Monday, September 30, 2019

ಈ ಫೋನುಗಳಲ್ಲಿ ಮುಂದಿನ ಫೆಬ್ರುವರಿಯಿಂದ ವಾಟ್ಸಪ್ ಕೆಲಸ ಮಾಡದು!

ಫೋನುಗಳಲ್ಲಿ ಮುಂದಿನ ಫೆಬ್ರುವರಿಯಿಂದ ವಾಟ್ಸಪ್ ಕೆಲಸ ಮಾಡದು!
ನವದೆಹಲಿ: ಆಪರೇಟಿಂಗ್ ಸಿಸ್ಟಂನ ಹೊಸ ಆವೃತ್ತಿಗೆ ದೀರ್ಘಕಾಲದವರೆಗೆ ಅಪ್ಗ್ರೇಡ್ ಮಾಡದ ಐಫೋನ್ ಬಳಕೆದಾರರು, ಹಾಗೆ ಮಾಡಲು ಇನ್ನೂ ಒಂದು ಕಾರಣವಿದೆ. ನಿಮ್ಮ ಐಒಎಸ್ ಸಾಧನದಲ್ಲಿ ಪ್ರಸ್ತುತ ವಾಟ್ಸಪ್ ಸಕ್ರಿಯವಾಗಿದ್ದರೆ, ತ್ವರಿತ ಮೆಸೇಜಿಂಗ್ ಪ್ಲಾಟ್ಫಾರ್ಮ್ ಪ್ರಕಟಣೆಯ  ಪ್ರಕಾರ, ಫೆಬ್ರವರಿ , ೨೦೨೦ ರವರೆಗೆ ಮಾತ್ರ ನೀವು ಅದನ್ನು ಬಳಸಲು ಸಾಧ್ಯವಾಗುತ್ತದೆ.

ಆಂಡ್ರಾಯ್ಡ್ ಆವೃತ್ತಿ .. ಮತ್ತು ಅದಕ್ಕಿಂತ ಹೆಚ್ಚಿನ ಹಳೆಯ ಬಳಕೆದಾರರು ಇನ್ನು ಮುಂದೆ ಹೊಸ ಖಾತೆಗಳನ್ನು ತೆರೆಯಲು ಅಥವಾ ಅಸ್ತಿತ್ವದಲ್ಲಿರುವ ಖಾತೆಗಳನ್ನು ಮರುಪರಿಶೀಲಿಸಲು ಸಾಧ್ಯವಾಗುವುದಿಲ್ಲ ಎಂದು ವಾಟ್ಸಪ್  ಹೇಳಿದೆ. ಆದರೂ ಅವರು ಫೆಬ್ರವರಿ , ೨೦೨೦ ರವರೆಗೆ ವಾಟ್ಸಪ್  ಬಳಕೆಯನ್ನು ಮುಂದುವರಿಸಲು ಸಾಧ್ಯ ಎಂದು ಸಂಸ್ಥೆ ತಿಳಿಸಿದೆ.
"ಐಒಎಸ್ ನಲ್ಲಿ, ನೀವು ಇನ್ನು ಮುಂದೆ ಹೊಸ ಖಾತೆಗಳನ್ನು ತೆರೆಯಲು ಅಥವಾ ಅಸ್ತಿತ್ವದಲ್ಲಿರುವ ಖಾತೆಗಳನ್ನು ಪರಿಶೀಲಿಸಲು ಸಾಧ್ಯವಿಲ್ಲ" ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.

ಆದ್ದರಿಂದ ಐಫೋನ್ ಬಳಕೆದಾರರಿಗೆ  ವಾಟ್ಸಪ್ ಬಳಸಲು  ಐಒಎಸ್ ಅಥವಾ ನಂತರದ  ಅವೃತ್ತಿಯ ಅಗತ್ಯವಿದೆ. ಹೀಗಾಗಿ ನಿಮ್ಮ ಫೋನ್ಗೆ ಲಭ್ಯವಿರುವ ಐಒಎಸ್ ಇತ್ತೀಚಿನ ಆವೃತ್ತಿಯನ್ನು ಬಳಸಲು ನಾವು ಶಿಫಾರಸು ಮಾಡುತ್ತೇವೆ" ಎಂದು ವಾಟ್ಸಪ್  ಹೇಳಿದೆ.

 "ಜೈಲ್ ಬ್ರೋಕನ್ ಅಥವಾ ಅನ್ಲಾಕ್ ಮಾಡಲಾದ ಸಾಧನಗಳ ಬಳಕೆಯನ್ನು ನಾವು ಸ್ಪಷ್ಟವಾಗಿ ನಿರ್ಬಂಧಿಸುವುದಿಲ್ಲ. ಆದರೂ, ಮಾರ್ಪಾಡುಗಳು ನಿಮ್ಮ ಸಾಧನದ ಕ್ರಿಯಾತ್ಮಕತೆಯ ಮೇಲೆ ಪರಿಣಾಮ ಬೀರಬಹುದು, ಐಫೋನ್ ಆಪರೇಟಿಂಗ್ ಸಿಸ್ಟಂನ ಮಾರ್ಪಡಿಸಿದ ಆವೃತ್ತಿಗಳನ್ನು ಬಳಸುವ ಸಾಧನಗಳಿಗೆ ನಾವು ಬೆಂಬಲವನ್ನು ನೀಡಲು ಸಾಧ್ಯವಿಲ್ಲ" ಎಂದು ಸಂಸ್ಥೆ  ಹೇಳಿದೆ.


Sunday, September 29, 2019

ಇಂದಿನ ಇತಿಹಾಸ History Today ಸೆಪ್ಟೆಂಬರ್ 29

2019: ನವದೆಹಲಿ: ಗಗನಾಭಿವಮುಖವಾಗಿರುವ ಈರುಳ್ಳಿಯ ಬೆಲೆ ಏರಿಕೆಗೆ ಕಡಿವಾಣ ಹಾಕಿ, ಗೃಹಿಣಿಯರ ಕಣ್ಣಿರು ಅಳಿಸುವ ಸಲುವಾಗಿ ಕೇಂದ್ರ ಸರ್ಕಾರವು ತತ್ ಕ್ಷಣದಿಂದ ಜಾರಿಗೆ ಬರುವಂತೆ ಈರುಳ್ಳಿ ರಫ್ತನ್ನು ನಿಷೇಧಿಸಿ 2019 ಸೆಪ್ಟೆಂಬರ್  29ರ ಭಾನುವಾರ ಆಜ್ಞೆ ಹೊರಡಿಸಿತು. ಈರುಳ್ಳಿ ರಫ್ತು ನೀತಿಯನ್ನು ತಿದ್ದುಪಡಿ ಮಾಡಲಾಗಿದ್ದುಮುಂದಿನ ಆದೇಶದವರೆಗೆ ಈರುಳ್ಳಿ ರಫ್ತನ್ನು ನಿಷೇಧಿಸಲಾಗಿದೆಎಂದು ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಪ್ರಕಟಣೆ ತಿಳಿಸಿತು. ಎಲ್ಲ ವಿಧವಾದ ಈರುಳ್ಳಿಯ ರಫ್ತನ್ನೂ ತತ್ ಕ್ಷಣದಿಂದ ಜಾರಿಯಾಗುವಂತೆ ನಿಷೇಧಿಸಲಾಗಿದೆ ಎಂದು ಸರ್ಕಾರದ ಪ್ರಕಟಣೆ ಹೇಳಿತು. ಮೆಟ್ರೋ ನಗರಗಳಲ್ಲಿ ಈರುಳ್ಳಿಯ ಚಿಲ್ಲರೆ ಮಾರಾಟ ದರ ಕಿಲೋ ಗ್ರಾಮ್ಗೆ ೬೦ ರೂಪಾಯಿಗಳಷ್ಟು ಏರಿತ್ತು. ಕೆಲವಡೆಗಳಲ್ಲಿ ಇದು ಕಿಲೋಗ್ರಾಮಿಗೆ ೮೦ ರೂಪಾಯಿಗಳಿಗೂ ತಲುಪಿತ್ತು. ದೇಶೀ ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯತೆಯನ್ನು ಸುಧಾರಿಸುವ ಸಲುವಾಗಿ ಮಾರಾಟಗಾರರ ಮೇಲೆ ದಾಸ್ತಾನು ಮಿತಿಯನ್ನು ಕೂಡಾ ಕೇಂದ್ರ ಸರ್ಕಾರವು ವಿಧಿಸಿತು. ಚಿಲ್ಲರೆ ಮಾರಾಟಗಾರರು ಕೇವಲ ೧೦೦ ಕ್ವಿಂಟಲ್ಗಳಷ್ಟು ಮಾತ್ರ ದಾಸ್ತಾನು ಮಾಡಬಹುದಾಗಿದ್ದು, ಸಗಟ ಮಾರಾಟಗಾರರಿಗೆ ೫೦೦ ಕ್ವಿಂಟಲ್ಗಳವರೆಗೆ ದಾಸ್ತಾನು ಇಟ್ಟುಕೊಳ್ಳಲು ಸರ್ಕಾರ ಅನುಮತಿ ನೀಡಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿತು.ದಾಸ್ತಾನು ಮಿತಿ ವಿಧಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದ್ದರೂ, ಬಾರಿ ಕೇಂದ್ರವು ದೇಶಾದ್ಯಂತ ರಾಜ್ಯಗಳಲ್ಲೂ ನೇರವಾಗಿ ಮಿತಿಗಳನ್ನು ವಿಧಿಸಿತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)
2019: ನವದೆಹಲಿ: ಭಾರತೀಯ ಪ್ರಾಕ್ತನ  ಇಲಾಖಾ (ಎಎಸ್) ಸಮೀಕ್ಷೆಯ ವರದಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ ಬಳಿಕ, ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ಮುಸ್ಲಿಮ್ ಕಕ್ಷಿದಾರರರು ಈಗ ಬಾಬರಿ ಮಸೀದಿ ನಿರ್ಮಿಸಲಾಗಿದ್ದ ಸ್ಥಳದಲ್ಲಿ  ಅದಕ್ಕೂ ಹಿಂದೆ ಹಿಂದೂ ದೇಗುಲವಿದ್ಧ ಸಾಧ್ಯತೆಗಳ ಕುರಿತು ಪುಸ್ತಕಗಳಲ್ಲಿ ಕಾಲಾಕಾಲದ ವರದಿಗಳೆಲ್ಲವೂಗಾಳಿ ಮಾತುಗಳುಮತ್ತುಕಟ್ಟು ಕಥೆಗಳುಎಂಬುದಾಗಿ ಸುಪ್ರೀಂಕೋರ್ಟಿನಲ್ಲಿ ವಾದ ಮಂಡಿಸಿದರು. ಪ್ರಕರಣದಲ್ಲಿ ಮುಸ್ಲಿಮ್ ಕಕ್ಷಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ ಅವರು ವಿವಾದಿತ ಸ್ಥಳದಲ್ಲಿ ಹಿಂದೂ ಧಾರ್ಮಿಕ ರಚನೆಯಿತ್ತು ಎಂಬುದನ್ನು ನಂಬಲು ೨೦೦೩ರ ಭಾರತೀಯ ಪುರಾತತ್ವ ಸಮೀಕ್ಷೆಯನ್ನು ನೆಚ್ಚಿಕೊಳ್ಳುವುದು ಎಷ್ಟು ಅಪಾಯಕಾರಿಯೋ ಅಷ್ಟೇ ಅಪಾಯಕಾರಿ ೧೮ ಮತ್ತು ೧೯ನೇ ಶತಮಾನದ ಪುಸ್ತಕಗಳಲ್ಲಿ ಇರುವ ಇಂತಹ ವಿವರಗಳನ್ನು ನೆಚ್ಚಿಕೊಳ್ಳುವುದು ಎಂದು ಹೇಳಿದರು.  ‘ ಪುಸ್ತಕಗಳು ಮತ್ತು ಗಜೆಟಿಯರ್ಗಳಲ್ಲಿ ದಾಖಲಾಗಿರುವ ವಿಷಯಗಳು ಗ್ರಂಥಕರ್ತರ ವೈಯಕ್ತಿಕ ಅನುಭವಗಳಲ್ಲ, ಬದಲಿಗೆ ಗಾಳಿಮಾತುಗಳನ್ನು ಅಧರಿಸಿದ್ದುಎಂದು ಅರೋರಾ ಅವರು ಪ್ರಕರಣವನ್ನು ಆಲಿಸುತ್ತಿರುವ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಸಂವಿಧಾನ ಪೀಠದ ಮುಂದೆ ಸಲ್ಲಿಸಿರುವ ಟಿಪ್ಪಣಿ ಹೇಳಿತು. ಈ ಪುಸ್ತಕಗಳು ಅಥವಾ ಗಜೆಟಿಯರ್ಗಳ ಕರ್ತೃಗಳು ಯಾರೂ ವೈಯಕ್ತಿಕವಾಗಿ ನಿವೇಶನದಲ್ಲಿ ರಾಮಮಂದಿರ ಇದ್ದುದನ್ನು ನೋಡಿಲ್ಲ ಆಥವಾ ಅದನ್ನು ಮುಸ್ಲಿಮರು ಕೆಡವಿ ಹಾಕಿದ್ದನ್ನು ನೋಡಿಲ್ಲ. ಬದಲಿಗೆ, ಅವರ ಬರಹಗಳು, ಹೆಚ್ಚೆಂದರೆ ಸ್ಥಳೀಯ ಜನರಿಂದ ಕೇಳಿದ ಕಟ್ಟುಕಥೆಗಳು ಮತ್ತು ಗಾಳಿಮಾತುಗಳನ್ನು ಆಧರಿಸಿದ್ದು. ಇವು ಯಾವುವೂ ಭಾರತೀಯ ಪುರಾತತ್ವ ಸಮೀಕ್ಷೆಗೆ ಪೂರಕವಾದ ನೇರ ಸಾಕ್ಷ್ಯಾಧರಗಳಾಗುವುದಿಲ್ಲ ಎಂದು ಟಿಪ್ಪಣಿ ಪ್ರತಿಪಾದಿಸಿತು.  (ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)

2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರವು ಔಪಚಾರಿಕವಾಗಿ ಕೇಂದ್ರಾಡಳಿತ ಪ್ರದೇಶವಾಗುವುದಕ್ಕೆ ಒಂದು ವಾರ ಮುಂಚಿತವಾಗಿ ಅಕ್ಟೋಬರ್ ೨೪ರಂದು ಬ್ಲಾಕ್ ಅಭಿವೃದ್ಧಿ ಮಂಡಳಿ ಚುನಾವಣೆಯನ್ನು ನಡೆಸಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯ ಚುನಾವಣಾಧಿಕಾರಿ ಶೈಲೇಂದ್ರ ಕುಮಾರ್ ಅವರು 2019 ಸೆಪ್ಟೆಂಬರ್ 29ರ ಭಾನುವಾರ ಇಲ್ಲಿ ಪ್ರಕಟಿಸಿದರು. ಜಮ್ಮು ಮತ್ತು ಕಾಶ್ಮೀರದಾದ್ಯಂತ ಬ್ಲಾಕ್ ಅಭಿವೃದ್ಧಿ ಮಂಡಳಿ ಚುನಾವಣೆಗಳನ್ನು ಅಕ್ಟೋಬರ್ ೨೪ರಂದು ಬೆಳಗ್ಗೆ ಗಂಟೆಯಿಂದ ಮಧ್ಯಾಹ್ನ ಗಂಟೆಯವರೆಗೆ ನಡೆಸಲಾಗುವುದು. ಅದೇ ದಿನ ಮಧ್ಯಾಹ್ನ ಗಂಟೆಗೆ ಮತಗಳ ಎಣಿಕೆ ನಡೆಯಲಿದೆರಾಜ್ಯದ ೩೧೬ ಬ್ಲಾಕ್ ಗಳ ಪೈಕಿ ೩೧೦ರಲ್ಲಿ ಚುನಾವಣೆ ನಡೆಯಿದೆ ಎಂದು ಶೈಲೇಂದ್ರ ಕುಮಾರ್ ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಹಾಲಿ ಭದ್ರತಾ ಪರಿಸ್ಥಿತಿಗೆ ಇದು ಮೊದಲ ಪರೀಕ್ಷೆಯಾಗಲಿದೆಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ನಿರ್ಬಂಧಗಳೂ ಇಲ್ಲ. ಬಗ್ಗೆ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ ಎಂಬುದಾಗಿ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ ದಿನವೇ ಚುನಾವಣಾ ಅಧಿಕಾರಿಯಿಂದ ಚುನಾವಣಾ ಪ್ರಕಟಣೆ ಹೊರಬಿದ್ದಿತು.ನಿರ್ಬಂಧಗಳು ಎಲ್ಲಿವೆ? ಅವು ಇರುವುದು ನಿಮ್ಮ ಮನಸ್ಸಿನಲ್ಲಿ ಮಾತ್ರ. ಅಲ್ಲಿ ಯಾವುದೇ ನಿರ್ಬಂಧಗಳೂ ಇಲ್ಲ. ನಿರ್ಬಂಧಗಳ ಬಗ್ಗೆ ಅಪಪ್ರಚಾರವನ್ನು ಮಾತ್ರ ಮಾಡಲಾಗುತ್ತಿದೆಎಂದು ರಾಷ್ಟೀಯ ಭದ್ರತೆಗೆ ಸಂಬಂಧಿಸಿದ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಾ ಶಾ ಹೇಳಿದ್ದರು.

2019: ನವದೆಹಲಿ:  ಭಾರತದ ಪ್ರಮುಖ ರಂಗಗಳಾದ ಪೆಟ್ರೋಕೆಮಿಕಲ್ಸ್, ಮೂಲಸವಲತ್ತು, ಗಣಿಗಾರಿಕೆ ಮತ್ತಿತರ ಕ್ಷೇತ್ರಗಳಲ್ಲಿ ೧೦,೦೦೦ ಕೋಟಿ (೧೦೦ ಬಿಲಿಯನ್) ಡಾಲರ್ ಮೊತ್ತವನ್ನು ಹೂಡಿಕೆ ಮಾಡುವ ಬಗ್ಗೆ ವಿಶ್ವದ ಅತಿದೊಡ್ಡ ತೈಲ ರಫ್ತು ರಾಷ್ಟ್ರವಾದ ಸೌದಿ ಅರೇಬಿಯಾ ಪರಿಶೀಲಿಸುತ್ತಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿತು. ಸೌದಿ ರಾಯಭಾರಿ ಡಾ. ಸೌದ್ ಬಿನ್ ಮೊಹಮ್ಮದ್ ಅಲ್ ಸತಿ ಅವರು ಭಾರತವು ದೊಡ್ಡ ಮೊತ್ತದ ಹೂಡಿಕೆಗೆ ಆಕರ್ಷಕವಾಗಿದೆ, ತಮ್ಮ ರಾಷ್ಟ್ರವು ನವದೆಹಲಿ ಜೊತೆಗೆ ತೈಲ, ಅನಿಲ ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ ದೀರ್ಘಾವಧಿಯ ಪಾಲುದಾರಿಕೆಗಳನ್ನು ಮಾಡಿಕೊಳ್ಳುವ ಬಗ್ಗೆ ದೃಷ್ಟಿ ಹರಿಸಿದೆ ಎಂದು ಹೇಳಿದರು. ‘ಸೌದಿ ಅರೇಬಿಯಾವು ಭಾರತದ ಇಂಧನ, ಸಂಸ್ಕರಣೆ, ಪೆಟ್ರೋಕೆಮಿಕಲ್ಸ್, ಮೂಲ ಸವಲತ್ತು, ಕೃಷಿ, ಖನಿಜಗಳು ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ ೧೦೦ ಬಿಲಿಯನ್ ಡಾಲರ್ ಮೌಲ್ಯದ ಹೂಡಿಕೆಗಳನ್ನು ಮಾಡುವ ಬಗ್ಗೆ ಪರಿಶೀಲಿಸುತ್ತಿದೆಎಂದು ಅಲ್ ಸತಿ ಅವರು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ  ತಿಳಿಸಿದರು. ಸೌದಿ ಅರೇಬಿಯಾದ ಅತಿದೊಡ್ಡ ತೈಲ ದೈತ್ಯ ಅರ್ಮ್ಯಾಕೊ ಕಂಪೆನಿಯು ಮುಖೇಶ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಪ್ರಸ್ತಾಪದ ಬಗ್ಗೆ ಉಲ್ಲೇಖಿಸಿದ ರಾಯಭಾರಿ, ಒಪ್ಪಂದವು ಉಭಯ ರಾಷ್ಟ್ರಗಳ ನಡುವೆ ಇಂಧನ ಬಾಂಧವ್ಯವು ಬೆಳೆಯುತ್ತಿರುವ ಆಯಕಟ್ಟಿನ ಸ್ವರೂಪವನ್ನು ಪ್ರತಿಫಲಿಸಿದೆ ಎಂದು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
  

Saturday, September 28, 2019

ಇಂದಿನ ಇತಿಹಾಸ History Today ಸೆಪ್ಟೆಂಬರ್ 28

2019: ನ್ಯೂಯಾರ್ಕ್: ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕಾಶ್ಮೀರ ವಿಷಯವನ್ನು ಕೇಂದ್ರೀಕರಿಸಿ ಮಾಡಿದ  ದ್ವೇಷ ಭಾಷಣಕ್ಕೆ ಭಾರತವು 2019 ಸೆಪ್ಟೆಂಬರ್ 28 ಶನಿವಾರ ಖಡಕ್ ಉತ್ತರ ನೀಡಿತು. ವಿಶ್ವಸಂಸ್ಥೆ ಮಹಾ ಅಧಿವೇಶನದಲ್ಲಿ ಉತ್ತರಿಸುವ ಹಕ್ಕನ್ನು ಚಲಾಯಿಸಿ, ಖಡಕ್ ಎದಿರೇಟು ನೀಡಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಥಮ ಕಾರ್ಯದರ್ಶಿ ವಿದಿಶಾ ಮೈತ್ರ  ಅವರು, ಪಾಕಿಸ್ತಾನದ ಜಾತಕವನ್ನೇ ಜಾಲಾಡಿ, ’ತನ್ನ ನೆಲದಲ್ಲಿ ವಿಶ್ವಸಂಸ್ಥೆಯು ಪ್ರಕಟಿಸಿದ ಜಾಗತಿಕ ಉಗ್ರರ ಪಟ್ಟಿಯ ೩೦ ಮಂದಿ ಭಯೋತ್ಪಾದಕರು ತನ್ನ ನೆಲದಲ್ಲಿ ಇಲ್ಲ ಎಂಬುದಾಗಿ ನಿರಾಕರಿಸುವಂತೆಪಾಕಿಸ್ತಾನದ ಪ್ರಧಾನಿಗೆ ಸವಾಲು ಹಾಕಿದರು. ವಿಶ್ವಸಂಸ್ಥೆಯು ಹೆಸರಿಸಿರುವ ಅಲ್-ಖೈದಾ ಮತ್ತು ದಾಯೆಶ್ ದಿಗ್ಬಂಧನ ಪಟ್ಟಿಯಲ್ಲಿರುವ ವ್ಯಕ್ತಿಗಳಿಗೆ ಪಿಂಚಣಿ ನೀಡುತ್ತಿರುವ ವಿಶ್ವದ ಏಕೈಕ ರಾಷ್ಟ್ರ ಪಾಕಿಸ್ತಾನ ಎಂಬುದಾಗಿ ಮೈತ್ರ ಅವರು ಜರೆದರು. ‘೧೩೦ ಮಂದಿ ವಿಶ್ವಸಂಸ್ಥೆ ನಿಯೋಜಿತ ಭಯೋತ್ಪಾದಕರು ಮತ್ತು ವಿಶ್ವಸಂಸ್ಥೆಯು ಪಟ್ಟಿ ಮಾಡಿರುವ ೨೫ ಭಯೋತ್ಪಾದಕರಿಗೆ ತನ್ನ ರಾಷ್ಟ್ರವು ಆಶ್ರಯ ಕೊಟ್ಟಿಲ್ಲ ಎಂಬುದಾಗಿ ಪಾಕಿಸ್ತಾನದ ಪ್ರಧಾನಿಯವರು ದೃಢ ಪಡಿಸುವರೇ?’ ಎಂದು ವಿದಿಶಾ ಮೈತ್ರ ಪ್ರಶ್ನಿಸಿದರು. ‘ಪಾಕಿಸ್ತಾನದಲ್ಲಿ ಯಾವುದೇ ಉಗ್ರಗಾಮಿ ಸಂಘಟನೆಗಳು ಇಲ್ಲ ಎಂಬುದನ್ನು ಪರಿಶೀಲಿಸಲು ಪಾಕಿಸ್ತಾನಕ್ಕೆ ಆಗಮಿಸುವಂತೆ ಈಗ ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಸಂಸ್ಥೆ ವೀಕ್ಷಕರನ್ನು ಆಹ್ವಾನಿಸಿದ್ದಾರೆ. ವಚನವನ್ನು ಈಡೇರಿಸುವಂತೆ ವಿಶ್ವವು ಆಗ್ರಹಿಸಬೇಕುಎಂದು ಮೈತ್ರ  ಹೇಳಿದರು.‘ಪ್ರಧಾನಿ ಖಾನ್ ಅವರು ಅಣ್ವಸ್ತ್ರ ಸಮರದ ಬೆದರಿಕೆಯ ಮಾತುಗಳನ್ನು ಆಡುತ್ತಿರುವುದು ಮುತ್ಸದ್ಧಿತನವಲ್ಲ, ಅದು  ಉತ್ತರನ ಪೌರುಷಎಂದು ಮೈತ್ರ ಬಣ್ಣಿಸಿದರು.(ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)

2019: ಮುಂಬೈ: ಭಾರತದ ಜೊತೆಗೆ ಸಶಸ್ತ್ರ ಘರ್ಷಣೆಗೆ ಇಳಿಯುವುದರ ವಿರುದ್ಧ 2019 ಸೆಪ್ಟೆಂಬರ್ 28ರ ಶನಿವಾರ ಇಲ್ಲಿ ಪಾಕಿಸ್ತಾನಕ್ಕೆ ಗಂಭೀರ ಎಚ್ಚರಿಕೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರುಮಾರಕ ಹೊಡೆತ ನೀಡುವ ಸಾಮರ್ಥ್ಯ ನಮಗಿದೆಎಂದು ಹೇಳಿದರು.ಭಾರತದ ಎರಡನೆಯ ಸ್ಕಾರ್ಪೇನ್ ದರ್ಜೆಯ ದೇಶೀ ನಿರ್ಮಿತ ಶಬ್ಧರಹಿತ ಜಲಾಂತರ್ಗಾಮಿ ಐಎನ್ಎನ್ ಖಂಡೂರಿ ಕಾರ್ಯಾರಂಭ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಕ್ಷಣಾ ಸಚಿವರು, ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಮಾಡಿದ ಭಾಷಣದ ಹಿನ್ನೆಲೆಯಲ್ಲಿ ನೆರೆರಾಷ್ಟ್ರಕ್ಕೆ ಸಂದೇಶವನ್ನು ರವಾನಿಸಿದರು.ವಿಶ್ವಸಂಸ್ಥೆ ಮಹಾ ಅಧಿವೇಶನದಲ್ಲಿ ಶುಕ್ರವಾರ ಮಾತನಾಡಿದ್ದ ಇಮ್ರಾನ್ ಖಾನ್ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ ಅಣ್ವಸ್ತ್ರಸಜ್ಜಿತ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನ ಸಮರಕ್ಕೆ ಇಳಿದರೆ ಸಂಭವಿಸಬಹುದಾದ ಪರಿಣಾಮಗಳ ಬಗ್ಗೆ ವಿಶ್ವಸಂಸ್ಥೆಗೆ ಎಚ್ಚರಿಕೆ ನೀಡಿದ್ದರು.’ಐಎನ್ಎಸ್ ಖಂಡೂರಿ ಕಾರ್ಯಾರಂಭದೊಂದಿಗೆ ಭಾರತೀಯ ನೌಕಾಪಡೆಯು ಅತ್ಯಂತ ಪ್ರಬಲವಾಗಿದೆ ಎಂಬುದನ್ನು ಪಾಕಿಸ್ತಾನವು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಅವರು ನಮ್ಮ ಸಾಮರ್ಥ್ಯವನ್ನು ತಿಳಿದುಕೊಳ್ಳಬೇಕು ಮತ್ತು ಅಗತ್ಯ ಬಿದ್ದಲ್ಲಿ ನಾವು ಅದನ್ನು ಬಳಸಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕುಎಂದು ರಕ್ಷಣಾ ಸಚಿವರು ಮುಂಬೈಯಲ್ಲಿ ಶನಿವಾರ ಮುಂಜಾನೆ ಕಾರ್ಯಾರಂಭ ಮಾಡಿದ ಸ್ಕಾರ್ಪೇನ್ ದರ್ಜೆಯ ದಾಳಿ ಜಲಾಂತರ್ಗಾಮಿಯ ಕಾರ್ಯಾರಂಭವನ್ನು ಉಲ್ಲೇಖಿಸುತ್ತಾ ಘೋಷಿಸಿದರು.‘ಭಾರತಕ್ಕೆ ತನ್ನ ನೌಕಾಪಡೆಯ ಬಗ್ಗೆ ಹೆಮ್ಮೆ ಇದೆ. ೧೯೭೧ರ ಯುದ್ಧದಲ್ಲಿ ಭಾರತೀಯ ನೌಕಾಪಡೆಯು ವಹಿಸಿದ ಪಾತ್ರವನ್ನು ಮರೆಯಲು ಸಾಧ್ಯವಿಲ್ಲ. ಆಪರೇಷನ್ ಟ್ರೈಡೆಂಟ್ ಮತ್ತು ಆಪರೇಷನ್ ಪೈಥೋನ್ ಪಾಕಿಸ್ತಾನಿ ನೌಕಾಪಡೆಯ ಬೆನ್ನುಮೂಳೆಯನ್ನೇ ಮುರಿದಿದ್ದವುಎಂದು ಆಧುನಿಕ ಆಯಕಟ್ಟಿನ ಸಮರದಲ್ಲಿ ಜಲಾಂತರ್ಗಾಮಿಗಳ ಮಹತ್ವವನ್ನು ಉಲ್ಲೇಖಿಸುತ್ತಾ ಸಚಿವರು ನುಡಿದರು.(ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)

2019: ಜಮ್ಮು: ಜಮ್ಮು-ಕಾಶ್ಮೀರದ ರಾಮಬನ್ ಜಿಲ್ಲೆಯಲ್ಲಿನ ಶ್ರೀನಗರ ಹೆದ್ದಾರಿಯ ಬಟೋಟೆ ನಗರದ ಮನೆಯೊಂದರಲ್ಲಿ ಬಿಜೆಪಿ ಕಾರ್ಯಕರ್ತನಾಗಿದ್ದ ಮನೆ ಮಾಲೀಕನನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಐವರು ಭಯೋತ್ಪಾದಕರ ಗುಂಪಿನ ವಿರುದ್ಧ 2019 ಸೆಪ್ಟೆಂಬರ್  28ರ ಶನಿವಾರ ಸತತ ಹತ್ತು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಸೇನಾಪಡೆಯು ಮೂವರು ಭಯೋತ್ಪಾದಕರನ್ನು ಹತ್ಯೆಗೈದು ಒತ್ತೆಯಾಳನ್ನು ಸುರಕ್ಷಿತವಾಗಿ ಕರೆತಂದಿದೆ ಎಂದು ಅಧಿಕಾರಿಗಳು ತಿಳಿಸಿದರು.ರಾಮಬನ್ ಜಿಲ್ಲೆಯ ಬಟೋಟೆ ಪ್ರದೇಶದಲ್ಲಿನ ಮನೆಯೊಳಕ್ಕೆ ನುಗ್ಗಿದ್ದ ಮೂವರು ಭಯೋತ್ಪಾದಕರು, ಮನೆಯಲ್ಲಿದ್ದ ಮಾಲೀಕನನ್ನು ಒತ್ತೆಯಾಳುವನ್ನಾಗಿ ಇಟ್ಟುಕೊಂಡು, ಗುಂಡಿನ ದಾಳಿ ನಡೆಸಿದ್ದರು. ಸಂದರ್ಭದಲ್ಲಿ ಸೇನೆ ಪ್ರತಿದಾಳಿ ಮೂಲಕ ಕಾರ್ಯಾಚರಣೆ ನಡೆಸಿತ್ತು.ಸತತ ಹತ್ತು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆಗೈಯಲಾಯಿತು. ಸಂದರ್ಭದಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದು, ಇಬ್ಬರು ಯೋಧರು ಗಾಯಗೊಂಡಿರುವುದಾಗಿ ಜಮ್ಮು ಇನ್ಸ್ಪೆಕ್ಟರ್ ಜನರಲ್ ಮುಕೇಶ್ ಸಿಂಗ್ ತಿಳಿಸಿದರು.ಉಳಿದ ಇಬ್ಬರು ಭಯೋತ್ಪಾದಕರು ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.ಶನಿವಾರ ಬೆಳಗ್ಗೆ ಹೈವೇ ಟೌನ್ ನಲ್ಲಿ ಸೇನಾ ವಾಹನದ ಮೇಲೆ ಗ್ರೆನೇಡ್ ದಾಳಿ ನಡೆಸಿದ ಬಳಿಕ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ವೇಳೆ ಮೂವರು ಭಯೋತ್ಪಾದಕರು ಮನೆಯೊಳಕ್ಕೆ ನುಗ್ಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ ಸೇನೆಯ ಕಾರ್ಯಾಚರಣೆಯಲ್ಲಿ ಮೂವರು ಸಾವನ್ನಪ್ಪಿದರು. ಕಾರ್ಯಾಚರಣೆ ಪೂರ್ಣಗೊಂಡಿದ್ದು, ಒತ್ತೆಯಾಳನ್ನು ರಕ್ಷಿಸಲಾಗಿದೆ ಎಂದು  ಎಂದು ಸಿಂಗ್ ವಿವರಿಸಿದರು.ಎಲ್ಲ ಭಯೋತ್ಪಾದಕರ ಸದ್ದಡಗಿಸಲಾಗಿದೆ ಎಂದು ಅವರು ನುಡಿದರು. ಬಿಜೆಪಿ ಕಾರ್ಯಕರ್ತನನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಗುಂಪಿನಲ್ಲಿ ಮೂವರು ಭಯೋತ್ಪಾದಕರು ಮಾತ್ರ ಇದ್ದರು ಎಂದು ಅವರು ನುಡಿದರು.(ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)

2019: ಬೆಂಗಳೂರು:  ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಿರುವ ಹೊತ್ತಿನಲ್ಲಿ ಸುದ್ದಿ ಕೇಳಿದರೆ ಸಾಕು ಹೃದಯಾಘಾತವಾಗುವಂತಹ ಸುದ್ದಿಯೊಂದು ಬಂದಿದೆ.  ಹೌದು, ಈ ಸುದ್ದಿ ಕೇಳಿದರೆ,  ಎದೆಗುಂಡಿಗೆ ಗಟ್ಟಿ ಇದ್ದವರ ಹೃದಯಬಡಿತವೂ ತೀವ್ರವಾಗುವ ಸಾಧ್ಯತೆ ಇದೆ. ಜೀವನಶೈಲಿ ಬದಲಾದಂತೆ ಆರೋಗ್ಯದಲ್ಲೂ ಏರುಪೇರಾಗುತ್ತವೆ. ಹೃದಯಾಘಾತಕ್ಕೆ ಇಂಥದ್ದೇ ಕಾರಣ ಎಂದು ಹೇಳುವಂತಿಲ್ಲ. ರಕ್ತದ ಒತ್ತಡ (ಬಿಪಿ) ಜಾಸ್ತಿ ಆದರೆ,  ಸಿಹಿ-ಜಿಡ್ಡು ಜಾಸ್ತಿ ತಿಂದು ದೇಹದಲ್ಲಿ ಕೊಬ್ಬಿನ ಅಂಶ ಜಾಸ್ತಿ ಆದರೂ ಹೃದಯಾಘಾತವಾಗುತ್ತದೆ. ಧೂಮಪಾನ, ಮದ್ಯಪಾನದಿಂದಲೂ ಹೃದಯಾಘಾತ ಆಗುತ್ತದೆ ಎಂಬುದು ಬಹುತೇಕ ಮಂದಿಗೆ ಗೊತ್ತಿರುವ ವಿಚಾರ.  ಅದರೆ ಬೆಂಗಳೂರಿನ ಬೃಹತ್ ಸಮಸ್ಯೆಯಾಗಿರುವ ಕಸದಿಂದಲೂ ಹೃದಯಾಘಾತ ಆಗುತ್ತದೆ ಎಂಬ ವಿಚಾರ ನಿಮಗೆ ಗೊತ್ತಿದೆಯೇ? ಹೌದು, ಅಚ್ಚರಿ ಪಡಬಹುದಾದ  ಈ ವಿಚಾರವನ್ನು. ಬೆಂಗಳೂರಿನ ಖ್ಯಾತ  ಜಯದೇವ ಹೃದ್ರೋಗ ಸಂಸ್ಥೆ ನಡೆಸಿರುವ ನೂತನ ಸಂಶೋಧನೆ ವಿಷಯವನ್ನು ಬೆಳಕಿಗೆ ತಂದಿದೆ.. ತಂಬಾಕನ್ನು ಸೇದುವುದರಿಂದ, ಜಗಿಯುವುದರಿಂದ ಸಾಯುವುದಕ್ಕಿಂತ ಹೆಚ್ಚಿನ ಜನ ವಾಯುಮಾಲಿನ್ಯದಿಂದ ಸಾಯುತ್ತಿದ್ದಾರೆ. ಹೃದಯಕ್ಕೆ ವಾಯುಮಾಲಿನ್ಯ ಅದೆಷ್ಟು ದೊಡ್ಡ ಪೆಟ್ಟು ಕೊಡುತ್ತದೆ ಅಂದರೆ 5 ನಿಮಿಷ ಟ್ರಾಫಿಕ್ನಲ್ಲಿ ಇರುವುದೂ ಒಂದೇ, 5 ಸಿಗರೇಟ್ ಸೇದುವುದೂ ಒಂದೇ  ಎಂದು ವೈದ್ಯರು ಹೇಳುತ್ತಾರೆ. ಈ ಕಾರಣದಿಂದಲೇ ಹಾಗಾಗಿ 35 ವರ್ಷದೊಳಗಿನ ಅನೇಕ ಯುವಕ-ಯುವತಿಯರು ಇತ್ತೀಚೆಗೆ ಹೃದಯಾಘಾತದಿಂದ ಬಳಲುತ್ತಾ ಇದ್ದಾರೆ. ಅದರಲ್ಲೂ ಕಾರು, ಲಾರಿಗಳ ಚಾಲಕರೇ ಹೆಚ್ಚಾಗಿ ಹೃದಯಾಘಾತದಿಂದ ಬಳಲುತ್ತಾ ಇರುವುದು ಕೂಡಾ ಈ ಅಧ್ಯಯನದಿಂದ  ತಿಳಿದುಬಂದಿದೆ.(ವಿವರಗಳಿಗೆ ಇಲ್ಲಿಕ್ಲಿಕ್  ಮಾಡಿರಿ)