹಾರ ಮೂಲದ ಹನುಮಾನ್ (25) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಓರ್ವ ಮಹಿಳೆ ಸೇರಿದಂತೆ 9 ಮಂದಿಯನ್ನು ರಕ್ಷಿಸಲಾಗಿದೆ.


ಮಾಲೀಕ ಮುನಿ ರೆಡ್ಡಿ ತಲೆಮರೆಸಿಕೊಂಡಿದ್ದುಪತ್ತೆಯಾಗಿಲ್ಲ.

ಎನ್‌ಡಿಆರ್‌ಎಫ್ ಸೇರಿದಂತೆ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿದ್ದುಪರಿಹಾರ ಕಾರ್ಯಗಳು ನಡೆಯುತ್ತಿವೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

PARYAYA: ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡ ಕುಸಿದು 3 ಸಾವು:   ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡ ಕುಸಿದು 3 ಸಾವು ಬೆಂ ಗಳೂರು : ಬೆಂಗಳೂರಿನ ಪೂರ್ವ ಭಾಗದಲ್ಲಿ ನಿರ್ಮಾಣ ಹಂತದಲ್ಲಿ ದ್ದ ಬಹುಮಹಡಿ ಕಟ್ಟಡ ವೊಂದು 2024...

Thursday, October 17, 2024

PARYAYA: ವಾಟ್- ಸುದ್ದಿ

ವಿಜಯದಶಮಿಯ ದಿನ ಹೆಣ್ಮಗು ಜನಿಸಿದಾಗ...!

ವಿಡಿಯೋ ನೋಡಲು ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ.

PARYAYA: ವಾಟ್- ಸುದ್ದಿ:   ವಿಜಯದಶಮಿಯ ದಿನ ಹೆಣ್ಮಗು ಜನಿಸಿದಾಗ...! ವಾಟ್-ಸುದ್ದಿ = ವಾಟ್ಸಪ್‌ ಸುದ್ದಿ! ವಿಜಯ ದಶಮಿಯ ದಿನ ಹೆಣ್ಣು ಮಗುವೊಂದು ಜನಿಸಿತು. ಹೆರಿಗೆ ಮಾಡಿಸಿದ ವೈದ್ಯೆ ಆ ಮಗುವಿಗೆ ...

Wednesday, October 16, 2024

PARYAYA: ವಾಟ್- ಸುದ್ದಿ


ಚಿತ್ರ ಕ್ಲಿಕ್‌ ಮಾಡಿರಿ

PARYAYA: ವಾಟ್- ಸುದ್ದಿ:  ವಾಟ್-ಸುದ್ದಿ = ವಾಟ್ಸಪ್‌ ಸುದ್ದಿ! ಬೆಂಗಳೂರು ಮುಂಗಾರು ಕಾಲದಲ್ಲಿ...

Saturday, October 5, 2024

PARYAYA: ಮೇಘನಾ ಉಪಾಧ್ಯಾಯ ಯಕ್ಷನೃತ್ಯ

ಮೇಘನಾ ಉಪಾಧ್ಯಾಯ ಯಕ್ಷನೃತ್ಯ

ಬೆಂಗಳೂರು: ಮೇಘನಾ ಉಪಾಧ್ಯಾಯ ಅವರು ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ಉಪಸಂಪಾದಕ ಶ್ರೀ ಉಪಾಧ್ಯಾಯ ಅವರ ಪುತ್ರಿ. ಕರ್ನಾಟಕ ಮಾತ್ರವಲ್ಲ, ದೇಶದ ಹಲವಡೆಗಳಲ್ಲೂ ತಮ್ಮ ಯಕ್ಷ ನೃತ್ಯ ಪ್ರದರ್ಶನ ನೀಡಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಪ್ರಸ್‌ ಕ್ಲಬ್‌ನಲ್ಲಿ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯ ಸಂದರ್ಭದಲ್ಲಿ ಅವರು ತಮ್ಮ ಯಕ್ಷನೃತ್ಯದ ಪ್ರದರ್ಶನ ನೀಡಿದರು. ಅದರ ತುಣುಕು ಒಂದು ಇಲ್ಲಿದೆ.
ವಿಡಿಯೋ ನೋಡಲು ಮೇಲಿನ ☝ ಚಿತ್ರ ಕ್ಲಿಕ್‌ ಮಾಡಿರಿ.

PARYAYA: ಮೇಘನಾ ಉಪಾಧ್ಯಾಯ ಯಕ್ಷನೃತ್ಯ: ಮೇಘನಾ ಉಪಾಧ್ಯಾಯ ಯಕ್ಷನೃತ್ಯ ಬೆಂ ಗಳೂರು:  ಮೇಘನಾ ಉಪಾಧ್ಯಾಯ ಅವರು ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ಉಪಸಂಪಾದಕ ಶ್ರೀ ಉಪಾಧ್ಯಾಯ ಅವರ ಪುತ್ರಿ. ದೇಶ , ವಿದೇಶಗಳಲ್...

Tuesday, October 1, 2024

PARYAYA: ಎನ್‌ಎಲ್‌ಟಿ ಬಳಕೆ: ಸಮಿತಿ ರಚನೆಗೆ ಸಚಿವ ಖರ್ಗೆ ನಿರ್ದೇಶನ

 ಎನ್‌ಎಲ್‌ಟಿ ಬಳಕೆ: ಸಮಿತಿ ರಚನೆಗೆ ಸಚಿವ ಖರ್ಗೆ ನಿರ್ದೇಶನ

ಬೆಂಗಳೂರು: ಗ್ರಾಮ ಪಂಚಾಯಿತಿಗಳ ಸಾಮರ್ಥ್ಯ ವೃದ್ಧಿಗಾಗಿ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಅಭಿವೃದ್ಧಿ ಪಡಿಸಿದ ʼಸಂಪೂರ್ಣ ಪಂಚಾಯತ್‌ ಆಪ್ತಮಿತ್ರʼ ಆಪ್‌ ಆಧಾರಿತ ದಿಕ್ಸೂಚಿ ಕಲಿಕಾ ತಂತ್ರಜ್ಞಾನವನ್ನು (ಎನ್‌ಎಲ್‌ಟಿ) ಬಳಸಿಕೊಳ್ಳುವ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚಿಸಿ ಕಾರ್ಯಪ್ರವೃತ್ತರಾಗುವಂತೆ ರಾಜ್ಯ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು 2024 ಸೆಪ್ಟೆಂಬರ್‌ 30ರ ಸೋಮವಾರ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರ ಸಹಪಾಠಿಗಳಾದ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘ ʼಅಗ್ರಿ ಬೆಸ್ಟ್‌ ಕ್ಲಬ್‌ -75ʼ ಸದಸ್ಯರು ನೇತೃತ್ವದಲ್ಲಿ ವಿಕಾಸಸೌಧದ ಗೃಹ ಸಚಿವರ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಸಚಿವರು ಈ ಸೂಚನೆ ನೀಡಿದರು.

ಗ್ರಾಮ ಪಂಚಾಯಿತಿ ವ್ಯವಸ್ಥೆ ಅಸ್ತಿತ್ವಕ್ಕೆ ಬಂದು ಮೂವತ್ತು ವರ್ಷಗಳು ಕಳೆದಿದ್ದರೂ ಗ್ರಾಮ ಪಂಚಾಯಿತಿಗಳ ಕಾರ್ಯ ನಿರ್ವಹಣೆ ಸುಧಾರಿಸಿಲ್ಲ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಗ್ರಾಮ ಪಂಚಾಯಿತಿಗಳ ಕಾರ್ಯ ನಿರ್ವಹಣೆ ಕುರಿತು ನೀಡಲಾಗುತ್ತಿರುವ ತರಬೇತಿ ಜೊತೆಗೆ ಆನ್‌ ಲೈನ್‌ ತರಬೇತಿಯ ಅಂಶವನ್ನು ಸೇರಿಸಲು ಸಾಧ್ಯವಿದೆ ಎಂದು ಅವರು ಹೇಳಿದರು.

ಈ ತರಬೇತಿಯಲ್ಲಿ ಇರಬೇಕಾದ ವಿಷಯಗಳಿಗೆ ಸಂಬಂಧಿಸಿದಂತೆ ತೀರ್ಮಾನಿಸಲು ಸರ್ಕಾರಿ ಅಧಿಕಾರಿಗಳು ಮತ್ತು ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ತ್ವರಿತವಾಗಿ ರಚಿಸಿ ಕಾರ್ಯೋನ್ಮುಖರಾಗುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗೃಹ ಸಚಿವ ಪರಮೇಶ್ವರ್‌ ಅವರು ಮಾತನಾಡಿ ಕನಿಷ್ಠ 4-5 ಜಿಲ್ಲೆಗಳಲ್ಲಿ ಒಂದೊಂದು ತಾಲೂಕಿನಲ್ಲಿ ಪ್ರಾಯೋಗಿಕ ಕಾರ್ಯಕ್ರಮ ಮೂಲಕ ಈ ತರಬೇತಿ ನೀಡುವ ಯತ್ನ ಆರಂಭಿಸುವಂತೆ ಸಲಹೆ ಮಾಡಿದರು.

ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಮ್‌ ಅಂಜುಮ್‌ ಪರ್ವೇಜ್‌, ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್‌ ಮತ್ತು ಇತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಸಂಸ್ಥಾಪಕ ಹಾಗೂ ಕಾರ್ಯ ನಿರ್ವಾಹಕ ಟ್ರಸ್ಟಿ ಡಾ. ಶಂಕರ ಕೆ. ಪ್ರಸಾದ್‌ ಅವರು ʼಸಂಪೂರ್ಣ ಪಂಚಾಯತ್‌ ಆಪ್ತಮಿತ್ರ ಆಪ್‌ʼ ಮೂಲಕ ದಿಕ್ಸೂಚಿ ಕಲಿಕಾ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಮ ಪಂಚಾಯತ್‌ ಸದಸ್ಯರು, ಸಿಬ್ಬಂದಿಗೆ ತಾವಿರುವ ಜಾಗದಲ್ಲೇ ತರಬೇತಿ ಪಡೆಯುವ ಬಗೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.




ಇವುಗಳನ್ನೂ ಓದಿರಿ: 

ಮುಂದಿನ ಬಜೆಟಿಗೆ ಎನ್‌ಎಲ್‌ಟಿ: ಗೃಹ ಸಚಿವ ಪರಮೇಶ್ವರ್‌ ಭರವಸೆ
ಭ್ರಷ್ಟಾಚಾರ, ಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ
ಗಾಂಧಿಗಿರಿಯ ʼಗುಲಾಬಿ ಗ್ಯಾಂಗ್‌ʼ ಕಥೆಗೆ ಇದೀಗ ಪುಸ್ತಕ ರೂಪ
ಏನಿದೆ ಈ ಪುಸ್ತಕಗಳಲ್ಲಿ?
ಪುಸ್ತಕಗಳ ಬಿಡುಗಡೆ ಸಮಾರಂಭ
ರೇಡಿಯೋ ಶಿವಮೊಗ್ಗದಲ್ಲಿ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ
ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕಂತು-2
ಸಾಮರ್ಥ್ಯ ವೃದ್ಧಿಗೆ ಡಿಜಿಟಲ್‌ ತಂತ್ರಜ್ಞಾನ ಬಳಕೆ ಹೇಗೆ?
ಇದೀಗ ಬಿಡುಗಡೆಯಾಗಿದೆ……

PARYAYA: ಎನ್‌ಎಲ್‌ಟಿ ಬಳಕೆ: ಸಮಿತಿ ರಚನೆಗೆ ಸಚಿವ ಖರ್ಗೆ ನಿರ್ದೇಶನ:   ಎನ್‌ಎಲ್‌ಟಿ ಬಳಕೆ: ಸಮಿತಿ ರಚನೆಗೆ ಸಚಿವ ಖರ್ಗೆ ನಿರ್ದೇಶನ ಬೆಂ ಗಳೂರು: ಗ್ರಾಮ ಪಂಚಾಯಿತಿಗಳ ಸಾಮರ್ಥ್ಯ ವೃದ್ಧಿಗಾಗಿ ಸಂಪೂರ್ಣ ಸ್ವರಾಜ್‌ ಫೌಂಡೇಶನ್‌ ಅಭಿವೃದ್ಧಿ ಪಡಿ...