Showing posts with label ರೈಲು ಸಂಚಾರ. Show all posts
Showing posts with label ರೈಲು ಸಂಚಾರ. Show all posts

Monday, June 11, 2018

ಭೂಕುಸಿತ: ಬೆಂಗಳೂರು- ಮಂಗಳೂರು ರೈಲು ಸಂಚಾರ ಸ್ಥಗಿತ


ಭೂಕುಸಿತ: ಬೆಂಗಳೂರು- ಮಂಗಳೂರು ರೈಲು ಸಂಚಾರ ಸ್ಥಗಿತ


ಬೆಂಗಳೂರು: ಭಾರೀ ಮಳೆಯಿಂದಾಗಿ ಹಾಸನ- ಮಂಗಳೂರು ನಡುವೆ ಎಡಕುಮೇರಿ ಸೇರಿದಂತೆ ಮೂರು ಕಡೆ ಭೂ ಕುಸಿತ ಸಂಭವಿಸಿದ್ದು, ಬೆಂಗಳೂರು- ಮಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ರೈಲನ್ನು ಹಾಸನದಲ್ಲೇ ನಿಲ್ಲಿಸಲಾಗಿದ್ದು, ಪ್ರಯಾಣಿಕರಿಗೆ ಟಿಕೆಟ್ ಹಣ ಮರುಪಾವತಿ ಮಾಡಲಾಗಿದೆ ಮತ್ತು ಹಾಸನ ರೈಲು ನಿಲ್ದಾಣದಿಂದ ಪ್ರಯಾಣಿಕರಿಗೆ ಕೆಎಸ್ಸಾರ್ಟಿಸಿ ಬಸ್ಗಳ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಭಾರೀ ಮಳೆಯಿಂದಾಗಿ ಎಡಕುಮೇರಿ ಮೈಲು 218 ಸೇರಿದಂತೆ ಮೂರು ಸ್ಥಳಗಳಲ್ಲಿ ಭೂ ಕುಸಿತ ಸಂಭವಿಸಿದೆ. ಇದನ್ನು ತೆರವುಗೊಳಿಸಿದ ಬಳಿಕ ಮತ್ತೆ ರೈಲು ಸಂಚಾರ ಆರಂಭವಾಗಲಿದೆ ಎಂದು ಮೂಲಗಳು ಹೇಳಿವೆ.

ಯಶವಂತಪುರ-ಕಾರವಾರ ಎಕ್ಸ್ಪ್ರೆಸ್‌ (16515) ರೈಲಿನ ಸಂಚಾರವನ್ನು ಭಾಗಶಃ ರದ್ದುಪಡಿಸಲಾಗಿದೆ. ರೈಲು ಹಾಸನದಿಂದ ಮುಂದಕ್ಕೆ ಸಂಚರಿಸುವುದಿಲ್ಲ. 16576 ಸಂಖ್ಯೆಯ ಕಾರವಾರ-ಯಶವಂತಪುರ ರೈಲಿನ ಮಾರ್ಗ ಬದಲಿಸಲಾಗಿದ್ದು, ಶೋರ್ನೂರು ಮಾರ್ಗವಾಗಿ ಯಶವಂತಪುರ ತಲುಪಲಿದೆ ಎಂದು ರೈಲ್ವೇ ಮೂಲಗಳು ಹೇಳಿವೆ.