Monday, April 3, 2017

ಬ್ಯಾಂಕುಗಳ ಯದ್ವಾತದ್ವ ಶುಲ್ಕ ವಿರುದ್ಧ ಜನಾಂದೋಲನ No Bank transaction day on 6th April 2017

ಬ್ಯಾಂಕುಗಳ ಯದ್ವಾತದ್ವ ಶುಲ್ಕ
ವಿರುದ್ಧ ಜನಾಂದೋಲನ
ಏಪ್ರಿಲ್‌ 6 ನೋ ಟ್ರಾನ್ಸಾಕ್ಷನ್ಡೇ
ಬೆಂಗಳೂರು:  ಬ್ಯಾಂಕುಗಳ ಯದ್ವಾತದ್ವ  ಶುಲ್ಕ ಏರಿಕೆಯನ್ನು ವಿರೋಧಿಸಿ ಏಪ್ರಿಲ್‌ 6ರಂದು ಬ್ಯಾಂಕ್ವಹಿವಾಟು ಬಹಿಷ್ಕರಿಸಲು  (ನೋ ಟ್ರಾನ್ಸಾಕ್ಷನ್ಡೇ) ಆನ್ಲೈನ್ಅಭಿಯಾನ ಆರಂಭವಾಗಿದೆ.

ಬ್ಯಾಂಕಿನ ಎಟಿಎಂನಲ್ಲಿ ಹಣವಿಲ್ಲದೇ ಗ್ರಾಹಕರ ಮೇಲೆ 23 ರೂ. ಶುಲ್ಕ ವಿಧಿಸಿದ ಅನುಭವ ಈಗಾಗಲೇ ಹಲವರಿಗೆ ಆಗಿರಬಹುದು. ಎಸ್ಬಿಐ ಈಗಾಗಲೆ ತನ್ನ ಪರಿಷ್ಕೃತ ಶುಲ್ಕವನ್ನು ಜಾರಿಗೆ ತಂದಿದೆ. ಇದನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಾಗಿದೆ.

 ‘ಏಪ್ರಿಲ್‌ 6ರಂದು ಬ್ಯಾಂಕ್ವಹಿವಾಟು ಬಹಿಷ್ಕರಿಸಿ ಬ್ಯಾಂಕ್ಗಳಿಗೆ ತಮ್ಮ ತಪ್ಪಿನ ಅರಿವಾಗುವಂತೆ ಮಾಡೋಣಎಂಬ ಸಂದೇಶಗಳು ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿವೆ.
ಬ್ಯಾಂಕ್ಗಳ ಹೆಚ್ಚುವರಿ ಶುಲ್ಕಗಳ ವಿರುದ್ಧ ಹಾಗೂ ಸದ್ಯದ ಬ್ಯಾಂಕಿಂಗ್ನೀತಿಯ ವಿರುದ್ಧ ಈ ಜನಾಂದೋಲನ  ಎಂದು ವಾಟ್ಸ್ ಆ್ಯಪ್ ಸಂದೇಶಗಳು ಹೇಳುತ್ತಿವೆ.
ಸಾಮಾಜಿಕ ಜಾಲತಾಣ ಹಾಗೂ ಚೇಂಚ್ಡಾಟ್ಒಆರ್ಜಿ ತಾಣದಲ್ಲಿ (www.change.org) ಅಭಿಯಾನ ಆರಂಭವಾಗಿದೆ. change.org ತಾಣದಲ್ಲಿ 56 ಸಾವಿರಕ್ಕೂ ಹೆಚ್ಚು ಮಂದಿ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.
ಬ್ಯಾಂಕ್ಗಳು ವರ್ಷದಿಂದ ವರ್ಷಕ್ಕೆ ತಮಗೆ ಇಷ್ಟ ಬಂದಂತೆ ಶುಲ್ಕಗಳನ್ನು ಏರಿಸುತ್ತಿವೆ. ಬ್ಯಾಂಕ್ಗಳು ಗ್ರಾಹಕ ವಿರೋಧಿ ನೀತಿಯನ್ನು ಅಳವಡಿಸಿಕೊಂಡಿವೆ. ಬ್ಯಾಂಕ್ಗಳು ಲಾಭಗಳಿಕೆಯಷ್ಟೇ ಉದ್ದೇಶವಾಗಿಸಿಕೊಂಡಂತೆ ಬ್ಯಾಂಕಿಂಗ್ನಡೆಸುತ್ತಿವೆ. ಇದರಿಂದ ತೆರಿಗೆದಾರರು, ಮಧ್ಯಮ ವರ್ಗದ ಗ್ರಾಹಕರು ಸಂಕಷ್ಟ ಅನುಭವಿಸುವಂತಾಗಿದೆಎಂದು ಅಭಿಯಾನ ಆಯೋಜಿಸಿರುವ ಸಂಘಟಕರು ಆಪಾದಿಸಿದ್ದಾರೆ.
ಬ್ಯಾಂಕುಗಳ ಗ್ರಾಹಕ ವಿರೋಧಿ ನೀತಿಯ ವಿಚಾರದಲ್ಲಿ ಭಾರತೀಯ ರಿಸರ್ವ್ಬ್ಯಾಂಕ್ಜಾಣ ಮೌನ ವಹಿಸಿದೆ. ಬ್ಯಾಂಕ್ಗಳ ವರ್ತನೆಯ ವಿರುದ್ಧ ದೂರುಗಳು ಬಂದರೂ ಸಹ ಆರ್ಬಿಐನ ಒಂಬಡ್ಸ್ಮನ್ಗಳು ಬ್ಯಾಂಕ್ಗಳ ಪರವಾಗಿದ್ದು ಬ್ಯಾಂಕ್ಗಳನ್ನು ರಕ್ಷಿಸುತ್ತಿದ್ದಾರೆಎಂದು ಸಂಘಟಕರು ದೂರಿದ್ದಾರೆ.
ಬ್ಯಾಂಕ್ಗಳು ಡಿಜಿಟಲ್ ಬ್ಯಾಂಕಿಂಗ್ಗೆ ಉತ್ತೇಜನ ನೀಡುವಂತೆ ಅದರ ಸುರಕ್ಷತೆಗೂ ಗಮನ ಹರಿಸಬೇಕು. ಬ್ಯಾಂಕ್ಅಕೌಂಟ್ಅನ್ನು ಬೇರೊಂದು ಬ್ಯಾಂಕ್ಗೆ ಬದಲಿಸಿಕೊಳ್ಳುವ (ಪೋರ್ಟ್‌) ವ್ಯವಸ್ಥೆ ಜಾರಿಗೆ ಬರಬೇಕು. ಬ್ಯಾಂಕ್ಗಳು ತಮಗೆ ಅನುಕೂಲವಾಗುವಂತೆ ಒಪ್ಪಂದ ಪತ್ರ ರೂಪಿಸುವುದನ್ನು ನಿಲ್ಲಿಸಬೇಕು. ಮನಸೋಇಚ್ಛೆ ಶುಲ್ಕಗಳನ್ನು ಏರಿಸುವುದನ್ನು ನಿಯಂತ್ರಿಸುವ ವ್ಯವಸ್ಥೆ ಜಾರಿಯಾಗಬೇಕುಎಂದು ಸಂಘಟಕರು ಒತ್ತಾಯಿಸಿದ್ದಾರೆ.
ಬಗ್ಗೆ ಸಂಘಟಕರು ರಿಸರ್ವ್ ಬ್ಯಾಂಕ್ ಗವರ್ನರ್ಉರ್ಜಿತ್ಪಟೇಲ್ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್ಜೇಟ್ಲಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಇದು ವಾಟ್ಸ್ ಆ್ಯಪ್ ಮನವಿ
ಒಂದು ಸೇವೆಗೆ ಪ್ರತಿಯಾಗಿ ಹಣ ಪಾವತಿ ಮಾಡಬೇಕು ಅಂತ ಹೇಳಿದರೆ ಒಪ್ಪಿಕೊಳ್ಳಬಹುದು. ಆದರೇ ಏನು ಮಾಡದೇನೆ ತೆರಿಗೆ ಹಾಕುವುದನ್ನು  ಹಣ ವಸೂಲಿ ದಂದೆ ಅನ್ನದೇ ಮತ್ತೇನು ಹೇಳಲು ಸಾಧ್ಯ..!!
"ಹಣ ಇಲ್ಲ" ಎಂದು ಬ್ಯಾಂಕಿನ . ಟಿ.ಎಂ ನಲ್ಲಿ ಬರೆದು ತೋರಿಸುವುದಕ್ಕೆ ನಾವು 23 ರೂಪಾಯಿ ಹಣ ಕೊಡಬೇಕು ಅಂತ ಹೇಳಿದರೆ ಇದೆಲ್ಲಿಯ ನ್ಯಾಯ...?

ನಮ್ಮ ಹಣ ಬ್ಯಾಂಕಿನಲ್ಲಿದೆ ಆದರೆ . ಟಿ .ಎಂ ನಲ್ಲಿ ಇಲ್ಲ ಅಂದ್ರೆ ಅದಕ್ಕೆ ನಾವು ಜವಾಬ್ದಾರರೇ..?
ಅದಕ್ಕೆ ನಾವ್ಯಾಕೆ ನಷ್ಟ ಅನುಭವಿಸಬೇಕು?

ನೂರು ಜನ .ಟಿ.ಎಂ  ಉಪಯೋಗ ಮಾಡಿದರೇ ಬ್ಯಾಂಕಿಗೆ ಲಾಭ 2300/-ರೂಪಾಯಿ. ರೀತಿಯ ಕೊಳ್ಳೆ ಹೊಡೆಯುವುದಕ್ಕಿಂತ ಒಬ್ಬ ಗೂಂಡಾ ದಂದೆಯನ್ನು ಸಹಿಸುವುದು ಲೇಸು ಎಂದು ಕೆಲವರ ಚಿಂತನೆ.

2000/- ರೂಪಾಯಿ ಮಾತ್ರವೇ .ಟಿ.ಎಂ ನಲ್ಲಿ ಇದೆ. 1000/-ರೂಪಾಯಿಗೆ ಹೋದರೇ ' ಸಾವಿರ ರೂಪಾಯಿ ಇಲ್ಲಾ ' ಅನ್ನುವುದಕ್ಕೆ ನಾನು 23 ರೂಪಾಯಿ ಬ್ಯಾಂಕಿಗೆ ಪಾವತಿ ಮಾಡಬೇಕು.
ಯಾವಾಗಲೂ 500 ರೂಪಾಯಿ ಇರುವುದೇ ಇಲ್ಲಾ, 4500 ಅದುಮಿದರೆ ಸಿಗಲ್ಲ, ಅವಾಗ 4000 ಕ್ಕೆ ಒತ್ತಿದರೆ 2000 ರದ ನೋಟ್ ಗಳು ಬರುತ್ತವೆ. ಅದಕ್ಕೆ ಖರ್ಚಾಗುವ ಹಣ 46 ರೂಪಾಯಿ.
3 ಬಾರಿ ಗಿಂತ ಅಧಿಕವಾಗಿ ಹಣ ಪಡೆದರೆ ಅದ್ಕಕ್ಕೂ ದಂಡ..... ಇಟ್ಟರೂ ದಂಡ....
ಮಿನಿಮಮ್ ಹಣ ಇಲ್ಲದಿದ್ದರೆ ಅದಕ್ಕೂ ದಂಡ....!

ಹೋಗಲಿ ಬಿಡಿ ಹಣ ತೆಗೆಯದೇ ಬ್ಯಾಂಕ್ ನಲ್ಲೇ ಇರಲಿ ಅಂತ ಇಟ್ಟು  ಬ್ಯಾಂಕ್ ವಹಿವಾಟು ನಡೆಸದೇ ಇದ್ದರೇ ಅದಕ್ಕೂ ದಂಡ ಕಟ್ಟ ಬೇಕು.. ಬ್ಯಾಂಕ್  ವಹಿವಾಟು ಬೇಡವೇ ಬೇಡ ಅಂತ ಇದ್ದುಬಿಟ್ಟರೆ ಬಿಸಿನೆಸ್  ವಹಿವಾಟು ಎಲ್ಲವೂ ಬ್ಯಾಂಕ್ ಮುಖಾಂತರವೇ ನಡೆಸಬೇಕೆಂಬ ಸುಗ್ರೀವಾಜ್ಞೆ ಬೇರೆ..!
ನಮ್ಮ ಸಂಪಾದನೆಯ  ಮೌಲ್ಯ ತೆಗೆದು ಉಪಯೋ ಗಿಸಲು ನಾವು ಮತ್ತೊಬ್ಬ ಏಜೆನ್ಸಿ ಗೆ ಕಮಿಷನ್ ರೂಪದಲ್ಲಿ ಕೊಡಬೇಕಾಗುತ್ತದೆಅದು ಆಗಿದೆ ಬಿಸಿನೆಸ್..??
ಎಂದಾದರೇ  ಬ್ಯಾಂಕ್ ಎಂಬ ಹೆಸರು ತೆಗೆದು ಹಾಕಿ ಯಾವುದಾದರೂ ಫೈನಾನ್ಸ್ ಅಥವಾ ಹಣ ವಸೂಲಿ ದಂದೆ ಕಂಪೆನಿ ಅಂತ ಮಾಡಬಹುದು ಅಲ್ಲವೇ.. ಹೀಗೆ ಮುಂದುವರೆದರೆ "ಡಿಜಿಟಲ್ ಇಂಡಿಯಾ" ಎಷ್ಟು ಸುಂದರವಾಗಿರಬಹುದು?
ಇದಕ್ಕೆ ನಾವೆಲ್ಲರೂ ಪ್ರತಿಕ್ರಿಯೆ ನೀಡಬೇಕು.

2017 ಏಪ್ರಿಲ್ 6ಕ್ಕೆ ಬ್ಯಾಂಕ್ ವಹಿವಾಟುಗಳು ಬಹಿಷ್ಕರಿಷಿ ವ್ಯಕ್ತಿಗಳು ಹಾಗೂ ಸ್ಥಾಪನ ಮೇಧಾವಿಗಳು ಒಂದು ಒಳ್ಳೆಯ ಕಾರ್ಯಕ್ಕೆ ದಾಯವಾಗಿ ಸಹಕರಿಸಬೇಕಾಗಿದೆಮತ್ತೂ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ವಾಗಿ ನಾವು ವಿರೋಧವನ್ನು ವ್ಯಕ್ತ ಪಡಿಸ ಬೇಕಾಗಿದೆ.

Sunday, March 12, 2017

ಗೋವಾ ನೂತನ ಸಿಎಂ ಆಗಿ ಮನೋಹರ ಪರಿಕ್ಕರ್ ನೇಮಕ

ಗೋವಾ ನೂತನ ಸಿಎಂ ಆಗಿ ಮನೋಹರ ಪರಿಕ್ಕರ್ ನೇಮಕ
ಪಣಜಿ (ಗೋವಾ): ಗೋವಾ ರಾಜ್ಯಪಾಲರಾದ ಮೃದುಲಾ  ಸಿನ್ಹ ಅವರು ಭಾನುವಾರ, 12 ಮಾರ್ಚ್ 2017ರ  ರಾತ್ರಿ ಗೋವಾದ ನೂತನ ಮುಖ್ಯಮಂತ್ರಿಯಾಗಿ ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರನ್ನು ನೇಮಕ ಮಾಡಿದರು.
 ಪ್ರಮಾಣ ವಚನ ಬೋಧಿಸಿದ 15 ದಿನಗಳ ಒಳಗಾಗಿ ಗೋವಾ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವಂತೆ ಸಿನ್ಹ ಅವರು ಪರಿಕ್ಕರ್ ಅವರಿಗೆ ಸೂಚಿಸಿದರು. ಪರಿಕ್ಕರ್ ಅವರು 21 ಸದಸ್ಯರ ಬೆಂಬಲ  ಇರುವ ಬಗ್ಗೆ ದಾಖಲೆಗಳನ್ನು ನೀಡಿದ ಬಳಿಕ ರಾಜ್ಯಪಾಲರು ಈ ಕ್ರಮ ಕೈಗೊಂಡರು ಎಂದು ರಾಜಭವನ ಮೂಲಗಳು ತಿಳಿಸಿದವು.

 40 ಸದಸ್ಯ ಬಲದ ವಿಧಾನಸಭೆಯಲ್ಲಿ 13 ಸದಸ್ಯರನ್ನು ಹೊಂದಿರುವ ಬಿಜೆಪಿಗೆ ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ  22 ಸದಸ್ಯರ ಬಲ ಲಭಿಸಿದೆ ಎಂದು ಹೇಳಲಾಯಿತು.

Thursday, March 9, 2017

ಗಿರಿನಗರ ನಿರ್ಮಾತೃ ಬಿ. ಕೃಷ್ಣಭಟ್ ಇನ್ನಿಲ್ಲ B. Krishna Bhat no more

ಗಿರಿನಗರ ನಿರ್ಮಾತೃ ಬಿ. ಕೃಷ್ಣಭಟ್ ಇನ್ನಿಲ್ಲ

ಬೆಂಗಳೂರು: ಹಿರಿಯ ಪರಿಸರವಾದಿ , ಸಾಮಾಜಿಕ ಕಾರ್ಯಕರ್ತ , ಗಿರಿನಗರ ನಿರ್ಮಾತೃ ಬಿ. ಕೃಷ್ಣ ಭಟ್ ಅವರು ಗುರುವಾರ, 09 ಮಾರ್ಚ್ 2017ರ ರಾತ್ರಿ 10 ಗಂಟೆ ಸುಮಾರಿಗೆ ಗಿರಿನಗರದ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.  ಅವರಿಗೆ 86 ವರ್ಷ ವಯಸ್ಸಾಗಿತ್ತು.

ಮೂಲತಃ  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು-ವಿಟ್ಲ ಸಮೀಪದ ಬೋಳುಬೈಲಿನವರಾದ ಕೃಷ್ಣಭಟ್ ಅವರು  ಉಡುಪಿಯಲ್ಲಿ ತಮ್ಮ ವ್ಯಾಸಂಗ ಮುಗಿಸಿದ ಬಳಿಕ ಬೆಂಗಳೂರಿಗೆ ಬಂದು ನೆಲೆಸಿದ್ದರು. ದಿವಂಗತ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಲಹೆಯಂತೆ ಬೆಂಗಳೂರಿನಲ್ಲಿ ಸಹಕಾರ ಸಂಘದ ಮೂಲಕ ವಸತಿ ಒದಗಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಕೃಷ್ಣಭಟ್, ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಾದ ಗಿರಿನಗರ  ಮತ್ತು ರಾಜರಾಜೇಶ್ವರಿ ನಗರದ ಸಚ್ಚಿದಾನಂದ ನಗರ ಬಡಾವಣೆಯನ್ನು ಸುಸಜ್ಜಿತವಾಗಿ ನಿರ್ಮಿಸಿದ್ದರು.

 ಗಿರಿನಗರ ಬಡಾವಣೆಯ ಶಂಕುಸ್ಥಾಪನೆಗೆ ಆಗಿನ ರಾಷ್ಟ್ರಪತಿ ವರಾಹ ವೆಂಕಟ ಗಿರಿ ಅವರನ್ನು ಕರೆಸಿ, ಅವರ ಹೆಸರನ್ನೇ ಬಡಾವಣೆಗೆ ಇಟ್ಟಿದ್ದರು.

ಬಡಾವಣೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜೊತೆಗೆ ಸುದೀರ್ಘ ನ್ಯಾಯಾಂಗ ಸಮರ ನಡೆಸಿದ್ದ ಕೃಷ್ಣಭಟ್ ಅವರು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆಯೂ ಸಾರ್ವಜನಿಕ ಹಿತಾಸಕ್ತಿ ಖಟ್ಲೆಗಳನ್ನು ಹೂಡುವ ಮೂಲಕ ನ್ಯಾಯಾಂಗ ಹೋರಾಟ ನಡೆಸಿದ್ದರು.

ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ಬೆಂಗಳೂರಿನಲ್ಲಿ ವಸತಿ ಬಡಾವಣೆ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದ ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ಭಟ್ ಅವರು ತುರ್ತು ಪರಿಸ್ಥಿತಿ ಕಾಲದಲ್ಲಿ ಎಲ್.ಕೆ. ಅಡ್ವಾಣಿ ಮತ್ತಿತರ ನಾಯಕರ ಜೊತೆಗೆ ಬೆಂಗಳೂರಿನಲ್ಲಿ  ಸೆರೆವಾಸವನ್ನೂ ಅನುಭವಿಸಿದ್ದರು.


ಕೃಷ್ಣ ಭಟ್ ಅವರು ಪತ್ನಿ ರಾಧಮ್ಮ, ಪುತ್ರರಾದ ಪಾರ್ಥಸಾರಥಿ, ಡಾ. ವಿಶ್ವನಾಥ, ಪುತ್ರಿ ತಾರಾ, ಕುಟುಂಬ ಸದಸ್ಯರು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.  ಅಂತ್ಯಕ್ರಿಯೆಯನ್ನು ದೊಡ್ಡ ಬಳ್ಳಾಪುರದ ಕಲ್ಲಹಳ್ಳಿಯ ಜಮೀನಿನಲ್ಲಿ ಈದಿನ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

B. Krishna Bhat (86), founder of Girinagar and Sachhidananda Nagar Layouts in Bengaluru, social worke and environmentalist died on Thursday, 9th March 2017 night at his residence in Girinagar, Bangalore.



Thursday, February 16, 2017

ಪಾಕ್‌ನಲ್ಲಿ ಐಸಿಸ್ ಬಾಂಬ್‌: 100 ಸಾವು

ಪಾಕ್ನಲ್ಲಿ ಐಸಿಸ್ ಬಾಂಬ್‌: 100 ಸಾವು

ಕರಾಚಿ: ಆತ್ಮಾಹುತಿ ಬಾಂಬ್ದಾಳಿಯಲ್ಲಿ 100ಕ್ಕೈ ಹೆಚ್ಚು ಜನ ಸಾವನ್ನಪ್ಪಿ, ಇತರ ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಸಿಂಧ್ಪ್ರದೇಶದಲ್ಲಿರುವ ಸೆಹವಾನ್ಪಟ್ಟಣದ ಸೂಫಿ ಶಹಬಾಜ್ಕಲಂದರ್ಪ್ರಾರ್ಥನಾ ಮಂದಿರದ ಬಳಿ 16 ಫೆಬ್ರುವರಿ 2017ರ ಗುರುವಾರ ಘಟಿಸಿತು.

ಒಂದು ವಾರದ ಅವಧಿಯೊಳಗೆ ಪಾಕಿಸ್ತಾನದಲ್ಲಿ ಸಂಭವಿಸಿದ  ಐದನೇ ಆತ್ಮಾಹುತಿ ಬಾಂಬ್ದಾಳಿ ಇದು. ಧಮಲ್‌–ಸೂಫಿ ಎಂಬ ಧಾರ್ಮಿಕ ಕಾರ್ಯಕ್ರಮದಲ್ಲಿ ನೆರದಿದ್ದ ನೂರಾರು ಭಕ್ತಾದಿಗಳನ್ನು ಗುರಿಯಾಗಿಸಿಕೊಂಡು  ಬಾಂಬ್ದಾಳಿ ನಡೆಸಲಾಯಿತು.

30 ಮೃತದೇಹಗಳನ್ನು ಮತ್ತು ಗಾಯಗೊಂಡಿರುವವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಮೊಯಿನುದ್ದೀನ್ಸಿದ್ದಿಕಿ ತಿಳಿಸಿದ್ದಾರೆ. ಸೆಹವಾನ್ ಪಟ್ಟಣದ ಸುತ್ತುಮುತ್ತಲಿನ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.‌
ದಾಳಿಯಲ್ಲಿ ಕನಿಷ್ಠ 100 ಜನ ಸಾವನ್ನಪ್ಪಿದ್ದಾರೆ ಎಂಬ ವರದಿಗಳು ಬಂದಿದ್ದು, ಇತರ ಕೆಲವು ವರದಿಗಳು ಸಾವಿನ ಸಂಖ್ಯೆ ಅಂದಾಜು 50 ಎಂದು ತಿಳಿಸಿದವು. ಪ್ರತಿ ಗುರುವಾರ ಭಕ್ತಾದಿಗಳು ಸಾಮೂಹಿಕವಾಗಿ ಪ್ರಾರ್ಥನೆ ನೆರವೇರಿಸಲು ಸ್ಥಳದಲ್ಲಿ ಜಮಾಯಿಸುತ್ತಿದ್ದರು. ಮಹಿಳೆಯರಿಗಾಗಿ ಮೀಸಲಿರಿಸುತ್ತಿದ್ದ ಸ್ಥಳದಲ್ಲಿ ಪ್ರಬಲ ಬಾಂಬ್ಸ್ಫೋಟಿಸಿತು.

ಸ್ಫೋಟ
ನಡೆದ ಸ್ಥಳ ಪಾಕಿಸ್ತಾನ ಮತ್ತು ಅಫಘಾನಿಸ್ತಾನದ ಧಾರ್ಮಿಕ ಸೂಫಿ ಸಂತತಿಯ ಪ್ರಸಿದ್ಧ ತತ್ವಜ್ಞಾನಿ ಮತ್ತು ಕವಿ ಲಾಲ್ಶಹಬಾಜ್ಖಲಂದರ್ಅವರಿಗೆ ಸೇರಿದೆ. ಸ್ಫೋಟದ ಹೊಣೆಯನ್ನು ಐಸಿಸ್ಉಗ್ರ ಸಂಘಟನೆ ಹೊತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

Monday, February 6, 2017

ಉತ್ತರ ಭಾರತದಲ್ಲಿ ತೀವ್ರ ಭೂಕಂಪ

ಉತ್ತರ ಭಾರತದಲ್ಲಿ ತೀವ್ರ ಭೂಕಂಪ

ನವದೆಹಲಿ:  ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸೋಮವಾರ 06 ಫೆಬ್ರುವರಿ 2017ರ ರಾತ್ರಿ 10.30 ಗಂಟೆಗೆ ಪ್ರಬಲ ಭೂಕಂಪ ಸಂಭವಿಸಿತು.
ರಿಕ್ಟರ್ ಮಾಪಕದ ಪ್ರಕಾರ ಭೂಕಂಪದ ತೀವ್ರತೆ 5.8ರಷ್ಟು ಇತ್ತು ಎಂದು ವರದಿಗಳು ತಿಳಿಸಿವೆ. ಹರಿಯಾಣ, ಪಂಜಾಬ್, ಉತ್ತರಾಖಂಡ ಮತ್ತು ದೆಹಲಿಯಲ್ಲಿ 30 ಸೆಕೆಂಡ್ ಕಾಲ ಭೂಮಿ ನಡುಗಿದ ಅನುಭವವಾಯಿತು. ಯಾವುದೇ ಹಾನಿ ಕುರಿತು ತತ್ ಕ್ಷಣಕ್ಕೆ ವರದಿಗಳು ಬಂದಿಲ್ಲ.  
ಉತ್ತರಾಖಂಡದ ಪಥೌರಗಢದಲ್ಲಿ ಕಂಪನದ ಕೇಂದ್ರ ಬಿಂದು ಇತ್ತು ಎಂದು ರಾಷ್ಟ್ರೀಯ ಭೂಕಂಪ ಅಧ್ಯಯನ ಕೇಂದ್ರ ತಿಳಿಸಿತು.