ಕೆನ್ ಕಲಾ ಶಾಲೆಯ ಆಡಳಿತವನ್ನು ನೋಡಿಕೊಳ್ಳುವ ಕುವೆಂಪು ಕಲಾ ಸಂಸ್ಥೆಯ
ಅಧ್ಯಕ್ಷರಾಗಿದ್ದ ಶಾರದಮ್ಮ ಅವರು ಬೆಂಗಳೂರಿನಲ್ಲಿ
ಕೆನ್ ಕಲಾ ಶಾಲೆಯನ್ನು ಸ್ಥಾಪಿಸಿ ಬೆಳೆಸುವಲ್ಲಿ ಆರ್. ಎಂ. ಹಡಪದ್ ಅವರಿಗೆ ಬೆನ್ನು ಮೂಳೆಯಂತೆ ದೃಢವಾಗಿ
ನಿಂತು ಬೆಂಬಲಿಸಿದ್ದರು.
ಗದಗಿನಲ್ಲಿ ಜನಿಸಿ, ಮದುವೆಯಾದ ಬಳಿಕ ಬಾದಾಮಿಗೆ ಬಂದಿದ್ದ ಶಾರದಾ
ಅವರು ಬೆಂಗಳೂರಿಗೆ ಬಂದ ಬಳಕ ಕಳೆದ 28 ವರ್ಷಗಳಿಂದ ಕೆನ್ ಕಲಾ ಶಾಲೆಯನ್ನೇ ತಮ್ಮ ಮನೆಯನ್ನಾಗಿ ಮಾಡಿಕೊಂಡಿದ್ದರು.
ಶಾಲೆಯ ಮಕ್ಕಳೊಂದಿಗೆ ಬೆರೆಯುವುದರ ಜೊತೆಗೆ ರಾತ್ರಿ ವೇಳೆಯಲ್ಲೂ
ಅಭ್ಯಾಸಕ್ಕಾಗಿ ಶಾಲೆಯಲ್ಲೇ ತಂಗುತ್ತಿದ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರ ಪಾಲಿಗೆ ಊಟವನ್ನು ಕೂಡಾ ನೀಡುತ್ತಿದ್ದ ಅವರು ಈ ಮಕ್ಕಳ ಪಾಲಿಗೆ ಸಾಕ್ಷಾತ್ ಅಮ್ಮನಂತೆಯೇ
ಇದ್ದರು.
ಶಾರದಮ್ಮ ಅವರು
ಕೆನ್ ಕಲಾ ಶಾಲೆಯ ಹಾಲಿ ಪ್ರಾಂಶುಪಾಲ ಉಮೇಶ ಹಡಪದ್ ಸೇರಿದಂತೆ ಇಬ್ಬರು ಪುತ್ರು, ಒಬ್ಬ ಪುತ್ರಿ ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು
ಅಗಲಿದ್ದಾರೆ.
