Showing posts with label ಜೈಶ್-ಇ-ಮೊಹಮ್ಮದ್. Show all posts
Showing posts with label ಜೈಶ್-ಇ-ಮೊಹಮ್ಮದ್. Show all posts

Sunday, March 3, 2019

ಬೆನ್ನ ಹುರಿಯಲ್ಲಿ ಕ್ಯಾನ್ಸರ್ ಉರಿ, ಎದೆಯಲ್ಲಿ ಭಾರತ ವಿರೋಧಿ ಉರಿ!

ಬೆನ್ನ ಹುರಿಯಲ್ಲಿ ಕ್ಯಾನ್ಸರ್ ಉರಿ, ಎದೆಯಲ್ಲಿ ಭಾರತ ವಿರೋಧಿ ಉರಿ!
ನವದೆಹಲಿ:  ಬೆನ್ನ ಹುರಿಯಲ್ಲಿ ಮಾರಣಾಂತಿಕ ಕ್ಯಾನ್ಸರ್ ಉರಿ, ಆದರೂ ಈತನ ಎದೆಯಲ್ಲಿ ಭಾರತದ ವಿರುದ್ಧ ಉರಿ. ಈತನೊಬ್ಬನೇ ಅಲ್ಲ, ಈತನ ಇಡೀ ಕುಟುಂಬವೇ ಪಾಕಿಸ್ತಾನದ ನೆಲದಲ್ಲಿ ಇದ್ದುಕೊಂಡೇ ಭಾರತದ ವಿರುದ್ಧ  ಕಾರ್ಯಾಚರಿಸುತ್ತಿದೆ. ಆಸ್ಪತ್ರೆಯ ಮಂಚದಲ್ಲಿ ಹೊರಳಾಡುತ್ತಿದ್ದರೂ, ಈಗಲೂ ಈತನ ಮಾತೇ ಅಂತಿಮ.

ಈತ ಬೇರೆ ಯಾರೂ ಅಲ್ಲ, ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ ಫೆಬ್ರುವರಿ 14ರಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಯೋಧರ ಬೆಂಗಾವಲು ವಾಹನದ ಮೇಲೆ ಪೈಶಾಚಿಕ ಆತ್ಮಹತ್ಯಾ ದಾಳಿ ನಡೆಸಿ, 40 ಯೋಧರನ್ನು ಬಲಿಪಡೆದ ಪಾಕಿಸ್ತಾನ ಮೂಲಕ ಜೈಶ್--ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್.

ಮಸೂದ್ ಅಜರ್ ಪಾಕಿಸ್ತಾನದ ನೆಲದಲ್ಲೇ ಇದ್ದಾನೆ ಎಂದು ಅಲ್ಲಿನ ವಿದೇಶಾಂಗ ಸಚಿವ ಮಕ್ದೂಮ್ ಶಾ ಮೆಹಮೂದ್ ಖುರೇಶಿ ಒಪ್ಪಿಕೊಂಡಿದ್ದಾರೆ. ಆದರೆ, ಆತನಷ್ಟೇ ಅಲ್ಲ, ಆತನ ಇಡೀ ಕುಟುಂಬವೇ ಭಾರತ ವಿರೋಧಿ ಉಗ್ರ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ ಎಂಬ ಸತ್ಯವನ್ನು ಅತ್ಯಂತ ಜಾಣ್ಮೆಯಿಂದ  ಅವರು ಮರೆ ಮಾಚಿದ್ದಾರೆ.

ಜೈಶ್-ಮೊಹಮ್ಮದ್ ಉಗ್ರಗಾಮಿ ಸಂಘಟನೆಯು ತನ್ನ 2ನೇ ಕೇಂದ್ರಕಚೇರಿಯನ್ನು ಪಂಜಾಬ್ ಪ್ರಾಂತ್ಯದ ಭವಾಲ್ ಪುರದಲ್ಲಿ 2017ರಲ್ಲಿ ಸ್ಥಾಪಿಸಿಕೊಂಡಿದ್ದು ಇಡೀ ಕುಟುಂಬ ಕೇಂದ್ರದ ಮೂಲಕ ಜೈಶ್- ಮೊಹಮ್ಮದ್ ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದೆ ಎಂದು ವರದಿಗಳು ಹೇಳಿವೆ.
ವರದಿಗಳ ಪ್ರಕಾರ ಮಸೂದ್ ಅಜರನ ಇಬ್ಬರು ಮಕ್ಕಳಾದ ಅಬ್ದುಲ್ಲ ಮತ್ತು ವಲಿ,  ಮಸೂದ್ ಅಜರನ ಹಿರಿಯ ಸಹೋದರ  ಇಬ್ರಾಹಿಂ ಅಜರ್, ಇನ್ನೊಬ್ಬ ಸಹೋದರ ಮುಫ್ತಿ ಅಬ್ದುಲ್ ರೌಫ್ ಅಸ್ಗರ್. ಇನ್ನಿಬ್ಬರು ಕಿರಿಯ ಸಹೋದರರಾದ  ಮೌಲಾನಾ ಅಮ್ಮರ್, ಮತ್ತು ತಲ್ಹಾ ಸೈಫ್, ಇಬ್ರಾಹಿಂನ ಕಿರಿಯ ಪುತ್ರ ಉಮೈರ್ ಈಗಲೂ ಜೈಶ್ ಶಿಬಿರಗಳಲ್ಲಿ ಭಯೋತ್ಪಾದನೆ ತರಬೇತಿ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಬ್ರಾಹಿಂ ಹಿರಿಯ ಪುತ್ರ ಉಸ್ಮಾನ್ ಹೈದರ್, ಅಜರನ ಭಾವ ಯೂಸುಫ್ ಅಜರ್, ಸಹೋದರ ಅಬ್ದುಲ್ ರಶೀದ್ ಕಮ್ರಾನನ ಪುತ್ರ ತಲ್ಹಾ ರಶೀದ್ ಭಾರತದ ಕಾರ್ಯಾಚರಣೆಗಳಲ್ಲಿ ಅಸು ನೀಗಿದ್ದಾರೆ.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ.

Friday, February 22, 2019

ಜೈಶೆ ಕೇಂದ್ರ ಕಚೇರಿ ಮುಟ್ಟುಗೋಲು, ಜಾಗತಿಕ ಆಕ್ರೋಶಕ್ಕೆ ಮಣಿದ ಪಾಕ್

ಜೈಶೆ ಕೇಂದ್ರ ಕಚೇರಿ ಮುಟ್ಟುಗೋಲು
ಜಾಗತಿಕ ಆಕ್ರೋಶಕ್ಕೆ ಮಣಿದ ಪಾಕ್

ನವದೆಹಲಿ: ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೆಚ್ಚುತ್ತಿರುವ ಜಾಗತಿಕ ಒತ್ತಡಕ್ಕೆ ಮಣಿದ ಪಾಕಿಸ್ತಾನ ಸರ್ಕಾರ ಶುಕ್ರವಾರ ಜೈಶ್--ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆಯ ಕೇಂದ್ರ ಕಚೇರಿಯನ್ನು ಮುಟ್ಟುಗೋಲು ಹಾಕಿಕೊಂಡು ಅದರ ವ್ಯವಹಾರ ನೋಡಿಕೊಳ್ಳಲು ಆಡಳಿತಾಧಿಕಾರಿಯನ್ನು ನೇಮಕ ಮಾಡಿತು.

ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ ಫೆಬ್ರುವರಿ ೧೪ರಂದು ಸಿಆರ್ಪಿಎಫ್ ಬೆಂಗಾವಲು ವಾಹನದ ಮೇಲೆ ನಡೆದ ಪೈಶಾಚಿಕ ಭಯೋತ್ಪಾದಕ ದಾಳಿಯ ಹೊಣೆಯನ್ನು ಭಯೋತ್ಪಾದಕ ಮೌಲಾನಾ ಮಸೂದ್ ಅಜರ್ ನೇತೃತ್ವದ  ಜೈಶ್--ಮೊಹಮ್ಮದ್ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿತ್ತು

ಜೈಶ್--ಮೊಹಮ್ಮದ್ ಸಂಘಟನೆಯ ಕೇಂದ್ರ ಕಚೇರಿ ಎನ್ನಲಾಗಿರುವ ಬಹಾವಲ್ಪುರದ ಮದ್ರೆಸ್ಸಾತುಲ್ ಸಬೀರ್ ಮತ್ತು ಜಮಾ--ಮಸ್ಜಿದ್ ಸುಭಾನಲ್ಲಾ ಆವರಣಗಳನ್ನು ಪಂಜಾಬ್ ಪ್ರಾಂತದ ಸರ್ಕಾರವು ಮುಟ್ಟುಗೋಲು ಹಾಕಿಕೊಂಡಿದ್ದು ಅಲ್ಲಿನ ವ್ಯವಹಾರಗಳ ನಿರ್ವಹಣೆಗೆ ಆಡಳಿತಾಧಿಕಾರಿಯನ್ನು ನೇಮಿಸಿದೆ ಎಂದು ಒಳಾಡಳಿತ ಸಚಿವಾಲಯದ ಹೇಳಿಕೆ ತಿಳಿಸಿದೆ.

೪೦ ಮಂದಿ ಸಿಆರ್ ಪಿಎಫ್ ಯೋಧರನ್ನುಬಲಿ ಪಡೆದ ಪುಲ್ವಾಮ ಭಯೋತ್ಪಾದಕ ದಾಳಿಯನ್ನು ಉಗ್ರವಾಗಿ ಖಂಡಿಸಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಪ್ರಕಟಣೆ ಹೊರಡಿಸುವುದರ ಜೊತೆಗೆ, ಅಂತಾರಾಷ್ಟ್ರೀಯ ಭಯೋತ್ಪಾದನೆ ಹಣಕಾಸು ಕಣ್ಗಾವಲು ಸಮಿತಿಯಾಗಿರುವ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ ಎಟಿಎಫ್) ತನ್ನ ಸಭೆಯಲ್ಲಿ ಪಾಕಿಸ್ತಾನ ಪ್ರೇರಿತ ಹಿಂಸಾತ್ಮಕ ಭಯೋತ್ಪಾದನಾ ದಾಳಿ ಹೆಚ್ಚುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತ ಪಡಿಸಿದ ಬೆನ್ನಲ್ಲೇ ಪಾಕಿಸ್ತಾನ ಕ್ರಮ ಕೈಗೊಂಡಿದೆ.

ಪ್ರಧಾನಿ ಇಮ್ರಾನ್ ಖಾನ್ ಸರ್ಕಾರವು ಗುರುವಾರ ಮುಂಬೈ ಭಯೋತ್ಪಾದಕ ದಾಳಿಗಳ ಸೂತ್ರಧಾರ ಹಫೀಜ್ ಸಯೀದ್ ನೇತೃತ್ವದ ಜಮಾತ್-ಉದ್ -ದವಾ (ಜೆಯುಡಿ) ಸಂಘಟನೆಯನ್ನು ನಿಷೇಧಿಸಿದ್ದರು.