Showing posts with label ಸೇನೆ. Show all posts
Showing posts with label ಸೇನೆ. Show all posts

Wednesday, October 1, 2025

PARYAYA: ಸಿನಿಮಾ ದೃಶ್ಯವಲ್ಲ, ಪಾಕ್‌ ಆಕ್ರಮಿತ ಕಾಶ್ಮೀರದ ವಾಸ್ತವ!

 ಸಿನಿಮಾ ದೃಶ್ಯವಲ್ಲ, ಪಾಕ್‌ ಆಕ್ರಮಿತ ಕಾಶ್ಮೀರದ ವಾಸ್ತವ!

2025 ಅಕ್ಟೋಬರ್ 1ರ ಬುಧವಾರ ಪಾಕಿಸ್ತಾನದ ಪಂಜಾಬಿ ಸೈನ್ಯವು ಕಾಶ್ಮೀರಿ ಪ್ರತಿಭಟನಾಕಾರರನ್ನು ತಡೆಯಲು ದಾದ್ಯಾಲ್‌ನ ಪಾಲಕ್ ಸೇತುವೆಯ ಮೇಲೆ ಮೂರು ದೊಡ್ಡ ಕಂಟೈನರ್‌ಗಳನ್ನು ಇಟ್ಟು ಮಾರ್ಗವನ್ನು ಬಂದ್ ಮಾಡಿತ್ತು.

ಆದರೆಸ್ಥಳೀಯರು ಯಾವುದೇ ಸಾಧನಗಳಿಲ್ಲದೆಬರಿಗೈಯಲ್ಲೇ ಆ ಬೃಹತ್ ಕಂಟೈನರ್‌ಗಳನ್ನು ಸೇತುವೆಯಿಂದ ಕೆಳಗೆಮಂಗ್ಲಾ ಜಲಾಶಯಕ್ಕೆ ತಳ್ಳಿಬಿಟ್ಟಿದ್ದಾರೆ!

ಹಣದುಬ್ಬರ ಮತ್ತು ಆರ್ಥಿಕ ಸಂಕಷ್ಟಗಳ ವಿರುದ್ಧ ಸಿಡಿದೆದ್ದ ಜನರ ಆಕ್ರೋಶದ ಮುಂದೆ ಕಂಟೈನರ್‌ಗಳ ಬ್ಲಾಕೇಡ್ ನಡೆಯಲಿಲ್ಲ.

ಈ ಘಟನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ  (Pak occupied Kashmir /PoK) ತೀವ್ರಗೊಳ್ಳುತ್ತಿರುವ ಅಶಾಂತಿಗೆ ಸಾಕ್ಷಿಯಾಗಿದೆ. ಘರ್ಷಣೆಗಳಲ್ಲಿ ಇಬ್ಬರು ಪ್ರತಿಭಟನಾಕಾರರು ಮೃತಪಟ್ಟುಹಲವರು ಗಾಯಗೊಂಡಿದ್ದಾರೆ. ಆವಾಮಿ ಆಕ್ಷನ್ ಕಮಿಟಿ ಬಂದ್‌ಗೆ ಕರೆ ನೀಡಿದೆ.

ಉಗ್ರ ಆಕ್ರೋಶದಲ್ಲಿರುವ ಜನರನ್ನು ತಡೆಯಲು ಯಾವುದೇ ಶಕ್ತಿಗೂ ಸಾಧ್ಯವಿಲ್ಲ ಎಂದು ಈ ಘಟನೆ ಸಾರಿ ಹೇಳುತ್ತಿದೆ! ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಜನರ ಪ್ರತಿಭಟನೆಯ ಅಲೆ ದಿನದಿಂದ ದಿನಕ್ಕೆ ವ್ಯಾಪಕಗೊಳ್ಳುತ್ತಿದೆ ಎಂದು ವರದಿಗಳು ಹೇಳುತ್ತಿವೆ

ಎಕ್ಸ್‌ (ಹಿಂದಿನ ಟ್ವಿಟ್ಟರ್)‌ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡಿರುವ ಈ ವಿಡಿಯೋ ಪೋಸ್ಟ್‌ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ  ಹೆಚ್ಚು ವೀಕ್ಷಣೆಗಳನ್ನು ಕಂಡಿದೆ.

PARYAYA: ಸಿನಿಮಾ ದೃಶ್ಯವಲ್ಲ, ಪಾಕ್‌ ಆಕ್ರಮಿತ ಕಾಶ್ಮೀರದ ವಾಸ್ತವ!:  ಸಿನಿಮಾ ದೃಶ್ಯವಲ್ಲ , ಪಾಕ್‌ ಆಕ್ರಮಿತ ಕಾಶ್ಮೀರದ ವಾಸ್ತವ! 2025 ಅಕ್ಟೋಬರ್ 1ರ ಬುಧವಾರ  ಪಾಕಿಸ್ತಾನದ ಪಂಜಾಬಿ ಸೈನ್ಯವು ಕಾಶ್ಮೀರಿ ಪ್ರತಿಭಟನಾಕಾರರನ್ನು ತಡೆಯಲು ದಾ...

Sunday, May 18, 2025

PARYAYA: ಯೋಜನೆ, ತರಬೇತಿ, ಅನುಷ್ಠಾನ: ಸಂದಿತು ನ್ಯಾಯ

 ಯೋಜನೆ, ತರಬೇತಿ, ಅನುಷ್ಠಾನ: ಸಂದಿತು ನ್ಯಾಯ

ವದೆಹಲಿ: ಸೇನೆಯು ೨೦೨೫ ಮೇ ೧೮ರ ಭಾನುವಾರ ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಯ ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದೆ..

ಸಾಮಾಜಿಕ ಮಾಧ್ಯಮ ವೇದಿಕೆ ನಲ್ಲಿ ಆಪರೇಷನ್ ಸಿಂದೂರ ಕಾರ್ಯಾಚರಣೆಯ ಈ ಹೊಸ ವೀಡಿಯೊ ಬಿಡುಗಡೆ ಮಾಡಲಾಗಿದೆ.

"ಯೋಜಿಸಲಾಯಿತುತರಬೇತಿ ನೀಡಲಾಯಿತು ಮತ್ತು ಕಾರ್ಯಗತಗೊಳಿಸಲಾಯಿತು" ಎಂದು ಭಾರತೀಯ ಸೇನೆಯ ಪಶ್ಚಿಮ ಕಮಾಂಡ್, ಎಕ್ಸ್‌ ನಲ್ಲಿ ಪ್ರಕಟಿಸಿರುವ ವೀಡಿಯೊದಲ್ಲಿ ಹೇಳಿದೆ.

"ನ್ಯಾಯ ಸಲ್ಲಿಸಲಾಗಿದೆ" ಎಂದೂ ವಿಡಿಯೋ ಉದ್ಘೋಷಿಸಿದೆ.

ಸೇನೆಯ ಪಶ್ಚಿಮ ಕಮಾಂಡ್ ಹಂಚಿಕೊಂಡ ವೀಡಿಯೊದಲ್ಲಿಭದ್ರತಾ ಸಿಬ್ಬಂದಿಯೊಬ್ಬರು ಆಪರೇಷನ್ ಸಿಂದೂ ಪಾಕಿಸ್ತಾನಕ್ಕೆ ಒಂದು ಪಾಠಅದು ದಶಕಗಳಿಂದ ಕಲಿಯದ ಪಾಠ ಎಂದು ಹೇಳುವುದನ್ನು ಕೇಳಬಹುದು.

"ಇದೆಲ್ಲವೂ ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಪ್ರಾರಂಭವಾಯಿತು. ಇದು ಕೋಪವಲ್ಲ, ಲಾವಾ. ಮನಸ್ಸಿನಲ್ಲಿ ಒಂದೇ ಒಂದು ಆಲೋಚನೆ ಇತ್ತು - ಈ ಬಾರಿಅವರ ಪೀಳಿಗೆಗಳು ನೆನಪಿಡುವಂತಹ ಪಾಠವನ್ನು ನಾವು ಕಲಿಸುತ್ತೇವೆ. ಅದು ಸೇಡಿನ ಕ್ರಿಯೆಯಾಗಿರಲಿಲ್ಲಅದು ನ್ಯಾಯವಾಗಿತ್ತು. ಮೇ 9 ರ ರಾತ್ರಿರಾತ್ರಿ 9 ಗಂಟೆ ಸುಮಾರಿಗೆಕದನ ವಿರಾಮವನ್ನು ಉಲ್ಲಂಘಿಸಿದ ಎಲ್ಲ ಶತ್ರು ಠಾಣೆಗಳನ್ನು ಭಾರತೀಯ ಸೇನೆಯು ಮಣ್ಣುಮುಕ್ಕಿಸಿತು. ಆಪರೇಷನ್ ಸಿಂದೂ ಕೇವಲ ಒಂದು ಕ್ರಿಯೆಯಲ್ಲಇದು ಪಾಕಿಸ್ತಾನಕ್ಕೆ ಒಂದು ಪಾಠಅದು ದಶಕಗಳಿಂದ ಕಲಿಯದ ಪಾಠ." ಎಂದು ತಮ್ಮ ವೀಡಿಯೊದಲ್ಲಿಸೇನಾ ಸಿಬ್ಬಂದಿ ಉದ್ಘೋಷಣೆ ಮಾಡಿದ್ದಾರೆ.

ಭಾರತವು ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಒಂಬತ್ತು ಸ್ಥಳಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಏಪ್ರಿಲ್‌ ತಿಂಗಳ ೨೨ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಇದು ನಡೆಯಿತು. ಪಹಲ್ಗಾಮ್‌ ಹತ್ಯಾಕಾಂಡದಲ್ಲಿ 26 ಜನರು ಪ್ರಾಣ ಕಳೆದುಕೊಂಡಿದ್ದರು.

ಭಾರತದ ಕಾರ್ಯಾಚರಣೆಯ ನಂತರಪಾಕಿಸ್ತಾನವು ನಿಯಂತ್ರಣ ರೇಖೆ ಮತ್ತು ಜಮ್ಮು ಮತ್ತು ಕಾಶ್ಮೀರದಾದ್ಯಂತ ಶೆಲ್ ದಾಳಿಯ ಮೂಲಕ ಪ್ರತಿಕ್ರಿಯಿಸಿತು. ಗಡಿ ಪ್ರದೇಶಗಳಲ್ಲಿ ಡ್ರೋನ್ ದಾಳಿಯ ಪ್ರಯತ್ನಗಳು ಸಹ ನಡೆದವು. ನಂತರ ಭಾರತವು ಸಂಘಟಿತ ದಾಳಿ ನಡೆಸಿ ಪಾಕಿಸ್ತಾನದ 11 ವಾಯುನೆಲೆಗಳಲ್ಲಿರುವ ರಾಡಾರ್ ವ್ಯವಸ್ಥೆಗಳುಸಂವಹನ ಕೇಂದ್ರ, ಏರ್‌ ಫೀಲ್ಡ್ಳನ್ನು ಹೊಡೆದುರುಳಿಸಿತು. ಮೇ 10 ರಂದು ಉಭಯ ದೇಶಗಳು ಕದನವಿರಾಮಕ್ಕೆ ಒಪ್ಪಿಕೊಂಡವು.

ನಾಲ್ಕು ದಿನಗಳ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ನೂರಕ್ಕೂ ಹೆಚ್ಚು ಭಯೋತ್ಪಾದಕರು ಹತರಾದರು.

ಇವುಗಳನ್ನೂ ಓದಿರಿ: 
ನೂರ್‌ ಖಾನ್‌ ವಾಯುನೆಲೆ ಮೇಲೆ ದಾಳಿ: ಕಡೆಗೂ ಒಪ್ಪಿದ ಶೆಹಬಾಜ್

ಪೆಹಲ್ಗಾಮ್‌ ನರಹಂತಕರು ಖತಮ್?‌
ಕೈ ಮುಗಿವೆಯುದ್ದ ಬೇಡ ಎಂದದ್ದು ಏಕೆ ಗೊತ್ತಾ?
ಆಪರೇಷನ್‌ ಸಿಂಧೂರ ಮುಗಿದಿಲ್ಲ.. ಮಾತುಕತೆ ಪಿಒಕೆ ವಾಪಸಿಗೆ ಸೀಮಿತ

"ಷರತ್ತುಬದ್ಧ" ಕದನ ವಿರಾಮಸಿಂಧೂ ನೀರು ಹರಿಯುವುದಿಲ್ಲ
ಆಪರೇಷನ್‌ ಸಿಂಧೂರ್:‌ ೩ನೇ ದಿನ ಏನೇನಾಯಿತು?

PARYAYA: ಯೋಜನೆ, ತರಬೇತಿ, ಅನುಷ್ಠಾನ: ಸಂದಿತು ನ್ಯಾಯ:   ಯೋಜನೆ, ತರಬೇತಿ, ಅನುಷ್ಠಾನ: ಸಂದಿತು ನ್ಯಾಯ ನ ವದೆಹಲಿ: ಸೇನೆಯು ೨೦೨೫ ಮೇ ೧೮ರ ಭಾನುವಾರ ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಯ ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದೆ...