Showing posts with label Ganesha Festival. Show all posts
Showing posts with label Ganesha Festival. Show all posts

Sunday, September 7, 2025

PARYAYA: ಸತ್ಯನಾರಾಯಣ ಪೂಜೆ, ಗಣಪ ವಿಸರ್ಜನೆ

 ಸತ್ಯನಾರಾಯಣ ಪೂಜೆ, ಗಣಪ ವಿಸರ್ಜನೆ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರಿ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನದಲ್ಲಿ ಮೂರು ದಿನಗಳಿಂದ ನಡೆದ ಸಾರ್ವಜನಿಕ ಗಣೇಶೋತ್ಸವ ೨೦೨೫ ಸೆಪ್ಟೆಂಬರ್‌ ೦೮ರ ಭಾನುವಾರ ಸಂಜೆ ಮುಕ್ತಾಯಗೊಂಡಿತು.


ಬೆಳಗ್ಗೆ  ಗಣಪತಿ ಉಪನಿಷತ್‌ ಸಹಿತ ಪೂಜೆ, ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ವಿಸರ್ಜನಾ ಪೂಜೆ ನಡೆಯಿತು.

ಕಂದಾಯ ಸಚಿವ ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಶ್ರೀ ಕೃಷ್ಣ ಬೈರೇಗೌಡ, ಮಾಜಿ ಸಚಿವ‌ ಶ್ರೀ ಎಸ್.ಎನ್.‌ ಕೃಷ್ಣಯ್ಯ ಶೆಟ್ಟಿ ಅವರ ಪರವಾಗಿ ಶ್ರೀ ರಮೇಶ್‌,  ಜನತಾದಳ ನಾಯಕ ವೇಣುಗೋಪಾಲ್‌, ಕಾಂಗ್ರೆಸ್‌ ಯುವ ನಾಯಕ ಎಚ್.ಎ. ಶಿವಕುಮಾರ್‌, ವೇದಿಕೆ ಪ್ರಾಯೋಜಕ ಸಿರಾಜ್‌ ಪಾಲ್ಗೊಂಡಿದ್ದರು.


ಉತ್ಸವದ ಕೊನೆಯ ದಿನ ವಿವಿಧ ಆಟೋಟಗಳಲ್ಲಿ ವಿಜೇತರಾದ ಮಕ್ಕಳು, ಮಹಿಳೆಯರು ಮತ್ತು ಪುರುಷರಿಗೆ ಬಹುಮಾನಗಳನ್ನು ವಿತರಿಸಲಾಯಿತು.


ಸಂಜೆ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ತಮಿಳ್ನಾಡಿನಿಂದ ಆಗಮಿಸಿದ ತಮಟೆ ತಂಡದ ತಮಟೆ ವಾದ್ಯದೊಂದಿಗೆ ಗಣಪತಿ ಶೋಭಾಯಾತ್ರೆ ನಡೆದು ರಾಚೇನಹಳ್ಳಿ ಕಲ್ಯಾಣಿಯಲ್ಲಿ ಗಣಪನ ವಿಸರ್ಜನೆ ಮಾಡಲಾಯಿತು.

ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.




PARYAYA: ಸತ್ಯನಾರಾಯಣ ಪೂಜೆ, ಗಣಪ ವಿಸರ್ಜನೆ:   ಸತ್ಯನಾರಾಯಣ ಪೂಜೆ, ಗಣಪ ವಿಸರ್ಜನೆ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರಿ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನದಲ್ಲಿ ಮೂರು ದಿನಗಳಿಂದ ನಡೆದ...

Saturday, September 6, 2025

PARYAYA: ತುಳಸಿ ಗಿಡ ವಿತರಣೆ, ಗಾನ ಗಣಪ ರಸ ಮಂಜರಿ

 ತುಳಸಿ ಗಿಡ ವಿತರಣೆ, ಗಾನ ಗಣಪ ರಸ ಮಂಜರಿ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಾರ್ವಜನಿಕ ಗಣೇಶೋತ್ಸವದ ಎರಡನೇ ದಿನದ ಕಾರ್ಯಕ್ರಮ ೨೦೨೫ ಸೆಪ್ಟೆಂಬರ್‌ ೬ರ ಶನಿವಾರ ನೆರವೇರಿತು.

ಕಾರ್ಯಕ್ರಮದಲ್ಲಿ ಬೆಳಗ್ಗೆ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ವತಿಯಿಂದ ʼಮನೆ ಮನೆಗೆ ತುಳಸಿಗಿಡʼ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದಲ್ಲಿ ಬಂದ ಭಕ್ತರಿಗೆ ತುಳಸಿ ಗಿಡಗಳನ್ನು ವಿತರಿಸಲಾಯಿತು.


ಮಧ್ಯಾಹ್ನ ಮಕ್ಕಳಿಗೆ ವಿವಿಧ ಆಟೋಟ ಸ್ಫರ್ಧೆಗಳು ನಡೆದವು. ಸಾಯಂಕಾರ ಸ್ವರ ಚಿರಂತನ ತಂಡದಿಂದ ಎಂಪಿಎಂ ವೀರೇಶ್‌ ಸಾರಥ್ಯದಲ್ಲಿ ಗಾನ ಗಣಪ ರಸಮಂಜರಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.




PARYAYA: ತುಳಸಿ ಗಿಡ ವಿತರಣೆ, ಗಾನ ಗಣಪ ರಸ ಮಂಜರಿ:   ತುಳಸಿ ಗಿಡ ವಿತರಣೆ, ಗಾನ ಗಣಪ ರಸ ಮಂಜರಿ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವ...

Friday, September 5, 2025

PARYAYA: ಹೆಗಡೆ ನಗರದಲ್ಲಿ ಗಣಪ ಸಂಭ್ರಮ

 ಹೆಗಡೆ ನಗರದಲ್ಲಿ ಗಣಪ ಸಂಭ್ರಮ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ೨೦೨೫ ಸೆಪ್ಟೆಂಬರ್‌ ೫ರ ಶುಕ್ರವಾರ ಗಣಪ ಸಂಭ್ರಮ.

ಬಡಾವಣೆಯ ೨೫ನೇ ವರ್ಷ ಹಾಗೂ ದೇವಸ್ಥಾನದ ೨ನೇ ವರ್ಷದ ಮೂರು ದಿನಗಳ ಗಣೇಶೋತ್ಸವ ಶುಕ್ರವಾರ ಆರಂಬವಾಯಿತು.


ಬೆಳಗ್ಗೆ ಗಣಪತಿ ಪ್ರತಿಷ್ಠಾಪನೆ ಮಂಗಳಾರತಿಯ ಬಳಿಕ ಭಕ್ತರಿಗೆ, ದೇವಸ್ಥಾನದಲ್ಲಿ ಇದೇ ಪ್ರಪ್ರಥಮ ಬಾರಿಗೆ ದೇವಾಲಯದಲ್ಲೇ ತಯಾರಿಸಿದ ಪ್ರಸಾದ ಸೇವೆಯ ವ್ಯವಸ್ಥೆ ಮಾಡಲಾಗಿತ್ತು. ಅಡುಗೆಗೆ ಬೇಕಾದ ಸಕಲ ಪರಿಕರಗಳನ್ನು ದೇವಸ್ಥಾನ ಸೇವಾಸಮಿತಿಯ ಅಧ್ಯಕ್ಷ ಶ್ರೀ ಚೌಡರೆಡ್ಡಿ ಅವರು ಕಾಣಿಕೆ ರೂಪದಲ್ಲಿ ಸಲ್ಲಿಸಿದ್ದರು. ಅಡುಗೆಗೆ ಬೇಕಾದ ಸುವಸ್ತುಗಳನ್ನು ಭಕ್ತರು ಕಾಣಿಕೆ ರೂಪದಲ್ಲಿ ಒದಗಿಸಿದ್ದರು.

ಮಧ್ಯಾಹ್ನದ ಬಳಿಕ ಮಹಿಳೆಯರಿಗೆ ವಿವಿಧ ಆಟೋಟಗಳನ್ನು ಏರ್ಪಡಿಸಲಾಗಿತ್ತು. ಸಂಜೆ ಕೇರಳದ ಚೆಂಡೆವಾದಕರಿಂದ ಕೇರಳ, ದಕ್ಷಿಣಕನ್ನಡದ ದೇವಸ್ಥಾನಗಳಲ್ಲಿ ನಡೆಯುವ ಪರಂಪರಾಗತ ಚೆಂಡೆ ವಾದನದ ಕಾರ್ಯಕ್ರಮ, ಬಡಾವಣೆಯ ನಿವಾಸಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಚೆಂಡೆ ವಾದಕರೊಂದಿಗೆ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಘೋಷಯಾತ್ರಾ ಕಾರ್ಯಕ್ರಮ ನಡೆಯಿತು.

ಬಡಾವಣೆಯ ಪುಟಾಣಿ ಸ್ಫೂರ್ತಿ ಹಾಗೂ ಪರಶಿವಮೂರ್ತಿ-ಮಾಧವಿ ದಂಪತಿಯ ಪುತ್ರ ಪ್ರತೀಕ್ಷಾ ಸುಂದರವಾದ ಭರತನಾಟ್ಯ ಪ್ರದರ್ಶನಗಳನ್ನು ನೀಡಿದರು. ಭಕ್ತರಿಂದ ಭಜನೆ ಕೂಡಾ ಜರುಗಿತು.

ಚೆಂಡೆವಾದನದೊಂದಿಗೆ ಮಹಾಪೂಜೆ- ಮಹಾಮಂಗಳಾರತಿಯ ಬಳಿಕ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದ ಕೆಲವು ಚಿತ್ರ ಹಾಗೂ ವಿಡಿಯೋಗಳು ಇಲ್ಲಿವೆ.







PARYAYA: ಹೆಗಡೆ ನಗರದಲ್ಲಿ ಗಣಪ ಸಂಭ್ರಮ:   ಹೆಗಡೆ ನಗರದಲ್ಲಿ ಗಣಪ ಸಂಭ್ರಮ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ೨೦೨೫ ಸೆಪ್ಟೆಂಬರ್‌ ...

Friday, September 13, 2024

PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ

 ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ

ಬೆಂಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ 2024ರ ಸಾರ್ವಜನಿಕ ಗಣೇಶೋತ್ಸವ ಸಡಗರದೊಂದಿಗೆ 2024 ಸೆಪ್ಟೆಂಬರ್‌ 13ರ ಶುಕ್ರವಾರ ಆರಂಭಗೊಂಡಿತು.

ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಈ ಸಾರ್ವಜನಿಕ ಸಮಾರಂಭದಲ್ಲಿ ರಾಜ್ಯದ ಕಂದಾಯ ಸಚಿವರೂ  ಬ್ಯಾಟರಾಯನಪುರ ಕ್ಷೇತ್ರದ ಶಾಸಕರೂ ಆದ ಶ್ರೀ ಕೃಷ್ಣ ಬೈರೇಗೌಡ ಅವರು ಪಾಲ್ಗೊಂಡರು. ಅವರ ಜೊತೆಗೆ ಯುವ ನಾಯಕ ಶ್ರೀ ಶಿವಕುಮಾರ್‌ ಮತ್ತು ಇತರರೂ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಶುಕ್ರವಾರ ಬೆಳಗ್ಗೆ ವಿಗ್ರಹ ಪ್ರತಿಷ್ಠಾಪನೆ, ಪ್ರಾಣಪ್ರತಿಷ್ಠೆ ಮತ್ತು ಗಣಪತಿ ಉಪನಿಷತ್‌ ಸಹಿತ ಪೂಜೆ ನೆರವೇರಿತು. ಸಂಜೆ 6 ಗಂಟೆಗೆ ಬೆಂಗಳೂರಿನ ಸ್ವರ ಚಿರಂತನ ತಂಡದಿಂದ ರಸಮಂಜರಿ ಕಾರ್ಯಕ್ರಮ, ರಾತ್ರಿ 9ಗಂಟೆಗೆ ಮಹಾ ಮಂಗಳಾರತಿ ನೆರವೇರಲಿದೆ.

2024 ಸೆಪ್ಟೆಂಬರ್‌ 14ರ ಶನಿವಾರ ಬೆಳಗ್ಗೆ 9 ಗಂಟೆಗೆ ಕೇರಳ ಚೆಂಡೆ ವಾದನದ ವಿಶೇಷ ಆಕರ್ಷಣೆಯೊಂದಿಗೆ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ ಮತ್ತು ಅಭಯ ಆಂಜನೇಯ ಪೂಜೆಯ ಜೊತೆಗೆ ಪ್ರತಿಷ್ಠಾಪಿತ ಸಾರ್ವಜನಿಕ ಗಣಪ- ಗೌರಿ ದೇವರಿಗೆ ಗಣಪತಿ ಉಪನಿಷತ್‌ ಸಹಿತ ಪೂಜೆ ನಡೆಯಲಿದೆ ಬೆಳಗ್ಗೆ 9ರಿಂದ 12 ಗಂಟೆಯವರೆಗೆ ಬಡಾವಣೆಯ ಮಕ್ಕಳು, ಮಹಿಳೆಯರಿಗೆ ಆಟೋಟ ಸ್ಪರ್ಧೆ ನಡೆಯಲಿದೆ. ಸಂಜೆ 4 ಗಂಟೆಗೆ ಟಿಸಿಎಲ್‌ ಸೇವಾ ಸಮುದಾಯದಿಂದ ಸಂಗೀತ ಕಚೇರಿ, ರಾತ್ರಿ 7ರಿಂದ ವಿದುಷಿ ಶ್ರೀಮತಿ ಮಧುರಾ ಕಾರಂತ್‌ ಮೈಸೂರು ಅವರಿಂದ ಭರತ ನಾಟ್ಯ, ಆ ಬಳಿಕ ರಾತ್ರಿ 8 ಗಂಟೆಗೆ ಮಹಾಮಂಗಳಾರತಿ ನೆರವೇರಲಿದೆ.

2024 ಸೆಪ್ಟೆಂಬರ್‌ 15ರ ಭಾನುವಾರ ಬೆಳಗ್ಗೆ 9.30ಕ್ಕೆ ಗಣಪತಿ ಉಪನಿಷತ್‌ ಸಹಿತ ಪೂಜೆ, ಗಣ ಹವನ ನೆರವೇರಲಿದೆ. ಮಧ್ಯಾಹ್ನ 1ರಿಂದ ಪ್ರಸಾದ  ವಿನಿಯೋಗ, ಸಂಜೆ 5 ಗಂಟೆಗೆ ಮಹಾಪೂಜೆ, ಬಳಿಕ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆ ಮತ್ತು ವಿಸರ್ಜನೆ ನಡೆಯಲಿದೆ.

ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವೆ ಶೋಭಾ ಕರಂದ್ಲಾಜೆ, ಬಡಾವಣೆಯ ಸ್ಥಾಪಕರಾದ ಮಾಲೂರು ಎಸ್‌ ಎನ್‌ ಕೃಷ್ಣಯ್ಯ ಶೆಟ್ಟಿ ಅವರು ಕೂಡಾ ಪಾಲ್ಗೊಳ್ಳಲಿದ್ದಾರೆ.


ಗಣೇಶೋತ್ಸವ ಕಾರ್ಯಕ್ರಮಕ್ಕೆ ಶ್ರೀಮತಿ ಹೇಮಾ ಮತ್ತು ಕುಟುಂಬದವರು ಗಣೇಶ ವಿಗ್ರಹವನ್ನು ಪ್ರಾಯೋಜಿಸಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಬಡಾವಣೆಯ ಮಹಿಳೆಯರು ಗಣ ಹೋಮದ ಪ್ರಾಯೋಜನೆ ಮಾಡಿದ್ದಾರೆ. ಶ್ರೀ ಮುನಿರಾಜು ಮತ್ತು ಕುಟುಂಬ ಹೂ-ಹಣ್ಣುಗಳನ್ನು ಪ್ರಾಯೋಜಿಸಿದ್ದರೆ, ರಸ ಮಂಜರಿ (ಆರ್ಕೆಸ್ಟ್ರಾ) ಕಾರ್ಯಕ್ರಮಕ್ಕೆ ಶ್ರೀ ಎಚ್. ಶಿವಕುಮಾರ್‌ ಪ್ರಾಯೋಜನೆ ಮಾಡಿದ್ದಾರೆ.

ಪೆಂಡಾಲ್‌ ಮತ್ತು ವೇದಿಕೆಗೆ ಶ್ರೀ ಸಿರಾಜ್‌ ಮತ್ತು ಕುಟುಂಬ ಪ್ರಾಯೋಜನೆ ಮಾಡಿದ್ದರೆ, ಕೇರಳ ಚೆಂಡೆ ವಾದನಕ್ಕೆ ಬಡಾವಣೆಯ ಮಲಯಾಳಿ ಗೆಳೆಯರು ಪ್ರಾಯೋಜನೆ ಮಾಡಿದ್ದಾರೆ. ಶಾಸ್ತ್ರೀಯ ಸಂಗೀತವನ್ನು ಶ್ರೀ ರಾಘವೇಂದ್ರ ಕಾಮತ್‌ ಮತ್ತು ಶ್ರೀ ಮಧು ನಾಯರ್‌ ಪ್ರಾಯೋಜಿಸಿದ್ದಾರೆ.

ಶ್ರೀ ಪ್ರದೀಪ ಶಾಸ್ತ್ರಿ  ಮತ್ತು ಕುಟುಂಬ ಭರತ ನಾಟ್ಯದ ಪ್ರಾಯೋಜಿಕತ್ವ ವಹಿಸಿಕೊಂಡಿದ್ದರೆ ಶ್ರೀ ಎಚ್.ವಿ. ಉದಯಶಂಕರ್‌, ಶ್ರೀ ನಾಗರಾಜ್‌, ಶ್ರೀ ವಿ. ಮುನಿರಾಜು ಮತ್ತು ಶ್ರೀ ಕೃಷ್ಣೋಜಿ ರಾವ್‌ ಪ್ರಸಾದಕ್ಕೆ ಪಾಯೋಜಿಕತ್ವ ವಹಿಸಿಕೊಂಡಿದ್ದಾರೆ.

ಬಡಾವಣೆ ಮತ್ತು ಆಸುಪಾಸಿನ ಭಕ್ತಾದಿಗಳೂ ಉದಾರ ದೇಣಿಗೆ ಮೂಲಕ ಉತ್ಸವ ಯಶಸ್ಸಿಗೆ ಶ್ರಮಿಸಿದ್ದರೆ, ಯುವಕರ ತಂಡ ಗಣಪನ ಸೇವೆಗೆ ಹೆಗಲು ನೀಡಿ ಉತ್ಸವಕ್ಕೆ ಕಳೆಗಟ್ಟಿಸಿದೆ. 


ಇವುಗಳನ್ನೂ ಓದಿರಿ: 
PARYAYA: ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ:   ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ ಬೆಂ ಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ 2024ರ ಸಾರ್ವಜನಿಕ ಗಣೇಶೋತ್ಸವ ಸಡಗರ...