Showing posts with label ಕೋರ್ಟ್‌. Show all posts
Showing posts with label ಕೋರ್ಟ್‌. Show all posts

Wednesday, November 25, 2026

PARYAYA: ಹೀಟ್‌ ಬ್ಯಾಗಿನಿಂದ ಸಾವು: 17 ವರ್ಷದ ಬಳಿಕ ನ್ಯಾಯ

 ಹೀಟ್‌ ಬ್ಯಾಗಿನಿಂದ ಸಾವು: 17 ವರ್ಷದ ಬಳಿಕ ನ್ಯಾಯ

ಸೂರತ್‌ ಕೋರ್ಟ್‌ ಮಹತ್ವದ ತೀರ್ಪು

ಸಾಮಾನ್ಯ ಜ್ವರಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ಡಿನ ಖ್ಯಾತ ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್ ಅವರ ತಾಯಿ ಜೈತೂನ್ ಬೀಬಿ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೂರತ್ ನ್ಯಾಯಾಲಯ 2026 ನವೆಂಬರ್‌ 26ರ ಬುಧವಾರ ಮಹತ್ವದ ತೀರ್ಪು ನೀಡಿದೆ.

ಚಿಕಿತ್ಸೆಯಲ್ಲಿ ತೀವ್ರ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ವೈದ್ಯ ಡಾ. ಪರೇಶ್ ಭಜಿಯಾವಾಲಾ ಅವರನ್ನು ದೋಷಿ ಎಂದು ಪರಿಗಣಿಸಿರುವ ನ್ಯಾಯಾಲಯ, ಅವರಿಗೆ ಎರಡು ವರ್ಷಗಳ ಸೆರೆವಾಸದ ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಘಟನೆಯ ಹಿನ್ನೆಲೆ: 2009ರಲ್ಲಿ ಅಂದಿಗೆ 70 ವರ್ಷ ವಯಸ್ಸಾಗಿದ್ದ ಜೈತೂನ್ ಬೀಬಿ ಅವರು ಸಾಮಾನ್ಯ ಜ್ವರದ ಚಿಕಿತ್ಸೆಗಾಗಿ ಸೂರತ್ತಿನ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯ ಭಾಗವಾಗಿ ಅವರ ದೇಹದ ಮೇಲೆ ಹೀಟ್ ಬ್ಯಾಗ್ (ಶಾಖದ ಚೀಲ) ಇರಿಸಲಾಗಿತ್ತು. ವೈದ್ಯಕೀಯ ನಿಯಮಗಳ ಪ್ರಕಾರ ನಿಗದಿತ ಸಮಯದೊಳಗೆ ಆ ಹೀಟ್ ಬ್ಯಾಗನ್ನು ತೆಗೆಯಬೇಕಿತ್ತು. ಆದರೆ, ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರ ನಿರ್ಲಕ್ಷ್ಯದಿಂದಾಗಿ ಅದು ಇಡೀ ರಾತ್ರಿ ಅವರ ದೇಹದ ಮೇಲೆಯೇ ಉಳಿದುಕೊಂಡಿತ್ತು.

ದೀರ್ಘಕಾಲದವರೆಗೆ ಶಾಖ ತಗುಲಿದ್ದರಿಂದ ಜೈತೂನ್ ಬೀಬಿ ಅವರಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿದ್ದವು. ಪರಿಣಾಮವಾಗಿ, ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು.

17 ವರ್ಷಗಳ ಸುದೀರ್ಘ ಕಾನೂನು ಹೋರಾಟ: ತಮ್ಮ ತಾಯಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಇಸ್ಮಾಯಿಲ್ ದರ್ಬಾರ್ ಅವರ ಸಹೋದರಿ 2009ರಲ್ಲಿ ಸೂರತ್ತಿನ ಎಂಟನೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಳೆದ 17 ವರ್ಷಗಳಿಂದ ನ್ಯಾಯಾಲಯದಲ್ಲಿ ಸಾಕ್ಷ್ಯಗಳು ಮತ್ತು ಹೇಳಿಕೆಗಳ ಸುದೀರ್ಘ ವಿಚಾರಣೆ ನಡೆದಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ದೂರುದಾರರ ಪರ ವಕೀಲ ಕೇತನ್ ರೇಷಮ್ವಾಲಾ, "ಇದೊಂದು ಐತಿಹಾಸಿಕ ತೀರ್ಪು. ಸುದೀರ್ಘ ಕಾನೂನು ಹೋರಾಟಕ್ಕೆ ಇಂದು ನ್ಯಾಯ ಸಿಕ್ಕಿದೆ. ಚಿಕಿತ್ಸಾ ನಿಯಮಗಳನ್ನು ಉಲ್ಲಂಘಿಸಿ ನಿರ್ಲಕ್ಷ್ಯ ತೋರಿದ ವೈದ್ಯ ಡಾ. ಪರೇಶ್ ಭಜಿಯಾವಾಲಾ ಅವರಿಗೆ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ" ಎಂದು ತಿಳಿಸಿದ್ದಾರೆ.

PARYAYA: ಹೀಟ್‌ ಬ್ಯಾಗಿನಿಂದ ಸಾವು: 17 ವರ್ಷದ ಬಳಿಕ ನ್ಯಾಯ:   ಹೀಟ್‌ ಬ್ಯಾಗಿನಿಂದ ಸಾವು: 17 ವರ್ಷದ ಬಳಿಕ ನ್ಯಾಯ ಸೂರತ್‌ ಕೋರ್ಟ್‌ ಮಹತ್ವದ ತೀರ್ಪು ಸಾ ಮಾನ್ಯ ಜ್ವರಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವು ಡ...

Monday, September 12, 2022

PARYAYA: ಜ್ಞಾನವ್ಯಾಪಿ ಮಸೀದಿ: ಹಿಂದೂ ಪೂಜಾ ಕೋರಿಕೆ ಹಕ್ಕು ಎತ್ತಿ ಹ...

ಜ್ಞಾನವ್ಯಾಪಿ ಮಸೀದಿ: ಹಿಂದೂ ಪೂಜಾ ಕೋರಿಕೆ ಹಕ್ಕು ಎತ್ತಿ ಹಿಡಿದ ಕೋರ್ಟ್‌

ವಾರಾಣಸಿ: ವಾರಣಾಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಮುಸ್ಲಿಂ ಕಡೆಯ ಅರ್ಜಿಯನ್ನು 2022 ಸೆಪ್ಟೆಂಬರ್‌ 12 ರ ಸೋಮವಾರ ತಿರಸ್ಕರಿಸಿತು. ಇದರೊಂದಿಗೆ ಹಿಂದೂಗಳಿಗೆ ದೊಡ್ಡ ಗೆಲುವು ಪ್ರಾಪ್ತಿಯಾಯಿತು. ಜ್ಞಾನವಾಪಿ ಮಸೀದಿಯ ಹೊರ ಗೋಡೆಯ ಮೇಲೆ ಪತ್ತೆಯಾಗಿವೆ ಎನ್ನಲಾಗಿರುವ ಹಿಂದೂ ದೇವತಾ ವಿಗ್ರಹಗಳಿಗೆ ದೈನಂದಿನ  ಪೂಜೆಗೆ ಅನುಮತಿ ಕೋರಿ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು.

ʼಪೂಜೆಗೆ ಅವಕಾಶ ಕೋರಿ ಹಿಂದೂಗಳು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಅರ್ಹವಾಗಿದೆ’ ಎಂದು ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎ.ಕೆ. ವಿಶ್ವಾಸ್ ತೀರ್ಪು ನೀಡಿದರು.

ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ಜ್ಞಾನವಾಪಿ ಮಸೀದಿಯು ವಕ್ಫ್ ಆಸ್ತಿಯಾಗಿದೆ ಎಂದು ಹೇಳಿತ್ತು ಮತ್ತು ಹಿಂದೂ ಮಹಿಳೆಯರ ಪೂಜಾ ಕೋರಿಕೆ ಮನವಿಯನ್ನು ವಿಚಾರಣೆಗೆ ಸೀಕರಿಸುವುದನ್ನು ವಿರೋಧಿಸಿತ್ತು.

ಕೋಮು ಸೂಕ್ಷ್ಮ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳಬೇಕೇ ಎಂಬ ಬಗ್ಗೆ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರು ಕಳೆದ ತಿಂಗಳು ವಿಚಾರಣೆಯನ್ನು ಪೂರ್ಣಗೊಳಿಸಿ, ಆದೇಶವನ್ನು ಸೆಪ್ಟೆಂಬರ್ 12 ರವರೆಗೆ ಕಾಯ್ದಿರಿಸಿದ್ದರು. ಆರಾಧನೆಗೆ ಅನುಮತಿ ಕೋರಿದ ಅರ್ಜಿಯ ಯ ಕುರಿತು ನ್ಯಾಯಾಲಯದಲ್ಲಿ ವಿಚಾರಣೆಯು ಸಮರ್ಥನೀಯವಾಗಿದೆಯೇ ಮತ್ತು ಅರ್ಜಿಯು ಸಮರ್ಥನೀಯ ಆಧಾರದ ಮೇಲೆ ಇದೆಯೇ ಎಂಬುದರ ಕುರಿತು ಅವರು ನಿರ್ಧಾರವನ್ನು ನೀಡಿದ್ದು, ಮುಂದಿನ ವಿಚಾರಣೆಗೆ ಸೆಪ್ಟೆಂಬರ್‌ 22ರ ದಿನಾಂಕವನ್ನು ನಿಗದಿ ಪಡಿಸಿದರು.

ತೀರ್ಪು ತಮ್ಮ ಪರವಾಗಿ ಬಂದರೆ ಭಾರತೀಯ ಪುರಾತತ್ವ ಸಮೀಕ್ಷೆಯ (ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ/ಎಎಸ್‌ಐ) ಮೂಲಕ ಮಸೀದಿಯ ಒಳಭಾಗದಲ್ಲಿ ಪತ್ತೆಯಾಗಿರುವ  'ಶಿವಲಿಂಗ್' ನ ಕಾರ್ಬನ್ ಡೇಟಿಂಗ್‌ಗೆ ಪ್ರಯತ್ನಿಸುತ್ತೇವೆ ಎಂದು ಹಿಂದೂ ಕಕ್ಷಿದಾರರು ತೀರ್ಪಿಗೆ ಮುನ್ನ ಹೇಳಿದ್ದರು.


PARYAYA: ಜ್ಞಾನವ್ಯಾಪಿ ಮಸೀದಿ: ಹಿಂದೂ ಪೂಜಾ ಕೋರಿಕೆ ಹಕ್ಕು ಎತ್ತಿ ಹ...:   ಜ್ಞಾನವ್ಯಾಪಿ ಮಸೀದಿ: ಹಿಂದೂ ಪೂಜಾ ಕೋರಿಕೆ ಹಕ್ಕು ಎತ್ತಿ ಹಿಡಿದ ಕೋರ್ಟ್‌ ವಾರಾಣಸಿ : ವಾರಣಾಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಮುಸ್ಲಿಂ ಕಡೆ...