Saturday, October 17, 2026

PARYAYA: ವಿಭೂತಿ, ಶ್ರೀಗಂಧ, ಕುಂಕುಮ ಅಲಂಕಾರ

 ವಿಭೂತಿ, ಶ್ರೀಗಂಧ, ಕುಂಕುಮ ಅಲಂಕಾರ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಏಳನೇ ದಿನವಾದ ಶನಿವಾರ (೧೭ಅಕ್ಟೋಬರ್‌ ೨೦೨೬) ಬಾಲಾಜಿ ಮಹಾಗಣಪತಿಗೆ ವಿಭೂತಿ, ವೆಂಕಟೇಶ್ವರನಿಗೆ ಶ್ರೀಗಂಧ ಮತ್ತು ಅಭಯ ಆಂಜನೇಯ ಸ್ವಾಮಿಗೆ ಕುಂಕುಮ  ಅಲಂಕಾರ ಮಾಡಲಾಯಿತು.

ಶ್ರೀ ನಾಗೇಶ್ ರಾಘವಯ್ಯ, ಶ್ರೀಮತಿ ಸರಸ್ವತಿ ಮತ್ತು ಕುಟುಂಬದವರು ಮತ್ತು ವೆಂಕಟೇಶ್ವರ ಸ್ವಾಮಿಗೆ  ಶ್ರೀಗಂಧದ ಅಲಂಕಾರ ಸೇವೆ ಮಾಡಿದರೆ, ಶ್ರೀ ಚಂದ್ರಶೇಖರ್, ಶ್ರೀಮತಿ ಅನುರಾಧಾ ಮತ್ತು ಕುಟುಂಬದವರು ಬಾಲಾಜಿ ಮಹಾಗಣಪತಿಗೆ ವಿಭೂತಿ ಅಲಂಕಾರ ಹಾಗೂ ಅಭಯ ಆಂಜನೇಯನಿಗೆ ಕುಂಕುಮ ಅಲಂಕಾರವನ್ನು ಸಲ್ಲಿಸಿದರು.

ಶ್ರೀ ಕೃಷ್ಣೋಜಿ ರಾವ್‌ ಮತ್ತು ಕುಟುಂಬದವರಿಂದ ಪುಷ್ಪಾಲಂಕಾರ, ಶ್ರೀ ದಾಗಾ ಮತ್ತು ಕುಟುಂಬದವರಿಂದ ಪ್ರಸಾದ ಸೇವೆ ಮತ್ತು ನಿಖಲ್‌ ಮತ್ತು ಕುಟುಂಬದವರಿಂದ ಆಂಜನೇಯನಿಗೆ ವಡಾಹಾರ ಸೇವೆ ನಡೆಯಿತು.

ಇದೇ ಸಂದರ್ಭದಲ್ಲಿ ಲಕ್ಷ್ಮಿ ದೇವಿಗೆ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ದೇವಾಲಯದ ಭಕ್ತರಿಂದ ಭಜನಾ ಸೇವೆ ನಡೆಯಿತು.

ಭಕ್ತರು ಶ್ರದ್ಧಾ ಭಕ್ತಿಯೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.


PARYAYA: ವಿಭೂತಿ, ಶ್ರೀಗಂಧ, ಕುಂಕುಮ ಅಲಂಕಾರ:   ವಿಭೂತಿ, ಶ್ರೀಗಂಧ , ಕುಂಕುಮ ಅಲಂಕಾರ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ...

No comments:

Post a Comment