ಪಕ್ಷಿ ಕಂಡರೆ ಸಾಕು… ʼಶೂಟ್ʼ…!
ಪಕ್ಷಿ ಕಂಡರೆ ಸಾಕು ʼಶೂಟ್ʼ ಮಾಡುವ ಅಭ್ಯಾಸ ಹಲವರಿಗೆ. ಅವರು ಹಕ್ಕಿಗಳನ್ನು ʼಶೂಟ್ʼ ಮಾಡುವುದು ಅವುಗಳನ್ನು ತಿನ್ನುವುದಕ್ಕಾಗಿ.
ಹೀಗೆ ಹಕ್ಕಿಗಳನ್ನು, ಪ್ರಾಣಿಗಳನ್ನು ಮನಸೋ ಇಚ್ಛೆ ʼಶೂಟ್ʼ ಮಾಡುತ್ತಾ ಹೋದರೆ ಮುಂದೊಂದು ದಿನ ಈ ಜಗತ್ತಿನಲ್ಲಿ ಮನುಷ್ಯನನ್ನು ಬಿಟ್ಟು ಬೇರಾವ ಪ್ರಾಣಿ- ಪಕ್ಷಿಗಳನ್ನೂ ಉಳಿಯಲಾರವು. ಈಗಾಗಲೇ ಹಲವಾರು ಪ್ರಾಣಿ ಪಕ್ಷಿಗಳು ಮಾನವ ಹಿಂಸೆಯೂ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಅಳಿವಿನ ಅಂಚಿಗೆ ಬಂದಿವೆ.
ಇಂತಹ ಪ್ರಾಣಿ ಪಕ್ಷಿಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿಯೇ ʼರಾಷ್ಟ್ರೀಯ ಪಕ್ಷಿ ದಿನʼವನ್ನು ಆಚರಿಸಲಾಗುತ್ತದೆ.
ಪಕ್ಷಿಗಳ ಸಹಸ್ರಾರು ಛಾಯಾಚಿತ್ರಗಳನ್ನು ತೆಗೆದು ʼಕನ್ನಡನಾಡಿನ ಬಣ್ಣದ ಬಾನಾಡಿಗಳುʼ ಎಂಬ ಪುಸ್ತಕವನ್ನೇ ಪ್ರಕಟಿಸಿರುವ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರು ತಾವು ʼಶೂಟ್ʼ ಮಾಡಿದ ಪಕ್ಷಿಗಳ ಚಿತ್ರವನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.
ಗಾಬರಿ ಆಗಬೇಡಿ. ಪಕ್ಷಿಗಳನ್ನು ʼಶೂಟ್ʼ ಮಾಡುವಾಗ ಸುವರ್ಣ ಬಳಸಿದ್ದು ತಮ್ಮ ʼಕ್ಯಾಮರಾʼವನ್ನು. ಹೀಗಾಗಿ ಈ ಪಕ್ಷಿಗಳು ಅವರು ʼಶೂಟ್ʼ ಮಾಡಿದ ನಂತರವೂ ತಮ್ಮ ಸಂಭ್ರಮದ ಕ್ಷಣಗಳನ್ನು ಅನುಭವಿಸಿವೆ. ಈ ಸಂಭ್ರಮದ
ಕ್ಷಣಗಳ ಸಮೀಪ ನೋಟಕ್ಕೆ ಚಿತ್ರಗಳನ್ನು ಕ್ಲಿಕ್ ಮಾಡಿ. ಪಕ್ಷಿಗಳ ಸಂಭ್ರಮದಲ್ಲಿ ನೀವೂ ಭಾಗಿಗಳಾಗಿ.ಕೆಳಗಿನವುಗಳನ್ನೂ ಓದಿರಿ:
೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!
ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ
ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!
ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ
ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)
ಶಕ್ತಿ ಸೌಧದ ಬಳಿ ʼಸುವರ್ಣ ಸೂರ್ಯ..!” ಇದು ಸುವರ್ಣ ನೋಟ
ಬದುಕಿನ ಹೋರಾಟ….!
ಬದ್ಧ ವೈರಿಗಳ ಅಪರೂಪದ ಮೈತ್ರಿ.!
ಡಾ. ರಾಜಕುಮಾರ್ ಆರೋಗ್ಯ ಸೂತ್ರ…!
ಕಥೆ ಹೇಳುವೆ… ನನ್ನ ಕಥೆ ಹೇಳುವೆ..!
‘ಸ್ನೇಕ್ ಬರ್ಡ್’ ಭೋಜನ ಚಮತ್ಕಾರ..!
ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ
(ಮೇಲಿನ ಚಿತ್ರ ಕ್ಲಿಕ್ ಮಾಡಿ ನೋಡಿ. ಕೇವಲ ರೂ. 350/- ಪಾವತಿಸಿ ಈ👆 ಡಿಜಿಟಲ್ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)
PARYAYA: ಪಕ್ಷಿ ಕಂಡರೆ ಸಾಕು… ʼಶೂಟ್ʼ…! ಇದು ʼಸುವರ್ಣ ನೋಟʼ: ಪಕ್ಷಿ ಕಂಡರೆ ಸಾಕು… ʼ ಶೂಟ್ ʼ…! ಇದು ʼ ಸುವರ್ಣ ನೋಟ ʼ ಪ ಕ್ಷಿ ಕಂಡರೆ ಸಾಕು ʼ ಶೂಟ್ ʼ ಮಾಡುವ ಅಭ್ಯಾಸ ಹಲವರಿಗೆ. ಅವರು ಹಕ್ಕಿಗಳನ್ನು ʼ ಶೂಟ್ ʼ ಮಾಡುವುದು ಅ...
No comments:
Post a Comment