Showing posts with label ದೇವೇಗೌಡ. Show all posts
Showing posts with label ದೇವೇಗೌಡ. Show all posts

Saturday, June 16, 2018

ಯೋಗ ದಿನಕ್ಕೆ ದೇವೇಗೌಡ ಸಜ್ಜು, ಪ್ರಧಾನಿ ಮೋದಿಗೆ ಸವಾಲು


ಯೋಗ ದಿನಕ್ಕೆ ದೇವೇಗೌಡ ಸಜ್ಜು, ಪ್ರಧಾನಿ ಮೋದಿಗೆ ಸವಾಲು

ಬೆಂಗಳೂರು:  ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆಫಿಟ್ನೆಸ್ ಸವಾಲುಒಡ್ಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಡ್ಡು ಹೊಡೆಯಲು ಕುಮಾರ ಸ್ವಾಮಿ ಅವರ ತಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಜ್ಜಾಗುತ್ತಿದ್ದಾರೆ.

2018 ಜೂನ್ 21ರಂದು ನಡೆಯಲಿರುವ 4ನೇ ವಿಶ್ವ ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ನೆಸ್ ಸವಾಲಿಗೆ ಉತ್ತರವಾಗಿ ಯೋಗಾಸನಗಳ ಸಹಿತವಾಗಿ ತಮ್ಮ 86ನೇ ವಯಸ್ಸಿನಲ್ಲಿ ತಮ್ಮ ಆರೋಗ್ಯದ ಗುಟ್ಟನ್ನು ಜಗಜ್ಜಾಹೀರುಗೊಳಿಸಲು ಮನೆಯಲ್ಲಿ ನಿತ್ಯ ಸನ್ನದ್ಧರಾಗುತ್ತಿದ್ದಾರೆ.

ಇದಕ್ಕಾಗಿ ತರಬೇತುದಾರರ ನೆರವನ್ನೂ ಪಡೆದಿರುವ ದೇವೇಗೌಡ  ಪ್ರತಿದಿನವೂ ಕಠಿಣ ವ್ಯಾಯಾಮಗಳ ಜೊತೆಗೆ ಯೋಗಾಭ್ಯಾಸವನ್ನೂ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ದೇವೇಗೌಡರ ಯೋಗ ಸಾಧನೆಯ ಕೆಲವು ದೃಶಗಳು ಮೇಲಿನ ಚಿತ್ರದಲ್ಲಿದೆ.