Thursday, June 21, 2018

ಅಲ್ ಕೈದಾ, ಐಸಿಸ್ ಅಂಗ ಸಂಸ್ಥೆಗಳಿಗೆ ನಿಷೇಧ


ಅಲ್ ಕೈದಾ, ಐಸಿಸ್ ಅಂಗ ಸಂಸ್ಥೆಗಳಿಗೆ ನಿಷೇಧ

ನವದೆಹಲಿ: ಭಯೋತ್ಪಾದಕ ಸಂಘಟನೆಗಳಾದ ಅಲ್ಕೈದಾ, ಐಸಿಸ್ನ (ಐಎಸ್ಐಎಸ್‌) ಹೊಸ ಅಂಗಸಂಸ್ಥೆಗಳನ್ನು ಕೇಂದ್ರ ಸರ್ಕಾರವು ಗುರುವಾರ, 21 ಜೂನ್ 2018ರಂದು  ನಿಷೇಧಿಸಿತು.

ಭಾರತದ ಉಪಖಂಡದ ಅಲ್ ಕೈದಾ ಮತ್ತು ಆಫ್ಗಾನಿಸ್ತಾನದಲ್ಲಿ ನೆಲೆಯಾಗಿರುವ ಐಸಿಸ್ ಅಂಗಸಂಸ್ಥೆ ಇಸ್ಲಾಮಿಕ್ ಸ್ಟೇಟ್ ಆಫ್ ಸಿರಿಯಾ ಅಂಡ್ ಶಾಮ್ಖೊರಾಸನ್ (ಐಎಸ್ಐಎಸ್‌–ಕೆ) ಸಂಘಟನೆಗಳು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿವೆ ಎಂದು ಕೇಂದ್ರ ಗೃಹಸಚಿವಾಲಯ ಹೊರಡಿಸಿರುವ ಆದೇಶ ತಿಳಿಸಿದೆ.

ಐಎಸ್ಐಎಸ್‌–ಕೆ ಸಂಘಟನೆಯು ಖೊರಾಸನ್ ಪ್ರಾಂತ್ಯದ (ಐಎಸ್ಐಎಸ್ ವಿಲಾಯತ್ ಖೋರಾಸನ್) ಇಸ್ಲಾಮಿಕ್ ಸ್ಟೇಟ್ ಎಂದೇ ಹೆಸರಾಗಿವೆ.

ಸಂಘಟನೆಗಳು ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಹಾಗೂ ಜಾಗತಿಕ ಜಿಹಾದ್ಗೆ ಭಾರತೀಯ ಯುವಕರನ್ನು ಪ್ರಚೋದಿಸುತ್ತಿರುವ ಅಂಶ ಕಂಡುಬಂದಿದೆ ಎಂದು ಸಚಿವಾಲಯ ಹೇಳಿದೆ.

ಅಲ್ ಕೈದಾದ ಸಹ ಸಂಸ್ಥೆ ಎಕ್ಯೂಐಎಸ್, ನೆರೆಯ ದೇಶಗಳಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಉಪಖಂಡದಲ್ಲಿ ಭಾರತೀಯ ಹಿತಾಸಕ್ತಿಗಳ ಮೇಲೆ ಯುದ್ಧ ಸಾರಿದೆ ಎಂದು ಆದೇಶ ತಿಳಿಸಿದೆ.

Saturday, June 16, 2018

ಯೋಗ ದಿನಕ್ಕೆ ದೇವೇಗೌಡ ಸಜ್ಜು, ಪ್ರಧಾನಿ ಮೋದಿಗೆ ಸವಾಲು


ಯೋಗ ದಿನಕ್ಕೆ ದೇವೇಗೌಡ ಸಜ್ಜು, ಪ್ರಧಾನಿ ಮೋದಿಗೆ ಸವಾಲು

ಬೆಂಗಳೂರು:  ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆಫಿಟ್ನೆಸ್ ಸವಾಲುಒಡ್ಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಡ್ಡು ಹೊಡೆಯಲು ಕುಮಾರ ಸ್ವಾಮಿ ಅವರ ತಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಜ್ಜಾಗುತ್ತಿದ್ದಾರೆ.

2018 ಜೂನ್ 21ರಂದು ನಡೆಯಲಿರುವ 4ನೇ ವಿಶ್ವ ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ನೆಸ್ ಸವಾಲಿಗೆ ಉತ್ತರವಾಗಿ ಯೋಗಾಸನಗಳ ಸಹಿತವಾಗಿ ತಮ್ಮ 86ನೇ ವಯಸ್ಸಿನಲ್ಲಿ ತಮ್ಮ ಆರೋಗ್ಯದ ಗುಟ್ಟನ್ನು ಜಗಜ್ಜಾಹೀರುಗೊಳಿಸಲು ಮನೆಯಲ್ಲಿ ನಿತ್ಯ ಸನ್ನದ್ಧರಾಗುತ್ತಿದ್ದಾರೆ.

ಇದಕ್ಕಾಗಿ ತರಬೇತುದಾರರ ನೆರವನ್ನೂ ಪಡೆದಿರುವ ದೇವೇಗೌಡ  ಪ್ರತಿದಿನವೂ ಕಠಿಣ ವ್ಯಾಯಾಮಗಳ ಜೊತೆಗೆ ಯೋಗಾಭ್ಯಾಸವನ್ನೂ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ದೇವೇಗೌಡರ ಯೋಗ ಸಾಧನೆಯ ಕೆಲವು ದೃಶಗಳು ಮೇಲಿನ ಚಿತ್ರದಲ್ಲಿದೆ.

Friday, June 15, 2018

ಬುಖಾರಿ, ಔರಂಗ ಜೇಬ್ ಹತ್ಯೆಯ ಹಿಂದೆ ಉಗ್ರ ನವೀದ್, ಐಎಸ್ಐ ಕೈವಾಡ


ಬುಖಾರಿ,  ಔರಂಗ ಜೇಬ್  ಹತ್ಯೆಯ ಹಿಂದೆ ಉಗ್ರ ನವೀದ್, ಐಎಸ್ಐ ಕೈವಾಡ


ನವದೆಹಲಿ:  ‘ರೈಸಿಂಗ್ ಕಾಶ್ಮೀರ್’ ಪತ್ರಿಕೆಯ ಮುಖ್ಯಸಂಪಾದಕ ಶುಜಾತ್ ಬುಖಾರಿ ಅವರ ಹಂತಕರಲ್ಲಿ  ಒಬ್ಬ ವ್ಯಕ್ತಿ ಉಗ್ರ ನವೀದ್ ಜಾಟ್ ಎಂಬುದು ಬೆಳಕಿಗೆ ಬಂದಿದ್ದರೆ, ಯೋಧ ಔರಂಗಜೇಬ್ ಅವರನ್ನು ಅಪಹರಿಸಿ ಗುಂಡಿಕ್ಕಿ ಕೊಂದ ಘಟನೆಯ ಹಿಂದೆ ಪಾಕ್ ಬೇಹುಗಾರಿಕಾ ಸಂಸ್ಥೆ ಐಎಸ್ಐ ಕೈವಾಡ ಇರುವ ಬಗ್ಗೆ ಮಾಹಿತಿಗಳು ಲಭಿಸಿವೆ.

ರೈಸಿಂಗ್ಕಾಶ್ಮೀರ್ಪತ್ರಿಕೆಯ ಮುಖ್ಯ ಸಂಪಾದಕ ಶುಜಾತ್ಬುಖಾರಿಯನ್ನು ಹತ್ಯೆಗೈಯಲು ಬೈಕಿನಲ್ಲಿ ಬಂದಿದ್ದ ಮೂವರ ಪೈಕಿ ಒಬ್ಟಾತನು ಪಾಕ್ಉಗ್ರ ನವೀದ್ಜಾಟ್ಎಂದು ಗುಪ್ತಚರ ದಳ ಹೇಳಿದೆ.


ನವೀದ್ಜಾಟ್ಕಾಶ್ಮೀರದಲ್ಲಿನ ಹಲವಾರು ಉಗ್ರ ದಾಳಿಗಳಲ್ಲಿ ಭಾಗಿಯಾಗಿದ್ದವ. ಅಂತೆಯೇ ಆತ ಎನ್ಐಎ ವಿಚಕ್ಷಣೆಗೆ ಒಳಪಟ್ಟಿರುವ ಉಗ್ರನಾಗಿದ್ದಾನೆ. ಈತ ಈಚೆಗೆ ಶ್ರೀನಗರ ಆಸ್ಪತ್ರೆಯಿಂದ ಪರಾರಿಯಾಗಿದ್ದ.


ರೈಸಿಂಗ್ಕಾಶ್ಮೀರ್ಮುಖ್ಯ ಸಂಪಾದಕ ಶುಜಾತ್ಬುಖಾರಿ ಅವರ ಹತ್ಯೆ ನಡೆದ ಕೆಲವೇ ತಾಸುಗಳಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಶಂಕಿತ ಹಂತಕರ ಫೋಟೋಗಳನ್ನು ಬಿಡುಗಡೆ ಮಾಡಿದ್ದರು.


ಪೊಲೀಸರಿಗೆ ಸಿಕ್ಕಿರುವ ಸಿಸಿಟಿವಿ ೂಟೇಜ್ನಲ್ಲಿ ಬೈಕ್ನಲ್ಲಿ ಮೂವರು ಉಗ್ರರು ಇದ್ದು ಮುಂದೆ ಕುಳಿತವ ಕಪ್ಪು ಹೆಲ್ಮೆಟ್ಧರಿಸಿದ್ದ. ಮಧ್ಯದಲ್ಲಿದ್ದನ ಕೈಯಲ್ಲಿ ಬ್ಯಾಗ್ಇದ್ದು ಆತ ಮುಖವನ್ನು ಮುಚ್ಚಿಕೊಂಡಿದ್ದ. ಈತನ ಬೆನ್ನ ಹಿಂದೆ ಕುಳಿತವ ಕಪ್ಪು ಮುಖವಾಡ ತೊಟ್ಟಿದ್ದ.


ಬುಖಾರಿ ಹಂತಕರನ್ನು ಸೆರೆ ಹಿಡಿಯಲು ಜನರು ತಮಗೆ ತಿಳಿದಿರುವ ಮಾಹಿತಿಯನ್ನು ಕೊಡುವಂತೆ ಪೊಲೀಸರು ಕೋರಿದ್ದರು.


ಪಾಕಿಸ್ಥಾನದ ಮುಲ್ತಾನ್ನವನಾಗಿರುವ ಮೊಹಮ್ಮದ್ನವೀದ್ಜಾಟ್ ವರ್ಷ ಫೆ.6ರಂದು ಶ್ರೀನಗರದಲ್ಲಿನ ಶ್ರೀ ಮಹಾರಾಜ ಹರಿ ಸಿಂಗ್ಆಸ್ಪತ್ರೆಯಿಂದ ಪರಾರಿಯಾಗಿದ್ದ. ಬಂಧಿತ ನವೀದ್ಜಾಟ್ನನ್ನು ವೈದ್ಯಕೀಯ ಪರೀಕ್ಷೆಗಾಗಿ ಒಯ್ಯುತ್ತಿದ್ದ ಇಬ್ಬರು ಪೊಲೀಸರನ್ನು ಆತನ ಸಂಗಡಿಗರು ಗುಂಡಿಕ್ಕಿ ಕೊಂದು ಜಾಟ್ಪಲಾಯನಕ್ಕೆ ಸಹಕರಿಸಿದ್ದರು.


ಐಎಸ್ ಐ ಕೈವಾಡ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಲಾಂಪೋರಾದಲ್ಲಿ ಗುಂಡೇಟುಗಳೊಂದಿಗೆ ಶವವಾಗಿ ಪತ್ತೆಯಾಗಿರುವ ಅಪಹೃತ ಸೇನಾ ಜವಾನ ಔರಂಗಜೇಬ್ಅವರ ಹತ್ಯೆಯ ಹಿಂದೆ ಕುಖ್ಯಾತ ಪಾಕ್ಬೇಹು ಸಂಸ್ಥೆ ಐಎಸ್ ಕೈವಾಡ ಇರುವ ಬಗ್ಗೆ ಭಾರತೀಯ ಗುಪ್ತಚರ ದಳಕ್ಕೆ ಕೆಲವು ಸೂಕ್ಷ್ಮ ಮಾಹಿತಿಗಳು ಲಭಿಸಿವೆ ಎಂದು ವರದಿಗಳು ತಿಳಿಸಿವೆ.


ಕಾಶ್ಮೀರ ವಿಮೋಚನೆಗಾಗಿ ಜಿಹಾದ್ವಿಮೋಚನಾ ಸಮರದಲ್ಲಿ ಭಾಗಿಯಾಗಿರುವ ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯಿಂದ ಧೃತಿಗೆಟ್ಟಿರುವ ಪಾಕ್ಐಎಸ್, ಭಾರತಕ್ಕೆ ಬುದ್ದಿ ಕಲಿಸುವ ಹುನ್ನಾರದಲ್ಲಿ ಯೋಧ ಔರಂಜೇಬ್ಅವರನ್ನು ಹತ್ಯೆಗೈದಿರವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.


ಯೋಧ ಔರಂಗಜೇಬ್ಅವರು ಅಪಹರಣಕ್ಕೆ ಗುರಿಯಾದ ಕೆಲವೇ ತಾಸುಗಳಲ್ಲಿ ಶವವಾಗಿ ಪತ್ತೆಯಾಗಿದ್ದರು.
ಔರಂಗಜೇಬ್
ಅವರು ಹಿಜ್ಬುಲ್ಮುಜಾಹಿದೀನ್ಉಗ್ರ ಸಮೀರ್ಟೈಗರ್ನನ್ನು ಕಳೆದ ಮೇ ತಿಂಗಳಲ್ಲಿ ಎನ್ಕೌಂಟರ್ನಲ್ಲಿ ಹತ್ಯೆಗೈದ ಭಾರತೀಯ ಸೇನಾ ತಂಡದ ಸದಸ್ಯರಾಗಿದ್ದರು.


ಕಾಶ್ಮೀರದಲ್ಲಿನ ವಿಮೋಚನಾ ಜಿಹಾದಿಗಳು ಭಾರತೀಯ ಸೇನಾ ಪಡೆಯ ಕಾರ್ಯಾಚರಣೆಗೆ ಬೆದರುವುದಿಲ್ಲ ಎಂಬ ಸಂದೇಶ ರವಾನೆಯ ಉದ್ದೇಶದಲ್ಲಿ  ಪಾಕ್ಐಎಸ್ ಯೋಧ ಔರಂಗಜೇಬ ಅವರ ಅಪಹರಣ ಮತ್ತು ಹತ್ಯೆಯನ್ನು ಆಯೋಜಿಸಿತ್ತು ಎಂದು ಮಾಧ್ಯಮ ವರದಿಗಳು ಹೇಳಿವೆ.


Thursday, June 14, 2018

ಸುದಾರಿಕೆ ಶಂಭಟ್ಟ.. ಹ.ಹ. ಸ್ಪೆಷಲ್ !


ಸುದಾರಿಕೆ ಶಂಭಟ್ಟ.. .. ಸ್ಪೆಷಲ್   !    
    
 ತೋಟಕ್ಕೆ ಕತ್ತಿ ತೆಕ್ಕೊಂಡು ಹೆರಟ ಕೇಶವಣ್ಣನತ್ರೆ - ಬೆಳದ ಹಲಸಿನಕಾಯಿ ಇದ್ದರೆ, ಆಳುಗಳತ್ರೆ ಎರಡು ಇಳುಶಲೆ ಹೇಳಿಕ್ಕಿ. ನಾಡಿದ್ದು ಮಾವನೋರ ತಿಥಿಗಪ್ಪಗ ಹಣ್ಣಾದರೆ ಸುಟ್ಟವಿಂಗೋ, ಪಾಯಸಕ್ಕೋ ಅಕ್ಕು ಹೇಳಿತ್ತು ಹೇಮಾವತಿಯಕ್ಕ. ಆಳುಗೊ ಅಲ್ಲದೋ, ಹಣ್ಣಿಂಗೆ ಇಳುಶೊಗ ಎರಡು ಕಾಯಿಯನ್ನೂ ಹೆಚ್ಚಿಗೆ ಬಲುಗಿ ಹಾಕಿದವು. ಹೇಂಗೂ ನಾಳಂಗೆ ಮದ್ದು ಬಿಡ್ಳೆ ಬತ್ತವಡ, ಎಂಟತ್ತು ಆಳುಗೊ ಇಕ್ಕು, ಕಾಫಿಗೆ ಎಂತಾದರೂ ಆಯೆಕ್ಕನ್ನೇ ಹೇಳಿ ಹಲಸಿನ ಕಾಯಿ ದೋಸೆಗೆ ಕಡದು ಮಡುಗಿತ್ತು ಹೇಮಾವತಿಯಕ್ಕ. ಮರುದಿನ ಉದಿಯಪ್ಪಗಳೇ ಮಳೆ ಬಂದು ಮದ್ದು ಬಿಡುವವು ನಾಪತ್ತೆ.!

ಮರುದಿನಕ್ಕೆ ಹುಳಿ ಹಿಟ್ಟಿನ ಎರದು ಕೊಟ್ರೆ ಕೇಶವಣ್ಣ ತಿನ್ನವು.. ನಾಡಿದ್ದು ತಿಥಿ ದಿನಕ್ಕೆ ಹೇಂಗೂ ಆಗ.. ಕಡದು ಮಡುಗಿದ ಹಿಟ್ಟಿನ ಎಂತ ಮಾಡೊದು.. ತಲಗೆ ತಿರ್ಪಲೆ ಹಾಕೆಕಷ್ಟೇ ಹೇಳಿ ಪರಂಚಿಗೊಂಡು ಒಳುದ ಹಿಟ್ಟಿನ ಫ್ರಿಜ್ಜಿಲ್ಲಿ ಮಡುಗಿತ್ತು ಹೇಮಾವತಿಯಕ್ಕ.

 ತಿಥಿ ಮುನ್ನಾಣ ದಿನ ಹೊತ್ತೋಪಗಳೇ ವೊಡೆ, ಸುಕ್ರುಂಡೆ ಮಾಡ್ಳೆ ಸಕಾಯಕ್ಕೆ ಹೇಳಿ ಶಂಭಟ್ಟನ ಬಪ್ಪಲೆ ಹೇಳಿದ್ದು. ಶಂಭಟ್ಟಣ್ಣ ಒಲೆ ಬುಡಲ್ಲಿ ವೊಡೆ ಬೇಶೊಗ ಹೇಮಾವತಿ ಅಕ್ಕಂಗೊಂದು ಐಡಿಯಾ ಫ್ಲೇಶ್ ಆತು.! ಫ್ರಿಜ್ಜಿಲ್ಲಿ ಕಡದು ಮಡುಗಿದ ಹಿಟ್ಟಿನ ಅಂತೇ ಚೆಲ್ಲಿ ಹಾಳು ಮಾಡೊದೆಂತಕೆ ಹೇಳಿ, ಅದಕ್ಕಿಷ್ಟು ಅಕ್ಕಿಹೊಡಿ, ಎಳ್ಳು ಹಾಕಿ ಮೇಲಿಂದ ರಜ ಬೆಣ್ಣೆಯೂ ಸೇರ್ಸಿ ಒಂದು ತಪಲೆ ಹಿಟ್ಟು ತಂದು ಶಂಭಟ್ಟಣ್ಣನತ್ರೆ ಹೇಳಿತ್ತು- ವೊಡೆ ಎಲ್ಲ ಬೇಶಿಕ್ಕಿ ಕೊಳೆ ಎಣ್ಣೆ ಅಂತೇ ಹಾಳಪ್ಪದಲ್ಲೋ.. ಹಿಟ್ಟಿನ ರಜಾ ಚಕ್ಕುಲಿ ಮಾಡಿಕ್ಕುವೋಂ ಹೇಳಿ. ಕೇಶವಣ್ಣ ಗೊಂತಾದರೆ ಪರಂಚುಗು ಹೇಳಿ, ಅವಂ ಒಳ ಬರೆಕಾರೆ ಮೊದಲೇ ಮಾಡಿದ ಚಕ್ಕುಲಿಯ ಡಬ್ಬಿಲ್ಲಿ ತುಂಬುಸಿ ಹೇಮಾವತಿ ಅಕ್ಕ ಒಳ ಹೇಮಾರಿಸಿತ್ತು.!

   ತಿಥಿ ಮರುದಿನ ಪೇಟೆಲಿ ಹಲಸಿನ ಹಬ್ಬ. ತಿಥಿ ಕಳುದು ಒತ್ತರೆ ಕೆಲಸ ಬಾಕಿ ಇದ್ದು ಹೇಳಿ ಹೇಮಾವತಿ ಅಕ್ಕಂಗೆ ಹೋಪಲಾಯಿದಿಲ್ಲೆ. ಹಲಸಿನ ಮೇಳಲ್ಲಿ ಸುಮಕ್ಕನ ನೇತೃತ್ವಲ್ಲಿ ಹೆಮ್ಮಕ್ಕಳೇ ಮಡುಗುವ ಹಲಸಿನ ಸ್ಟೋಲಿಂಗೆ, ಕೇಶವಣ್ಣಂಗೆ ಅರಡ್ಯದ್ದ ಹಾಂಗೆ ಹೊಸ ರುಚಿ ಚಕ್ಕುಲಿಯ ಶಂಭಟ್ಟಣ್ಣನ ಕೈಲಿ ಕಳಿಸಿ ಕೊಟ್ಟತ್ತು. ಹೊಸ ರುಚಿ ಸ್ಪರ್ಧೆಲಿ ರುಚಿಯಾದ ಗರಿ ಗರಿ ಹಲಸಿನ ಚಕ್ಕುಲಿಗೆ ಬಹುಮಾನವೂ ಸಿಕ್ಕಿತ್ತು, ಸ್ಟೋಲಿಂಗೆ ಕಳಿಸಿದ ಮಾಲು ಕಸ್ತಲೆ ಆಯೆಕ್ಕಾರೆ ಖಾಲಿ.! ಹೇಮಾವತಿ ಅಕ್ಕನ ಹಲಸಿನಕಾಯಿ ದೋಸೆಯ ಹುಳಿಹಿಟ್ಟು ಹೊಸ ವೇಲ್ಯೂ ಏಡೆಡ್ ಪ್ರೋಡಕ್ಟೂ ಆತು.! ಬಹುಮಾನವೂ ಸಿಕ್ಕಿತ್ತು.! ಚಿಕ್ಕಣಿ ಪೈಸೆಯೂ ಆತು.!!

 ಮಧ್ಯಾಹ್ನಮೇಲೆ ಪೇಟೆಗೆ ಹೋದ ಅಮಾಯಕ ಕೇಶವಣ್ಣ ಹಾಂಗೇ ಒಂದರಿ ಹಲಸಿನ ಮೇಳಕ್ಕೂ ಹೋದ. ಅಲ್ಲಿಂದ ಬಪ್ಪಗ ಹೆಮ್ಮಕ್ಕಳ ಸ್ಟೋಲಿಂದ ಅದೂ ಇದೂ ತೆಕ್ಕೊಂಡು ಮನೆಗೆ ಬಂದ. "ಇದಾ ಹೇಮಾವತಿ, ಇಂದು ಹಲಸಿನ ಮೇಳಲ್ಲಿ ಹೊಸ ರುಚಿ ಕಂಡಿತ್ತು. ಸೇಂಪಲ್ ನೋಡೊಗ ಮೃದು ಆಗಿ ಭಾರೀ ಪಸ್ಟಾಯಿದು. ನಿನಗೂ ರುಚಿ ನೋಡ್ಳಾತು ಹೇಳಿ ಪೈಸೆ ಕೊಟ್ಟು ತೆಕ್ಕೊಂಡೆ. ಹೇಂಗೆ ಮಾಡೊದು ಹೇಳಿ ಆರತ್ರಾರು ಕೇಳಿ ಕಲ್ತುಗೋ..!"

ಹೇಮಾವತಿಯಕ್ಕ, ಎಂತಪ್ಪಾ ಇದು.. ಹೇಳಿ ಭಾರೀ ಕುತೂಹಲಲ್ಲಿ ಕಟ್ಟ ಬಿಡುಸಿ ನೋಡೊಗ..

ಶಂಭಟ್ಟಣ್ಣನತ್ರೆ ಉದಿಯಪ್ಪಗ ಕೊಟ್ಟು ಕಳಿಸಿದ ಅದೇ ಹಲಸಿನಕಾಯಿ ಹುಳಿ ಹಿಟ್ಟಿನ ಚಕ್ಕುಲಿ..!!

-ಪೈಸಾರಿ ಬಾವ


(ವಾಟ್ಸಪ್ ನಲ್ಲಿ ಬಂದ ಕಥೆ).