ವೆಂಕಟೇಶ್ವರನಿಗೆ ನಾಣ್ಯ ಅಲಂಕಾರ
ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಎಂಟನೇ ದಿನವಾದ ಭಾನುವಾರ (೧೮ಅಕ್ಟೋಬರ್ ೨೦೨೬) ವೆಂಕಟೇಶ್ವರ ಸ್ವಾಮಿಗೆ ನಾಣ್ಯಗಳ ಅಲಂಕಾರ ಮಾಡಲಾಯಿತು.
ಎಚ್.ವಿ. ಉದಯಶಂಕರ್, ಗೀತಾ ಉದಯಶಂಕರ್ ಮತ್ತು ಕುಟುಂಬದವರು ಮತ್ತು ವೆಂಕಟೇಶ್ವರ ಸ್ವಾಮಿಗೆ ನಾಣ್ಯಗಳ ಅಲಂಕಾರ ಸೇವೆ ಮಾಡಿದರೆ, ಉದಯಶಂಕರ್ ಕುಟುಂಬದವರೊಂದಿಗೆ ಶಿವಪ್ಪ ಶಾಂತಪ್ಪನವರ ಮತ್ತು ಕುಟುಂಬದವರು ಪ್ರಸಾದ ಸೇವೆ ಸಲ್ಲಿಸಿದರು.
ಲಕ್ಷ್ಮಿ ದೇವಿಗೆ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ದೇವಾಲಯದ ಭಕ್ತರಿಂದ ಭಜನಾ ಸೇವೆ ನಡೆಯಿತು.
ಭಕ್ತರು ಶ್ರದ್ಧಾ ಭಕ್ತಿಯೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಇವುಗಳನ್ನೂ ನೋಡಿರಿ:
ಆಂಜನೇಯನಿಗೆ ಒಣಹಣ್ಣುಗಳ ಅಲಂಕಾರ
ಬೆಣ್ಣೆ ಅಲಂಕಾರದಲ್ಲಿ ಕಂಗೊಳಿಸಿದ ವೆಂಕಟೇಶ್ವರಶರನ್ನವರಾತ್ರಿ: ತ್ರಿಮೂರ್ತಿಗಳಿಗೆ ವಿವಿಧಾಲಂಕಾರ
ಶರನ್ನವರಾತ್ರಿ: ವಿಭೂತಿಯಲ್ಲಿ ಮಿಂದೆದ್ದ ಹನುಮ
ಶರನ್ನವರಾತ್ರಿ: ಮಹಾಗಣಪತಿಗೆ ಕುಂಕುಮ ಅಲಂಕಾರ
ಶರನ್ನವರಾತ್ರಿ ೨೦೨೬: ಉತ್ಸವದ ಮೊದಲ ದಿನ



No comments:
Post a Comment