ನಾನು ಮೆಚ್ಚಿದ ವಾಟ್ಸಪ್

Monday, September 28, 2020

ಇಂದಿನ ಇತಿಹಾಸ History Today ಸೆಪ್ಟೆಂಬರ್ 28


 ಇಂದಿನ ಇತಿಹಾಸ  History Today ಸೆಪ್ಟೆಂಬರ್ 28

2020: ನವದೆಹಲಿ: ಚೀನಾವು ಕ್ಸಿನ್‌ಜಿಯಾಂಗ್ ಮತ್ತು ಟಿಬೆಟ್ ಪ್ರದೇಶಗಳಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿಯನ್ನು (ಪಿಎಲ್‌ಎ) ನಿಯೋಜಿಸಿರುವುದಕ್ಕೆ ಉತ್ತರವಾಗಿ ೫೦೦ ಕಿ.ಮೀ ವ್ಯಾಪ್ತಿಯ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ, ೮೦೦ ಕಿ.ಮೀ ವ್ಯಾಪ್ತಿಯ ನಿರ್ಭಯ್ ಕ್ರೂಸ್ ಕ್ಷಿಪಣಿಗಳು ಮತ್ತು ೪೦ ಕಿಮೀ ದೂರದ ವೈಮಾನಿಕ ಬೆದರಿಕೆಗಳನ್ನು ಗುರಿಯಾಗಿರುವ ಸಾಮರ್ಥ ಹೊಂದಿರುವ ಮೇಲ್ಮೈಯಿಂದ ಗಾಳಿಗೆ ನೆಗೆಯುವ ಆಕಾಶ್ ಕ್ಷಿಪಣಿಗಳನ್ನು ಭಾರತ ನಿಯೋಜನೆ ಮಾಡಿದೆ. ಲಡಾಖ್ ಬಿಕ್ಕಟ್ಟು ಪ್ರಾರಂಭವಾದ ನಂತರ ಪಿಎಲ್‌ಎಯು ಟಿಬೆಟಿನ ಪಶ್ಚಿಮ ಭಾಗ (ವೆಸ್ಟರ್ನ್ ಥಿಯೇಟರ್ ಕಮಾಂಡ್ ಟಿಬೆಟ್) ಮತ್ತು ಕ್ಸಿನ್‌ಜಿಯಾಂಗ್‌ನಲ್ಲಿ ,೦೦೦ ಕಿ.ಮೀ ವ್ಯಾಪ್ತಿಯ ಮತ್ತು ದೀರ್ಘ-ಶ್ರೇಣಿಯ ಎಸ್‌ಎಎಮ್‌ಗಳನ್ನು ನಿಯೋಜಿಸಿದೆ. ಆದರೆ, ಇದಕ್ಕೆ ಪ್ರತಿಯಾಗಿ, ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸಲು ಭಾರತವು ತನ್ನ ಸೂಪರ್‌ಸಾನಿಕ್ ಬ್ರಹ್ಮೋಸ್, ಸಬ್‌ಸಾನಿಕ್ ನಿರ್ಭಯ್ ಆಕಾಶ್ ಕ್ಷಿಪಣಿಗಳನ್ನು ನಿಯೋಜಿಸಿದೆ ಎಂದು ನಂಬಲರ್ಹ ಮೂಲಗಳು 2020 ಸೆಪ್ಟೆಂಬರ 28ರ ಸೋಮವಾರ ತಿಳಿಸಿವೆ. ಚೀನಾದ ನಿಯೋಜನೆಯು ಕೇವಲ ಆಕ್ರಮಿತ ಅಕ್ಸಾಯ್ ಚಿನ್‌ಗೆ ಸೀಮಿತವಾಗಿಲ್ಲ, ಬದಲಾಗಿ ,೪೮೮ ಕಿ.ಮೀ ಉದ್ದದ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಎಸಿ) ಕಾಶ್ಗರ್, ಹೋತನ್, ಲಾಸಾ ಮತ್ತು ನೈಂಗ್ಚಿಯ ಆಳ ಪ್ರದೇಶಗಳಲ್ಲೂ ಚೀನಾ ತನ್ನ ಸೇನೆಯನ್ನು ನಿಯೋಜಿಸಿದೆ. ನಿಯೋಜನೆಗೊಂಡಿರುವ ಶಸ್ತ್ರಾಸ್ತ್ರಗಳಲ್ಲಿ ಭಾರತದ ಮುಖ್ಯವಾದವುಗಳೆಂದರೆ, ೩೦೦ ಕಿಲೋಗ್ರಾಂಗಳಷ್ಟು ಸಿಡಿತಲೆ ಹೊಂದಿರುವ ಬ್ರಹ್ಮೋಸ್ ಕ್ಷಿಪಣಿ. ಗಾಳಿಯಿಂದ ಗಾಳಿಗೆ ಮತ್ತು ಗಾಳಿಯಿಂದ ಮೇಲ್ಮೈಗೆ ಪ್ರಯಾಣಿಸುವ ಕ್ಷಿಪಣಿಯು ಇದು ಟಿಬೆಟ್ ಮತ್ತು ಕ್ಸಿನ್‌ಜಿಯಾಂಗ್‌ನಲ್ಲಿನ ವಾಯುನೆಲೆಗಳ ಮೇಲೆ ದಾಳಿ ಮಾಡಬಲ್ಲುದು ಅಥವಾ ಹಿಂದೂ ಮಹಾಸಾಗರದ ಯುದ್ಧನೌಕೆಯನ್ನು ಕೂಡಾ ನಿಭಾಯಿಸಬಲ್ಲುದು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ಪಾಕಿಸ್ತಾನದ ಆರೋಪಗಳನ್ನು ವಿಶ್ವಸಂಸ್ಥೆಯಲ್ಲಿ 2020 ಸೆಪ್ಟೆಂಬರ 28ರ ಸೋಮವಾರ ಖಂಡತುಂಡವಾಗಿ ತಿರಸ್ಕರಿಸಿದ ಭಾರತ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ಕಿರುಕುಳ, ಬಲವಂತದ ಕಣ್ಮರೆಗಳು ಮತ್ತು ಹೊರಗಿನವರ ಪ್ರವೇಶಕ್ಕೆ ಪಾಕಿಸ್ತಾನ ತಡೆ ಹಾಕಲಿ ಎಂದು ಆಗ್ರಹಿಸಿತು.  ಜಿನೀವಾದಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ತನ್ನಉತ್ತರಿಸುವ ಹಕ್ಕನ್ನು ಚಲಾಯಿಸಿದ ಭಾರತವು ಪಾಕಿಸ್ತಾನವುಭಯೋತ್ಪಾದಕರಿಗೆ ಸುರಕ್ಷಿತ ನೆಲೆಯಾಗಿ ಮುಂದುವರೆದಿದೆ ಮತ್ತು ಭಯೋತ್ಪಾದಕರಿಗೆ ಹೆಚ್ಚಿನ ತರಬೇತಿ ಶಿಬಿರಗಳನ್ನು ನಡೆಸುತ್ತಿದೆ ಹಾಗೂ ಉಗ್ರರ ಉಡಾವಣಾ ತಾಣಗಳನ್ನು ತೆರೆದಿದೆ ಎಂದು ಟೀಕಿಸಿತು. ಪಾಕಿಸ್ತಾನದ ಯಾವುದೇ ಭಾರತ ವಿರೋಧಿ ಪೊಳ್ಳು ಆರೋಪಗಳು ಅದರ ಆಧೀನದಲ್ಲಿ ಇರುವ ಪ್ರದೇಶದಲ್ಲಿನ ಅಲ್ಪಸಂಖ್ಯಾತರ ದನಿಗಳನ್ನು ಅಡಗಿಸಲು ಸಾಧ್ಯವಿಲ್ಲ. ಧಾರ್ಮಿಕ ಸ್ವಾತಂತ್ರ್ಯಕ್ಕೆ ಬದಲಾಗಿ ತಲೆ ತೆಗೆಯುವ ಒಂದೇ ಆಯ್ಕೆಯನ್ನು ಹೊಂದಿರುವ ಪಾಕಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಜನಾಂಗೀಯ ಅಲ್ಪಸಂಖ್ಯಾತರ ಹಣೆ ಬರಹ ಏನೆಂಬುದು ಎಲ್ಲರಿಗೂ ಚೆನ್ನಾಗಿ ಗೊತ್ತಿದೆ ಎಂದು ಜಿನೇವಾದಲ್ಲಿ ಕಾಯಂ ಮಿಷನ್‌ನ ಪ್ರಥಮ ಕಾರ್‍ಯದರ್ಶಿಯಾಗಿರುವ ಪವನ್ ಬಧೆ ಹೇಳಿದರು.  (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಸಂಸತ್ ಅನುಮೋದನೆ ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಂಕಿತ ಬಿದ್ದಿರುವ ಕೇಂದ್ರದ ಕೃಷಿ ಮಸೂದೆಗಳ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ 2020 ಸೆಪ್ಟೆಂಬರ 28ರ ಸೋಮವಾರ ಇನ್ನಷ್ಟು ತೀವ್ರಗೊಂಡಿದ್ದು, ಕೇರಳದ ಸಂಸತ್ ಸದಸ್ಯ ಟಿ.ಎನ್. ಪ್ರತಾಪನ್ ಅವರು ವಿವಾದಾತ್ಮಕ ಮಸೂದೆಗಳ ವಿರುದ್ಧ ಸುಪ್ರೀಂಕೋರ್ಟಿಗೆ ಮೊತ್ತ ಮೊದಲ ಅರ್ಜಿ ಸಲ್ಲಿಸಿದರು. ಇದೇ ವೇಳೆಗೆ ತಮ್ಮ ಸರ್ಕಾರ ಕೂಡಾ ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದಾರೆ. ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರು ಕೂಡಾ ನ್ಯಾಯಾಲಯದ ಕಟ್ಟೆ ಏರುವ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಹೇಳಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೃಷಿ ಕಾಯ್ದೆಗಳು ರೈತರ ಪಾಲಿನ ನೇಣುಗಂಬ ಎಂದು ಟ್ವೀಟ್ ಮೂಲಕ ಟೀಕಿಸಿದರು. ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ ಸೇರಿದಂತೆ ಮೂರು ಮಸೂದೆಗಳ ಪೈಕಿ ಎರಡು ಮಸೂದೆಗಳ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದ್ದು, ಎರಡು ಕಾನೂನುಗಳನ್ನು ಅಸಾಂವಿಧಾನಿಕ ಮತ್ತು ಕಾನೂನು ಬಾಹಿರ ಎಂಬುದಾಗಿ ಘೋಷಿಸಿ ರದ್ದು ಪಡಿಸಬೇಕು ಎಂದು ಪ್ರತಾಪನ್ ಅವರ ಅರ್ಜಿ ಕೋರಿದೆ.  ರೈತರು ಮತ್ತು ಕೈಗಾರಿಕಾ ಕಾರ್ಮಿಕರಿಗಾಗಿ ಪ್ರತ್ಯೇಕ ನ್ಯಾಯಮಂಡಳಿಗಳನ್ನು ರಚಿಸಬೇಕು ಎಂದೂ ಅರ್ಜಿ ಮನವಿ ಮಾಡಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ಮಾಡಿರಿ)

2020: ನವದೆಹಲಿ: ಸೆಪ್ಟೆಂಬರ್ ೩೦ ರಂದು ಭಾರತವು ರಾಷ್ಟ್ರವ್ಯಾಪಿ ಅನ್ಲಾಕ್‌ನ ನಾಲ್ಕನೇ ಹಂತದ ಮುಕ್ತಾಯದ ಹಂತಕ್ಕೆ ತಲುಪಲಿದ್ದು, ಇನ್ನಷ್ಟು ಕ್ಷೇತ್ರಗಳಲ್ಲಿ ಆರ್ಥಿಕ ಚಟುವಟಿಕೆಗೆ ಅವಕಾಶ ಕಲ್ಪಿಸುವ ಸಾಧ್ಯತೆಗಳಿವೆ ಎಂದು ಸುದ್ದಿ ಮೂಲಗಳು 2020 ಸೆಪ್ಟೆಂಬರ 28ರ ಸೋಮವಾರ ತಿಳಿಸಿದವು. ಸೆಪ್ಟೆಂಬರ್ ರಂದು ಪ್ರಾರಂಭವಾದ ಅನ್ಲಾಕ್ ೪ರಲ್ಲಿ ಕೇಂದ್ರ ಸರ್ಕಾರವು ಮಾರ್ಚ್ ಅಂತ್ಯದ ಬಳಿಕ ಇದೇ ಮೊದಲ ಬಾರಿಗೆ ಮೆಟ್ರೊ ಸೇವೆ ಪುನರಾಂಭ, ಮತ್ತು -೧೨ ತರಗತಿಗಳಿಗೆ ಶಾಲೆಗಳನ್ನು ಭಾಗಶಃ ಪುನಾರಂಭದಂತಹ ಹಲವಾರು ಮಹತ್ವದ ರಿಯಾಯ್ತಿಗಳನ್ನು ನೀಡಿತ್ತು.ಈಗ, ಅನ್ಲಾಕ್‌ನ ಐದನೇ ಹಂತವು ಅಕ್ಟೋಬರ್ ರಿಂದ ಪ್ರಾರಂಭವಾಗಲಿದ್ದು, ಕೇಂದ್ರವು ಅನುಮತಿ ನೀಡಬಹುದಾದ ಹೊಸ ರಿಯಾಯ್ತಿಗಳ ಬಗ್ಗೆ ಊಹಾಪೋಹಗಳು ಹೆಚ್ಚುತ್ತಿವೆ. ಕಳೆದ ವಾರ, ಏಳು ಅತಿ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗಿನ ವಾಸ್ತವ ಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರುಮೈಕ್ರೋ ಕಂಟೈನ್‌ಮೆಂಟ್ ವಲಯಗಳ ಕಲ್ಪನೆಯನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರದಕೃಷಿ ವಿರೋಧಿ ಕಾನೂನುಗಳನ್ನು ನಿರಾಕರಿಸಲು ಮತ್ತುರೈತರಿಗೆ ಆಗುವ ಗಂಭೀರ ಅನ್ಯಾಯವನ್ನು ತಡೆಯಲು ೨೫೪ () ನೇ ವಿಧಿ ಅನ್ವಯ ಶಾಸನಗಳನ್ನು ರೂಪಿಸುವ ಸಾಧ್ಯತೆಗಳನ್ನು ಅನ್ವೇಷಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 2020 ಸೆಪ್ಟೆಂಬರ 28ರ ಸೋಮವಾರ ಕಾಂಗ್ರೆಸ್ ಪಕ್ಷವು ಆಡಳಿತ ನಡೆಸುವ ರಾಜ್ಯಗಳಿಗೆ ಸಲಹೆ ನೀಡಿದರು. ಮೂಲಸೌಕರ್ಯ ಅಭಿವೃದ್ಧಿಯನ್ನು ಹೆಚ್ಚಿಸಲು ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಅಧಿಕಾರಾವಧಿಯಲ್ಲಿ ಅಂಗೀಕರಿಸಿದ ೨೦೧೩ ಭೂಸ್ವಾಧೀನ ಕಾಯ್ದೆಯನ್ನು ಉಲ್ಲಂಘಿಸಲು ತಮ್ಮದೇ ಆದ ಕಾನೂನುಗಳನ್ನು ತರಲು ತಮ್ಮ ಪಕ್ಷದ ಆಡಳಿತದ ರಾಜ್ಯಗಳಲ್ಲಿ  ೨೦೧೫ ರಲ್ಲಿ ಬಿಜೆಪಿ ಸರ್ಕಾgಗಳು ಕೈಗೊಂಡಿದ್ದ ಕ್ರಮವನ್ನು ಸೋನಿಯಾ ಗಾಂಧಿ ಉಲ್ಲೇಖಿಸಿದ್ದಾರೆ. "ಸಂವಿಧಾನದ ೨೫೪ () ನೇ ಪರಿಚ್ಛೇದ ಪ್ರಕಾರ ಆಯಾ ರಾಜ್ಯಗಳಲ್ಲಿ ಕಾನೂನುಗಳನ್ನು ಅಂಗೀಕರಿಸುವ ಸಾಧ್ಯತೆಗಳನ್ನು ಅನ್ವೇಷಿಸಲು ಕಾಂಗ್ರೆಸ್ ಅಧ್ಯಕ್ಷರು ಕಾಂಗ್ರೆಸ್ ಆಡಳಿತ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ, ಇದು ರಾಜ್ಯದ ನ್ಯಾಯವ್ಯಾಪ್ತಿಯನ್ನು ಅತಿಕ್ರಮಿಸುವ ಕೃಷಿ ವಿರೋಧಿ ಕೇಂದ್ರ ಕಾನೂನುಗಳನ್ನು ನಿರಾಕರಿಸಲು ರಾಜ್ಯ ಶಾಸಕಾಂಗಗಳಿಗೆ ಕಾನೂನನ್ನು ರೂಪಿಸಲು ಸಂವಿಧಾನವು ಅನುವು ಮಾಡಿಕೊಡುತ್ತದೆ ಎಂದು ಸಂಘಟನೆಯ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಇದು ಕನಿಷ್ಠ ಬೆಂಬಲ ಬೆಲೆ (ಎಂಎಸಿ) ನಿರ್ಮೂಲನೆ ಮತ್ತು ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಎಪಿಎಂಸಿಗಳನ್ನು ಅಡ್ಡಿಪಡಿಸುವುದು ಸೇರಿದಂತೆ ಮೂರು ಕಠಿಣ ಕೃಷಿ ಕಾನೂನುಗಳಲ್ಲಿ ಸ್ವೀಕಾರಾರ್ಹವಲ್ಲದ ರೈತ ವಿರೋಧಿ ನಿಬಂಧನೆಗಳನ್ನು ಬೈಪಾಸ್ ಮಾಡಲು ರಾಜ್ಯಗಳಿಗೆ ಅನುವು ಮಾಡಿಕೊಡುತ್ತದೆ" ಎಂದು ಅವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಕೊರೋನವೈರಸ್ (ಕೋವಿಡ್-೧೯) ವಿರುದ್ಧ ಸಂಭಾವ್ಯ ಲಸಿಕೆ ಅಭಿವೃದ್ಧಿಪಡಿಸಲು ವಿಶ್ವಾದ್ಯಂತ ವಿವಿಧ ದೇಶಗಳು ತೀವ್ರ ಯತ್ನ ನಡೆಸುತ್ತಿರುವುದರ ಮಧ್ಯೆಯೇ, ಭಾರತದಲ್ಲಿ ಮೊದಲ ಲಸಿಕೆ ೨೦೨೧ ಆರಂಭದಲ್ಲಿ ಲಭ್ಯವಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ 2020 ಸೆಪ್ಟೆಂಬರ 28ರ ಸೋಮವಾರ ಎಂದು ಹೇಳಿತು. ಕೋವಿಡ್ -೧೯ ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಶೋಧನೆಯನ್ನು "ತ್ವರಿvಗೊಳಿಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ಹೇಳಿತು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್, ‘ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನ ಸಂಶೋಧನೆ ತ್ವರಿತವಾಗಿ ನಡೆಯುತ್ತಿದೆ. ದೇಶದಲ್ಲಿ ಇದೀಗ ಪ್ರಾಯೋಗಿಕ ಪರೀಕ್ಷೆಗಳ ಹಂತದಲ್ಲಿರುವ ಕನಿಷ್ಠ ಕಾರ್ಯಸಾಧ್ಯವಾದ ಲಸಿಕೆ ತಯಾರಕರು ಇದ್ದಾರೆ. ೨೦೨೧ ಮೊದಲ ತ್ರೈಮಾಸಿಕದಲ್ಲಿ ಅದು ಲಭ್ಯವಾಗಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದರು. ಕಳೆದ ೨೪ ಗಂಟೆಗಳಲ್ಲಿ ೮೨,೧೭೦ ಹೊಸ ಕೊರೋನವೈರಸ್ ಸೋಂಕು ಪ್ರಕರಣಗಳ ಹೆಚ್ಚಳದೊಂದಿಗೆ, ಭಾರತದ ಕೋವಿಡ್ -೧೯ ಪ್ರಕರಣಗಳ ಸಂಖ್ಯೆ ಸೋಮವಾರ ೬೦ ಲಕ್ಷದ ಗಡಿ ದಾಟಿದೆ ಎಂದು ಆರೋಗ್ಯ ಸಚಿವಾಲಯ ನೀಡಿದ ಅಂಕಿ ಅಂಶಗಳು ತಿಳಿಸಿದವು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

ಇಂದಿನ ಇತಿಹಾಸ  History Today ಸೆಪ್ಟೆಂಬರ್ 28 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment