Wednesday, February 26, 2025

PARYAYA: ಮಹಾಶಿವರಾತ್ರಿ ಸಂಭ್ರಮ- ರುದ್ರಾಭಿಷೇಕ

 ಮಹಾಶಿವರಾತ್ರಿ ಸಂಭ್ರಮ- ರುದ್ರಾಭಿಷೇಕ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ೨೦೨೫ ಫೆಬ್ರುವರಿ ೨೬ರ ಬುಧವಾರ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿತ್ತು.

ಬೆಳಗ್ಗೆ ಭಕ್ತರೊಬ್ಬರ ಮನೆಯ ಮಗುವಿಗೆ ನಾಮಕರಣ ಕಾರ್ಯಕ್ರಮವು ಶಿವರಾತ್ರಿ ಸಂಭ್ರಮಕ್ಕೆ ಹೊಸ ಕಳೆ ನೀಡಿತ್ತು.

ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ, ಶ್ರೀ ಅಭಯ ಆಂಜನೇಯ ಸ್ವಾಮಿ, ಶ್ರೀ ಸುಬ್ರಹ್ಮಣ್ಯ ಮತ್ತು ನವಗ್ರಹಗಳಿಗೆ ಅಭಿಷೇಕ, ಅಲಂಕಾರ ಪೂಜೆಯೊಂದಿಗೆ ಮುಂಜಾನೆಯೇ ಸಡಗರ. ಇಡೀ ದಿನ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.

ವಿಶ್ವದ ಗಮನ ಸೆಳೆದಿರುವ ಕುಂಭಮೇಳ ಸ್ಥಳವಾದ ಪ್ರಯಾಗದ ತ್ರಿವೇಣಿ ಸಂಗಮದಿಂದ ತಂದ ಗಂಗಾಜಲದಲ್ಲಿ ಶಿವಲಿಂಗಕ್ಕೆ  ಅಭಿಷೇಕ ಮಾಡಿ ಭಕ್ತರು ಪುನೀತರಾದರು.


ಸಂಜೆ ಶಿವನಿಗೆ ರುದ್ರಾಭಿಷೇಕ ಮಹಾ ಪೂಜೆ ನೆರವೇರಿತು.   


ಮಹಾಶಿವರಾತ್ರಿ ಆಚರಣೆ ಸಂದರ್ಭದ ಕೆಲವು ಚಿತ್ರಗಳು ವಿಡಿಯೋಗಳು ಇಲ್ಲಿವೆ. ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿರಿ.


ಇವುಗಳನ್ನೂ ಓದಿರಿ:

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ

ವಿನಾಯಕ ಚತುರ್ಥಿ ಆಚರಣೆ

ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...

ಅಂಗಾರಕ ಸಂಕಷ್ಟಿ ಏಕೆ ಮಹತ್ವಪೂರ್ಣ?

10ನೇ ಸತ್ಯನಾರಾಯಣ ಪೂಜೆ

ವೈಕುಂಠ ಏಕಾದಶಿ ಮಹೋತ್ಸವ

೨೦೨೫ಕ್ಕೆ ಸ್ವಾಗತವಿಶೇಷ ಪೂಜೆ Welcome to 2025

ದೇಗುಲ ವಾರ್ಷಿಕೋತ್ಸವ: ಪಂಚಹೋಮ

PARYAYA: ಮಹಾಶಿವರಾತ್ರಿ ಸಂಭ್ರಮ- ರುದ್ರಾಭಿಷೇಕ:   ಮಹಾಶಿವರಾತ್ರಿ ಸಂಭ್ರಮ- ರುದ್ರಾಭಿಷೇಕ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್...

No comments:

Post a Comment