ಶ್ರೀ ಬಾಲಾಜಿ ಕೃಪಾ ಬಡಾವಣೆ ರಾಜ್ಯೋತ್ಸವ ಸಂಭ್ರಮ
ಬೆಂಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವವನ್ನು ೨೦೨೩ ನವೆಂಬರ್ ೦೧ರ ಬುಧವಾರ ಆಚರಿಸಲಾಯಿತು.ಬಡಾವಣೆಯ ಹಿರಿಯ ಸದಸ್ಯ, ಕೆಜಿಎಫ್ ಗೋಲ್ಡನ್ ವ್ಯಾಲಿ ಎಜುಕೇಷನ್ ಟ್ರಸ್ಟ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಚ್. ಆರ್. ಸೇತೂರಾಂ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಬೆಸ್ಕಾಂ ಅಸಿಸ್ಟೆಂಟ್ ಎಂಜಿನಿಯರ್ ಮೊಹಮ್ಮದ್ ಇರ್ಫಾನ್ ಅಲಿ ಅವರು ಈ ಸಂದರ್ಭದಲ್ಲಿ ಹಾಜರಿದ್ದು ಬಡಾವಣೆಯ ನಿವಾಸಿಗಳಿಗೆ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಮಾಹಿತಿ ಒದಗಿಸಿದರು.
ಸಂಘದ ಅಧ್ಯಕ್ಷ ರಾಜೇಶ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನೆತ್ರಕೆರೆ ಉದಯಶಂಕರ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಬಿಎಲ್. ಪ್ರಭಾವತಿ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಪ್ರವೀಣ್ ಕುಮಾರ್ ವಂದನೆಗಳನ್ನು ಸಲ್ಲಿಸಿದರು.
ಬಡಾವಣೆಯ ಮಹಳೆಯರು, ಹಿರಿಯ ಸದಸ್ಯರು ಸೇರಿದಂತೆ ಬಡಾವಣೆಯ ನಿವಾಸಿಗಳು ಅತ್ಯುತ್ಸಾಹದೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಡಾವಣೆಯ ಹಿರಿಯ ಸದಸ್ಯ ನ್ಯಾಯವಾದಿ ಮುನಿರಾಜು ಅವರು ಉಪಾಹಾರದ ವ್ಯವಸ್ಥೆ ಮಾಡಿದ್ದರು.
ಧ್ವಜಾರೋಹಣ ಎಚ್. ಆರ್. ಸೇತೂರಾಂ ಅವರಿಂದ.
ಅಧ್ಯಕ್ಷೀಯ ಭಾಷಣ ರಾಜೇಶ ಕೆ. ಹೆಗಡೆ ಅವರಿಂದ.
ಬೆಸ್ಕಾಂ ಅಸಿಸ್ಟೆಟ್ ಎಂಜಿನಿಯರ್ ಮೊಹಮ್ಮದ್ ಇರ್ಫಾನ್ ಅಲಿ ಅವರ ಜೊತೆಗೆ ಸಂವಾದ ಕಾರ್ಯಕ್ರಮದಲ್ಲಿ ಇರ್ಫಾನ್ ಅವರಿಂದ ಎರಡು ಮಾತು.
PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆ ರಾಜ್ಯೋತ್ಸವ ಸಂಭ್ರಮ: ಶ್ರೀ ಬಾಲಾಜಿ ಕೃಪಾ ಬಡಾವಣೆ ರಾಜ್ಯೋತ್ಸವ ಸಂಭ್ರಮ ಬೆಂಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ...
No comments:
Post a Comment