Saturday, May 30, 2020

ಇಂದಿನ ಇತಿಹಾಸ History Today ಮೇ 29

ಇಂದಿನ ಇತಿಹಾಸ  History Today ಮೇ 29 

2020:  ನವದೆಹಲಿ: ಇಂಡಿಯಾ ಪದದ ಬದಲಿಗೆ ಭಾರತ ಅಥವಾ ಹಿಂದೂಸ್ಥಾನ ಪದವನ್ನು ಬಳಸಲು ಸಂವಿಧಾನ ತಿದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂಬುದಾಗಿ ಕೋರಿದ ಅರ್ಜಿಯೊಂದನ್ನು ಸುಪ್ರೀಂಕೋರ್ಟ್  ಜೂನ್ ೨ರಂದು ಆಲಿಸಲಿದೆ.  ಇಂಡಿಯಾ ಬದಲಿಗೆ ಭಾರತ ಅಥವಾ ಹಿಂದೂಸ್ಥಾನ ಪದ ಬಳಕೆಯು ನಮ್ಮ ರಾಷ್ಟ್ರೀಯತೆ ಬಗ್ಗೆ ಹೆಮ್ಮೆಯನ್ನು ಸ್ಫುರಿಸುತ್ತದೆ ಎಂದು ಅರ್ಜಿ ಪ್ರತಿಪಾದಿಸಿದೆಹೆಸರು ಮತ್ತು ಒಕ್ಕೂಟದ ಪ್ರದೇಶದ ಜೊತೆ ವ್ಯವಹರಿಸುವ ಸಂವಿಧಾನದ ೧ನೇ ಪರಿಚ್ಛೇದಕ್ಕೆ ತಿದ್ದುಪಡಿ ತರಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಮತ್ತು ತನ್ಮೂಲಕ, ಇಂಡಿಯಾ ಪದ ಉಲ್ಲೇಖವಾಗುವ ಎಲ್ಲ ಕಡೆ ಅದರ ಬದಲಿಗೆ ಭಾರತ ಅಥವಾ ಹಿಂದೂಸ್ಥಾನ ಪದ ಬಳಕೆಯಾಗಬೇಕು ಎಂದು ಅರ್ಜಿ ಹೇಳಿದೆ. ಅರ್ಜಿಯು ನಗರದಲ್ಲಿ 2020 ಮೇ  29ರ ಶುಕ್ರವಾರ ವಿಚಾರಣೆಗಾಗಿ ಪಟ್ಟಿಯಾಗಿತ್ತು. ಆದರೆ ಭಾರತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್ ಬೋಬ್ಡೆ ಅವರು ಲಭ್ಯರಿಲ್ಲದ ಕಾರಣ ಅದನ್ನು ಪಟ್ಟಿಯಿಂದ ಕಿತ್ತು ಹಾಕಲಾಯಿತು. ಸುಪ್ರೀಂಕೋರ್ಟಿನ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿರುವ ನೋಟಿಸ್ ಪ್ರಕಾರ ಇದೀಗ ವಿಷಯವನ್ನು ಜೂನ್ ೨ರಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರು ಇರುವ ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗುವುದು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

 2020: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನಗರದಲ್ಲಿ 2020 ಮೇ  29ರ ಶುಕ್ರವಾರ ಭೇಟಿಯಾಗಿ ದಿಗ್ಬಂಧನದಿಂದ (ಲಾಕ್ಡೌನ್) ಹೊರಬರುವ ಮಾರ್ಗದ ಕುರಿತು ಸಮಾಲೋಚನೆ ನಡೆಸಿದರು. ಕಳೆದ ೨೪ ಗಂಟೆಗಳಲ್ಲಿ ಈವರೆಗಿನ ಎಲ್ಲ ದಾಖಲೆಗಳನ್ನು ಮೀರಿ ,೪೬೭ ಹೊಸ ಪ್ರಕರಣಗಳು ದಾಖಲಾಗಿದ್ದು ಇದರೊಂದಿಗೆ ದೇಶದಲ್ಲಿನ ಕೊರೋನಾ ಪ್ರಕರಣಗಳ ಂಖ್ಯೆ ,೬೫,೭೯೯ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಇದು ತೀವ್ರ ಆತಂಕವನ್ನು ಸೃಷ್ಟಿಸಿದೆ.  ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮುಂದಿನ ಹಂತದ ಲಾಕ್ ಡೌನ್ ವಿಸ್ತರಿಸುವ ಮತ್ತು ಭವಿಷ್ಯದ ಕಾರ್ಯತಂತ್ರವನ್ನು ರೂಪಿಸುವ ಬಗ್ಗೆ ಗೃಹ ಸಚಿವರು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ ಒಂದು ದಿನದ ಬಳಿಕ ಸಭೆ ನಡೆಯಿತು. ಆರ್ಥಿಕ ಚಟುವಟಿಕೆಗಳಿಗೆ ಸಾಕಷ್ಟು ಸಡಿಲಿಕೆಯೊಂದಿಗೆ ದಿಗ್ಬಂಧನವನ್ನು ವಿಸ್ತರಿಸಬೇಕು ಎಂದು ಮುಖ್ಯಮಂತ್ರಿಗಳು ಸಭೆಯಲ್ಲಿ ಗೃಹ ಸಚಿವರನ್ನು ಆಗ್ರಹಿಸಿದರು ಎಂದು ಅಧಿಕಾರಿಗಳು ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಬೀಜಿಂಗ್: ಚೀನಾ-ಭಾರತ ಗಡಿ ಬಿಕ್ಕಟ್ಟಿನ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸುವ ಅಮೆರಿಕದ ಪ್ರಸ್ತಾಪವನ್ನು ಚೀನಾ ನಗರದಲ್ಲಿ 2020 ಮೇ  29ರ ಶುಕ್ರವಾರ ತಿರಸ್ಕರಿಸಿತು. ಸಮಸ್ಯೆಗಳನ್ನು ಪರಿಹರಿಸಲು ಉಭಯ ದೇಶಗಳು ಸಂವಹನ ಕಾರ್ಯವಿಧಾನಗಳನ್ನು ಹೊಂದಿವೆ ಎಂದು ಚೀನಾ ಪುನರುಚ್ಚರಿಸಿತು. "ನಮಗೆ ಮೂರನೇ ವ್ಯಕ್ತಿಯ ಹಸ್ತಕ್ಷೇದ ಅಗತ್ಯವಿಲ್ಲ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವೀಟ್ ಪ್ರಸ್ತಾಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಹಿಮಾಲಯದ ನೆರೆಹೊರೆ ದೇಶಗಳಾದ ಭಾರತ ಮತ್ತು ಚೀನಾ ನಡುವಣ ನೈಜ ನಿಯಂತ್ರಣ ರೇಖೆಯಲ್ಲಿನ (ಎಲ್ ಎಸಿ) ಬಿಕ್ಕಟ್ಟಿ ಇತ್ಯರ್ಥಕ್ಕಾಗಿ ಮಧ್ಯಸ್ಥಿಕೆ ವಹಿಸಲು ತಾವು ಸಿದ್ದರಿರುವುದಾಗಿ ಟ್ರಂಪ್ ಟ್ವೀಟ್ ಮಾಡಿದ್ದರು. ಪೂರ್ವ ಲಡಾಖ್ ಮತ್ತು ಸಿಕ್ಕಿಂ ಗಡಿಯ ಬಳಿ ಭಾರತ ಮತ್ತು ಚೀನೀ ಸೈನಿಕರ ಮಧ್ಯೆ ನಡೆಯತ್ತಿರುವ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ  ಟ್ರಂಪ್ ಅವರ ಪ್ರಸ್ತಾಪ ಮತ್ತು ಚೀನಾದ ವಿದೇಶಾಂಗ ಸಚಿವಾಲಯದ ಇತ್ತೀಚಿನ ಹೇಳಿಕೆ ಬಂದಿದೆ. ಅಮೆರಿಕದ ಪ್ರಸ್ತಾವ ಬಗ್ಗೆ ಭಾರತವು ನಯವಾದ ನಿರಾಕರಣೆಯನ್ನು ಗುರುವಾರ ವ್ಯಕ್ತ ಪಡಿಸಿದ ಬಳಿಕ ಚೀನಾದಿಂದ ಟ್ರಂಪ್ ಪ್ರಸ್ತಾಪಕ್ಕೆ ನಿರಾಕರಣೆ ಬಂದಿದೆ."ನಾನು ನಿಮಗೆ ಹೇಳಿದಂತೆ, ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ನಾವು ಚೀನಾದ ಜೊತೆಗೆ ತೊಡಗಿಸಿಕೊಂಡಿದ್ದೇವೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಅನುರಾಗ್ ಶ್ರೀವಾಸ್ತವ ಅವರು ನವದೆಹಲಿಯಲ್ಲಿ ಗುರುವಾರ ಟ್ರಂಪ್ ಅವರ ಟ್ವೀಟ್ ಬಗ್ಗೆ ಕೇಳಿದಾಗ ಉತ್ತರಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಮೊತ್ತ ಮೊದಲ ಬಾರಿಗೆ ಒಂದೇ ದಿನದಲ್ಲಿ ,೪೬೬ ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಭಾರತದಲ್ಲಿ ಕೊರೋನಾ ಸಾಂಕ್ರಾಮಿಕ ಸೋಂಕಿನ ಪ್ರಕರಣಗಳು ನಗರದಲ್ಲಿ 2020 ಮೇ  29ರ ಶುಕ್ರವಾರ ,೬೫,೭೯೯ಕ್ಕೆ ಏರಿದವು. ಮಹಾರಾಷ್ಟ್ರದಲ್ಲಿ ಹೊಸ ಪ್ರPರಣಗಳ ಸ್ಫೋಟವಾಗಿದ್ದರೆ, ದೆಹಲಿಯಲ್ಲಿ ಕಳೆದ ೨೪ ಗಂಟೆಗಳಲ್ಲಿ ಅತಿ ಹೆಚ್ಚು ಸಂಖ್ಯೆಯ ಪ್ರಕರಣಗಳು ದಾಖಲಾದವು. ಕೋವಿಡ್-೧೯ ಸಾಂಕ್ರಾಮಿಕಕ್ಕೆ ಬಲಿಯಾದವರ ಸಂಖ್ಯೆಯೂ ಭಾರತದಲ್ಲಿ ಹೆಚ್ಚಿದೆ. ಗುರುವಾರ ಒಂದೇ ದಿನ ೧೭೫ ಸಾವುಗಳು ವರದಿಯಾಗಿದ್ದು ಒಂದೇ ದಿನದಲ್ಲಿ ಗರಿಷ್ಠ ಸಾವುಗಳು ಸಂಭವಿಸಿದ ಮೂರನೇ ದಿನ ಇದಾಗಿದೆ. ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಶುಕ್ರವಾರ ,೭೦೬ಕ್ಕೆ ಏರಿದೆ. ಶುಕ್ರವಾರ ಒಂದೇ ದಿನದಲ್ಲಿ ೭೦೦೦ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಭಾರತವು ಟರ್ಕಿಯನ್ನು ಹಿಂದೆ ಹಾಕಿ ವಿಶ್ವದಲ್ಲಿ ಅತಿಬಾಧಿತವಾದ ನೇ ರಾಷ್ಟ್ರದ ಸ್ಥಾನಕ್ಕೆ ಏರಿತು. ಭಾರತದಲ್ಲಿ ಕೊರೋನಾ ಸೋಂಕಿತರಲ್ಲಿ ೮೯,೯೮೭ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು, ಚೇತರಿಕೆಯ ಪ್ರಮಾಣ ಶೇಕಡಾ ೪೨ಕ್ಕೆ ಏರಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಸಂಸತ್ತಿನ ಮೇಲ್ಮನೆ ಅಥವಾ ರಾಜ್ಯಸಭೆಯ ಸಚಿವಾಲಯದ ಅಧಿಕಾರಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿದ್ದು, ಅವರ ಪತ್ನಿ ಹಾಗೂ ಮಕ್ಕಳಿಗೂ ರೋಗ ಹರಡಿದೆ ಎಂದು ಅಧಿಕಾರಿಗಳು ನಗರದಲ್ಲಿ 2020 ಮೇ  29ರ ಶುಕ್ರವಾರ ತಿಳಿಸಿದರು. ಕೊರೋನಾ ಸೋಂಕಿತ ಅಧಿಕಾರಿ ಕೆಲಸ ಮಾಡುತ್ತಿದ್ದ ಕಚೇರಿಗೆ ಬೀಗಮುದ್ರೆ ಮಾಡಲಾಗಿದ್ದು ಶುಚೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಯ ಜೊತೆ ಸಂಪರ್ಕಕ್ಕೆ ಬಂದಿದ್ದವರಿಗೂ ಆರೋಗ್ಯದ ಮೇಲೆ ನಿಗಾ ಇಡುವಂತೆ ಸೂಚಿಸಲಾಯಿತು. ಸಂಸತ್ತಿನ ಸಂಪಾದಕೀಯ ಮತ್ತು ಭಾಷಾಂತರ ಸೇವಾ ವಿಭಾಗದ ಹಿರಿಯ ಅಧಿಕಾರಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿದ ಒಂದು ವಾರದ ಬಳಿಕ ಘಟನೆ ಘಟಿಸಿತು. ಸದನ ಸಮಿತಿ ಸಭೆಗಳು ನಡೆಯುವ ಕೊಠಡಿಗಳು ಮತ್ತು ಬಹುತೇಕ ಸಂಸದೀಯ ಅಧಿಕಾರಿಗಳು ಇರುವ ಪಾರ್ಲಿಮೆಂಟ್ ಅನೆಕ್ಸ್ ಕಟ್ಟಡದ ೫ನೇ ಮಹಡಿಯಲ್ಲಿ ಇರುವ ತನ್ನ ಕಚೇರಿಗೆ ಅಧಿಕಾರಿ ಮೇ ೧೨ರವೆಗೆ ಹಾಜರಾಗಿದ್ದರು. ಸಂಸದೀಯ ಸಿಬ್ಬಂದಿಗೆ ಬಂದ ಎರಡನೇ ಕೋವಿಡ್-೧೯ ಪ್ರಕರಣ ಇದಾಗಿದೆ. ಏಪ್ರಿಲ್ ತಿಂಗಳಲ್ಲಿ ಹಿರಿಯ ಹೌಸ್ ಕೀಪರ್ ಒಬ್ಬರಿಗೆ ಸೋಂಕು ತಗುಲಿತ್ತು. ಲೋಕಸಭಾ ಸಚಿವಾಲಯದ ೩೦೦೦ಕ್ಕೂ ಹೆಚ್ಚು ಸಿಬ್ಬಂದಿಯ ಪೈಕಿ ಸೋಂಕು ತಗುಲಿದ ಮೊದಲ ಪ್ರಕರಣ ಇದಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಮೇ 29  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

 


Thursday, May 28, 2020

ಇಂದಿನ ಇತಿಹಾಸ History Today ಮೇ 28

ಇಂದಿನ ಇತಿಹಾಸ  History Today ಮೇ 28 

2020: ನವದೆಹಲಿ: ಕೊರೋನಾವೈರಸ್ ದಿಗ್ಬಂಧನದಿಂದಾಗಿ (ಲಾಕ್ ಡೌನ್) ದೇಶಾದ್ಯಂತ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರಿಂದ ರೈಲು ಅಥವಾ ಬಸ್ಸು ಟಿಕೆಟ್ ದರ ವಸೂಲಿ ಮಾಡಬಾರದು ಮತ್ತು ಅವರಿಗೆ ಆಹಾರ ಮತ್ತು ನೀರನ್ನು ಒದಗಿಸಬೇಕು ಎಂದು ಸುಪ್ರೀಂಕೋರ್ಟ್ 2020 ಮೇ 28ರ ಗುರುವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತು.ಸ್ವ ಇಚ್ಛೆಯಿಂದ ದಾಖಲಿಸಿದ ಪ್ರಕರಣದಲ್ಲಿ, ಮಧ್ಯಂತರ ನಿರ್ದೇಶನ ನೀಡಿದ ನ್ಯಾಯಮೂರ್ತಿ ಅಶೋಕ ಭೂಷಣ್ ನೇತೃತ್ವದ ಪೀಠವು, ಸಿಕ್ಕಿಹಾಕಿಕೊಂಡಿರುವ ಎಲ್ಲ ವಲಸೆ ಕಾರ್ಮಿಕರಿಗೆ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಕಟಿತ ಮತ್ತು ಘೋಷಿತ ಸ್ಥಳಗಳಲ್ಲಿ ಅವರಿಗೆ ರೈಲು ಅಥವಾ ಬಸ್ಸು ಏರಲು ಸಾಧ್ಯವಾಗುವವರೆಗೂ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಬೇಕು ಎಂದು ಹೇಳಿತು. ಪಯಣ ಆರಂಭವಾಗುವ ರಾಜ್ಯವು ನಿಲ್ದಾಣಗಳಲ್ಲಿಯೇ ಊಟ ಮತ್ತು ನೀರನ್ನು ಒದಗಿಸಬೇಕು, ಭಾರತೀಯ ರೈಲ್ವೇಯು ಪಯಣದ ವೇಳೆಯಲ್ಲಿ ಅವರಿಗೆ ಆಹಾರ ನೀರನ್ನು ಒದಗಿಸಬೇಕು. ಬಸ್ಸು ಪಯಣದಲ್ಲೂ ಅವರಿಗೆ ಊಟ, ನೀರಿನ ವ್ಯವಸ್ಥೆ ಮಾಡಬೇಕು ಎಂದು ಪೀಠ ಸೂಚಿಸಿತು. ವಲಸೆ ಕಾರ್ಮಿಕರಿಗೆ ಆದಷ್ಟೂ ಬೇಗನೆ ರೈಲು ಅಥವಾ ಬಸ್ಸು ಪಯಣ ಮಾಡಲು ಸಾಧ್ಯವಾಗುವಂತೆ ಸೂಕ್ತ ವ್ಯವಸ್ಥೆಗಳನ್ನು ರಾಜ್ಯಗಳು ಮಾಡಬೇಕು. ನಿಟ್ಟಿನ ಸಂಪೂರ್ಣ ಮಾಹಿತಿಯನ್ನು ಸಂಬಂಧಪಟ್ಟ ಪ್ರತಿಯೊಬ್ಬರಿಗೂ ಒದಗಿಸಬೇಕು ಎಂದು ನ್ಯಾಯಮೂರ್ತಿಗಳಾದ ಎಸ್‌ಕೆ ಕೌಲ್ ಮತ್ತು ಎಂಆರ್ ಶಾ ಅವರನ್ನೂ ಒಳಗೊಂಡ ಪೀಠ ನಿರ್ದೇಶನ ನೀಡಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ಕೋಚಿ (ಕೇರಳ): ಬಂಗಾಳ ಕೊಲ್ಲಿಯಲ್ಲಿ ಎದ್ದಿದ್ದ  ಅಂಫಾನ್ ಚಂಡಮಾರುತದಿಂದ ಮುಂಗಾರು ಮಾರುತದ ಚಲನೆಗೆ ಉಂಟಾಗಿದ್ದ ಅಡಚಣೆ ನಿವಾರಣೆಯಾಗಿದ್ದು, ಇದೀಗ ನೈಋತ್ಯ ಮುಂಗಾರು ಮಾರುತವು ಅರಬ್ಬಿ ಸಮುದ್ರದಲ್ಲಿ ಕೇರಳ ತೀರದತ್ತ ಪಯಣ ಮುಂದುವರೆಸಿವೆ ಎಂದು ವರದಿಗಳು 2020 ಮೇ 28ರ  ಗುರುವಾರ ತಿಳಿಸಿದವು. ಜೂನ್ ೧ರ ವೇಳೆಗೆ ಮುಂಗಾರು ಮಾರುತ ಕೇರಳ ತೀರ ಪ್ರವೇಶಿಸಲಿವೆ. ಮೇ ೩೧ರಿಂದ ಜೂನ್ ೪ರವರೆಗೆ ನೈಋತ್ಯ ಭಾಗದಲ್ಲಿ ಕಡಿಮೆ ಒತ್ತಡ ಉಂಟಾಗಲಿದೆ. ಹೀಗಾಗಿ ಮುಂಗಾರು ಮಳೆ ತರುವ ನೈಋತ್ತ ಮುಂಗಾರು ಮಾರುತದ ಚಲನೆ ತಡೆರಹಿತವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತು. ನೈಋತ್ಯ ಮುಂಗಾರು ಮಾರುತವು ಗುರುವಾರ ಮಾಲ್ಡೀವ್ಸ್, ಕೊಮೊರಿನ್ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಮೀಪಕ್ಕೆ ಪ್ರವೇಶ ಮಾಡಿವೆ. ಮುಂದಿನ ೪೮ ಗಂಟೆಗಳಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣ ಇದ್ದು, ಮುಂಗಾರು ಮಾರುತವು ಆಗ್ನೇಯ ದಿಕ್ಕಿನತ್ತ ಚಲಿಸಲಿದೆ. ಮುಂದಿನ ಮೂರು ದಿನಗಳಲ್ಲಿ ದಕ್ಷಿಣ ಒಮಾನ್ ಮತ್ತು ಪೂರ್ವ ಯೆಮನ್ ತೀರ ತಲುಪಲಿವೆ ಎಂದು ಹವಾಮಾನ ವರದಿ ಹೇಳಿದೆ. ಮೀನುಗಾರರಿಗೆ ಎಚ್ಚರಿಕೆ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ಇಳಿಯುವ ಮೀನುಗಾರರು ಮೇ ೨೯ರಿಂದ ಜೂನ್ ೪ರ ವರೆಗೆ ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020:  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅವಿಗುಂಡ್ ರಾಜ್‌ಪೊರಾ ಪ್ರದೇಶದಲ್ಲಿ ಕಾರಿನಿಂದ ಪ್ರಬಲ ಐಇಡಿ ಸ್ಫೋಟಕವನ್ನು ಪತ್ತೆ ಹಚ್ಚಿ ಸ್ಫೋಟಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸೇನೆಯ ಬಾಂಬ್ ವಿಲೇವಾರಿ ದಳ ಸಂಭವಿಸಬಹುದಾಗಿದ್ದ ಪುಲ್ವಾಮಾ ಮಾದರಿಯ ಭಾರೀ ಭಯೋತ್ಪಾದಕ ದಾಳಿಯನ್ನು 2020 ಮೇ 28ರ ಗುರುವಾರ  ತಪ್ಪಿಸಿದವು. ಪುಲ್ವಾಮಾ ಪ್ರದೇಶದಲ್ಲಿ ಸ್ಫೋಟಕ ತುಂಬಿದ ಸ್ಯಾಂಟ್ರೊ ಕಾರಿನೊಂದಿಗೆ ಭಯೋತ್ಪಾದಕನು ಸಂಚರಿಸುತ್ತಿದ್ದಾನೆ ಎಂಬ ಮಾಹಿತಿಯನ್ನು ಅನುಸರಿಸಿ ಶೋಧ ಆರಂಭಿಸಿದ ಪೊಲೀಸರು ವಾಹನವನ್ನು ತಡೆದರು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡ ಮತ್ತು ಸಿಆರ್ ಪಿಎಫ್ ಕೂಡಾ ಪೊಲೀಸರ ನೆರವಿಗೆ ಬಂದವು. ಪೊಲೀಸರು ಮತ್ತು ಎನ್‌ಐಎ ಸಿಬ್ಬಂದಿ ಮುತ್ತಿಗೆ ಹಾಕಿ ಕೆಲವು ಸುತ್ತುಗಳ ಗುಂಡು ಹಾರಿಸಿದವು. ಬಳಿಕ ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ಸಂಘಟನೆಯ ಉಗ್ರ ಎಂಬುದಾಗಿ ಶಂಕಿಸಲಾಗಿರುವ ಉಗ್ರ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ವರದಿಗಳು ತಿಳಿಸಿದವು. "ಜೈಶ್--ಮೊಹಮ್ಮದ್ ಉಗ್ರಗಾಮಿ ಸಂಘಟನೆ ಭಯೋತ್ಪಾದಕ ಕಾರ್ಯಾಚರಣೆ ನಡೆಸಲಿದೆ ಎಂಬ ಮಾಹಿತಿ ನಮಗೆ ಬಂದಿತ್ತು. ಆದ್ದರಿಂದ ಐಇಡಿ ಇದ್ದ ಹಿಜ್ಬುಲ್ ಮುಜಾಹಿದೀನ್ ಉಗ್ರ ಎಂಬುದಾಗಿ ಶಂಕಿಸಲಾಗಿರುವ ಕಾರಿನ ಚಾಲಕ ಅದಿಲ್ ಜೈಶ್-- ಮೊಹಮ್ಮದ್ ಜೊತೆ ಸಂಪರ್ಕದಲ್ಲಿದ್ದಾನೆಎಂಬ ಅನುಮಾನ ನಮಗಿದೆ ಎಂದು ಕಾಶ್ಮೀರ ಐಜಿ ವಿಜಯಕುಮಾರ್ ಹೇಳಿದರು. ಭದ್ರತಾ ಪಡೆಗಳ ವಾಹನಗಳನ್ನು ಗುರಿಯಾಗಿಸುವ ಉದ್ದೇಶವನ್ನು ಅವರು ಹೊಂದಿದ್ದರು ಎಂದು ವಿಜಯ ಕುಮಾರ್ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೋವಿಡ್ -೧೯ ಹಿನ್ನೆಲೆಯಲ್ಲಿ ವಿದೇಶದಲ್ಲಿ ಸಿಲುಕಿರುವ ಒಂದು ಲಕ್ಷ ಭಾರತೀಯರನ್ನು ವಂದೇ ಭಾರತ್ ಮಿಷನ್‌ನ ಎರಡನೇ ಹಂತ ಮುಕ್ತಾಯದ ವೇಳೆಗೆ ಮರಳಿ ಭಾರತಕ್ಕೆ ಕರೆ ತರಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮೂಲಗಳು  2020 ಮೇ 28ರ ಗುರುವಾರ ತಿಳಿಸಿದವು.  ವಂದೇ ಭಾರತ ಮಿಷನ್ ಹಂತ ಜೂನ್ ೧೩ ರಂದು ಕೊನೆಗೊಳ್ಳಲಿದೆ. ಕೋವಿಡ್ -೧೯ ಸಾಂಕ್ರಾಮಿP ಹಿನ್ನೆಲೆಯಲ್ಲಿ ಮನೆಗೆ ಮರಳಲು ಸುಮಾರು ,೦೮,೨೦೦ ಭಾರತೀಯರು ವಿದೇಗಳಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ಮರಳಿ ಕರೆತರಲು ನೌಕಾಪಡೆಯು ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಇರಾನ್‌ಗೆ ನಾಲ್ಕು ವಿಮಾನಗಳನ್ನು ಕಳುಹಿಸಲಿದೆ. ಕನಿಷ್ಠ ೫೦೦೦ ಭಾರತೀಯರು ಇತ್ತೀಚೆಗೆ ನೆರೆಯ ನೇಪಾಳ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ಹಿಂತಿರುಗಿದ್ದಾರೆ. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

2020:  ನವದೆಹಲಿ: ದೇಶಾದ್ಯಂತ ಕೊರೋನಾ ಸಾಂಕ್ರಾಮಿಕ ಸೋಂಕಿನ ಪ್ರಕರಣಗಳು ,೫೮,೩೩೩ಕ್ಕೇ ಏರಿದ್ದು ಸಾವಿನ ಸಂಖ್ಯೆ ೪೫೩೧ಕ್ಕೆ ತಲುಪಿದೆ. ಇದೇ ವೇಳೆಗೆ ಕರ್ನಾಟಕವು ರಾಜ್ಯದಲ್ಲಿ ಸೋಂಕು ಹರಡುವಿಕೆಯನ್ನು ತಡೆಯಲು ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ ಮತ್ತು ರಾಜಸ್ಥಾ- ಐದು ರಾಜ್ಯಗಳಿಂದ ವಿಮಾನ, ರೈಲು ಮತ್ತು ಇತರ ವಾಹನಗಳ ಆಗಮನವನ್ನು  2020 ಮೇ 28ರ ಗುರುವಾರ ಅಮಾನತುಗೊಳಿಸಿತು. ಐದು ರಾಜ್ಯಗಳ ಪೈಕಿ ಮಹಾರಾಷ್ಟ್ರದಲ್ಲಿ ದೇಶದಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದ ಕೊರೋನಾ ಸೋಂಕು ಇದ್ದು, ಅಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ ೫೬,೦೦೦ ಇದೆ. ತಮಿಳುನಾಡಿನಲ್ಲಿ ೧೮,೦೦೦ ಸೋಂಕು ಪ್ರಕರಣಗಳು ಇದ್ದರೆ ಗುಜರಾತಿನಲ್ಲಿ ೧೫,೦೦೦ಕ್ಕಿಂತಲೂ ಹೆಚ್ಚಿನ ಸೋಂಕು ಪ್ರಕರಣಗಳಿವೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ತಲಾ ೭೦೦೦ಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳಿವೆ. ಕರ್ನಾಟಕದಲ್ಲಿ ಗುರುವಾರ ಕೋವಿಡ್-೧೯ ಸೋಂಕಿನ ೧೧೫ ಹೊಸ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ರಾಜ್ಯದಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ ೨೫೩೩ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿತು. ಭಾರತದಲ್ಲಿ ದೇಶೀ ವಿಮಾನಯಾನ ಎರಡು ತಿಂUಳುಗಳ ಲಾಕ್ ಡೌನ್ ಅವಧಿಯ ಬಳಿಕ ಸೋಮವಾರ ಆರಂಭವಾಗಿದೆ. ಆದರೆ ಈಗ ಯಾವುದೇ ವಿಮಾನ ಐದು ರಾಜ್ಯಗಳಿಂದ ಬೆಂಗಳೂರಿಗೆ ಬರುವಂತಿಲ್ಲ. ರೈಲುಗಳ ಪೈಕಿ ಬಹುತೇಕ ಶ್ರಮಿಕ ವಿಶೇಷ ರೈಲುಗಳು ದೇಶದ ವಿವಿಧ ಭಾಗಗಳಲ್ಲಿ ಸಿಕ್ಕಿಹಾಕಿಕೊಂಡ ವಲಸೆ ಕಾರ್ಮಿಕರನ್ನು ಅವರವರ ಹುಟ್ಟೂರುಗಳಿಗೆ ಒಯ್ಯುತ್ತಿವೆ. ಕಪ್ಪು ಪಟ್ಟಿಗೆ ಸೇರಿಸಲಾಗಿರುವ ಐದು ರಾಜ್ಯಗಳ ಪೈಕಿ ಮಹಾರಾಷ್ಟ್ರ ಮತ್ತು ತಮಿಳುನಾಡಿನ ಜೊತೆಗೆ ಕರ್ನಾಟಕ ಗಡಿಗಳನ್ನು ಹಂಚಿಕೊಂಡಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

 ಇಂದಿನ ಇತಿಹಾಸ  History Today ಮೇ 28  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ