ನಾನು ಮೆಚ್ಚಿದ ವಾಟ್ಸಪ್

Thursday, May 30, 2024

PARYAYA: ಕೇರಳಕ್ಕೆ ಬಂತು ಮುಂಗಾರು, ಭಾರೀ ಮಳೆ, ಯೆಲ್ಲೋ ಅಲರ್ಟ್‌

 ಕೇರಳಕ್ಕೆ ಬಂತು ಮುಂಗಾರು, ಭಾರೀ ಮಳೆ, ಯೆಲ್ಲೋ ಅಲರ್ಟ್‌

ತಿರುವನಂತಪುರಂ: ಕೇರಳ ಮತ್ತು ಈಶಾನ್ಯ ಭಾರತದ ಬಹುತೇಕ ಭಾಗಗಳಿಗೆ  ಈದಿನ (30 ಮೇ 2024) ನೈಋತ್ಯ ಮುಂಗಾರು ಆಗಮಿಸಿದೆ, ಕೇರಳದಲ್ಲಿ ಮತ್ತು ಮಣಿಪುರದಲ್ಲಿ ಭಾರೀ ಮಳೆ ಆರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಟಿಸಿದೆ.

ಮೇ 31 ರ ವೇಳೆಗೆ ಕೇರಳದ ಮೇಲೆ ಮುಂಗಾರು ಪ್ರಾರಂಭವಾಗಲಿದೆ ಎಂದು ಹವಾಮಾನ ಇಲಾಖೆ ಇದಕ್ಕೆ ಮುನ್ನ ಮೊದಲು ಘೋಷಿಸಿತ್ತು. ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಭಾರೀ ಮಳೆಯಾಗುತ್ತಿದೆಇದರ ಪರಿಣಾಮವಾಗಿ ಮೇ ತಿಂಗಳಲ್ಲಿ ಹೆಚ್ಚುವರಿ ಮಳೆಯಾಗಿದೆ ಎಂದು ಹವಾಮಾನ ಕಚೇರಿಯ ಅಂಕಿಅಂಶಗಳು ಹೇಳಿವೆ.

ಕೇರಳಕ್ಕೆ ಸಾಮಾನ್ಯವಾಗಿ ನೈಋತ್ಯ ಮುಂಗಾರು ಜೂನ್‌ 1ರಂದು ಪ್ರಾರಂಭವಾಗುತ್ತದೆ. ಹಾಗೆಯೇ ಈಶಾನ್ಯ ಭಾರತದ  ಅರುಣಾಚಲ ಪ್ರದೇಶತ್ರಿಪುರಾನಾಗಾಲ್ಯಾಂಡ್ಮೇಘಾಲಯಮಿಜೋರಾಂಮಣಿಪುರ ಮತ್ತು ಅಸ್ಸಾಂನಲ್ಲಿ ಜೂನ್ 5 ರಂದು ಮುಂಗಾರು ಆಗಮಿಸುವುದು ವಾಡಿಕೆಯಾಗಿದೆ..

ಮುಂಗಾರು ಆಗಮನದ ಹಿನ್ನೆಲೆಯಲ್ಲಿ ಐಎಂಡಿಯು ತನ್ನ ಮುನ್ಸೂಚನೆಯನ್ನು ಪರಿಷ್ಕರಿಸಿದೆ ಮತ್ತು ಗುರುವಾರ ಕೇರಳದ 14 ಜಿಲ್ಲೆಗಳಿಗೆ ಹಳದಿ ಎಚ್ಚರಿಕೆಯನ್ನು ನೀಡಿದೆ. ಹಳದಿ ಎಚ್ಚರಿಕೆಯ ಪ್ರಕಾರ 64.5 ಎಂಎಂನಿಂದ 115.5 ಎಂಎಂವರೆಗೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ.

ಯಾವ ಯಾವ ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ?

ಮೇ 31: ಪತ್ತನಂತಿಟ್ಟಆಲಪ್ಪುಳಕೊಟ್ಟಾಯಂಎರ್ನಾಕುಲಂಇಡುಕ್ಕಿತ್ರಿಶೂರ್ಪಾಲಕ್ಕಾಡ್ಮಲಪ್ಪುರಂಕೋಝಿಕ್ಕೋಡ್

ಜೂನ್ 1: ಪತ್ತನಂತಿಟ್ಟಆಲಪ್ಪುಳಕೊಟ್ಟಾಯಂಇಡುಕ್ಕಿಎರ್ನಾಕುಲಂತ್ರಿಶೂರ್ಪಾಲಕ್ಕಾಡ್ಮಲಪ್ಪುರಂಕೋಝಿಕ್ಕೋಡ್ವಯನಾಡ್ಕಣ್ಣೂರುಕಾಸರಗೋಡು

ಜೂನ್ 2: ಪತ್ತನಂತಿಟ್ಟಆಲಪ್ಪುಳಕೊಟ್ಟಾಯಂಇಡುಕ್ಕಿಎರ್ನಾಕುಲಂತ್ರಿಶೂರ್ಪಾಲಕ್ಕಾಡ್ಮಲಪ್ಪುರಂಕೋಝಿಕ್ಕೋಡ್ವಯನಾಡ್ಕಣ್ಣೂರುಕಾಸರಗೋಡು.

PARYAYA: ಕೇರಳಕ್ಕೆ ಬಂತು ಮುಂಗಾರು, ಭಾರೀ ಮಳೆ, ಯೆಲ್ಲೋ ಅಲರ್ಟ್‌:   ಕೇರಳಕ್ಕೆ ಬಂತು ಮುಂಗಾರು , ಭಾರೀ ಮಳೆ, ಯೆಲ್ಲೋ ಅಲರ್ಟ್‌ ತಿ ರುವನಂತಪುರಂ: ಕೇರಳ ಮತ್ತು ಈಶಾನ್ಯ ಭಾರತದ ಬಹುತೇಕ ಭಾಗಗಳಿಗೆ   ಈದಿನ (30 ಮೇ 2024) ನೈಋತ್ಯ ಮುಂಗ...

Wednesday, May 29, 2024

ಅಂಬಿಗನನ್ನು ಏಕೆ ನಂಬಬೇಕು?

 ರಸ ಪ್ರಸಂಗಗಳು!

 ಅಂಬಿಗನನ್ನು ಏಕೆ ನಂಬಬೇಕು?

ಅಂಬಿಗ ನಾ ನಿನ್ನ ನಂಬಿದೆ ಎಂಬ ಪುರಂದರದಾಸರ ಪದ ಯಾರಿಗೆ ಗೊತ್ತಿಲ್ಲ? ಆದರೆ ಆ ಪದ್ಯ ಯಕ್ಷಗಾನದ ರಸಪ್ರಸಂಗವೊಂದನ್ನು ಸೃಷ್ಟಿಸಿದ್ದು ಹೇಗೆ ಎಂಬುದು ನಿಮಗೆ ಗೊತ್ತಿದೆಯೇ? ಅದನ್ನು ತಿಳಿಯಬೇಕಾದರೆ ಮೇಲಿನ ಚಿತ್ರ ಕ್ಲಿಕ್‌ ಮಾಡಿ ನೋಡಿ.

ರಸ ಪ್ರಸಂಗಗಳು!

&&&

Wednesday, May 8, 2024

PARYAYA: ನಾಗವಾರ, ಕೆಂಪಾಪುರ, ಹೆಬ್ಬಾಳಕ್ಕೂ ಬರಲಿದೆ ಮೆಟ್ರೋ ಇಂಟರ್‌...

 ನಾಗವಾರ, ಕೆಂಪಾಪುರ, ಹೆಬ್ಬಾಳಕ್ಕೂ ಬರಲಿದೆ ಮೆಟ್ರೋ ಇಂಟರ್‌ ಚೇಂಜ್‌ ನಿಲ್ದಾಣ


ಬೆಂಗಳೂರು:
 ಕೆ.ಆರ್.‌ ಪುರಂ, ನಾಗವಾರ, ಕೆಂಪಾಪುರ, ಹೆಬ್ಬಾಳ ಸೇರಿದಂತೆ ಬೆಂಗಳೂರು ಮಹಾನಗರದಾದ್ಯಂತ ಒಟ್ಟು 16 ರೈಲು ಬದಲಾವಣೆ ನಿಲ್ದಾಣಗಳನ್ನು (ಇಂಟರ್‌ ಚೇಂಜ್‌ ನಿಲ್ದಾಣ) ಸ್ಥಾಪಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್‌ ಲಿಮಿಟೆಡ್‌ (ಬಿಎಂಆರ್‌ ಸಿಎಲ್)‌ ನಿರ್ಧರಿಸಿದೆ.

ತನ್ನ ಎರಡು ಮತ್ತು ಮೂರನೇ ಹಂತಗಳಲ್ಲಿ ಇಂಟರ್‌ ರೈಲು ಬದಲಾವಣೆ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ಪ್ರಕಟಿಸಿದೆ.

ಪ್ರಸ್ತುತ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಮೆಜೆಸ್ಟಿಕ್ಕಿನಲ್ಲಿ ಮಾತ್ರವೇ ಇಂತಹ ರೈಲು ಬದಲಾವಣೆ ನಿಲ್ದಾಣ ಅಥವಾ ಇಂಟರ್‌ ಚೇಂಜ್‌ ನಿಲ್ದಾಣ ಇದೆ. ಇಲ್ಲಿ ನೇರಳೆ ಮತ್ತು ಹಸಿರು ಮಾರ್ಗಗಳಿಗೆ ರೈಲು ಬದಲಾವಣೆಗೆ ಅನುಕೂಲವಿದೆ.

ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲಕ್ಕಾಗಿ ಈಗ ಈ ಹೊಸ 16 ಇಂಟರ್‌ ಚೇಂಜ್‌ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು.

ಬಿಎಂಆರ್‌ ಸಿಎಲ್‌ ಪ್ರಕಾರ ಹೊಸದಾಗಿ ಸ್ಥಾಪನೆಯಾಗಲಿರುವ 16 ಇಂಟರ್‌ ಚೇಂಜ್‌ ನಿಲ್ದಾಣಗಳ ಪೈಕಿ ಹಳದಿ ಮತ್ತು ಗುಲಾಬಿ ಮಾರ್ಗಗಳನ್ನು ಸಂಪರ್ಕಿಸುವ ಜಯದೇವ ಜಂಕ್ಷನ್‌ ಅತ್ಯಂತ ದೊಡ್ಡ ಇಂಟರ್‌ ಚೇಂಜ್‌ ನಿಲ್ದಾಣ ಆಗಿರುತ್ತದೆ. ಇದರಿಂದ ಪ್ರತಿದಿನ 80,000ದಿಂದ 90,000 ಮಂದಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಪ್ರಸ್ತುತ ನಗರದ ಏಕೈಕ ಇಂಟರ್‌ ಚೇಂಜ್‌ ನಿಲ್ದಾಣವಾಗಿರುವ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದಲ್ಲಿ  ನೇರಳೆ ಮತ್ತು ಹಸಿರುಮಾರ್ಗಗಳನ್ನು ಸಂಪರ್ಕಿಸುವ ನಿಲ್ದಾಣವಿದ್ದು ಇದರಿಂದ ಪ್ರತಿದಿನ 50,000 ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಹೊಸದಾಗಿ 16 ರೈಲು ಬದಲಾವಣೆ ನಿಲ್ದಾಣಗಳ ಸ್ಥಾಪನೆಯಿಂದ ಮೆಟ್ರೋದ ನೇರಳೆ, ಹಸಿರು, ಗುಲಾಬಿ ಮತ್ತು ನೀಲಿ ಮಾರ್ಗಗಳ ಸಂಪರ್ಕ ಸಾಧ್ಯವಾಗುತ್ತದೆ.

ನಮ್ಮ ಮೆಟ್ರೋ ಮೂಲಗಳ ಪ್ರಕಾರ, ಬನ್ನೇರುಘಟ್ಟ ರಸ್ತೆಯ ಜಯದೇವ ಜಂಕ್ಷನ್‌, ಮಹಾತ್ಮ ಗಾಂಧಿ ರಸ್ತೆ, ಕೆ.ಆರ್.‌ ಪುರಂ, ಹೊಸಹಳ್ಳಿ, ಮೈಸೂರು ರಸ್ತೆ, ಪೀಣ್ಯ, ಆರ್‌ ವಿ ರಸ್ತೆ, ಜೆಪಿ ನಗರ 4ನೇ ಹಂತಡೈರಿ ಸರ್ಕಲ್ನಾಗವಾರಕೆಂಪಾಪುರ, ಹೆಬ್ಬಾಳ, ಅಗರ, ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಮತ್ತು ಸುಮನಹಳ್ಳಿ ಕ್ರಾಸ್‌ - ಇಲ್ಲಿ ಇಂಟರ್‌ ಚೇಂಜ್‌ ಮೆಟ್ರೋ ನಿಲ್ದಾಣಗಳು ಬರಲಿವೆ. ಈ ಪೈಕಿ ಜಯದೇವ ಜಂಕ್ಷನ್ನಿನಲ್ಲಿ ಸ್ಥಾಪನೆಯಾಗಲಿರುವ ಬಹು ಹಂತದ ರೈಲು ಬದಲಾವಣೆ ಮೆಟ್ರೋ ನಿಲ್ದಾಣ ನಗರದಲ್ಲೇ ಅತ್ಯಂತ ದೊಡ್ಡ ಮೆಟ್ರೋ ರೈಲು ಬದಲಾವಣೆ ನಿಲ್ದಾಣವಾಗಲಿದೆ.

ಜಯದೇವ ಜಂಕ್ಷನ್‌ ರೈಲು ಬದಲಾವಣೆ ನಿಲ್ದಾಣವು ಈ ವರ್ಷಾಂತ್ಯದಲ್ಲೇ ಆರಂಭವಾಗುವ ನಿರೀಕ್ಷೆ ಇದ್ದು ಇದು ಹಳದಿ ಮತ್ತು ಗುಲಾಬಿ ಮಾರ್ಗಗಳನ್ನು ಸಂಪರ್ಕಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರಕ್ಕೆ ಹೋಗುವ ಹಳದಿ ಮಾರ್ಗ ಮತ್ತು ಕಾಳೇನ ಅಗ್ರಹಾರದಿಂದ ನಾಗವಾರಕ್ಕೆ ಹೋಗುವ ಗುಲಾಬಿ ಮಾರ್ಗಗಳನ್ನು ಇದು ಸಂಪರ್ಕಿಸಲಿದೆ.

ಇದಲ್ಲದೆ, ಹಳದಿ ಮಾರ್ಗದಲ್ಲಿ ರಸ್ತೆ ವಾಹನಗಳು ಮತ್ತು ಮೆಟ್ರೋ ರೈಲುಗಳಿಗಾಗಿ ಪ್ರತ್ಯೇಕ ಹಂತಗಳಿರುವ ಡಬಲ್‌ ಡೆಕ್ಕರ್‌ ಮೇಲ್ಸೇತುವೆಗಳು (ಫ್ಲೈ ಓವರ್)‌ ಇರುವುದು ವಿಶೇಷವಾಗಿದೆ. ಈ ಹೊಸ ವಿನ್ಯಾಸವು  ರಾಗಿ ಗುಡ್ಡದ ಕಡೆಯಿಂದ ಬರುವ ಪ್ರಯಾಣಿಕರಿಗೆ  ಸಿಲ್ಕ್‌ ಬೋರ್ಡ್‌ ಕಡೆಗೆ ನೇರ ಸಂಪರ್ಕವನ್ನು ಒದಗಿಸುತ್ತದೆ. ಅವರು ಸಿಗ್ನಲ್‌ ಗಳಿಗಾಗಿ ನಿಲ್ಲಬೇಕಾಗಿ ಬರುವುದಿಲ್ಲ.

ಇದೊಂದು ಅಪರೂಪದ ಪುಸ್ತಕ- ಇ-ಬುಕ್‌ ರೂಪದಲ್ಲೂ ಲಭ್ಯ
ಕೆಳಗೆ ಕ್ಲಿಕ್‌ ಮಾಡಿ - ಖರೀದಿಸಿ ಓದಿ
.


PARYAYA: ನಾಗವಾರ, ಕೆಂಪಾಪುರ, ಹೆಬ್ಬಾಳಕ್ಕೂ ಬರಲಿದೆ ಮೆಟ್ರೋ ಇಂಟರ್‌...:   ನಾಗವಾರ, ಕೆಂಪಾಪುರ, ಹೆಬ್ಬಾಳಕ್ಕೂ ಬರಲಿದೆ ಮೆಟ್ರೋ ಇಂಟರ್‌ ಚೇಂಜ್‌ ನಿಲ್ದಾಣ ಬೆಂಗಳೂರು: ಕೆ.ಆರ್.‌ ಪುರಂ, ನಾಗವಾರ, ಕೆಂಪಾಪುರ, ಹೆಬ್ಬಾಳ ಸೇರಿದಂತೆ ಬೆಂಗಳೂರು ...