Wednesday, August 17, 2016

ವಿಶ್ವದಾಖಲೆಗೆ ಸೇರಲಿದೆ ’ರಕ್ಷಾಬಂಧನ’

ವಿಶ್ವದಾಖಲೆಗೆ ಸೇರಲಿದೆ 'ರಕ್ಷಾಬಂಧನ

ಅಂತರ್‌ಮನ ಶ್ರೀ ೧೦೮ ಪ್ರಸನ್ನ ಸಾಗರಜೀ ಮಹಾರಾಜರ ನೇತೃತ್ವ
ಬೆಂಗಳೂರು: 2016ರ  ಆಗಸ್ಟ್ 18, ಗುರುವಾರ ಶ್ರಾವಣ ಹುಣ್ಣಿಮೆ. ಅಂದು ಸಹೋದರತೆಯನ್ನು ಸಾರುವ ರಕ್ಷಾಬಂಧನ ಪರಸ್ಪರ ಭ್ರಾತೃತ್ವವನ್ನು ಸಾರುವ ರಾಖಿ ಹಬ್ಬದ ಮೂಲಕ ವಿಶ್ವದಾಖಲೆ ನಿರ್ಮಿಸ ಹೊರಟಿದ್ದಾರೆ ಪರಮಪೂಜ್ಯ ದಿಗಂಬರ ಸಂತಶ್ರೇಷ್ಠ ಅಂತರ್‌ಮನ ಶ್ರೀ ೧೦೮ ಪ್ರಸನ್ನ ಸಾಗರಜೀ ಮಹಾರಾಜರು.


ಅಸೂಯೆ ಬದಲು ಸ್ನೇಹ, ಅಹಂ ಬದಲು ವಿನಮ್ರತೆ, ದ್ವೇಷಿಸುವ ಬದಲು ಪ್ರೀತಿಸುವ; ಮುರಿಯುವ ಬದಲು ಮನಸ್ಸುಗಳನ್ನು ಸೇರಿಸುವ, ಒಂದಾಗಿಸುವ ಅಭೂತಪೂರ್ವ ಕಾರ್ಯಕ್ರಮಕ್ಕೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನ ಸಾಕ್ಷಿಯಾಗಲಿದೆ. ಮುನಿಶ್ರೀ ೧೦೮ ಪಿಯೂಷ ಸಾಗರಜೀ ಮಹಾರಾಜ್ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.


ತ್ಯಾಗಿ ಸೇವಾ ಸಮಿತಿ ಟ್ರಸ್ಟ್ ಆಯೋಜಿಸಿರುವ ವಿಶ್ವದಾಖಲೆಯ ರಾಖಿ ಹಬ್ಬದ ಆಚರಣೆಗೆ ಕರ್ನಾಟಕ ಜೈನ ಅಸೋಷಿಯೇಷನ್, ಶ್ರೀ ಚಕ್ರೇಶ್ವರಿ ಮಹಿಳಾ ಸಮಾಜ, ಶ್ರೀಖಂಡೇವಾಲಾ ಜೈನ ಸಮಾಜ ಹಾಗೂ ಸಕಲ ಜೈನ ಸಮಾಜ, ತ್ಯಾಗಿ ಸೇವಾ ಸಮಿತಿಗೆ ಕೈಜೋಡಿಸಿದೆ.

ಅಭೂತಪೂರ್ವ ರಾಖಿ ಹಬ್ಬವನ್ನು ದಾಖಲಿಸಲೆಂದೇ ವಿಶ್ವದಾಖಲೆಯ ಅಧಿಕಾರಿಗಳ ತಂಡ ಬೆಂಗಳೂರಿಗೆ ಆಗಮಿಸಲಿದ್ದು, ತಂಡದ ಉಪಸ್ಥಿತಿಯಲ್ಲಿ ಎರಡು ವಿಶ್ವ ದಾಖಲೆಗಳು ಸೃಷ್ಟಿಯಾಗಲಿವೆ. ಮೊದಲ ಸುತ್ತಿನಲ್ಲಿ ೪೦೦ಕ್ಕೂ ಹೆಚ್ಚು ಯುವತಿಯರು ಏಕಕಾಲಕ್ಕೆ ತಮ್ಮ ಒಡಹುಟ್ಟಿದ ಅಣ್ಣಂದಿರಿಗೆ ರಾಖಿ ಕಟ್ಟಿ ದಾಖಲೆ ಬರೆಯಲಿದ್ದರೆ, ೨ನೇ ಸುತ್ತಿನಲ್ಲಿ ೪೦೦ಕ್ಕೂ ಹೆಚ್ಚು ಅಣ್ಣಂದಿರು ತಮ್ಮ ಒಡಹುಟ್ಟಿದ ಪ್ರೀತಿಯ ತಂಗಿಯರಿಗೆ ರಕ್ಷೆ ಕಟ್ಟಿ ಸಹೋದರತೆಯ ಸಂದೇಶ ಸಾರಲಿದ್ದಾರೆ. ಮೂರನೇ ಸುತ್ತಿನಲ್ಲಿ ೪೦೦ಕ್ಕೂ ಹೆಚ್ಚು ಸಹೋದರಿಯರು ತಮ್ಮ ಸಹೋದರಿಯರಿಗೆ ರಕ್ಷೆ ಕಟ್ಟಲಿದ್ದು, ಕೊನೆಯದಾಗಿ ಸಹೋದರರು, ತಮ್ಮ ಸ್ನೇಹಿತರು, ಆತ್ಮೀಯರಿಗೆ ರಾಖಿ ಕಟ್ಟಿ ದಾಖಲೆ ಬರೆಯಲಿದ್ದಾರೆ.


ಧರ್ಮ ಧ್ವಜಾರೋಹಣದೊಂದಿಗೆ ವಿಶ್ವದಾಖಲೆಯ ರಕ್ಷಾಬಂಧನಕ್ಕೂ ಮುನ್ನ ಅಂತರ್‌ಮನ ಶ್ರೀ ೧೦೮ ಪ್ರಸನ್ನ ಸಾಗರಜೀ ಮಹಾರಾಜ್, ಮುನಿಶ್ರೀ ೧೦೮ ಪಿಯೂಷ ಸಾಗರಜೀ ಮಹಾರಾಜ್, ಕ್ಷುಲ್ಲಕ ೧೦೫ ಶ್ರೀ ಪರ್ವಸಾಗರ್‌ಜೀ ಮಹಾರಾಜ್ ಅವರಿಂದ ಅಹಿಂಸಾ ಸಂಸ್ಕಾರ ಪಾದಯಾತ್ರೆ ನಡೆಯಲಿದೆ. ವಿವಿಪುರಂನ ಮಹಾವೀರ ಧರ್ಮಶಾಲಾದಿಂದ ಆರಂಭಗೊಳ್ಳುವ ಪವಿತ್ರ ಯಾತ್ರೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ. ನಂತರ ಮಧ್ಯಾಹ್ನ ಗಂಟೆಗೆ ಜೈನ ಮನಿಶ್ರೀಗಳಿಂದ ಧರ್ಮ ಧ್ವಜಾರೋಹಣ ನಡೆಯಲಿದ್ದು, ಮೂಲಕ ವಿಶ್ವದಾಖಲೆಯ ಅಂತರ್ಮನ ರಕ್ಷಾಬಂಧನ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ


ಇದೇವೇಳೆ, ಅಂತರ್‌ಮನ ಶ್ರೀ ೧೦೮ ಪ್ರಸನ್ನ ಸಾಗರಜೀ ಮಹಾರಾಜ್‌ಜೀ ಅವರಿಗೆ ಜೈನ ಬಂಧುಗಳು ಚಿನ್ನ ಮತ್ತ ಬೆಳ್ಳಿಯ ಎಳೆಗಳಿಂದ ಮಾಡಿದ ರಾಖಿಯನ್ನು ಕಟ್ಟಿ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ಶ್ರೀ ೧೦೮ ಪ್ರಸನ್ನ ಸಾಗರಜೀ ಮಹಾರಾಜ್‌ಜೀ ಅವರು ರಕ್ಷಾಬಂಧನದ ಮಹತ್ವದ ಬಗ್ಗೆ ಮಾತನಾಡಲಿದ್ದಾರೆ.


ಸಂಜೆ ಗಂಟೆಯವರೆಗೆ ನಡೆಯಲಿರುವ ಐತಿಹಾಸಿಕ ಕಾರ್ಯಕ್ರಮದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ನೀವೂ ಸಹ ನಿಮ್ಮ ಒಡಹುಟ್ಟಿದ ಸಹೋದರಿಗೆ/ ಸಹೋದರನಿಗೆ ರಾಖಿ ಕಟ್ಟುವ ಮೂಲಕ ವಿಶ್ವ ದಾಖಲೆಗೆ ಸೇರ್ಪಡೆಗೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.


ಬೃಹತ್ ವಿಶೇಷ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಎಲ್ಲರಿಗೂ ಭಾಗವಹಿಸಲು ಅವಕಾಶವಿದ್ದು, ಹೆಚ್ಚಿನ ಮಾಹಿತಿಗೆ ಸಂಘಟಕ ಗುಣಪಾಲ್ ಜೈನ್ ೯೮೪೫೧೩೦೩೭೪, ಸಮಂತ ಜೈನ್ ೯೦೩೬೦೨೩೫೬೮, ಕೆ. ಜಯರಾಜ ಆರಿಗಾ- ೯೯೪೫೨ ೫೭೫೭೫, ಆಶಾ ಪ್ರಭು-೮೦೯೫೫ ೮೮೪೬೬ ಸಂಪರ್ಕಿಸಲು ಕೋರಲಾಗಿದೆ.

No comments:

Post a Comment