Showing posts with label Plastic. Show all posts
Showing posts with label Plastic. Show all posts

Friday, May 29, 2026

PARYAYA: ಛಾಯಾಚಿತ್ರ ನೆನಪು ಮೂಡಿಸಿದಾಗ

 ಛಾಯಾಚಿತ್ರ ನೆನಪು ಮೂಡಿಸಿದಾಗ

ಕಿರು ಲೇಖನ-1

ನಾನು ಹೇಳಲು ಹೊರಟಿರುವುದು 94-95ರ ಸಮಯದ ಘಟನೆ.ಪರಿಸರದ ವಿಷಯದಲ್ಲಿ  ಸ್ವಯಂ ಪ್ರೇರಣೆಯಿಂದ ಒಂದಷ್ಟು ಕೆಲಸ ಮಾಡುತ್ತಿದ್ದುದರ ನೆನಪು.ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಿದ್ದುದರ ನೆನಪು.

ವಿಶೇಷವಾಗಿ ಪಾಲಿಥೀನ್ ಚೀಲದಿಂದ ಪರಿಸರಕ್ಕೆ ಆಗುತ್ತಿರುವ ಹಾನಿ.ಆಗಿನ್ನೂ ಪ್ಲಾಸ್ಟಿಕ್ ಬಗ್ಗೆ ಯಾರಿಗೂ ಅಷ್ಟು ತಿಳಿದಿರಲಿಲ್ಲ.

ಅದರ ಸಂಬಂಧ ಒಂದು ರೀತಿಯ ಸಂಶೋಧನೆಯನ್ನೇ ನಡೆಸಿದ್ದೆ ಎನ್ನಬಹುದು.ಎಲ್ಲೆಲ್ಲೂ ಪಾಲಿಥೀನ್ ಚೀಲಗಳನ್ನು ಬಿಸಾಡಲ್ಪಟ್ಟು ರಸ್ತೆ,ಸ್ಥಳಗಳು ಅಸಹ್ಯ ಪರಿಸರವನ್ನು ನಿರ್ಮಿಸಿರುವುದನ್ನು ನೋಡಿ ಮನಸು ಖೇದವಾಗುತ್ತಿತ್ತು. ಈಗ ಬಹಳ ಜಾಗೃತಿ ಬಂದಿದೆ ಅಂತೇನಿಲ್ಲ.ಅದರ ಇನ್ನೊಂದು ಭಯಾನಕ ರೂಪ.

ಇದರ ಬಗ್ಗೆ ವಿಪರೀತವಾದ ಚರ್ಚೆಗಳು ನಡೆಯುತ್ತಿದ್ದವು.ನಿರ್ವಹಣೆ ವಿಷಯದಲ್ಲಿ ಹಲವಾರು ಉತ್ಸಾಹಿ ನಾಗರಿಕರು ಡಾಕ್ಟರ್ ಗಳು
ಸ್ವಚ್ಛ ಬೆಂಗಳೂರಿಗೆ ಸಾಕಷ್ಟು ಕೆಲಸ ಮಾಡುತ್ತಿದ್ದರು. ಇದರ ಸಂಬಂಧ ನನ್ನ ಪುಸ್ತಕ "ಫನತ್ಯಾಜ್ಯ ನಿರ್ವಹಣೆ"ಯಲ್ಲಿ ಸಂಪೂರ್ಣ ಮಾಹಿತಿ ಬರೆದಿದ್ದೇನೆ.

ಪಾಲಿಥೀನ್ ಚೀಲಕ್ಕೆ ಪರ್ಯಾಯ ಇದನ್ನು ಹುಡುಕುತ್ತಾ ಬೇಟಿ ನೀಡಿದ ಪ್ಲಾಸ್ಟಿಕ್ ತಯಾರು ಮಾಡುವ ಕಾರ್ಖಾನೆಗಳು ಎಷ್ಟೋ !

ಸಂಶೋಧನೆಯ ಸಂಸ್ಥೆಗಳೆಷ್ಟೊ!

ಮಾಲಿನ್ಯ ನಿಯಂತ್ರಣ ಮಂಡಳಿ,ಸೆಂಟರ್ ಫಾರ್ ಎನ್ವಿರಾನ್ಮೆಂಟ್ ಎಜುಕೇಶನ್ ,ಟಾಟಾ ಇನ್ಸ್ಟಿಟ್ಯೂಟ್ ಹೀಗೆ ಹಲವು.ಎಲ್ಲೂ ಇದರ ಬಗ್ಗೆ ಸಂಶೋಧನೆ ನಡೆದಿರಲಿಲ್ಲ.ಕೇವಲ ಪ್ಲಾಸ್ಟಿಕ್ ಉಪಯೋಗದ ಬಗ್ಗೆ ಸಾಕಷ್ಟು ಮಾಹಿತಿ ಸಿಗುತ್ತಿತ್ತು.

ಆಗ ಪಾಲಿಥೀನ್ ಚೀಲಕ್ಕೆ ಪರ್ಯಾಯ ಏನಾಗಬಹುದು!! ಎನ್ನುವ ಕುತೂಹಲ ಪ್ರಶ್ನೆ ಪತ್ರಿಕೆಗಳಲ್ಲಿ ಬರುತ್ತಿದ್ದವು.

ಕೆಲವಷ್ಟು ಜನ ತಮ್ಮದೇ ರೀತಿಯಲ್ಲಿ ವಾದಮಾಡುತ್ತಿದ್ದರು .ಅವು ಕೇವಲ ವಾದವಾಗಿರುತ್ತಿತ್ತು ಅಷ್ಟೆ.

ಆಗಷ್ಟೇ ಬಯೋ ಡಿ ಗ್ರೇಡಬಲ್ ಪ್ಲಾಸ್ಟಿಕ್ ಪರ್ಯಾಯ ಆಗಬಹುದು ಎನ್ನುವ ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಿತ್ತು.

ಆಗ ಮೈಸೂರು ರಸ್ತೆಯ ನಾಯಿಂಡನ ಹಳ್ಳಿ,ಮಾಗಡಿ ರಸ್ತೆ,ಬೆಂಗಳೂರಿನ ವಿಜಯನಗರದ ರೈಲ್ವೇ ಕಂಬಿಗಳ ಎರಡು ಪಕ್ಕದಲ್ಲಿ ರಾಶಿ,ರಾಶಿ ಪ್ಲಾಸ್ಟಿಕ್ ಚೀಲಗಳು ಬೆಟ್ಟದಂತೆ ಕಾಣಿಸುತ್ತಿದ್ದವು. 

ಹಸುಗಳು ಈ ಪ್ಲಾಸ್ಟಿಕ್ ಗಳನ್ನು ತಿನ್ನುತ್ತಿದ್ದವು. ಅವುಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಸೇರಿ ಸಾಯುತ್ತಿದ್ದವು.ಕೊಳಚೆ ನೀರು ಹರಿದು ಹೋಗುವ ಮೋರಿಗಳಲ್ಲಿ ಈ ಪಾಲಿಥೀನ್ ಚೀಲಗಳು ಸಿಲುಕಿ ರಸ್ತೆಯೆಲ್ಲಾ ಅಸಹ್ಯ ಪರಿಸರ ಸೃಷ್ಟಿಯಾಗುತ್ತಿತ್ತು.

ಇದರ ನೂರಾರು ವರದಿಗಳು ಬರುತ್ತಿದ್ದವು .

ಮಾಮೂಲಿನಂತೆ ಸರಿಯಾದ ಗುರಿ ಇಲ್ಲದ ಅಧಿಕಾರ,ಲಂಚ, ಭ್ರಷ್ಟಾಚಾರ ಇವುಗಳಿಂದ ಪರಿಸರ ನಲುಗಿತು,ನಲುಗುತ್ತಿದೆ.

ಆಗ ಕೆಲವು ಸ್ವಯಂಸೇವಾ ಸಂಘಗಳು ಈ ವಿಷಯದಲ್ಲಿ  ಕೆಲಸಮಾಡಲು ಸಾಕಷ್ಟು ಪ್ರಯತ್ನಿಸುತ್ತಿದ್ದವು .ಇದರ ವಿವರಣೆಯನ್ನು ನನ್ನ "ಘನ ತ್ಯಾಜ್ಯ ನಿರ್ವಹಣೆ"ಪುಸ್ತಕದಲ್ಲಿ ಸಂಪೂರ್ಣ ವಿವರಣೆ ನೀಡಿದ್ದೇನೆ.

ಮೈಸೂರಿನಲ್ಲಿ ಡಾ!! ಜಗದೀಶ, ಈಗ ನಿವೃತ್ತ ಪ್ರಾಧ್ಯಾಪಕರು ,ಪಾಲಿಮರ್ ವಿಜ್ಞಾನದಲ್ಲಿ ಪರಿಣಿತರು.ಹಲವಾರು ಪರಿಸರ ಸಂಬಂಧಿ ಕಾರ್ಯಕ್ರಮಗಳನ್ನು ಮೈಸೂರಿನಲ್ಲಿ ನಡೆಸುತ್ತಿದ್ದರು.

ನಾನು  ದೂರದರ್ಶನಲ್ಲಿ ಇದರ ಸಂಬಂಧ ಚರ್ಚೆ ನಡೆಸುತ್ತಿದ್ದೆ. ಇದರಲ್ಲಿ  ಸ್ನೇಹಿತರಾದ ಡಾ !!ಜಗದೀಶ್, ಕೆಲವು ಪರಿಣಿತರು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಕಾರ್ಪೊರೇಷನ್ ಅಧಿಕಾರಿಗಳು ಭಾಗಿಯಾಗುತ್ತಿದ್ದರು.

ನಂತರ ನಾನು :"ಪ್ಲಾಸ್ಟಿಕ್ ಮತ್ತು ಪರಿಸರ "ಎನ್ನುವ ಸಾಕ್ಷ್ಯ ಚಿತ್ರ ತಯಾರಿಸಿದ್ದೆ.ಇದು ದೂರದರ್ಶನದಲ್ಲಿ 30_40 ಬಾರಿ ಪ್ರಸಾರವಾಗುತ್ತು.

ವಿಷಯ ಸ್ವಲ್ಪ ಹೊಸದಾದ್ದರಿಂದ ನಾನು ಪದಗಳನ್ನು ಹುಡುಕಿ,ಸೃಷ್ಟಿಸಿ ಬಳಸುತ್ತಿದ್ದುದೂ ಉಂಟು.ಈಗ ಇವೆಲ್ಲ ಇತಿಹಾಸ.

 - ಎಂ.ನರಸಿಂಹಮೂರ್ತಿ


ಇದನ್ನೂ ಓದಿ: (ಪರ್ಯಾಯ.ಕಾಮ್‌ ವೆಬ್‌ ಸೈಟಿನ ಲೇಖನಗಳು ಪುಟಕ್ಕೆ ಭೇಟಿ ಕೊಡಿ)

ಪ್ಲಾಸ್ಟಿಕ್ ಬಾಟಲಿ ನೀರು ವಿಷಕಾರಿ, ಪರಿಸರಕ್ಕೆ ಹಾನಿಕರ; ಪರ್ಯಾಯ ಹುಡುಕಿ: ಕೇಂದ್ರಕ್ಕೆ ಮದ್ರಾಸ್ ಹೈ ಸೂಚನೆ

PARYAYA: ಛಾಯಾಚಿತ್ರ ನೆನಪು ಮೂಡಿಸಿದಾಗ:   ಛಾಯಾಚಿತ್ರ ನೆನಪು ಮೂಡಿಸಿದಾಗ ಕಿರು ಲೇಖನ-1 ನಾ ನು ಹೇಳಲು ಹೊರಟಿರುವುದು 94-95 ರ ಸಮಯದ ಘಟನೆ.ಪರಿಸರದ ವಿಷಯದಲ್ಲಿ   ಸ್ವಯಂ ಪ್ರೇರಣೆಯಿಂದ ಒಂದಷ್ಟು ಕೆಲಸ ಮಾಡುತ್...

Tuesday, August 16, 2022

PARYAYA: ಪ್ಲಾಸ್ಟಿಕ್ ಬಾಟಲಿ ನೀರು ವಿಷಕಾರಿ, ಪರಿಸರಕ್ಕೆ ಹಾನಿಕರ; ಪ...

ಪ್ಲಾಸ್ಟಿಕ್ ಬಾಟಲಿ ನೀರು ವಿಷಕಾರಿಪರಿಸರಕ್ಕೆ ಹಾನಿಕರ;

ಪರ್ಯಾಯ ಹುಡುಕಿ: ಕೇಂದ್ರಕ್ಕೆ ಮದ್ರಾಸ್ ಹೈ ಸೂಚನೆ

ಚೆನ್ನೈ: ಪ್ಲಾಸ್ಟಿಕ್ ಬಾಟಲಿಗಳು ಮತ್ತು ಬಬಲ್ ಟಾಪ್ ಕ್ಯಾನುಗಳ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ನೀರಿನ ವಿತರಣೆ ನಡೆಯುತ್ತಿರುವ ಬಗ್ಗೆ 2022 ಆಗಸ್ಟ್‌ 16ರ ಮಂಗಳವಾರ ಕಳವಳ ವ್ಯಕ್ತಪಡಿಸಿದ ಮದ್ರಾಸ್ ಹೈಕೋರ್ಟ್ಪರಿಣಾಮಕಾರಿ ಪರ್ಯಾಯ ಪ್ಯಾಕೇಜಿಂಗ್ ಪರಿಹಾರಗಳನ್ನು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಎಸ್ ವೈದ್ಯನಾಥನ್ ಮತ್ತು ಪಿಟಿ ಆಶಾ ಅವರನ್ನು ಒಳಗೊಂಡ ಪೀಠವು, ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದ್ದಾಗ ಇದನ್ನು ಗಮನಿಸಿ, "ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸಂಗ್ರಹವಾಗಿರುವ ಕುಡಿಯುವ ನೀರು ಪರಿಸರದ ಯೋಗಕ್ಷೇಮಕ್ಕೆ ಹಾನಿಕರವಷ್ಟೇ ಅಲ್ಲ, ನಮ್ಮ ಆರೋಗ್ಯದ ಗುಣಮಟ್ಟದ ಮೇಲೆಯೂ ಪರಿಣಾಮ ಬೀರುತ್ತದೆ" ಎಂದು ಹೇಳಿತು.

ʼಕಳಪೆ ಗುಣಮಟ್ಟವನ್ನು ಹೊಂದಿರುವ ಬಾಟಲಿಗಳಲ್ಲಿ ನೀರನ್ನು ದೀರ್ಘಕಾಲದವರೆಗೆ ಸಂಗ್ರಹಿಸುವುದರಿಂದ ಪ್ಲಾಸ್ಟಿಕ್ ಕಣಗಳು ನೀರಿನೊಂದಿಗೆ ಮಿಶ್ರಣಗೊಂಡು ಉತ್ತಮ ನೀರು ವಿಷಕಾರಿಯಾಗಿ ಪರಿವರ್ತನೆಗೊಳ್ಳುತ್ತದೆʼ ಎಂದು ನ್ಯಾಯಾಲಯವು ಗಮನಿಸಿತು. ಎಲ್ಲ ಸ್ಥಳಗಳಲ್ಲಿ ಬಬಲ್ ಟಾಪ್ ವಾಟರ್ ಕ್ಯಾನ್ ಬಳಕೆ ತಮಿಳುನಾಡಿನಲ್ಲಿ ಸಾಮಾನ್ಯವಾಗಿದೆಇದು ಜೀವಕ್ಕೆ ಹೆಚ್ಚು ಅಪಾಯಕಾರಿಯಾಗಿದೆ ಎಂದೂ ನ್ಯಾಯಾಲಯ ಹೇಳಿತು.

ರಾಜ್ಯದಲ್ಲಿ ಕುಡಿಯುವ ನೀರನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ನೀರಿನ ಕ್ಯಾನುಗಳನ್ನು ಹೇಗೆ ಸ್ವಚ್ಛಗೊಳಿಸಲಾಗುತ್ತದೆ ಎಂಬುದರ ಕುರಿತು ವಾಸ್ತವಸ್ಥಿತಿ ವರದಿಯನ್ನು ಸಲ್ಲಿಸುವಂತೆಯೂ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಸೂಚಿಸಿತು. ನೀರಿನ ಕ್ಯಾನ್‌ನುಗಳ ಬಾಳಿಕೆ ಅವಧಿ, ನೀರಿನ ಕ್ಯಾನುಗಳಲ್ಲಿ ಎಷ್ಟು ದಿನ ನೀರು ಸಂಗ್ರಹಿಸಲಾಗುತ್ತದೆ ಮತ್ತು ಈ ನೀರಿನ ಕ್ಯಾನುಗಳ ನಾಶಕ್ಕೆ ಅನುಸರಿಸುತ್ತಿರುವ ಕಾರ್ಯವಿಧಾನದ ಬಗ್ಗೆಯೂ ನ್ಯಾಯಾಲಯ ವಿಚಾರಿಸಿತು. ಈ ಬಗ್ಗೆ ದಾಖಲೆಗಳನ್ನು ನಿರ್ವಹಿಸಲಾಗಿದೆಯೇ ಎಂಬುದನ್ನು ಸೂಚಿಸುವಂತೆಯೂ ನ್ಯಾಯಾಲಯವು ರಾಜ್ಯಕ್ಕೆ ನಿರ್ದೇಶಿಸಿತು.

ಸ್ಯಾಚೆಟ್‌ಗಳ ಬದಲಿಗೆ ಬಾಟಲಿಗಳಲ್ಲಿ ಹಾಲನ್ನು ನೀಡುವ ಕಾರ್ಯಸಾಧ್ಯತೆಯ ಬಗೆಗೂ ನ್ಯಾಯಾಲಯವು ವಿಚಾರಿಸಿತು. ರಾಜ್ಯ ಸರ್ಕಾರದ ಸಹಕಾರಿ ಸಂಸ್ಥೆಯಾದ ಎಎವಿಐಎನ್‌ (AAVIN) ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಮೂಲಕ ಬಾಟಲಿಗಳಲ್ಲಿ ಹಾಲು ಖರೀದಿಸಲು ಗ್ರಾಹಕರಿಗೆ ಆಯ್ಕೆಯನ್ನು ನೀಡಬಹುದು ಅಥವಾ ಸ್ಯಾಚೆಟ್‌ಗಳಲ್ಲಿನ ಹಾಲಿನ ಪೂರೈಕೆಯನ್ನು ನಿರ್ಮೂಲನೆ ಮಾಡಲು ಅವಧಿಯನ್ನು ನೀಡಬಹುದು ಎಂದು ನ್ಯಾಯಾಲಯ ಸೂಚಿಸಿತು. ಅಪಾಯಕಾರಿಯಲ್ಲದ ಟೆಟ್ರಾ ಪ್ಯಾಕ್‌ಗಳಲ್ಲಿ ಹಾಲನ್ನು ಮಾರಾಟ ಮಾಡಲು AAVIN ಗೆ ನ್ಯಾಯಾಲಯ ನಿರ್ದೇಶಿಸಿತು.

ಅದೇ ರೀತಿ ಸ್ಯಾಚೆಟ್‌ಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಇತರ ನಿಬಂಧನೆಗಳು ಮತ್ತು ಖಾದ್ಯಗಳನ್ನು ಬದಲಿಗಳಲ್ಲಿ ಪ್ಯಾಕ್ ಮಾಡಬಹುದು ಎಂದು ನ್ಯಾಯಾಲಯ ಸೂಚಿಸಿತು. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತರುಡಿಎಂಎಸ್ ಕಾಂಪ್ಲೆಕ್ಸ್ತೆನಾಂಪೇಟೆಅವರನ್ನೂ ಪಕ್ಷವಾಗಿ ಪ್ರಕರಣಕ್ಕೆ ಸೇರ್ಪಡೆ ಮಾಡಿದ ನ್ಯಾಯಾಲಯ ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ತಮ್ಮ ಸಲಹೆಗಳನ್ನು ನೀಡುವಂತೆ ಅವರಿಗೆ ಸೂಚಿಸಿತು.

ಪ್ರಕರಣದ ಮುಂದಿನ ವಿಚಾರಣೆಯನ್ನು 
ಆಗಸ್ಟ್ 29 ರಂದು ಕೈಗೆತ್ತಿಕೊಳ್ಳುವಂತೆಯೂ ಪೀಠ ನಿರ್ದೇಶಿಸಿತು.


PARYAYA: ಪ್ಲಾಸ್ಟಿಕ್ ಬಾಟಲಿ ನೀರು ವಿಷಕಾರಿ, ಪರಿಸರಕ್ಕೆ ಹಾನಿಕರ; ಪ...:   ಪ್ಲಾಸ್ಟಿಕ್ ಬಾಟಲಿ ನೀರು ವಿಷಕಾರಿ , ಪರಿಸರಕ್ಕೆ ಹಾನಿ ಕರ; ಪರ್ಯಾಯ ಹುಡು ಕಿ: ಕೇಂದ್ರಕ್ಕೆ ಮದ್ರಾಸ್ ಹೈ ಸೂಚನೆ ಚೆನ್ನೈ: ಪ್ಲಾಸ್ಟಿಕ್ ಬಾಟಲಿಗಳು ಮತ್ತು ಬಬಲ್ ...