ಪ್ರಧಾನಿ ಮೋದಿ ನೇತೃತ್ವದ ವಿಶ್ವಸಂಸ್ಥೆ ಯೋಗ: ಗಿನ್ನೆಸ್ ವಿಶ್ವದಾಖಲೆ
ನ್ಯೂಯಾರ್ಕ್: ಯೋಗ ಕಾರ್ಯಕ್ರಮದಲ್ಲಿ ಅತ್ಯಂತ ಹೆಚ್ಚು ರಾಷ್ಟ್ರೀಯತೆಗಳ (ಜನರ) ಪಾಲ್ಗೊಳ್ಳುವಿಕೆಗಾಗಿ ನ್ಯೂಯಾರ್ಕಿನ ವಿಶ್ವಸಂಸ್ಥೆಯ ಲಾನಿನಲ್ಲಿ ೨೦೨೩ ಜೂನ್ ೨೧ರ ಬುಧವಾರ ಬೆಳಗ್ಗೆ (ಭಾರತದಲ್ಲಿ ಬುಧವಾರ ರಾತ್ರಿ) ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಯೋಗ ಕಾರ್ಯಕ್ರಮವು ಗಿನ್ನೆಸ್ ವಿಶ್ವದಾಖಲೆಯನ್ನು ಸ್ಥಾಪಿಸಿತು.
ನ್ಯೂಯಾರ್ಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಈ ಯೋಗ ಕಾರ್ಯಕ್ರಮ ನಡೆಯಿತು.
ಗಿನ್ನೆಸ್ ವಿಶ್ವ ದಾಖಲೆಯ ಅಧಿಕಾರಿ ಮೈಕೆಲ್ ಎಂಪ್ರಿಕ್ ಅವರು ಬುಧವಾರ ಬೆಳಗ್ಗೆ (ಸ್ಥಳೀಯ ಕಾಲಮಾನ) ವಿಶ್ವಸಂಸ್ಥೆಯ ಪ್ರಧಾನ ಕಛೇರಿಯ ಲಾನಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಸಿಸಾಬಾ ಕೊರೊಸಿ ಮತ್ತು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. .
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು, ಅಮೆರಿಕದ ಎಲ್ಲ ವರ್ಗಗಳ ಜನರು, ನ್ಯೂಯಾರ್ಕಿನ ಪ್ರಮುಖರು, ಹಾಲಿವುಡ್ ಸೆಲೆಬ್ರಿಟಿಗಳು ಮತ್ತು ಭಾರತೀಯ ಸಮುದಾಯದ ಸದಸ್ಯರು ಭಾಗವಹಿಸಿದ್ದರು.
"ನಿಮ್ಮೆಲ್ಲರನ್ನೂ ನೋಡಲು ನನಗೆ ಸಂತೋಷವಾಗಿದೆ ಮತ್ತು ನೀವೆಲ್ಲರೂ ಇಲ್ಲಿಗೆ ಬಂದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಇಂದು ಇಲ್ಲಿ ಪ್ರತಿಯೊಂದು ರಾಷ್ಟ್ರೀಯತೆಯನ್ನು ಪ್ರತಿನಿಧಿಸಲಾಗಿದೆ ಮತ್ತು ನಮ್ಮನ್ನು ಒಟ್ಟುಗೂಡಿಸಲು ಯೋಗ ಕಾರಣವಾಗಿದೆ. ಯೋಗ ಎಂದರೆ ಒಂದಾಗುವುದು. ಒಗ್ಗೂಡುವುದು ಯೋಗದ ಇನ್ನೊಂದು ರೂಪವಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
“ಎಲ್ಲ ಭಾರತೀಯ ಸಂಪ್ರದಾಯಗಳಂತೆ, ಯೋಗವು ಕ್ರಿಯಾತ್ಮಕವಾಗಿದೆ. ಇದು ರಾಯಧನ, ಹಕ್ಕುಸ್ವಾಮ್ಯ ಮತ್ತು ಪೇಟೆಂಟ್‌ಗಳಿಂದ ಮುಕ್ತವಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು. “ನೀವು ಯೋಗವನ್ನು ಮನೆಯಲ್ಲಿ, ಕೆಲಸದಲ್ಲಿ ಅಥವಾ ಪಯಣದಲ್ಲಿದ್ದಾಗಲೂ ಮಾಡಬಹುದು. ಇದನ್ನು ನೀವು ಶಿಕ್ಷಕರಿಂದ ಕಲಿಯಬಹುದು ಅಥವಾ ಸ್ವಯಂ-ಕಲಿಯಬಹುದು, ”ಎಂದು ಪ್ರಧಾನಿ ಮೋದಿ ಹೇಳಿದರು.
"ಯುದ್ಧಗಳು, ಲಿಂಗ ಹಿಂಸಾಚಾರ, ಆಹಾರದ ಅಭದ್ರತೆ ಮತ್ತು ನಮ್ಮ ಗ್ರಹದ ನಾಶದ ವಿರುದ್ಧ ಹೋರಾಡಲು ಯೋಗವನ್ನು ಬಳಸಿ" ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನ್ಯೂಯಾರ್ಕ್ ಮೇಯರ್ ಎರಿಕ್ ಆಡಮ್ಸ್ ಹೇಳಿದರು.
ಯೋಗವು ಮನಸ್ಸು ಮತ್ತು ದೇಹವನ್ನು ಒಂದುಗೂಡಿಸುವ ಒಂದು ಮಾರ್ಗವಾಗಿದೆ ಮತ್ತು ವ್ಯಕ್ತಿಯ ಬೌದ್ಧಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಸಿಸಾಬಾ ಕೊರೊಸಿ ಹೇಳಿದರು
No comments:
Post a Comment