ವಿಡಿಯೋ ನೋಡಲು ಮೇಲಿನ ಚಿತ್ರ ಕ್ಲಿಕ್ ಮಾಡಿರಿ.
Monday, November 4, 2024
PARYAYA: ವಾಟ್- ಸುದ್ದಿ
ವಿಡಿಯೋ ನೋಡಲು ಮೇಲಿನ ಚಿತ್ರ ಕ್ಲಿಕ್ ಮಾಡಿರಿ.
Sunday, November 3, 2024
PARYAYA: ಪಿಎಂಒ, ವಿಮಾನಗಳಿಗೆ ಹುಸಿಬಾಂಬ್ ಬೆದರಿಕೆ ಹಾಕಿದ್ದೇಕೆ ಗೊ...
ಪಿಎಂಒ, ವಿಮಾನಗಳಿಗೆ ಹುಸಿಬಾಂಬ್ ಬೆದರಿಕೆ ಹಾಕಿದ್ದೇಕೆ ಗೊತ್ತೇ?
ಬೆಂಗಳೂರು: ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಹಾಗೂ ವಿವಿಧ ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಿ ಸುಮಾರು ೧೦೦ಕ್ಕೂ ಹೆಚ್ಚು ಮಿಂಚಂಚೆಗಳನ್ನು ಕಳುಹಿಸಿದ ವ್ಯಕ್ತಿಯನ್ನು ಮಹಾರಾಷ್ಟ್ರದ ಪೊಲೀಸರು ಬಂಧಿಸಿದ್ದಾರೆ.
ಆತನ ವಿಚಾರಣೆಯಿಂದ ಕುತೂಹಲಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಸುಮಾರು ೧೦೦ಕ್ಕೂ ಹೆಚ್ಚು ಬಾಂಬ್ ಬೆದರಿಕೆಗಳ ಮಿಂಚಂಚೆ ಕಳುಹಿಸಿದ್ದ ಈ ವ್ಯಕ್ತಿ ಭಯೋತ್ಪಾದನೆಗೆ ಸಂಬಂಧಿಸಿದ ತನ್ನ ಪುಸ್ತಕ ಪ್ರಕಟಿಸಲು ಕೋರಿದ ನೆರವು ಲಭಿಸದೇ ಇದ್ದುದಕ್ಕಾಗಿ ಈ ಬಾಂಬ್ ಬೆದರಿಕೆಯ ಮಿಂಚಂಚೆಗಳನ್ನು ಕಳುಹಿಸಿದ್ದನಂತೆ.
ಮಹಾರಾಷ್ಟ್ರದ ಪೊಲೀಸರಿಂದ ಬಂಧಿತನಾಗಿರುವ ಮಹಾರಾಷ್ಟ್ರದ ಮಾವೋವಾದಿ ನಕ್ಸಲೀಯ ಹಾವಳಿಪೀಡಿತ ಜಿಲ್ಲೆ ಗೊಂಡಿಯಾದ ಈ ವ್ಯಕ್ತಿಯ ಹೆಸರು ಜಗದೀಶ್ ಉಯಿಕೆ ಅಂತ. ಈತನ ವಯಸ್ಸು ೩೫ ವರ್ಷ.
ಪೊಲೀಸರ ಪ್ರಕಾರ ಕಳೆದ ಜನವರಿಯಿಂದ ಇಲ್ಲಿಯವರೆಗೆ ಈತ ಪಿಎಂಒ ಮತ್ತು ಇತರ ಅಧಿಕಾರಿಗಳಿಗೆ ಸುಮಾರು ೧೦೦ ಬಾರಿ ಬಾಂಬ್ ಬೆದರಿಕೆಯ ಮಿಂಚಂಚೆಗಳನ್ನು ಕಳುಹಿಸಿದ್ದಾನೆ.
ಈತ ಬರೆದ ಪುಸ್ತಕದ ಹೆಸರು ʼಆತಂಕ್ ವಾದ್ - ಏಕ್ ತೂಫಾನಿ ರಾಕ್ಷಸ್ʼ (ಭಯೋತ್ಪಾದನೆ- ಒಂದು ರಕ್ಕಸ ಬಿರುಗಾಳಿ). ಈ ಪುಸ್ತಕವನ್ನು ಪ್ರಕಟಿಸಲು ಅನುಮತಿ ಹಾಗೂ ನೆರವು ನೀಡಬೇಕು ಎಂಬುದು ಈತನ ಕೋರಿಕೆಯಾಗಿತ್ತಂತೆ.
ಮೊದ ಮೊದಲಿಗೆ ತನ್ನ ಕೋರಿಕೆ ಮಿಂಚಂಚೆಗಳನ್ನು ಕಳುಹಿಸಿದ ಈತ, ಬಹುಶ: ಅದಕ್ಕೆ ಯಾವುದೇ ಸ್ಪಂದನೆ ಸಿಗಲಿಲ್ಲ ಎಂಬುದಾಗಿ ಭ್ರಮನಿರಸನಗೊಂಡು ಬಾಂಬ್ ಬೆದರಿಕೆಯ ಮಿಂಚಂಚೆಗಳನ್ನು ಕಳುಹಿಸಲು ಆರಂಭಿಸಿದ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ನಾಗಪುರ ಸೈಬರ್ ಕ್ರೈಮ್ ಡಿಸಿಪಿ ಲೋಹಿತ್ ಮತಾನಿ ಬಹಿರಂಗ ಪಡಿಸಿದ್ದಾರೆ.
ನಾಗ್ಪುರದ ಹೆಚ್ಚುವರಿ ಸಿಪಿ, ಸಂಜಯ್ ಪಾಟೀಲ್ ಪ್ರಕಾರ, ಉಯಿಕೆಯ ಪುಸ್ತಕವು ಆನ್ಲೈನ್ನಲ್ಲಿ ಸುಲಭವಾಗಿ ಲಭ್ಯವಿರುವ ಭಯೋತ್ಪಾದಕ ಸಿದ್ಧಾಂತಗಳ ಮೂಲ ಸಂಕಲನವಾಗಿದೆ ಎಂದು ವರದಿಗಳು ತಿಳಿಸಿವೆ.
Saturday, November 2, 2024
PARYAYA: ₹ 100 ಕೋಟಿ: ಹೌಹಾರಬೇಡಿ ಇದು ಚುನಾವಣಾ ತಂತ್ರಗಾರಿಕೆ ಶುಲ್ಕ!
₹ 100 ಕೋಟಿ: ಹೌಹಾರಬೇಡಿ ಇದು ಚುನಾವಣಾ ತಂತ್ರಗಾರಿಕೆ ಶುಲ್ಕ!
ಪ್ರಶಾಂತ್ ಕಿಶೋರ್ ಎಂಬ ಹೆಸರು ಭಾರತದಲ್ಲಿ ಬಹಳಷ್ಟು ಮಂದಿಗೆ ಗೊತ್ತಿರಲಾರದು. ಆದರೆ ರಾಜಕೀಯ ಪಕ್ಷಗಳ ವಲಯದಲ್ಲಿ ಅವರ ಹೆಸರು ಚಿರಪರಿಚಿತ. ಏಕೆಂದರೆ ಇವರು ಚುನಾವಣಾ ತಂತ್ರಗಾರಿಕೆಗೆ ಹೆಸರಾದವರು.
ಆದರೆ ಅವರ ಚುನಾವಣಾ ತಂತ್ರಗಾರಿಕೆ ಸಲಹೆಗೆ ಶುಲ್ಕ ಎಷ್ಟೆಂದು ಗೊತ್ತಿದೆಯೇ? ಕೇಳಿದರೆ ನೀವು ಹೌಹಾರಿ ಬಿಡಬಹುದು. ಅದಕ್ಕೂ ಮುನ್ನ ಅವರು ಯಾರು ಯಾರಿಗೆ ಚುನಾವಣೆ ತಂತ್ರಗಾರಿಕೆ ಹೇಳಿಕೊಟ್ಟಿದ್ದರು ಎಂದು ನೋಡೋಣ.
ಪ್ರಶಾಂತ್ ಕಿಶೋರ್ ಅವರ ಚುನಾವಣಾ ತಂತ್ರಗಾರಿಕೆ ಮೊತ್ತ ಮೊದಲ ಬಾರಿಗೆ ಬಹಿರಂಗಕ್ಕೆ ಬಂದದ್ದು 2014ರಲ್ಲಿ. ಆಗ ಅವರು ಭಾರತೀಯ ಜನತಾ ಪಕ್ಷಕ್ಕೆ ಚುನಾವಣಾ ತಂತ್ರಗಾರಿಕೆಯ ಸಲಹಾಕಾರರಾಗಿದ್ದರು. ನರೇಂದ್ರ ಮೋದಿಯವರ ಪರವಾಗಿ 2014 ರ ಲೋಕಸಭಾ ಪ್ರಚಾರದ ಪ್ರಮುಖ ತಂತ್ರಗಾರರಾಗಿ ಪ್ರಶಾಂತ್ ಗಮನ ಸೆಳೆದರು. ಇದು ಬಿಜೆಪಿಗೆ ಪ್ರಚಂಡ ಜಯ ಸಾಧಿಸಲು ಸಹಾಯ ಮಾಡಿತು.
2015ರಲ್ಲಿ ಪ್ರಶಾಂತ್ ಕಿಶೋರ್ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು. ಇಲ್ಲಿ ಅವರು ನಿತೀಶ್ ಕುಮಾರ್ ಅವರ ಜನತಾದಳ (ಯು) ಮತ್ತು ಆರ್ ಜೆಡಿ ಹಾಗೂ ಕಾಂಗ್ರೆಸ್ ಮೈತ್ರಿಕೂಟವನ್ನು ಬೆಂಬಲಿಸಿದರು. ಬಿಜೆಪಿ ವಿರುದ್ಧ ಮೈತ್ರಿಕೂಟದ ಗೆಲುವಿಗೆ ಕಿಶೋರ್ ಸಲಹೆ ಕಾರಣವಾಯಿತು.
2017 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಅವರು ಕಾಂಗ್ರೆಸ್ ಜೊತೆಗೆ ಕೆಲಸ ಮಾಡಿದರು, ಆದರೆ ಅವರ ತಂತ್ರಗಾರಿಕೆ ಇಲ್ಲಿ ಯಶಸ್ವಿ ಫಲಿತಾಂಶವನ್ನು ನೀಡಲಿಲ್ಲ. ಆದರೆ ಆ ಬಳಿಕ 2021 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಪ್ರಶಾಂತ್ ತಂತ್ರಗಾರಿಕೆ ನೆರವಾಯಿತು.
2019 ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕೈ ಹಿಡಿದರು. ಪ್ರಶಾಂತ್ ಕಿಶೋರ್ ತಂತ್ರಗಾರಿಕೆ, ಜಗನ್ ಮೋಹನ್ ರೆಡ್ಡಿ ಮತ್ತು ಅವರ ಪಕ್ಷವಾದ ವೈಎಸ್ಆರ್ಸಿಪಿಗೆ ಗಮನಾರ್ಹ ಗೆಲುವನ್ನು ತಂದುಕೊಟ್ಟಿತು.
2020 ರ ದೆಹಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಿಶೋರ್ ಅವರು ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಸಂಕ್ಷಿಪ್ತ ತಂತ್ರಗಾರಿಕೆ ಹೇಳಿಕೊಟ್ಟರು. ಪರಿಣಾಮ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಪ್ರಚಂಡ ವಿಜಯ ಸಾಧಿಸಿತು.
2021ರ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿಯಿಂದ ಕಠಿಣ ಸವಾಲು ಎದುರಿಸಬೇಕಾಗಿ ಬಂದ ಮಮತಾ ಬ್ಯಾನರ್ಜಿ ಮತ್ತು ಅವರ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಉಳಿಸಿಕೊಳ್ಳಲು ನೆರವಾದದ್ದು ಕಿಶೋರ್ ಅವರ ತಂತ್ರಗಾರಿಕೆಯೇ.
ಈ ಮಧ್ಯೆ ಪ್ರಶಾಂತ್ ಕಿಶೋರ್ ಅವರು ತಮ್ಮದೇ ಆದ ಜನ ಸೂರಜ್ ಪಕ್ಷವನ್ನೂ ಸ್ಥಾಪಿಸಿದ್ದಾರೆ.
ಇಷ್ಟೆಲ್ಲದರ ನಡುವೆ ಅವರು ರಾಜಕೀಯ ಪಕ್ಷಗಳು ಅಥವಾ ನಾಯಕರಿಗೆ ಕೊಡುವ ಚುನಾವಣಾ ತಂತ್ರಗಾರಿಕೆ ಸಲಹೆ ತುಟ್ಟಿಯೇ ದುಬಾರಿಯೇ ಎಂಬ ಪ್ರಶ್ನೆ ಹಲವರನ್ನು ಕಾಡುವುದು ಸಹಜ. ಅದು ಗೊತ್ತಾದರೆ ಜನ ಸಾಮಾನ್ಯರು ಹೌ ಹಾರುವುದು ಮಾತ್ರ ಖಂಡಿತ.
ಏಕೆಂದರೆ ಅದು ಎಷ್ಟೆಂಬುದನ್ನು ಸ್ವತಃ ಪ್ರಶಾಂತ್ ಕಿಶೋರ್ ಅವರೇ ಹೇಳಿದ್ದಾರೆ. ಅಗ್ಗವಲ್ಲ, ತುಂಬಾ ತುಟ್ಟಿಕರ ಎಂಬುದನ್ನು ಇದೀಗ ಸ್ವತಃ ಪ್ರಶಾಂತ್ ಕಿಶೋರ್ ಅವರೇ ಬಹಿರಂಗ ಪಡಿಸಿದ್ದಾರೆ. ಅಕ್ಟೋಬರ್ 31 ರಂದು, ಮುಂಬರುವ ಬಿಹಾರ ಉಪಚುನಾವಣೆಯ ಪ್ರಚಾರದಲ್ಲಿ ಇದನ್ನು ಬಹಿರಂಗ ಪಡಿಸಿದ ಅವರು ಅದರ ಮೊತ್ತ 100 ಕೋಟಿ ರೂಪಾಯಿಗಳು ಅಥವಾ ಅದಕ್ಕಿಂತಲೂ ಹೆಚ್ಚು ಎಂದು ಹೇಳಿದ್ದಾರೆ.
ಬಿಹಾರದ ಬೆಳಗಂಜ್ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಶಾಂತ್ ಕಿಶೋರ್, ಮುಸ್ಲಿಂ ಸಮುದಾಯದ ಸದಸ್ಯರೇ ಹೆಚ್ಚಿದ್ದ ಸಭೆಯಲ್ಲಿ ಮಾತನಾಡುತ್ತಾ, ಜನರು ತಮ್ಮ ಅಭಿಯಾನಗಳಿಗೆ ಹಣದ ಮೂಲ ಏನು ಎಂದು ಆಗಾಗ ಕೇಳುವುದುಂಟು ಅದರ ಬಗ್ಗೆ ಹೇಳುತ್ತೇನೆ ಕೇಳಿʼ ಎನ್ನುತ್ತಾ ತಮ್ಮ ಶುಲ್ಕದ ವಿವರ ಬಿಚ್ಚಿಟ್ಟಿದ್ದಾರೆ.
“ವಿವಿಧ ರಾಜ್ಯಗಳಲ್ಲಿ ಹತ್ತು ಸರ್ಕಾರಗಳು ನನ್ನ ಕಾರ್ಯತಂತ್ರದ ಮೇಲೆ ನಡೆಯುತ್ತಿವೆ. ನನ್ನ ಪ್ರಚಾರಕ್ಕಾಗಿ ಟೆಂಟ್ ಇತ್ಯಾದಿಗಳನ್ನು ಸ್ಥಾಪಿಸಲು ನನ್ನ ಬಳಿ ಸಾಕಷ್ಟು ಹಣವಿಲ್ಲ ಎಂದು ನೀವು ಭಾವಿಸುತ್ತೀರಾ? ನಾನು ಅಷ್ಟು ದುರ್ಬಲ ಎಂದು ನೀವು ಭಾವಿಸುತ್ತೀರಾ? ಬಿಹಾರದಲ್ಲಿ ನನ್ನಷ್ಟು ಶುಲ್ಕವನ್ನು ಯಾರೂ ಕೇಳಿಲ್ಲ. ನಾನು ಕೇವಲ ಒಂದು ಚುನಾವಣೆಯಲ್ಲಿ ಯಾರಿಗಾದರೂ ಸಲಹೆ ನೀಡಿದರೆ ಅದಕ್ಕೆ ನನ್ನ ಶುಲ್ಕ ₹ 100 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು. ನಾನು ಅಂತಹ ಒಂದು ಚುನಾವಣಾ ಸಲಹೆಯೊಂದಿಗೆ ನನ್ನ ಪ್ರಚಾರವನ್ನು ಮುಂದಿನ ಎರಡು ವರ್ಷಗಳವರೆಗೆ ಮುಂದುವರಿಸಬಹುದು”
- ಇದು ಪ್ರಶಾಂತ್ ಕಿಶೋರ್ ಅವರ ಮಾತು.
ಬೇಕಿದ್ದರೆ ಈ ಕೆಳಗಿನ ವಿಡಿಯೋ ನೋಡಿ ಅವರ ಮಾತುಗಳನ್ನು ಕೇಳಿಸಿಕೊಳ್ಳಿ:
ಅಥವಾ ಈ ಲಿಂಕ್ ಮೂಲಕ ಪರಿಶೀಲಿಸಿಕೊಳ್ಳಿ: https://twitter.com/i/status/1852360442074562792
Friday, November 1, 2024
PARYAYA: ಕನ್ನಡ ರಾಜ್ಯೋತ್ಸವ (Kannada Rajyotsava)
ಕನ್ನಡ ರಾಜ್ಯೋತ್ಸವ
ಬೆಂಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೪ ನವೆಂಬರ್ ೦೧ರ ಶುಕ್ರವಾರ ಸರಳವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಶ್ರೀ ಬಾಲಾಜಿ ಕೃಪಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಸಮಾರಂಭದಲ್ಲಿ ಲೋಕೋಪಯೋಗಿ ಇಲಾಖೆಯ ನಿವೃತ್ತ ಅಧೀಕ್ಷಕ ಶ್ರೀ ದೇವೇಗೌಡ ಅವರು ಧ್ವಜಾರೋಹಣ ನೆರವೇರಿಸಿದರು. ಸಂಘದ ಹಿರಿಯ ಸದಸ್ಯ ಶ್ರೀ ಎಚ್.ವಿ. ಉದಯಶಂಕರ್ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿದರು.
ಸಂಘದ ಖಜಾಂಚಿ ಶ್ರೀ ಶ್ರೀನಿವಾಸುಲು ನಾಯ್ಡು ಅವರು ಮುಖ್ಯ ಅತಿಥಿ ದೇವೇಗೌಡ ಅವರನ್ನು ಸನ್ಮಾನಿಸಿದರು. ಸಂಘದ ಕಾರ್ಯದರ್ಶಿ ಶ್ರೀ ನೆತ್ರಕೆರೆ ಉದಯಶಂಕರ ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು.
ಬಡಾವಣೆಯ ಹಿರಿಯ ಸದಸ್ಯ ಶ್ರೀ ಮುನಿರಾಜು ಅವರು ಸಿಹಿ ವಿತರಣೆಯ ವ್ಯವಸ್ಥೆ ಮಾಡಿದರು. ಸಹ ಕಾರ್ಯದರ್ಶಿ ಶ್ರೀ ರಾಘವೇಂದ್ರ ಕಾಮತ್, ಸಂಘದ ಹಿರಿಯ ಸದಸ್ಯ ಶಿವಪ್ಪ ಶಾಂತಪ್ಪನವರ್, ಶ್ರೀ ಸುಗುಣನ್, ಹಂಪಣ್ಣ ಮತ್ತಿತರರು ಸಮಾರಂಭ ಸಂಘಟಿಸುವಲ್ಲಿ ಸಹಕರಿಸಿದರು.
ಸಂಘದ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಬಿ.ಎಲ್. ಪ್ರಭಾವತಿ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದ ಪುಟ್ಟ ವಿಡಿಯೋ ಇಲ್ಲಿದೆ👇:
ಕಾರ್ಯಕ್ರಮದ ಕೆಲವು ದೃಶ್ಯಗಳು. paryaya5-YouTube ನಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿರಿ: https://www.youtube.com/watch?v=h-M9K7A4Xb4
ತಾಯಿ ಭುವನೇಶ್ವರಿಗೆ ಪೂಜೆ
PARYAYA: ದೀಪಾವಳಿ ಸಂಭ್ರಮ ೨೦೨೪
ದೀಪಾವಳಿ ಸಂಭ್ರಮ ೨೦೨೪
ಬೆಂಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನದಲ್ಲಿ ೨೦೨೪ ಅಕ್ಟೋಬರ್ ೩೧ರ ಗುರುವಾರ, ೨೦೨೪ ನವೆಂಬರ್ ೦೧ರ ಶುಕ್ರವಾರ ಬೆಳಗ್ಗೆ ದೀಪಾವಳಿ, ಲಕ್ಷ್ಮೀಪೂಜೆ, ಕೇದಾರನಾಥೇಶ್ವರ ಕಥಾ ಶ್ರವಣ ಕಾರ್ಯಕ್ರಮಗಳು ನಡೆದವು.
Tuesday, October 29, 2024
PARYAYA: ರಾಮ ರಘುವರ ರಾಮಸೀತಾ…!
ರಾಮ ರಘುವರ ರಾಮಸೀತಾ…!
ಬೆಂಗಳೂರು: ಬೆಂಗಳೂರು ಉತ್ತರ ಹವ್ಯಕ ಮಂಡಲದ ಮಂಡಲೋತ್ಸವ ೨೦೨೪ ಅಕ್ಟೋಬರ್ ೨೭ರ ಭಾನುವಾರ ಬೆಂಗಳೂರು ಮಲ್ಲೇಶ್ವರದ ಹವ್ಯಕ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ʼರಾಮ ರಘುವರ ರಾಮಸೀತಾʼ ಹಾಡು ಮತ್ತು ನೃತ್ಯ ಕಾರ್ಯಕ್ರಮದಲ್ಲಿ ಇಡೀ ಸಭೆಯೇ ಪಾಲ್ಗೊಂಡ ದೃಶ್ಯ ಇಲ್ಲಿದೆ.
ಮಲ್ಲೇಶ್ವರದ ಅಖಿಲ ಹವ್ಯಕ ಮಹಾಸಭಾದಲ್ಲಿ ನಡೆದ ಮಂಡಲೋತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, 'ಗುರುಸೇವಾತಿಲಕ' ಪ್ರಶಸ್ತಿ ಪ್ರಧಾನ, ಊಟೋಪಚಾರ, ಕ್ರೀಡೋತ್ಸವದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಸಭಾ ಕಾರ್ಯಕ್ರಮ ಒಳಗೊಂಡಿದ್ದವು. ಪುಟಾಣಿಗಳು,ಯುವಕ ಯುವತಿಯರು ವಲಯಗಳ, ಮಂಡಲದ ಪದಾಧಿಕಾರಿಗಳು,ಮಹಾಮಂಡಲದ ಪದಾಧಿಕಾರಿಗಳು, ಮಠದ ಶಿಷ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:
ಕೆಳಗಿನವುಗಳನ್ನೂ ಓದಿ:
ಅಬ್ಬೆ ಮಾಡುಗು ರುಚಿ ರುಚಿ ದೋಸೆ..!
'ಅಕ್ಕ' ಅಂಗಳದಲ್ಲಿ 'ಯಕ್ಷ' ವೈಭವ...! Yaksha Vaibhava in Akka Conference...!
Deepa Gopura ಧಾರವಾಡ ಪ್ರಪ್ರಥಮ 'ಗೋ ಅಭಯ ಜಿಲ್ಲೆ'
ಹರಿಕಥೆಯಲ್ಲ ಇದು 'ರಾಮಕಥಾ' Unique Rama Katha...
ಸಮುದ್ರ ಮಥನ-1 ಏಳು, ಏಳೆನ್ನುವ ಶ್ರೀರಾಮ
ಸಮುದ್ರ ಮಥನ 22: ಪೌರನ ಪಾತ್ರವೂ, ದೇಶದ ಉನ್ನತಿಯೂ
ಸಮುದ್ರ ಮಥನ 27: ಪ್ರೇಮವೆಂಬ ದೈವೀ ಭಾವದ ಸಂಗದಲ್ಲಿ
ಸಮುದ್ರ ಮಥನ 23: ಹೊಸವರ್ಷದ ಆಶಯ, ಶುಭಾಶಯ
ಸಮುದ್ರ ಮಥನ 21: ದೇವಸ್ಥಾನದಲ್ಲಿ ಗೋಶಾಲೆಯ ಮಹತ್ವ
ಸಮುದ್ರ ಮಥನ 2 : ನಮ್ಮ ಆಹಾರವೆಷ್ಟು ಹಿತ ?
Monday, October 28, 2024
PARYAYA: ಪುಣ್ಯಕೋಟಿಯ ಕಥೆಯಿದು..!
ಪುಣ್ಯಕೋಟಿಯ ಕಥೆಯಿದು..!
ಬೆಂಗಳೂರು: ಬೆಂಗಳೂರಿನ ಹವ್ಯಕ ಭವನದಲ್ಲಿ ೨೦೨೪ ಅಕ್ಟೋಬರ್ ೨೭ರ ಭಾನುವಾರ ನಡೆದ ಉತ್ತರ ಹವ್ಯಕ ಮಂಡಲದ ಮಂಡಲೋತ್ಸವದಲ್ಲಿ ಪುಟಾಣಿ ಮಕ್ಕಳು ಪುಣ್ಯಕೋಟಿ ಕಥೆಯನ್ನು ನೃತ್ಯ ರೂಪಕವಾಗಿ ಪ್ರದರ್ಶಿಸಿದರು.ನೃತ್ಯ ರೂಪಕದ ವಿಡಿಯೋ ಇಲ್ಲಿದೆ. ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:
ಕೆಳಗಿನವುಗಳನ್ನೂ ಓದಿ:
ಬೆಂಗಳೂರು ಉತ್ತರ ಹವ್ಯಕ ಮಂಡಲೋತ್ಸವ
ಅಬ್ಬೆ ಮಾಡುಗು ರುಚಿ ರುಚಿ ದೋಸೆ..!
'ಅಕ್ಕ' ಅಂಗಳದಲ್ಲಿ 'ಯಕ್ಷ' ವೈಭವ...! Yaksha Vaibhava in Akka Conference...!
Deepa Gopura ಧಾರವಾಡ ಪ್ರಪ್ರಥಮ 'ಗೋ ಅಭಯ ಜಿಲ್ಲೆ'
ಹರಿಕಥೆಯಲ್ಲ ಇದು 'ರಾಮಕಥಾ' Unique Rama Katha...
ಸಮುದ್ರ ಮಥನ-1 ಏಳು, ಏಳೆನ್ನುವ ಶ್ರೀರಾಮ
ಸಮುದ್ರ ಮಥನ 22: ಪೌರನ ಪಾತ್ರವೂ, ದೇಶದ ಉನ್ನತಿಯೂ
ಸಮುದ್ರ ಮಥನ 27: ಪ್ರೇಮವೆಂಬ ದೈವೀ ಭಾವದ ಸಂಗದಲ್ಲಿ
ಸಮುದ್ರ ಮಥನ 23: ಹೊಸವರ್ಷದ ಆಶಯ, ಶುಭಾಶಯ
ಸಮುದ್ರ ಮಥನ 21: ದೇವಸ್ಥಾನದಲ್ಲಿ ಗೋಶಾಲೆಯ ಮಹತ್ವ
ಸಮುದ್ರ ಮಥನ 2 : ನಮ್ಮ ಆಹಾರವೆಷ್ಟು ಹಿತ ?
ಸಮುದ್ರ ಮಥನ 29: ಹಿರಿತನಕ್ಕೊಂದು ನಮಸ್ಕಾರ















