Showing posts with label BJD. Show all posts
Showing posts with label BJD. Show all posts

Wednesday, May 29, 2019

ನವೀನ್ ಪಟ್ನಾಯಕ್: ಸತತ 5ನೇ ಅವಧಿಗೆ ಒಡಿಶಾ ಸಿಎಂ

ನವೀನ್ ಪಟ್ನಾಯಕ್: ಸತತ 5ನೇ ಅವಧಿಗೆ ಒಡಿಶಾ ಸಿಎಂ
ಭುವನೇಶ್ವರ: ಬಿಜು ಜನತಾ ದಳ (ಬಿಜೆಡಿ) ನಾಯಕ ನವೀನ್ ಪಟ್ನಾಯಕ್ ಅವರು ಒಡಿಶಾದ ಮುಖ್ಯಮಂತ್ರಿಯಾಗಿ 2019 ಮೇ 29ರ ಬುಧವಾರ ಬೆಳಗ್ಗೆ ಭುವನೇಶ್ವರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಪಾಟ್ನಾಯಕ್ ಅವರು ಒಡಿಶಾದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿರುವುದು ಇದು ಸತತ 5ನೇ ಬಾರಿ. ಭಾರತದಲ್ಲಿ ಈವರೆಗೆ ಕೇವಲ ಇಬ್ಬರು ಮುಖ್ಯಮಂತ್ರಿಗಳು ಮಾತ್ರ- ಪಶ್ಚಿಮ ಬಂಗಾಳದ ಜ್ಯೋತಿ ಬಸು ಮತ್ತು ಸಿಕ್ಕಿಂನ ಪವನ್ ಚಾಮ್ಲಿಂಗ್ –ಇವರು ಸತತ  ಐದು ಅವಧಿಗೆ ಮುಖ್ಯಮಂತ್ರಿಗಳಾಗಿದ್ದರು.

40 ಡಿಗ್ರಿ ಸೆಲ್ಷಿಯಸ್ ಗಳ ಪ್ರಖಲ ಬಿಸಿಲ ಝಳದ ಮಧ್ಯೆಯೂ ಸುಮಾರು 10,000ಕ್ಕೂ ಹೆಚ್ಚು ಮಂದಿ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ನವೀನ್ ಪಟ್ನಾಯಕ್ ಅವರ ಹಿರಿಯ ಸಹೋದರ ಪ್ರೇಮ್ ಪಟ್ನಾಯಕ್ ಮತ್ತು ಸಹೋದರಿ ಖ್ಯಾತ ಲೇಖಕಿ ಗೀತಾ ಮೆಹ್ತ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಹೆಚ್ಚಿನ ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ: