Showing posts with label cow. Show all posts
Showing posts with label cow. Show all posts

Sunday, November 28, 2021

PARYAYA: ಹಸುವು ನಕ್ಕಿತು…ಏಕೆ..?

ಹಸುವು ನಕ್ಕಿತು…ಏಕೆ..?

 ಹಸುವು ನಕ್ಕಿತು…ಏಕೆ..?


ಕಸಾಯಿಖಾನೆಯಲ್ಲಿ ಒಬ್ಬ ಕಟುಕ ಹಸುವನ್ನು ಕೊಲ್ಲಲು ಬಂದಾಗ
ಹಸುವು ಕಟುಕನನ್ನು ನೋಡಿ ನಗುತ್ತಿತ್ತು.

ಇದನ್ನ ನೋಡಿ ಕಟುಕ ಹೇಳಿದ…

‘ನಾನು ನಿನ್ನನ್ನು ಕೊಲ್ಲಲು ಬಂದಿದ್ದೇನೆ. ಅದನ್ನು ತಿಳಿದು ನೀನು ಏಕೆ ಹೀಗೆ
ನಗುತ್ತಾ ಇದ್ದೀಯ?’

ಹಸು ಹೇಳಿತು:
‘ನಾನು ಯಾವತ್ತಿಗೂ ಮಾಂಸವನ್ನು ತಿಂದಿಲ್ಲ, ಹಾಗಿದ್ದೂ ನನ್ನ ಸಾವು ಇಷ್ಟು ಘೋರವಾಗಿದೆ.

 ತಪ್ಪು ಮಾಡದ, ಯಾರಿಗೂ ಕೆಡಕು ಮಾಡದ
ನನ್ನನ್ನು ನೀನು ಕೊಂದು
ನನ್ನ
ಮಾಂಸವನ್ನು ತಿನ್ನುವೆಯಲ್ಲ?
ನಿನ್ನ
ಸಾವು ಎಷ್ಟು  ಘೋರವಾಗಿರುವುದೋ ಎನ್ನುವುದನ್ನು ಯೋಚಿಸಿ
ನಾನು ನಗುತ್ತಿದ್ದೇನೆ….

ಹಾಲು ಕೊಟ್ಟು ನಿಮ್ಮನ್ನು ಬೆಳೆಸಿದೆ, ನಿಮ್ಮ
ಮಕ್ಕಳಿಗೂ ಹಾಲು ಕೊಡುತ್ತಿದ್ದೀನೆ.,ಆದರೆ
ನಾನು ತಿನ್ನುತ್ತಿದ್ದದ್ದು ಹುಲ್ಲು ಮಾತ್ರ.

 ಹಾಲಿನಿಂದ ಬೆಣ್ಣೆ ಮಾಡಿಕೊಂಡಿರಿ, ಬೆಣ್ಣೆಯಿಂದ

ತುಪ್ಪ ಮಾಡಿಕೊಂಡಿರಿ,

ಸಗಣಿಯಿಂದ ಬೆರಣಿ

ಮಾಡಿಕೊಂಡಿರಿ,

ಸಗಣಿ ಮತ್ತು ಗಂಜಲದಿಂದ ನಿಮ್ಮ ಜಮೀನಿನ

ಭೂಮಿಯನ್ನು ಹಸನು ಮಾಡಿಕೊಂಡಿರಿ,

 ಭೂಮಿಯಲ್ಲಿ ಒಳ್ಳೆಯ ಬೆಳೆ ಬೆಳೆದಿರಿ,
ಆದರೆ
ನನಗೆ ಕೊಡುತ್ತಿದ್ದದ್ದು ಮಾತ್ರ
ಹಾಳಾಗಿ ಕೊಳೆತು ಹೋದ ತರಕಾರಿಗಳನ್ನ. !

ನನ್ನ ಸಗಣಿಯಿಂದ ಗೋಬರ್ ಗ್ಯಾಸ್
ತಯಾರಿಸಿ ನಿಮ್ಮ ಮನೆಯನ್ನು
ಕತ್ತಲಿನಿಂದ ಬೆಳಕು ಮಾಡಿಕೊಂಡಿರಿ,

ಆದರೆ
ನನನ್ನೇ ಕುರುಡನಂತೆ ಕೊಲ್ಲಲು ಬಂದಿರುವೆ,

ಹಾಲಿನಿಂದ ಸಿಕ್ಕ
ಶಕ್ತಿಯಿಂದ ನನ್ನನ್ನು ಕೊಲ್ಲಲು ಆಯುಧ ಎತ್ತಿರುವೆ,
ಆ ಆಯುಧವನ್ನು ಹಿಡಿಯುವ ಶಕ್ತಿ
ನಿನಗೆ ಬಂದದ್ದು ನನ್ನಿಂದಲೇ.

ನನ್ನಿಂದ ಒಳ್ಳೆಯ
ಆದಾಯವನ್ನು ಮಾಡಿಕೊಂಡು
ಮನೆ ಮಾಡಿಕೊಂಡೆ,

ಆದರೆ,
ನನ್ನನ್ನು ಮಾತ್ರ ಮನೆಯಿಂದ ಹೊರಗೆ
ಒಂದು ಗುಡಿಸಿಲಿನಲ್ಲಿರಿಸಿದೆ.

ನಿಮ್ಮ ಹೆತ್ತ ತಾಯಿಗಿಂತಲು ನಾನೇ ನಿಮಗೆ
ಹೆಚ್ಚು ಆಸರೆಯಾದೆ,

ಶ್ರೀ  ಕೃಷ್ಣನ ಪ್ರಿಯಳು ನಾನು.

ನನಗೇ ಇಂತಹ ಶಿಕ್ಷೆ ಇರುವಾಗ

ನಿನ್ನ ಗತಿ ಎನಿರಬಹುದು,

 ನಿನ್ನ

ಭವಿಷ್ಯವನ್ನು ನೆನೆದು ನಾನು ನಗುತ್ತಿರುವೆ..

(ವಾಟ್ಸಪ್ಪಿನಲ್ಲಿ ಬಂದ  ಒಂದು ಸಂದೇಶ)

ವಿಡಿಯೋ ನೋಡಲು ಮೇಲಿನ/ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ


PARYAYA: ಹಸುವು ನಕ್ಕಿತು…ಏಕೆ..?:   ಹಸುವು ನಕ್ಕಿತು…ಏಕೆ..? ಕಸಾಯಿಖಾನೆಯಲ್ಲಿ ಒಬ್ಬ ಕಟುಕ ಹಸುವನ್ನು ಕೊಲ್ಲಲು ಬಂದಾಗ ಹಸುವು ಕಟುಕನನ್ನು ನೋಡಿ ನಗುತ್ತಿತ್ತು. ಇದನ್ನ ನೋಡಿ ಕಟುಕ ಹೇಳಿದ… ‘ನಾನು...

Wednesday, December 9, 2020

ಗೋಹತ್ಯೆ ನಿಷೇಧ ಮಸೂದೆಗೆ ವಿಧಾನಸಭೆ ಅಂಗೀಕಾರ

 ಗೋಹತ್ಯೆ ನಿಷೇಧ ಮಸೂದೆಗೆ ವಿಧಾನಸಭೆ ಅಂಗೀಕಾರ

ಬೆಂಗಳೂರು: ಪ್ರತಿಪಕ್ಷಗಳ ಗದ್ದಲ, ಕೋಲಾಹಲ, ಧರಣಿ, ಸಭಾತ್ಯಾಗದ ನಡುವೆಯೇ ರಾಜ್ಯದಲ್ಲಿ ಗೋಹತ್ಯೆ ನಿಷೇಧಿಸುವ ಕಠಿಣ ನಿಯಮಗಳನ್ನು ಒಳಗೊಂಡ ಕರ್ನಾಟಕ ಜಾನುವಾರು ವಧೆ, ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳುವಲ್ಲಿ ಸರ್ಕಾರ 2020 ಡಿಸೆಂಬರ್ 09ರ ಬುಧವಾರ ಯಶಸ್ವಿಯಾಯಿತು.

ಇದರೊಂದಿಗೆ ಉತ್ತರ
ಪ್ರದೇಶ ಸರ್ಕಾರದ ಬಳಿಕ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುತ್ತಿರುವ ಎರಡನೇ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲು ವೇದಿಕೆ ಸಜ್ಜಾಯಿತು. ಗೋ ಹತ್ಯೆ ಮಾಡಿದರೆ ವರ್ಷಗಳವರೆಗೆ ಜೈಲುವಾಸ, ಮೊದಲ ಬಾರಿ ಜಾನುವಾರು ಹತ್ಯೆಗೆ ೫೦ ಸಾವಿರದಿಂದ ಲಕ್ಷ ರೂ. ವರೆಗೆ ದಂಡ ವಿಧಿಸುವ ಅಂಶಗಳು ಪ್ರಸ್ತಾವಿತ ಕಾಯ್ದೆಯಲ್ಲಿವೆ. ವಿಧಾನ ಪರಿಷತ್ನಲ್ಲೂ ವಿಧೇಯಕ ಅನುಮೋದನೆ ಪಡೆದುಕೊಂಡ ಬಳಿಕ ರಾಜ್ಯಪಾಲರ ಸಹಿಗೆ ಕಳಿಸಲಾಗುತ್ತದೆ. ಬಳಿಕ ನಿಯಮ ರಚಿಸಿ ಕಾಯ್ದೆ ಅನುಷ್ಠಾನವಾಗಲಿದೆ.

ವಿಧಾನಸಭೆಯಲ್ಲಿ ಬುಧವಾರ ವಿಧೇಯಕ ಮಂಡನೆ ಪ್ರಕ್ರಿಯೆ ಹಠಾತ್ ನಡೆಯಿತು. ಪಶು ಸಂಗೋಪನೆ ಸಚಿವ ಪ್ರಭು ಚೌವ್ಹಾಣ್ , ವಿಧೇಯಕ ಮಂಡನೆಗೆ ಮುಂದಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರತಿಪಕ್ಷಗಳ ಅನೇಕ ಸದಸ್ಯರು ಆಕ್ಷೇಪ ಎತ್ತಿದರು. ಸಭಾಧ್ಯಕ್ಷರ ಪೀಠದ ಮುಂದಕ್ಕೆ  ಧಾವಿಸಿದರು. ಕೋಲಾಹಲ  ಎಬ್ಬಿಸಿದರು. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಪರ ವಿರೋಧ ಘೋಷಣೆ ಕೂಗಿದರು.

ಬಿಜೆಪಿ ಸದಸ್ಯರು ಕೇಸರಿ ಶಾಲು ಹೊದ್ದು ಸಂಭ್ರಮಿಸಿದರಲ್ಲದೆ, ವಿಧಾನಸಭೆ ಹೊರ ಆವರಣದಲ್ಲಿ ಗೋವು ತಂದು ಪೂಜೆ ಸಲ್ಲಿಸಿದರು. ಮಸೂದೆ ಮಂಡನೆಯಾಗುತ್ತಿದ್ದಂತೆಯೇ ಜೆಡಿಎಸ್ ಎಚ್.ಕೆ. ಕುಮಾರಸ್ವಾಮಿ, ವಿಧೇಯಕ ಮಂಡನೆಯ ವಿಷಯ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರವಾಗಿಲ್ಲ. ಹಾಗಾಗಿ ಮಂಡನೆ ಮಾಡಲು ಅವಕಾಶ ಕೊಡಬೇಡಿ ಎಂದು ಸಭಾಧ್ಯಕ್ಷರಿಗೆ  ಮನವಿ ಮಾಡಿದರು. ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಸಭಾಧ್ಯಕ್ಷರ  ನಡೆಯನ್ನು ಖಂಡಿಸಿದರು.

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಮುಖ ವಿಧೇಯಕ ಮಂಡಿಸುವ ಬಗ್ಗೆ ತೀರ್ಮಾನವಾಗಿತ್ತು, ಪ್ರಕಾರ ಅವಕಾಶ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರಲ್ಲದೇ, ಮಂಡನೆಗೆ ಸೂಚನೆ ನೀಡಿದರು. ನಡುವೆ ನಮಗೆ ವಿಧೇಯಕದ ಅಗತ್ಯವಿದೆ, ತಾಕತ್ತಿದ್ದರೆ ಚರ್ಚೆ ಮಾಡಿ ಎಂದು ಬಿಜೆಪಿಯ ಸುನೀಲ್ ಕುಮಾರ್ ಪ್ರತಿಪಕ್ಷಗಳಿಗೆ ಸವಾಲೆಸೆದರೆ, ಕಾಂಗ್ರೆಸ್ನವರು ದನ ಕಡಿಯುವವರ ಪರ ಎಂದು ಸಿ.ಟಿ.ರವಿ ಘೋಷಣೆ ಹಾಕಿದರು.

ಪ್ರತಿಯಾಗಿ, ವಿಧಾನಸಭೆಯನ್ನು ಬಿಜೆಪಿ ಕಚೇರಿ ಮಾಡಬೇಡಿ ಎಂದು ಕಾಂಗ್ರೆಸ್ ಎಚ್. ಕೆ.ಪಾಟೀಲ್ ಕಿಡಿಕಾರಿದರು. ಜೈ ಶ್ರೀರಾಮ್, ಹಿಂದು ವಿರೋಧಿ ಕಾಂಗ್ರೆಸ್, ಗೋ ಮಾತೆ ವಿರೋಧಿ ಕಾಂಗ್ರೆಸ್ ಎಂಬ ಘೋಷಣೆಗಳು ಆಡಳಿತ ಪಕ್ಷದ ಕಡೆಯಿಂದ ಮೊಳಗಿದವು. ಕಾಂಗ್ರೆಸ್ ಸದಸ್ಯರು ಸ್ಪೀಕರ್ ಪೀಠದ ಮುಂದೆ ಧರಣಿ ಕುಳಿತರು. ದಿನದ ಕಲಾಪಪಟ್ಟಿಯಲ್ಲಿ ವಿಧೇಯಕದ ಮಾಹಿತಿಯೇ ಇಲ್ಲ ಎಂದು ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಕಲಾಪವನ್ನು ಮುಂದೂಡಿ ಪುನಃ ಪ್ರತಿಪಕ್ಷ ಸದಸ್ಯರನ್ನು ಮನವೊಲಿಸಲು ಸಭಾಧ್ಯಕ್ಷರು ನಡೆಸಿದ ಪ್ರಯತ್ನ ಫಲಕೊಡಲಿಲ್ಲ. ಎಷ್ಟೇ ಮನವಿ ಮಾಡಿದರೂ ಧರಣಿ ಹಿಂಪಡೆಯಲಿಲ್ಲ. ನಡುವೆ ಸರ್ಕಾರ ಹಠಕ್ಕೆ ಬಿದ್ದು ವಿಧೇಯಕ ಮಂಡನೆ, ಚರ್ಚೆ, ಅನುಮೋದನೆ ಪ್ರಕ್ರಿಯೆ ಮುಗಿಸಿತು.

ವಿಧೇಯಕ ಮಂಡನೆಗೂ ಮುನ್ನ ಮತ್ತು ಬಳಿಕ ಬಿಜೆಪಿ ನಾಯಕರು ವಿಧಾನಸೌಧ ಆವರಣದಲ್ಲಿ ಗೋ ಪೂಜೆ ನೆರವೇರಿಸಿದರು. ಗೋವುಗಳನ್ನು ವಿಧಾನಸೌಧಕ್ಕೆ ತರಿಸಿಕೊಂಡಿದ್ದ ಪಕ್ಷದ ನಾಯಕರು, ವಿಶೇಷ ಪೂಜೆ ನೆರವೇರಿಸಿ ಘೋಷಣೆ ಹಾಕಿ ಸಂಭ್ರಮಿಸಿದರು. ಜತೆಗೆ ಕೇಸರಿ ಶಾಲು ಹಾಕಿಕೊಂಡು ಸಂಭ್ರಮಿಸಿ ಕಲಾಪದಲ್ಲಿ ಪಾಲ್ಗೊಂಡರು.ಆದರೆ, ಕೇಸರಿ ಶಾಲು ಧರಿಸಿ ಬಂದಿದ್ದಕ್ಕೆ ಎಚ್.ಕೆ. ಪಾಟೀಲ್ ಆಕ್ಷೇಪ ಎತ್ತಿದರು. ಆದರೆ, ಮಂಗಳವಾರ ಕಾಂಗ್ರೆಸ್ ಪ್ರತಿಪಕ್ಷ ಶಾಸಕರು ಕಪ್ಪು ಪಟ್ಟಿ ಧರಿಸಿ ಬಂದಿದ್ದನ್ನು ಪ್ರಸ್ತಾಪಿಸಿ ಎಚ್.ಕೆ.ಪಾಟೀಲ್ ಆಕ್ಷೇಪಕ್ಕೆ ಮಣೆ ಹಾಕಲಿಲ್ಲ.