Friday, September 30, 2022

PARYAYA: ಹೊಸ ಸಂಸತ್‌ ಕಟ್ಟಡ ಮೇಲಿನ ಸಿಂಹ: ಕಾಯ್ದೆಯ ಉಲ್ಲಂಘನೆ ಇಲ್ಲ

ಹೊಸ ಸಂಸತ್‌  ಕಟ್ಟಡ ಮೇಲಿನ ಸಿಂಹ: ಕಾಯ್ದೆಯ ಉಲ್ಲಂಘನೆ ಇಲ್ಲ

ನವದೆಹಲಿ: ಸೆಂಟ್ರಲ್ ವಿಸ್ಟಾ ಯೋಜನೆಯ ಭಾಗವಾಗಿ ನಿರ್ಮಾಣ ಹಂತದಲ್ಲಿರುವ ಹೊಸ ಸಂಸತ್ತಿನ ಕಟ್ಟಡದ ಮೇಲೆ ಸ್ಥಾಪಿಸಲಾದ ಸಿಂಹದ ಪ್ರತಿಮೆಯು ಭಾರತದ ರಾಷ್ಟ್ರ ಲಾಂಛನ (ಅನುಚಿತ ಬಳಕೆ ನಿಷೇಧ) ಕಾಯಿದೆಯನ್ನು (2005) ಉಲ್ಲಂಘಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ 2022 ಸೆಪ್ಟೆಂಬರ್‌ 30ರ ಶುಕ್ರವಾರ ಹೇಳಿತು.

ನ್ಯಾಯಮೂರ್ತಿಗಳಾದ ಎಂಆರ್ ಷಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠವು, 2005ರ ರಾಷ್ಟ್ರ ಲಾಂಛನ (ಅಸಮರ್ಪಕ ಬಳಕೆ ನಿಷೇಧ) ಕಾಯ್ದೆ, 2005 ರ ಅಡಿಯಲ್ಲಿ ಅನುಮೋದಿಸಲಾದ ರಾಷ್ಟ್ರೀಯ ಲಾಂಛನದ ವಿನ್ಯಾಸಕ್ಕೆ ಹೊಸ ಶಿಲ್ಪವು ವಿರುದ್ಧವಾಗಿದೆ ಎಂದು ಆರೋಪಿಸಿ ಇಬ್ಬರು ವಕೀಲರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿತು.

ಹೊಸ ಲಾಂಛನದಲ್ಲಿರುವ ಸಿಂಹಗಳು ಹೆಚ್ಚು ಆಕ್ರಮಣಕಾರಿಯಾಗಿ ಕಂಡುಬರುತ್ತವೆ ಎಂಬ ಅರ್ಜಿದಾರರ ಅಹವಾಲಿಗೆನ್ಯಾಯಮೂರ್ತಿ ಶಾ ಅವರು "ಆ ಅನಿಸಿಕೆ ವ್ಯಕ್ತಿಯ ಮನಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ" ಎಂದು ಮೌಖಿಕವಾಗಿ ವಿಶ್ಲೇಷಿಸಿದರು.

ರಾಷ್ಟ್ರೀಯ ಲಾಂಛನದ ಅನುಮೋದಿತ ವಿನ್ಯಾಸಕ್ಕೆ ಸಂಬಂಧಿಸಿದಂತೆ ಕಲಾತ್ಮಕ ನಾವೀನ್ಯತೆ ಇರುವಂತಿಲ್ಲ ಎಂದು ಅರ್ಜಿದಾರ ವಕೀಲ ಅಲ್ದನಿಶ್ ರೀನ್ ಪ್ರತಿಪಾದಿಸಿದ್ದರು. ಪ್ರತಿಮೆಯಲ್ಲಿ ಸತ್ಯಮೇವ ಜಯತೇ ಎಂಬ ಬರಹ ಕೂಡಾ ಇಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

ಆದರೆಯಾವುದೇ ರೀತಿಯಲ್ಲೂ ಶಿಲ್ಪದಿಂದ ಕಾಯ್ದೆ ಉಲ್ಲಂಘನೆಯಾಗಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.

"ಅರ್ಜಿದಾರರ ಅಹವಾಲನ್ನು ಖುದ್ದಾಗಿ ಆಲಿಸಿದ ನಂತರ ಮತ್ತು ಲಾಂಛನದ ಪರಿಶೀಲನೆಯ ನಂತರಇದು ೨೦೦೫ರ ಕಾಯಿದೆಯ ಯಾವುದೇ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಹೇಳಲಾಗುವುದಿಲ್ಲ ಮತ್ತು ರ ಕಾಯಿದೆಯನ್ನು ಉಲ್ಲಂಘಿಸಲಾಗಿದೆ ಎಂದು ಹೇಳಲಾಗುವುದಿಲ್ಲ. ಕೇಂದ್ರ ವಿಸ್ಟಾ ಯೋಜನೆಯಡಿ ನವದೆಹಲಿಯಲ್ಲಿ ಸ್ಥಾಪಿಸಲಾದ ಭಾರತದ ರಾಷ್ಟ್ರ ಲಾಂಛನವನ್ನು ಕನಿಷ್ಠ 2005ರ ಕಾಯಿದೆಯನ್ನು ಉಲ್ಲಂಘಿಸಿ ಸ್ಥಾಪಿಸಲಾಗಿದೆ ಎಂದು ಹೇಳಲಾಗುವುದಿಲ್ಲ. ರಿಟ್ ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ಪೀಠವು ಆದೇಶದಲ್ಲಿ ತಿಳಿಸಿತು.

ವಕೀಲರಾದ ಅಲ್ದಾನೀಶ್ ರೀನ್ ಮತ್ತು ರಮೇಶ್ ಕುಮಾರ್ ಮಿಶ್ರಾ ಅವರು ಸಲ್ಲಿಸಿದ ಅರ್ಜಿಯ ಪ್ರಕಾರಹೊಸ ಲಾಂಛನವು ಭಾರತದ ರಾಷ್ಟ್ರ ಲಾಂಛನದ (ಅನುಚಿತ ಬಳಕೆ ನಿಷೇಧ) ಕಾಯ್ದೆಯ (2005೫)ರ ವಿವರಣೆ ಮತ್ತು ವಿನ್ಯಾಸವನ್ನು ಉಲ್ಲಂಘಿಸುತ್ತದೆ ಎಂದು ತಮ್ಮ ಅರ್ಜಿಯಲ್ಲಿ ವಾದಿಸಿದ್ದರು.

PARYAYA: ಹೊಸ ಸಂಸತ್‌ ಕಟ್ಟಡ ಮೇಲಿನ ಸಿಂಹ: ಕಾಯ್ದೆಯ ಉಲ್ಲಂಘನೆ ಇಲ್ಲ:   ಹೊಸ ಸಂಸ ತ್‌  ಕಟ್ಟಡ ಮೇಲಿ ನ ಸಿಂಹ: ಕಾಯ್ದೆಯ ಉಲ್ಲಂಘನೆ ಇಲ್ಲ ನವದೆಹಲಿ: ಸೆಂಟ್ರಲ್ ವಿಸ್ಟಾ ಯೋಜನೆಯ ಭಾಗವಾಗಿ ನಿರ್ಮಾಣ ಹಂತದಲ್ಲಿರುವ ಹೊಸ ಸಂಸತ್ತಿನ ಕಟ್ಟಡದ ಮೇಲ...

Thursday, September 29, 2022

PARYAYA: ಇಂದಿನ ಇತಿಹಾಸ History Today ಸೆಪ್ಟೆಂಬರ್‌ 29

ಇಂದಿನ ಇತಿಹಾಸ History Today ಸೆಪ್ಟೆಂಬರ್‌ 29

2022: ವಾಷಿಂಗ್ಟನ್:‌ “ಆಲಿಸ್ʼ ಹೆಸರಿನ ವಿಶ್ವದ ಮೊತ್ತ ಮೊದಲ ಸರ್ವ ವಿದ್ಯುತ್‌ ವಿಮಾನವು ತನ್ನ ಚೊಚ್ಚಲ ಹಾರಾಟವನ್ನು 2022 ಸೆಪ್ಟೆಂಬರ್‌ 29ರ ಗುರುವಾರ ಯಶಸ್ವಿಯಾಗಿ ಪೂರ್ಣಗೊಳಿಸಿತು. ಎವಿಯೇಷನ್ ಏರ್‌ಕ್ರಾಫ್ಟ್‌ನಿಂದ ತಯಾರಿಸಲ್ಪಟ್ಟಿರುವ ಈ ವಿಮಾನ ವಾಯವ್ಯ ಅಮೆರಿಕದ ಗ್ರಾಂಟ್ ಕೌಂಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (MWH) ಬೆಳಿಗ್ಗೆ 7:10 ಕ್ಕೆ ಹೊರಟಿತು ಮತ್ತು 3,500 ಅಡಿ ಎತ್ತರದಲ್ಲಿ 8 ನಿಮಿಷಗಳ ಕಾಲ ಹಾರಾಟ ನಡೆಸಿತು. ʼಅಲಿಸ್‌ʼ ವಿಮಾನವು ಶೂನ್ಯ ಮಾಲಿನ್ಯದೊಂದಿಗೆ ಹಾರುತ್ತದೆ. ಲೈಟ್ ಜೆಟ್‌ಗಳು ಅಥವಾ ಉನ್ನತ-ಮಟ್ಟದ ಟರ್ಬೊಪ್ರೊಪ್‌ಗಳಿಗೆ ಹೋಲಿಸಿದರೆ ಪ್ರತಿ ಹಾರಾಟದ ಗಂಟೆಗೆ ಕಾರ್ಯನಿರ್ವಹಿಸಲು ಕೇವಲ ಒಂದು ಭಾಗವನ್ನು ಮಾತ್ರ ವೆಚ್ಚ ಮಾಡುತ್ತದೆ. ಇದು 9 ಆಸನ 6- ಆಸನಗಳು, ಎಕ್ಸಿಕ್ಯೂಟಿವ್ ಕ್ಯಾಬಿನ್ ಮತ್ತು ಇಕಾರ್ಗೋ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ.

2022: ನವದೆಹಲಿ:  ಎಲ್ಲ ವಿವಾಹಿತ ಅಥವಾ ಅವಿವಾಹಿತ ಮಹಿಳೆಯರು ಗರ್ಭಧಾರಣೆಯ 24 ವಾರಗಳವರೆಗೆ ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರಾಗಿರುತ್ತಾರೆ ಎಂದು ಭಾರತದ ಸುಪ್ರೀಂಕೋರ್ಟ್‌ 2022 ಸೆಪ್ಟೆಂಬರ್‌ 29ರ ಗುರುವಾರ ಮಹತ್ವದ ತೀರ್ಪು ನೀಡಿತು. "ಮಹಿಳೆಯರ ವೈವಾಹಿಕ ಸ್ಥಿತಿಯು ಅನಗತ್ಯ ಗರ್ಭಧಾರಣೆಯನ್ನು ಸ್ಥಗಿತಗೊಳಿಸುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ.ಒಂಟಿ ಮತ್ತು ಅವಿವಾಹಿತ ಮಹಿಳೆಯರಿಗೆ ವೈದ್ಯಕೀಯ ಗರ್ಭಪಾತದ ಕಾಯಿದೆ ಮತ್ತು ನಿಯಮಗಳ ಅಡಿಯಲ್ಲಿ ಗರ್ಭಧಾರಣೆಯ 24 ವಾರಗಳವರೆಗೆ ಗರ್ಭಪಾತ ಮಾಡುವ ಹಕ್ಕಿದೆ" ಎಂದು ಸುಪ್ರೀಂಕೋರ್ಟ್‌ ಹೇಳಿತು.

2020: ನವದೆಹಲಿ
ಏಕಪಕ್ಷೀಯವಾಗಿ ವ್ಯಾಖ್ಯಾನಿಸಲಾದ ೧೯೫೯  ವಾಸ್ತವಿಕ ನಿಯಂತ್ರಣ ರೇಖೆಯನ್ನು (ಎಲ್ಎಸಿತಾನು ಎಂದಿಗೂ ಒಪ್ಪಿಕೊಂಡಿಲ್ಲ ಎಂದು ಭಾರತ 2020 ಸೆಪ್ಟೆಂಬರ್ 29ರ ಮಂಗಳವಾರ ಖಡಕ್ಕಾಗಿ ಹೇಳಿದ್ದುಚೀನಾದೊಂದಿಗಿನ ವಿವಿಧ ಒಪ್ಪಂದಗಳು ಎರಡೂ ದೇಶಗಳನ್ನು ಗಡಿಯ ಜೋಡಣೆಯ ಸಾಮಾನ್ಯ ತಿಳುವಳಿಕೆಗೆ ಬದ್ಧವಾಗಿರಿಸಿವೆ ಎಂದು ತಿಳಿಸಿತು. ಚೀನಾದ ಪ್ರಧಾನ ಮಂತ್ರಿ ಚೌ ಎನ್ ಲೈ ಅವರು ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ನವೆಂಬರ್ ೧೯೫೯  ಪತ್ರದಲ್ಲಿ ಪ್ರಸ್ತಾಪಿಸಿದ ಎಲ್ಎಸಿಗೆ ಬದ್ಧವಾಗಿದೆ ಎಂದು ಹೇಳಿದ್ದನ್ನು ಉಲ್ಲೇಖಿಸಿದ ಪತ್ರಿಕಾ ವರದಿಯೊಂದಕ್ಕೆ ವಿದೇಶಾಂಗ ವಿದೇಶಾಂಗ ವ್ಯವಹಾರಗಳ ಸಚಿವಾಲಯವು  ಪ್ರತಿಕ್ರಿಯೆಯನ್ನು ನೀಡಿತು೧೯೬೧ರಲ್ಲಿ ಚೀನಾದ ನಿಲುವನ್ನು ಮೊದಲ ಬಾರಿಗೆ ತಿರಸ್ಕರಿಸಿದಂದಿನಿಂದ ಕಳೆದ ೬೧ ವರ್ಷಗಳಿಂದ ಭಾರತವು ಚೀನೀಯರ ಕಲ್ಪನಾ ಗಡಿಯನ್ನು ತಿರಸ್ಕರಿಸುತ್ತಲೇ ಬಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿತುಏಕಪಕ್ಷೀಯವಾಗಿ ವ್ಯಾಖ್ಯಾನಿಸಲಾದ ೧೯೫೯  ವಾಸ್ತವ ನಿಯಂತ್ರಣ ರೇಖೆಯನ್ನು (ಎಲ್ಎಸಿಭಾರತ ಎಂದಿಗೂ ಸ್ವೀಕರಿಸಿಲ್ಲ ನಿಲುವು ಸ್ಥಿರವಾದುದಾಗಿದ್ದು ಚೀನಾವೂ ಸೇರಿದಂತೆ ಎಲ್ಲರಿಗೂ ಗೊತ್ತಿರುವಂತಹುದಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದರು. (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿರಿ)

2020: ನವದೆಹಲಿಕರ್ನಾಟಕದ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ೧೦ ರಾಜ್ಯಗಳಲ್ಲಿನ ೫೪ ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರದಲ್ಲಿ ಕ್ರಮವಾಗಿ ನವೆಂಬರ್  ಮತ್ತು  ರಂದು ಉಪ ಚುನಾವಣೆಗಳು ನಡೆಯಲಿವೆ ಎಂದು ಚುನಾವಣಾ ಆಯೋಗ 2020 ಸೆಪ್ಟೆಂಬರ್ 29ರ ಮಂಗಳವಾರ ಪ್ರಕಟಿಸಿತುನವೆಂಬರ್  ರಂದು ಬಿಹಾರದ ವಾಲ್ಮೀಕಿ ನಗರದ ಲೋಕಸಭಾ ಕ್ಷೇತ್ರ ಮತ್ತು ಮಣಿಪುರದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಗಳು ನಡೆಯಲಿವೆಅದೇ ದಿನ ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲೂ ಉಪಚುನಾವಣೆ ನಡೆಯಲಿದೆಮತಗಳ ಎಣಿಕೆ ನವೆಂಬರ್ ೧೨ರಂದು ನಡೆಯಲಿದ್ದುಚುನಾವಣೆಯ ಫಲಿತಾಂಶಗಳನ್ನು ನವೆಂಬರ್ ೧೨ ರೊಳಗೆ ಪ್ರಕಟಿಸಲಾಗುವುದುಅಕ್ಟೋಬರ್ ೨೮ ರಿಂದ ನವೆಂಬರ್  ರವರೆಗೆ ನಡೆಯಲಿರುವ ಮೂರು ಹಂತದ ಬಿಹಾರ ವಿಧಾನಸಭಾ ಚುನಾವಣೆಯ ವೇಳೆ ಪಟ್ಟಿ ಪ್ರಕಟಿಸಿದ ಬಳಿಕ ಚುನಾವಣಾ ಆಯೋಗವು ವಿವಿಧ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭಾ ಉಪಚುನಾವಣೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿರಿ)

2020: ನವದೆಹಲಿಪ್ರತಿಭಟನೆಗಳ ಹೆಸರಿನಲಿ ರೈತರು ಪೂಜಿಸುವ ಸಲಕರಣೆಗಳಿಗೆ ಬೆಂಕಿ ಹಚ್ಚುವ ಮೂಲಕ ಅವರು ರೈತರನ್ನು ಅವಮಾನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ 2020 ಸೆಪ್ಟೆಂಬರ್ 29ರ ಮಂಗಳವಾರ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ದೆಹಲಿಯ ಹೃದಯ ಭಾಗದಲ್ಲಿರುವ ಇಂಡಿಯಾಗೇಟ್ ಹುಲ್ಲುಹಾಸಿನ ಬಳಿಯ ರಾಜಪಥದಲ್ಲಿ ಪಂಜಾಬ್ ಕಾಂಗ್ರೆಸ್ಸಿನ ಯುವ ಘಟಕದ ಸದಸ್ಯರು ಟ್ರ್ಯಾಕ್ಟರಿಗೆ ಬೆಂಕಿ ಹಚ್ಚಿದ ಘಟನೆಯನ್ನು ಉಲ್ಲೇಖಿಸಿದ ಪ್ರಧಾನಿ ವಿಪಕ್ಷಗಳ ವಿರುದ್ಧ ಹರಿ ಹಾಯುವುದರ ಜೊತೆಗೆ ಕೃಷಿ ಮಸೂದೆಗಳನ್ನು ಪ್ರಬಲವಾಗಿ ಸಮರ್ಥಿಸಿದರುದೊಡ್ಡ ರೈತರ ಗುಂಪುಗಳುವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದಲ್ಲಿಹೊಸ ಕಾನೂನುಗಳನ್ನು ಪ್ರತಿಭಟಿಸುವುದನ್ನು ಮುಂದುವರೆಸುತ್ತಿವೆಕೃಷಿ ಉತ್ಪನ್ನಗಳ ಮಾರಾಟದ ಮೇಲಿನ ನಿಯಂತ್ರಣ ರದ್ದು ಕ್ರಮದಿಂದ ಕೃಷಿ ವ್ಯವಹಾರಗಳಲ್ಲಿ ಪ್ರಬಲ ಕಾರ್ಪೋರೇಟ್ ನಿಯಂತ್ರಣ ಹೆಚ್ಚಾಗುತ್ತದೆ ಮತ್ತು ರೈತರ ಚೌಕಾಶಿ ಬಲವು ಇನ್ನಷ್ಟು ಕುಗ್ಗುತ್ತದೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆಕೃಷಿ ಸುಧಾರಣೆ ಕಾಯ್ದೆಯನ್ನು ವಿರೋಧಿಸಿರುವ ಭಾರತೀಯ ಜನತಾ ಪಕ್ಷದ ಹಳೆಯ ಮಿತ್ರ ಪಕ್ಷಗಳಲ್ಲಿ ಒಂದಾದ ಶಿರೋಮಣಿ ಅಕಾಲಿ ದಳವು ಆಡಳಿತಾರೂಢ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದಿಂದ (ಎನ್ ಡಿಎಹೊರ ಬಂದಿದೆರೈತರ ಸ್ವಾತಂತ್ರ್ಯವನ್ನು ವಿರೋಧ ಪಕ್ಷಗಳು ವಿರೋಧಿಸುತ್ತಿವೆ ಎಂದು ಆಪಾದಿಸಿದ ಪ್ರಧಾನಿರಾಷ್ಟ್ರ ಹಿತದ ಎಲ್ಲವನ್ನೂ ವಿರೋಧಿಸುವುದನ್ನು  ಜನರು ಚಾಳಿಯಾಗಿ ಮಾಡಿಕೊಂಡಿದ್ದಾರೆಇವರ ರಾಜಕೀಯದಲ್ಲಿ ಇರುವ ಏಕೈಕ ಮಾರ್ಗವೆಂದರೆ ವಿರೋಧಿಸುವುದು ಎಂದು ಚುಚ್ಚಿದರು. (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿರಿ)

2020: ನದೆಹಲಿಪಾಕಿಸ್ತಾನದ ‘ಮನಸ್ಸಿಲ್ಲದ ಮತ್ತು ಅಸಹಕಾರ ಮನೋಭಾವದ ಪರಿಣಾಮವಾಗಿ ೨೦೦೮  ಮುಂಬೈ ದಾಳಿ ಮತ್ತು ಪಠಾಣ್ಕೋಟ್ ವಾಯುನೆಲೆಯ ಮೇಲಿನ ೨೦೧೬  ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಇನ್ನೂ ನ್ಯಾಯ ದೊರಕಿಲ್ಲ ಎಂದು ಭಾರತ ಹೇಳಿದೆಭಯೋತ್ಪಾದನೆಯ ಸಂತ್ರಸ್ತರ ಗುಂಪಿನ ಮಂತ್ರಿಮಂಡಲದ ಸಭೆಯಲ್ಲಿ 2020 ಸೆಪ್ಟೆಂಬರ 28ರ ಸೋಮವಾರ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಪೂರ್ವವಿಜಯ್ ಠಾಕೂರ್ ಸಿಂಗ್, ’ತಮ್ಮ ವಿರುದ್ಧದ ಅಪರಾಧಗಳಿಗಾಗಿ ಭಯೋತ್ಪಾದನೆಗೆ ಒಳಗಾದವರ ನ್ಯಾಯ ಪಡೆಯುವ ಹಕ್ಕನ್ನು ವಿಶ್ವ ಸಮುದಾಯವು ಕಳೆದುಕೊಳ್ಳಬಾರದು ಎಂದು ಹೇಳಿದರುವರ್ಚುವಲ್ ಸಭೆಯನ್ನು ಅಫ್ಘಾನಿಸ್ತಾನ ಮತ್ತು ಸ್ಪೇನ್ ವಿದೇಶಾಂಗ ಸಚಿವರುಗುಂಪಿನ ಸಹ-ಅಧ್ಯಕ್ಷರು ಮತ್ತು ವಿಶ್ವಸಂಸ್ಥೆ ಭಯೋತ್ಪಾದನಾ ನಿಗ್ರಹ ಕಚೇರಿ (ಯುಎನ್ಒಸಿಟಿಆಯೋಜಿಸಿತ್ತು.  "೨೦೦೮  ಮುಂಬೈ ಭಯೋತ್ಪಾದಕ ದಾಳಿ ಮತ್ತು ೨೦೧೬  ಪಠಾಣ್ಕೋಟ್ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಇನ್ನೂ ನ್ಯಾಯ ದೊರಕಿಲ್ಲ ಎಂದು ನಾನು ಗಮನ ಸೆಳೆಯಲು ಬಯಸುತ್ತೇನೆಇದಕ್ಕೆ ಒಂದು ನಿರ್ದಿಷ್ಟ ದೇಶದ ಇಷ್ಟವಿಲ್ಲದಿರುವಿಕೆ ಮತ್ತು ಅಸಹಕಾರ ಮನೋಭಾವದ ವರ್ತನೆ ಕಾರಣ ಎಂದು ಅವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿರಿ)

2020: ನವದೆಹಲಿವಿವಾದಿತ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿ ಚುನಾವಣೆ ನಡೆಸುವ ಮತ್ತು ನೆರೆಯ ತನ್ನ ಐದನೇ ಪ್ರಾಂತ್ಯವನ್ನಾಗಿ ಮಾಡುವ ಪಾಕಿಸ್ತಾನದ ಯೋಜನೆಯನ್ನು ಭಾರತ 2020 ಸೆಪ್ಟೆಂಬರ್ 29ರ ಮಂಗಳವಾರ ತೀವ್ರವಾಗಿ ವಿರೋಧಿಸಿತುಇಸ್ಲಾಮಾಬಾದ್ ತಾನು ಅಕ್ರಮವಾಗಿ ಅತಿಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ವಸ್ತುಸ್ಥಿತಿ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಭಾರತ ಹೇಳಿತುಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾದ ಗಿಲ್ಗಿಟ್-ಬಾಲ್ಟಿಸ್ತಾನದ ಸ್ಥಾನಮಾನದ ಬಗ್ಗೆ ಉಭಯ ದೇಶಗಳು ಇತ್ತೀಚಿನ ವಾರಗಳಲ್ಲಿ ಹಲವಾರು ಬಾರಿ ವಿಶ್ವಸಂಸ್ಥೆಯಂತಹ  ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ  ವಿಷಯವನ್ನು ಕಿಡಿಕಾರಿವೆಗಿಲ್ಗಿಟ್-ಬಾಲ್ಟಿಸ್ತಾನದ ಶಾಸಕಾಂಗ ಸಭೆಗೆ ನವೆಂಬರ್ ೧೫ ರಂದು ಚುನಾವಣೆ ನಡೆಸಲು ಪಾಕಿಸ್ತಾನ ಸರ್ಕಾರ ಯೋಜಿಸಿದೆ ಬಳಿಕ  ಪ್ರದೇಶವನ್ನು ಪೂರ್ಣ ಪ್ರಮಾಣದ ಪ್ರಾಂತ್ಯವನ್ನಾಗಿ ಮಾಡುವತ್ತ ಸಾಗಲು ಪಾಕಿಸ್ತಾನ ಉದ್ದೇಶಿಸಿದೆ. (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿರಿ)

2020: ನವದೆಹಲಿಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯು (ಎಐಕೆಎಸ್ಸಿಸಿಅಕ್ಟೋಬರ್  ರಿಂದ ಬೃಹತ್ ಅಖಿಲ ಭಾರತ ರೈತರ ಪ್ರತಿಭಟನೆ ನಡೆಸುವ ಯೋಜನೆಯನ್ನು 2020 ಸೆಪ್ಟೆಂಬರ್ 29ರ ಮಂಗಳವಾರ ಪ್ರಕಟಿಸಿತು. ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿರುವಾಗ ಕಾಂಗ್ರೆಸ್ ಕಾರ್ಯಕರ್ತರು ಟ್ರ್ಯಾಕ್ಟರಿಗೆ ಬೆಂಕಿ ಹಚ್ಚಿದ ಒಂದು ದಿನದ ನಂತರ ಅವರಿಂದ  ನಿರ್ಧಾರ ಬಂದಿದೆಪ್ರಧಾನಿ ನರೇಂದ್ರ ಮೋದಿ ಅವರು  ಘಟನೆಯನ್ನು ’ರೈತರಿಗೆ ಮಾಡಿದ ಅವಮಾನ ಎಂದು ಟೀಕಿಸಿದ್ದಾರೆ ಮಧ್ಯೆಮೂರು ಕೃಷಿ ಕಾನೂನುಗಳ ಬಗ್ಗೆ ಆಂದೋಲನ ನಡೆಸುತ್ತಿರುವ ಪಂಜಾಬಿನ ರೈತರು ಇಂದು ತಮ್ಮ ’ರೈಲು ರೋಕೊ ಕೋಲಾಹಲವನ್ನು ಆರನೇ ದಿನವೂ ಮುಂದುವರೆಸಿದರು ಮತ್ತು ಅದನ್ನು ಅನಿರ್ದಿಷ್ಟ ಅವಧಿಗೆ ವಿಸ್ತರಿಸಲು ನಿರ್ಧರಿಸಿದರು. (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿರಿ)



PARYAYA: ಇಂದಿನ ಇತಿಹಾಸ History Today ಸೆಪ್ಟೆಂಬರ್‌ 29:   ಇಂದಿನ ಇತಿಹಾಸ History Today ಸೆಪ್ಟೆಂಬರ್‌ 29 2022: ವಾಷಿಂಗ್ಟನ್ :‌ “ ಆಲಿಸ್ ʼ ಹೆಸರಿನ ವಿಶ್ವದ ಮೊತ್ತ ಮೊದಲ ಸರ್ವ ವಿದ್ಯುತ್‌ ವಿಮಾನವು ತನ್ನ ಚೊಚ್ಚಲ ಹಾರ...