Showing posts with label Moodubidare. Show all posts
Showing posts with label Moodubidare. Show all posts

Thursday, April 9, 2026

ಅಮ್ಮನ ಸಾವಿನ ನೋವಿನಲ್ಲೂ ದಿಶಾ ಸಾಧನೆ

 ಅಮ್ಮನ ಸಾವಿನ ನೋವಿನಲ್ಲೂ ದಿಶಾ ಸಾಧನೆ

ಮೂಡುಬಿದಿರೆ ಆಳ್ವಾಸ್‌ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ ೬೦೦ಕ್ಕೆ ೬೦೦ ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವ ಮೂಲಕ ಮಹತ್ಸಾಧನೆ ಮಾಡಿದ್ದಾಳೆ.
 ಈಕೆ ಪರೀಕ್ಷೆ ನಡೆಯುತ್ತಿದ್ದಾಗಲೇ ಅಮ್ಮನನ್ನು ಕಳೆದುಕೊಂಡು, ಅಮ್ಮನ ಆಸೆ ತೀರಿಸಬೇಕೆಂದು ಅಗಲಿಕೆಯ ನೋವಿನಲ್ಲೇ ಪರೀಕ್ಷೆಗೆ ಬರೆದು ಸುದ್ದಿಯಾಗಿದ್ದಳು. ಇದೀಗ ೨೦೨೬ ಏಪ್ರಿಲ್‌ ೦೯ರ ಗುರುವಾರ ದ್ವಿತೀಯ ಪಿಯುಸಿ ಪರೀಕ್ಷೆಯಫಲಿತಾಶ ಪ್ರಕಟಗೊಂಡಿದ್ದು ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಅಮ್ಮನ ಕನಸನ್ನು ಸಾಕಾರಗೊಳಿಸಿದ್ದಾಳೆ. (ಮುಂದಕ್ಕೆ ಓದಿ).