Showing posts with label ಹರಿವಂಶ್‌ ನಾರಾಯಣ್‌ ಸಿಂಗ್‌. Show all posts
Showing posts with label ಹರಿವಂಶ್‌ ನಾರಾಯಣ್‌ ಸಿಂಗ್‌. Show all posts

Thursday, August 9, 2018

‘ಹರಿ’ ಯುದ್ಧದಲ್ಲಿ ‘ವಂಶ್’ ಗೆಲುವು,‘ಪ್ರಸಾದ್’ಗೆ ಸೋಲು


‘ಹರಿ’ ಯುದ್ಧದಲ್ಲಿ ‘ವಂಶ್’ ಗೆಲುವು,‘ಪ್ರಸಾದ್’ಗೆ ಸೋಲು

ನವದೆಹಲಿ: ರಾಜ್ಯಸಭೆಯ ಉಪ ಸಭಾಪತಿ ಸ್ಥಾನಕ್ಕೆ ಗುರುವಾರ 99 ಆಗಸ್ಟ್ 2018ರಂದು  ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ವಿರುದ್ಧ ಆಡಳಿತಾರೂಢ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿ(ಯು) ಸಂಸತ್ ಸದಸ್ಯ  ಹರಿವಂಶ್‌ ನಾರಾಯಣ್‌ ಸಿಂಗ್‌ ಅವರು ಜಯ ಗಳಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ 105 ಮತ ಪಡೆದಿದ್ದರೆ, ಎನ್‌ಡಿಎ ಅಭ್ಯರ್ಥಿ ಹರಿವಂಶ್‌ ನಾರಾಯಣ್‌ ಸಿಂಗ್‌ 125 ಮತ ಪಡೆಯುವ ಮೂಲಕ 20 ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಿದರು.

ಕುರಿಯನ್‌ ಅವರ ನಿವೃತ್ತಿಯಿಂದ ತೆರವಾಗಿರುವ ಈ ಸ್ಥಾನಕ್ಕೆ ಈದಿನ ಚುನಾವಣೆ ನಿಗದಿಯಾಗಿತ್ತು.

245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಉಪ ಸಭಾಪತಿಯಾಗಿ ಆಯ್ಕೆಯಾಗಲು ಕನಿಷ್ಠ 123 ಸದಸ್ಯರ ಬೆಂಬಲ ಅಗತ್ಯವಿತ್ತು. ಆಡಳಿತಾರೂಢ ಬಿಜೆಪಿಗಾಗಲೀ ಪ್ರತಿಪಕ್ಷ ಗಳ ನೇತೃತ್ವ ವಹಿಸಿರುವ ಕಾಂಗ್ರೆಸ್‌ ಬಳಿಯಾಗಲೀ ಅಗತ್ಯ ಸದಸ್ಯರ ಬಲ ಇರದೇ ಇದ್ದುದರಿಂದ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಎರಡೂ ಗುಂಪುಗಳ ಜತೆ ಗುರುತಿಸಿಕೊಳ್ಳದ ತಟಸ್ಥ ಪಕ್ಷ ಗಳ ಕೈಯಲ್ಲಿ ರಾಜ್ಯಸಭೆಯ ಉಪ ಸಭಾಪತಿ ಸ್ಥಾನದ ಕೀಲಿ ಕೈ ಇತ್ತು.

ಪ್ರಧಾನಿ ಅಭಿನಂದನೆ: ರಾಜ್ಯಸಭೆಯ ನೂತನ ಉಪ ಸಭಾಪತಿಯಾಗಿ ಆಯ್ಕೆಯಾಗಿರುವ ಹರಿವಂಶ್‌ ನಾರಾಯಣ್‌ ಸಿಂಗ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದರು.