Showing posts with label ಸತೀಶ್‌ ಪಟ್ಲ. Show all posts
Showing posts with label ಸತೀಶ್‌ ಪಟ್ಲ. Show all posts

Tuesday, May 13, 2025

PARYAYA: ಪೆಹಲ್ಗಾಮ್‌ ನರಹಂತಕರು ಖತಮ್?‌

 ಪೆಹಲ್ಗಾಮ್‌ ನರಹಂತಕರು ಖತಮ್?‌

ಭಾರತೀಯ ಸೇನೆ ಕಾರ್ಯಾಚರಣೆ: ೩ ಉಗ್ರರು ಹತ

ವದೆಹಲಿ: ಜಮ್ಮು -ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಶೂಕುಲ್‌ ಕೆಲ್ಲರ್‌ ಪ್ರದೇಶದ ದಟ್ಟ ಕಾಡಿನ ಒಳಗೆ ಅವಿತು ಕುಳಿತಿದ್ದ ನಾಲ್ವರು ಉಗ್ರಗಾಮಿಗಳ ಪೈಕಿ ಮೂವರನ್ನು ಭಾರತೀಯ ಸೇನಾ ಪಡೆ ಇಂದು (೨೦೨೦೫ ಮೇ ೧೩) ತರಿದು ಹಾಕಿದೆ.

ಈ ಉಗ್ರಗಾಮಿಗಳು ಪೆಹಲ್ಗಾಮ್‌ನಲ್ಲಿ ಏಪ್ರಿಲ್‌ ೨೨ರಂದು ನರಮೇಧ ನಡೆಸಿದ ರಕ್ಕಸರು ಎಂದು ಅನುಮಾನಿಸಲಾಗಿದೆ. ಹತ ಉಗ್ರಗಾಮಿಗಳ ಶವಗಳು ಸೈನಿಕರ ವಶದಲ್ಲಿದೆ ಎಂದು ವರದಿಗಳು ಹೇಳಿವೆ.

ಹತರಾಗಿರುವ ಮೂವರು ಉಗ್ರಗಾಮಿಗಳ ಪೈಕಿ ಒಬ್ಬಾತ ಪೆಹಲ್ಗಾಮ್‌ ಹತ್ಯಾಕಾಂಡದ ಹೊಣೆ ಹೊತ್ತುಕೊಂಡಿದ್ದ ದಿ ರೆಸಿಸ್ಟೆನ್ಸ್‌ ಫ್ರಂಟ್‌ (ಟಿಆರ್ ಎಫ್)‌ ಸಂಘಟನೆಯ ಮುಖ್ಯಸ್ಥ ಹಾಗೂ ಹತ್ಯಾಕಾಂಡದ ಸೂತ್ರಧಾರಿ ಶಾಹಿದ್‌ ಕುಟ್ಟೆ ಎಂಬುದಾಗಿ ಗುರುತಿಸಲಾಗಿದೆ. ಇನ್ನಿಬ್ಬರು ಆತನ ಸಹಚರರು ಎಂದು ಇಕನಾಮಿಕ್ಸ್‌ ಟೈಮ್‌ ವರದಿ ಮಾಡಿದೆ. 

ನಾಲ್ಕನೇ ಉಗ್ರನಿಗಾಗಿ ಯೋಧರು ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಶೋಪಿಯಾನಿನ ಶೋಕುಲ್‌ ಕೆಲ್ಲರ್‌ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ರಾಷ್ಟ್ರೀಯ ರೈಫಲ್‌ ಘಟಕದ ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಭಾರತೀಯ ಸೇನೆ ಈ ಶೋಧ ಮತ್ತು ನಾಶ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

ಕಾರ್ಯಾಚರಣೆಯ ಸಮಯದಲ್ಲಿ ಭಯೋತ್ಪಾದಕರು ಭಾರೀ ಪ್ರಮಾಣದಲ್ಲಿ ಗುಂಡು ಹಾರಿಸಿದರು. ಪರಿಣಾಮವಾಗಿ ಭೀಕರ ಗುಂಡಿನ ಕಾಳಗ ನಡೆಯಿತು. ಗುಂಡಿನ ಘರ್ಷಣೆಯಲ್ಲಿ ಮೂವರು ಕಟ್ಟಾ ಭಯೋತ್ಪಾದಕರು ಹತರಾದರು ಎಂದು ಭಾರತೀಯ ಸೇನೆ ಟ್ವೀಟ್‌ ಸಂದೇಶದಲ್ಲಿ ತಿಳಿಸಿದೆ.

ಇವುಗಳನ್ನೂ ಓದಿರಿ: 

ಕೈ ಮುಗಿವೆ, ಯುದ್ದ ಬೇಡ ಎಂದದ್ದು ಏಕೆ ಗೊತ್ತಾ?
ಆಪರೇಷನ್‌ ಸಿಂಧೂರ ಮುಗಿದಿಲ್ಲ.. ಮಾತುಕತೆ ಪಿಒಕೆ ವಾಪಸಿಗೆ ಸೀಮಿತ
"ಷರತ್ತುಬದ್ಧ" ಕದನ ವಿರಾಮ, ಸಿಂಧೂ ನೀರು ಹರಿಯುವುದಿಲ್ಲ
ಆಪರೇಷನ್‌ ಸಿಂಧೂರ್:‌ ೩ನೇ ದಿನ ಏನೇನಾಯಿತು?

PARYAYA: ಪೆಹಲ್ಗಾಮ್‌ ನರಹಂತಕರು ಖತಮ್?‌:   ಪೆಹಲ್ಗಾಮ್‌ ನರಹಂತಕರು ಖತಮ್?‌ ಭಾರತೀಯ ಸೇನೆ ಕಾರ್ಯಾಚರಣೆ: ೩ ಉಗ್ರರು ಹತ ನ ವದೆಹಲಿ: ಜಮ್ಮು -ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಶೂಕುಲ್‌ ಕೆಲ್ಲರ್‌ ಪ್ರದೇಶದ ದಟ್ಟ...

Monday, May 12, 2025

PARYAYA: ಕೈ ಮುಗಿವೆ, ಯುದ್ದ ಬೇಡ ಎಂದದ್ದು ಏಕೆ ಗೊತ್ತಾ?

 ಕೈ ಮುಗಿವೆ, ಯುದ್ದ ಬೇಡ ಎಂದದ್ದು ಏಕೆ ಗೊತ್ತಾ?

ಇಲ್ಲಿವೆ ಸಾಕ್ಷ್ಯಾಧಾರದ ಉಪಗ್ರಹ ಚಿತ್ರಗಳು

 ಪ್ರಿಲ್‌ 22ರ ಪೆಹಲ್ಗಾಮ್‌ ಹತ್ಯಾಕಾಂಡಕ್ಕೆ ಪ್ರತಿಯಾಗಿ ಭಾರತದ ಪಡೆಗಳು ಪಾಕಿಸ್ತಾನದ ವಿರುದ್ಧ ಕೈಗೊಂಡ ʼಆಪರೇಷನ್‌ ಸಿಂಧೂರʼ ಸೇನಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಕ್ಕೆ ಆಗಿರುವ ಹಾನಿಗಳನ್ನು ತೋರಿಸುವ ಉಪಗ್ರಹ ಚಿತ್ರಗಳನ್ನು ಭಾರತೀಯ ವಾಯುಪಡೆ ಬಿಡುಗಡೆ ಮಾಡಿದೆ.

ಈ ಕಾರ್ಯಾಚರಣೆಯಲ್ಲಿ 26 ಜನ ಅಮಾಯಕ ಪ್ರವಾಸಿಗರ ಜೀವ ತೆಗೆದುದಕ್ಕೆ ಪ್ರತಿಯಾಗಿ ಭಾರತವಯ ನೂರಕ್ಕೂ ಹೆಚ್ಚು  ಸಂಖ್ಯೆಯ ಉಗ್ರರ ಜೀವ ತೆಗೆದಿದೆ. ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯ ಕಚೇರಿಯನ್ನು ಧ್ವಂಸ ಮಾಡಿದೆ. ಮಸೂದ್ ಅಜರ್‌ನ ಇಡೀ ಕುಟುಂಬವನ್ನು ನಿರ್ನಾಮಗೊಳಿಸಿದೆ. ಇನ್ನೊಂದು ಕಡೆ ಉಗ್ರರ ಪರವಾಗಿ ನಿಂತ ಪಾಕಿಸ್ತಾನದ 11 ಸೇನಾ ನೆಲೆಗೆ ಹಾನಿ ಉಂಟು ಮಾಡಿದೆ.

ಪಾಕಿಸ್ತಾನಕ್ಕೆ ಅವರೇ ಸಂಗ್ರಹಿಸಿಟ್ಟಿರುವ ಅಣ್ವಸ್ತ್ರಗಳ ಸುರಕ್ಷತೆಯ ಬಗ್ಗೆ ಹೆದರಿಕೆ ಹುಟ್ಟಿಸಿದೆ. ಇದು ಭಾರಿ ದೊಡ್ಡ ಫಲಿತಾಂಶ. ಈ ಮೂರು ದಿನದ ದಾಳಿಯಲ್ಲಿ ನಮ್ಮ 26 ಅಮಾಯಕರ ಜೀವಕ್ಕೆ ತೀಕ್ಷ್ಣ ಪಾಠ ಪಾಕಿಸ್ತಾನಕ್ಕೆ ಸಿಕ್ಕಂತಾಗಿದೆ.

ಇವೆಲ್ಲದರ ಹಿನ್ನೆಲೆಯಲ್ಲಿಯೇ ಪಾಕಿಸ್ತಾನ ಯುದ್ಧ ಬೇಡ ಎಂದು ಕೈಮುಗಿದು ಕದನವಿರಾಮಕ್ಕೆ ಮನವಿ ಮಾಡಿದೆ.

ಉಪಗ್ರಹ ಚಿತ್ರಗಳು ದಾಳಿಗೆ ಮುನ್ನ ಪಾಕಿಸ್ತಾನದ ಈ ತಾಣಗಳು ಹೇಗಿದ್ದವು, ಈಗ ಹೇಗಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿವೆ.

ಈ ಚಿತ್ರಗಳು ಇಲ್ಲಿವೆ.

ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿರಿ.








ಈ ಕುರಿತ ಸ್ವಾರಸ್ಯಕರ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ ಅಥವಾ ಯೂ ಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿರಿ.  


PARYAYA: ಕೈ ಮುಗಿವೆ, ಯುದ್ದ ಬೇಡ ಎಂದದ್ದು ಏಕೆ ಗೊತ್ತಾ?:   ಕೈ ಮುಗಿವೆ, ಯುದ್ದ ಬೇಡ ಎಂದದ್ದು ಏಕೆ ಗೊತ್ತಾ? ಇಲ್ಲಿವೆ ಸಾಕ್ಷ್ಯಾಧಾರದ ಉಪಗ್ರಹ ಚಿತ್ರಗಳು   ಏ ಪ್ರಿಲ್‌ 22ರ ಪೆಹಲ್ಗಾಮ್‌ ಹತ್ಯಾಕಾಂಡಕ್ಕೆ ಪ್ರತಿಯಾಗಿ ಭಾರತದ ಪ...