ಉತ್ತರ ಭಾರತದಲ್ಲಿ ತೀವ್ರ ಭೂಕಂಪ
ನವದೆಹಲಿ: ಉತ್ತರ ಭಾರತದ
ಹಲವು ರಾಜ್ಯಗಳಲ್ಲಿ ಸೋಮವಾರ 06 ಫೆಬ್ರುವರಿ 2017ರ ರಾತ್ರಿ 10.30 ಗಂಟೆಗೆ ಪ್ರಬಲ ಭೂಕಂಪ ಸಂಭವಿಸಿತು.
ರಿಕ್ಟರ್ ಮಾಪಕದ ಪ್ರಕಾರ ಭೂಕಂಪದ
ತೀವ್ರತೆ 5.8ರಷ್ಟು ಇತ್ತು ಎಂದು ವರದಿಗಳು ತಿಳಿಸಿವೆ. ಹರಿಯಾಣ, ಪಂಜಾಬ್, ಉತ್ತರಾಖಂಡ ಮತ್ತು ದೆಹಲಿಯಲ್ಲಿ
30 ಸೆಕೆಂಡ್ ಕಾಲ ಭೂಮಿ ನಡುಗಿದ ಅನುಭವವಾಯಿತು. ಯಾವುದೇ ಹಾನಿ ಕುರಿತು ತತ್ ಕ್ಷಣಕ್ಕೆ ವರದಿಗಳು
ಬಂದಿಲ್ಲ.
ಉತ್ತರಾಖಂಡದ ಪಥೌರಗಢದಲ್ಲಿ ಕಂಪನದ ಕೇಂದ್ರ ಬಿಂದು ಇತ್ತು ಎಂದು ರಾಷ್ಟ್ರೀಯ ಭೂಕಂಪ ಅಧ್ಯಯನ ಕೇಂದ್ರ ತಿಳಿಸಿತು.
ಉತ್ತರಾಖಂಡದ ಪಥೌರಗಢದಲ್ಲಿ ಕಂಪನದ ಕೇಂದ್ರ ಬಿಂದು ಇತ್ತು ಎಂದು ರಾಷ್ಟ್ರೀಯ ಭೂಕಂಪ ಅಧ್ಯಯನ ಕೇಂದ್ರ ತಿಳಿಸಿತು.
No comments:
Post a Comment